ವೀಕೆಂಡ್ ವಿತ್ ಮೋಹನ್
camohanbn@gmail.com
ಭಾರತದ ಋಷಿ ಮುನಿಗಳು ಮತ್ತು ಸಂತರ ಸಾವಿರಾರು ವರ್ಷಗಳ ನಿರಂತರ ಯಜ್ಞದ ಫಲವಾಗಿ ಇಡೀ ವಿಶ್ವವೇ ಧರಿಸಬಲ್ಲ ಚಿಂತನೆಯನ್ನು ನಮ್ಮ ಪೀಳಿಗೆಗೆ ನೀಡಲು ಸಾಧ್ಯವಾಯಿತು. ಇದರ ಪರಿಣಾಮವಾಗಿಯೇ ಇತರ ಎಲ್ಲಾ ಮತಗಳನ್ನು ಒಳಗೊಳ್ಳುವ ವಿಶಾಲ ಧರ್ಮವಾಗಿ ‘ಹಿಂದೂ ಧರ್ಮ’ ಬೆಳೆಯಲು ಸಾಧ್ಯ ವಾಯಿತು. ಈ ಸಾಲುಗಳನ್ನು ಒಬ್ಬ ಎಡಚರನಿಗೆ ಓದಲು ಹೇಳಿದರೆ ಸಾಕು ಕೆಂಡಕಾರಿದಂತೆ ಎಗರಾಡಿ ಬಿಡುತ್ತಾನೆ, ಇದರ ಬದಲು ಸುಮ್ಮನೆ ಹಾಗೆ ‘ರಷ್ಯಾದ ಚಿಂತನೆಗಳು’ ಇಡೀ ಜಗತ್ತಿಗೆ ಹಬ್ಬಿದವು ಎಂಬ ಸುಳ್ಳನ್ನು ಹೇಳಿ,ಅವರ ಎದೆ ಬೀಗಲಾರಂಭಿಸುತ್ತದೆ.
ಭಾರತದ ಸಾವಿರಾರು ವರ್ಷಗಳ ಚಿಂತನೆಗಳಿಗೆ ರಷ್ಯಾ ಮತ್ತು ಚೀನಾ ದೇಶದ ಬಣ್ಣ ಬಳಿಯುವ ಸಾಹಸವನ್ನು ಎಡಚರರು ಮೊದಲ ವಿಶ್ವಯುದ್ಧದ ಸಮಯ ದಿಂದಲೂ ಮಾಡುತ್ತಲೇ ಬಂದಿದ್ದಾರೆ, ಆದರೆ ಅವರ ಚಿಂತನೆಯೇ ಸುಳ್ಳಾಗಿರುವುದರಿಂದ ಭಾರತದಲ್ಲಿ ತಳವೂರಲಾಗದೆ ಸೋತು ಸುಣ್ಣವಾಗಿದ್ದಾರೆ. ಮೊದಲ ವಿಶ್ವಯುದ್ಧದ ವೇಳೆಗೆ ಪಶ್ಚಿಮದಲ್ಲಿದ್ದಂತಹ ಕೆಲವು ಕ್ರಾಂತಿಕಾರಿಗಳು ಮಾರ್ಕ್ಸ್ ಚಿಂತನೆಗಳ ಪ್ರಭಾವಕ್ಕೆ ಒಳಗಾಗಿದ್ದರು.ಅವರ ಭಾಷಣಗಳಿಂದ ಪ್ರಭಾವಿತರಾಗಿ ವಿದೇಶದಲ್ಲಿದ್ದಂತಹ ಕೆಲವು ಭಾರತೀಯರು ವಾಪಾಸ್ ಬಂದು ಭಾರತಕ್ಕೆ ಸೇರಿಕೊಂಡರು.
ಇದೇ ಸಂದರ್ಭದಲ್ಲಿ ರಷ್ಯಾದಲ್ಲಿ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಚಾಣಾಕ್ಷತೆಯಿಂದ ‘ಲೆನಿನ್’ ಅಧಿಕಾರ ವಹಿಸಿಕೊಂಡು ‘ಮಾರ್ಕ್ಸ್’ವಾದದ ಸಾಮ್ರಾಜ್ಯ ನಿರ್ಮಿಸಿದ್ದನು. ಭಾರತದಲ್ಲಿ ಬ್ರಿಟಿಷರ ಆಳ್ವಿಕೆ ಜಾರಿಯಲ್ಲಿದ್ದರಿಂದ ಕೆಲ ರೈತ ಮತ್ತು ಕಾರ್ಮಿಕ ಸಂಘಟನೆಗಳು ಅಸ್ತಿತ್ವಕ್ಕೆ ಬಂದು ತಮ್ಮ ಹಕ್ಕಿಗಾಗಿ ಬಡಿದಾ ಡಿದವು. ೧೯೨೦ರಲ್ಲಿ ಖಿಲಾಫತ್ ಚಳುವಳಿಯ ಬೆಂಬಲಿಗರಾಗಿದ್ದ ಮುಸಲ್ಮಾನರನ್ನು ಒಳಗೊಂಡಂತಹ ಭಾರತೀಯ ಕಮ್ಯುನಿಸ್ಟ್ ಪಕ್ಷ ರಷ್ಯಾದಲ್ಲಿ ಹುಟ್ಟಿತ್ತು. ಆದರೆ ಮುಂದಿನ ದಿನಗಳಲ್ಲಿ ಭಾರತದಲ್ಲಿ ಅವರಿಗೆ ಬೆಳೆಯಲು ಅವಕಾಶವೇ ಇರಲಿಲ್ಲ,ಕಾರಣ ಭಾರತದಲ್ಲಿದ್ದಂತಹ ಕಾರ್ಮಿಕರ ಸಮಸ್ಯೆಗಳು ಬ್ರಿಟಿಷರ ಬಳುವಳಿಯಾಗಿದ್ದವು.
ಶ್ರೀಮಂತನ ಗಳಿಕೆಯ ಹಣವು ಸಮಾಜದಲ್ಲಿ ಜಾತ್ರೆ,ಹಬ್ಬಗಳ ಮೂಲಕ ಸಮಾಜಕ್ಕೆ ನೆಮ್ಮದಿಯನ್ನು ನೀಡಿದ್ದವು. ಭಾರತೀಯರಿಗೆ ಆಗ ಇದ್ದ ಸಮಸ್ಯೆ ಒಂದೇ, ಬ್ರಿಟಿಷರಿಂದ ಮುಕ್ತಿ.ಅದಕ್ಕಾಗಿ ಬೇಕಾಗಿದ್ದದ್ದು ರಾಷ್ಟ್ರೀಯತೆಯ ಪ್ರವಾಹವೇ ಹೊರತು ರಷ್ಯಾದ ತೊರೆಯಲ್ಲ. ಭಾರತದಲ್ಲಿದ್ದ ರಷ್ಯಾದ ಕಮ್ಯುನಿಸ್ಟ್ ಪಕ್ಷದ ನಾಯಕ ನಾಗಿದ್ದ ಎಂ.ಏನ್.ರಾಯ್ ಮತ್ತು ಸ್ಟಾಲಿನ್ ಗೆ ಮನಸ್ತಾಪ ವಾದ ಕಾರಣ ಕಮ್ಯುನಿಸ್ಟ್ ಪಕ್ಷ ಭಾರತದಲ್ಲಿ ಇಬ್ಭಾಗ ವಾಯಿತು. ಅದೇ ಸಮಯದಲ್ಲಿ ಬ್ರಿಟಿಷರು ಎಡಚರರನ್ನು ಹತ್ತಿಕ್ಕಿ ೧೯೩೯ ರಲ್ಲಿ ಕಮ್ಯುನಿಸ್ಟ್ ಪಕ್ಷವನ್ನು ನಿಷೇಧಿಸಿದರು.
ನಿಷೇಧದ ನಂತರ ಹರಿದು ಹಂಚಿ ಹೋಗಿದ್ದ ಎಡಚರ ನಾಯಕರು ಅಧಿಕೃತವಾಗಿ ಕಾಂಗ್ರೆಸ್ ಸೇರಿಕೊಂಡರು, ಸೇರಿದ ಕೆಲವೇ ಕೆಲವು ತಿಂಗಳಲ್ಲಿ ಕಾಂಗ್ರೆಸ್ನಲ್ಲಿ ಒಡಕು ತಂದರು. ಅವರನ್ನು ಹೊರದಬ್ಬುವಷ್ಟರಲ್ಲಿ ಕಾಂಗ್ರೆಸ್ ಸೋಷಿಯಲಿಸ್ಟಿಕ್ ಪಾರ್ಟಿ ಸಂಪೂರ್ಣವಾಗಿ ತಮಿಳುನಾಡು, ಕೇರಳ ಮತ್ತು ಆಂಧ್ರ ಪ್ರದೇಶದಲ್ಲಿ ಎಡಚರರ ಕೈ ಸೇರಿತ್ತು.ಆದರೆ ಎಡಚರರಿಗೆ ನಿಜವಾಗಿ ಜೀವ ಬಂದದ್ದು ಎರಡನೇ ಮಹಾಯುದ್ಧದ ಸಂದರ್ಭದಲ್ಲಿ, ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ರಷ್ಯಯನ್ನರಿಗೆ ಬ್ರಿಟಿಷರ ವಿರುದ್ಧ ಯುದ್ಧ ಮಾಡಬೇಕಿತ್ತು.
ಭಾರತದಲ್ಲಿದ್ದಂತಹ ಎಡಚರರನ್ನು ಬಳಸಿಕೊಂಡು ಬ್ರಿಟಿಷರ ವಿರುದ್ಧ ಹೋರಾಟ ಮಾಡಬೇಕೆಂಬ ಶರರಷ್ಯಾದಿಂದ ಎಡಚರರಿಗೆ ಬಂದಿತ್ತು, ಭಾರತದಿಂದ
ಬ್ರಿಟಿಷರು ತೊಲಗಿದ ಮೇಲೆ ರಷ್ಯಾ ತನ್ನ ಎಡಚರ ನೀತಿಯನ್ನು ಭಾರತದಲ್ಲಿ ವಿಸ್ತಾರಗೊಳಿಸಲು ಸಜ್ಜಾ ಗಿತ್ತು. ಭಾರತದಲ್ಲಿದ್ದಂತಹ ಎಡಚರರು ಕಮ್ಯುನಿಸ್ಟ್ ನೀತಿಯನ್ನು ರಷ್ಯಾ ಮೂಲಕ ಹೇರಲು ಬ್ರಿಟಿಷರ ವಿರುದ್ಧ ನಿಂತರೇ ಹೊರತು ಸ್ವಾತಂತ್ರ್ಯ ಹೋರಾಟಕ್ಕಾಗಿ ಅಲ್ಲವೇ ಅಲ್ಲ. ಅಷ್ಟರಲ್ಲಿ ಸುಭಾಷ್ ಚಂದ್ರ ಬೋಸರ ಗೆಲುವಿನ ಕಹಳೆ ದೇಶದಾದ್ಯಂತ ಅಲೆಯಾಗಿ ಅಪ್ಪಳಿಸಿತ್ತು, ಬ್ರಿಟಿಷರು ಸುಭಾಷರ ಗೆಲುವನ್ನು ಕಂಡು ಬೆದರಿದ್ದರು. ನಂತರ ‘ಕ್ವಿಟ್ ಇಂಡಿಯಾ’ ಘೋಷಣೆಯಾಯಿತು.
ಅಷ್ಟರೊಳಗೆ ರಷ್ಯಾ ದೇಶದಿಂದ ಎಡಚರರಿಗೆ ಬಂದಿದ್ದ ಆeಯು ಬದಲಾಗಿತ್ತು, ಎಡಚರರು ಬ್ರಿಟಿಷರ ಪರವಾಗಿ ನಿಂತರು.‘ಕ್ವಿಟ್ ಇಂಡಿಯಾ’ ಚಳವಳಿಯನ್ನು ವಿರೋಽಸಿದರು. ಎಡಚರರ ಯೋಗ್ಯತೆ ಯನ್ನು ಅಷ್ಟು ಹೊತ್ತಿಗಾಗಲೇ ಭಾರತೀಯರು ಅಳೆದಾಗಿತ್ತು. ಅವರನ್ನು ದೇಶವಿರೋಽಗಳೆಂದು ಜನರು ಅಷ್ಟರಲ್ಲಿ
ತೀರ್ಮಾನಿಸಿಯಾಗಿತ್ತು.ಎಡಚರರು ‘ರಾಷ್ಟ್ರೀಯ ಸ್ವಯಂ ಸೇವಕ ಸಂಘ’ ಬ್ರಿಟಿಷರ ಪರವಾಗಿ ಕೆಲಸ ಮಾಡಿತ್ತೆಂಬ ಸುಳ್ಳನ್ನು ಹೇಳುತ್ತಾರೆ,ಆದರೆ ಅವರ ಪರವಾಗಿ ನಿಂತ ವರು ಯಾರು? ಯಾವ ಇಸವಿಯಲ್ಲಿ ನಿಂತರು? ಯಾವ ಚಳವಳಿಯಲ್ಲಿ ನಿಂತರು? ಈ ಪ್ರಶ್ನೆಗಳನ್ನು ಕೇಳಿದರೆ ಉತ್ತರಿಸುವುದಿಲ್ಲ.
ಇತಿಹಾಸವನ್ನು ಮೆಲಕು ಹಾಕಿದರೆ ಎಡಚರರು ಎಂದಿಗೂ ಭಾರತದ ಪರವಾಗಿ ನಿಂತವರಲ್ಲ ತಾವು ರಷ್ಯಾ ಮತ್ತು ಬ್ರಿಟಿಷರ ಪರವಾಗಿದ್ದನ್ನು ಮುಚ್ಚಿ ಹಾಕಲು, ಬ್ರಿಟಿಷರ ವಿರುದ್ಧ ಹೋರಾಡಿದ್ದೇವೆಂಬ ಸುಳ್ಳನ್ನು ಈಗಲೂ ಹೇಳುತ್ತಾರೆ. ಅಷ್ಟು ಹೊತ್ತಿಗೆ ಲೆನಿನನ ಕಾರ್ಮಿಕವಾದವು ರಾಷ್ಟ್ರೀಯತೆಗಿಂತಲೂ ಮಹತ್ವವೆಂಬ ತತ್ವವನ್ನು ಎಡಚರರು ನಂಬಿದ್ದರು,ಇದೇ ತತ್ವದ ಬೆನ್ನತ್ತಿದ್ದ ಎಡಚರರು ಪಾಕಿಸ್ತಾನ ರಚನೆಗೂ ಕುಮ್ಮಕ್ಕು ನೀಡಿದರು.ತಮ್ಮ ಆಲೋಚನೆಗಳಿಗಾಗಿ ಭಾರತವನ್ನು ಚೂರಾಗಿಸುವುದೇ ಸರಿಯಾದ ಮಾರ್ಗವೆಂದರು, ಕಳೆದ ಕೆಲವು ವರ್ಷಗಲ್ಲಿ ಜೆ.ಎನ್.ಯುನಲ್ಲಿ ನಡೆದ ಘಟನೆಗಳನ್ನು ನೆನಪಿಸಿಕೊಳ್ಳಿ ‘ಉಮರ್ ಖಾಲೀದ್’ ಕಾಶ್ಮೀರ ಪ್ರತ್ಯೇಕತೆಯ ಬಗ್ಗೆ ಮಾತನಾಡಿ ಟುಕ್ಡೆ ಟುಕ್ಡೆ ಮಾಡಬೇಕೆಂದು ಘೋಷಣೆ ಕೂಗಿದಾಕ್ಷಣ ಎಡಚರನಾಗಿದ್ದ ಕನ್ನಯ್ಯ ಕುಮಾರ್ ಆತನ ಬೆಂಬಲಕ್ಕೆ ನಿಲ್ಲುತ್ತಾನೆ.
ಈಶಾನ್ಯ ಭಾರತದ ಸಂಪರ್ಕ ಕಲ್ಪಿಸುವ ‘ಚಿಕನ್ ನೆಕ್’ ಭಾಗವನ್ನು ಬಂದ್ ಮಾಡುವುದಾಗಿ ‘ಶಾಜೀರ್ ಇಮಾಮ’ ಹೇಳುತ್ತಾನೆ. ಅವನು ಹೇಳುವಾಗ ಅವನ ಪಕ್ಕದಲ್ಲಿ ನಿಂತಿದ್ದವರೆಲ್ಲರೂ ಎಡಚರ ಬೆಂಬಲಿಗರು.ನಂತರ ಅವನನ್ನು ಸಮರ್ಥಿಸಿಕೊಳ್ಳಲು ಮಾಧ್ಯಮಗಳ ಮುಂದೆ ಬಂದು ಮಾತನಾಡುವವರು ಎಡಚರ ಬೆಂಬಲಿಗರು,ಆತನ ಪರವಾಗಿ ನ್ಯಾಯಾಲಯದಲ್ಲಿ ವಕಾಲತ್ ಹಾಕುವವರು ಎಡಚರ ಬೆಂಬಲಿಗರು. ಮೊದಲೆಲ್ಲ ರಷ್ಯಾದಿಂದ ಆಜ್ಞೆಗಳು ಹೊರಡುತ್ತಿದ್ದವು.
ಈಗೆ ಚೀನಾದಿಂದ ಆಜ್ಞೆಗಳು ಹೊರಡುತ್ತಿವೆ.ಕಾಶ್ಮೀರದಲ್ಲಿ ನಡೆದ ಪಂಡಿತರ ಹತ್ಯಾಕಾಂಡವನ್ನು ಖಂಡಿಸುವ ಬದಲು ಅಲ್ಲಿನ ಪ್ರತ್ಯೇಕತಾವಾದಿಗಳ ಪರವಾಗಿ ನಿಂತು,ಅವರನ್ನು ಹೋರಾಟಗಾರೆಂದು ಕರೆಯುವವರು ಎಡಚರರು.
ಪತ್ರಕರ್ತೆ ‘ಅರುಂಧತಿ ರಾಯ’ ಬಹಿರಂಗ ವಾಗಿ ಕಾಶ್ಮೀರ ಎಂದೂ ಸಹ ಭಾರತಕ್ಕೆ ಸೇರಿದ್ದಲ್ಲವೆಂದು ಹೇಳುತ್ತಾಳೆ,ಈಕೆ ಯಾಸಿನ್ ಮಲಿಕ್ ನಡೆಸುತ್ತಿದ್ದಂತಹ ಹತ್ಯಾಕಾಂಡವನ್ನು ಬೆಂಬಲಿಸಿದ್ದ ಮಹಿಳೆ.ಕಾಶ್ಮೀರದಲ್ಲಿ ಸೈನಿಕರ ಗಾಡಿಗಳ ಮೇಲೆ ಕಲ್ಲು ತೂರುವವರನ್ನು ಸಮರ್ಥಿಸಿಕೊಂಡು ಮಾನವ ಹಕ್ಕು ಗಳನ್ನು ಮುನ್ನಲೆಗೆ ತರುತ್ತಾರೆ,ದೇಶ ಕಾಯುವ ಸೈನಿಕರನ್ನು ಅತ್ಯಾಚಾರಿಗಳೆಂದು ಕರೆದರು,ದಾಂತೇವಾಡದಲ್ಲಿ ನಡೆದ ನಕ್ಸಲರ ದಾಳಿಯಲ್ಲಿ ಸೈನಿಕರು ಹುತಾತ್ಮ ರಾದರೆ ಎಡಚರ ಪತ್ರಕರ್ತೆ ‘ಬುರ್ಖಾ ದತ್’ ನಕ್ಸಲರ ಪರವಾಗಿ ಮಾತನಾಡುತ್ತಾರೆ.
ರಾಷ್ಟ್ರೀಯತೆ, ಅಭಿವೃದ್ಧಿ, ಸೈನ್ಯದ ವಿಷಯಗಳಲ್ಲಿ ಎಡಚರರು ಇಂದಿಗೂ ಭಾರತ ವಿರೋಧಿಗಳಾಗಿಯೇ ಗುರುತಿಸಿಕೊಂಡಿದ್ದಾರೆ. ತಮ್ಮ ಸಾಲು ಸಾಲು ಸುಳ್ಳುಗಳ ಮೂಲಕ ಜನರನ್ನು ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಲೇ ಬಂದಿದ್ದಾರೆ, ತಮ್ಮ ಕೃತ್ಯಗಳನ್ನು ಪ್ರಚರಿಸಲು ವಿವಿಧ ಪದಪುಂಜಗಳನ್ನು ಬಳಸು ತ್ತಾರೆ. ಎಡಚರರು ನಡೆಸುವ ಸಂವಿಧಾನ ವಿರೋಽ ಚಳವಳಿಗಳಲ್ಲಿ ‘ಸಂವಿಧಾನ’ ಪದವನ್ನೇ ಹೆಚ್ಚು ಬಳಸುತ್ತಾರೆ. ಬಾಬಾಸಾಹೇಬರ ಆಶಯಗಳ ವಿರುದ್ಧ ನಡೆದುಕೊಂಡು ಬಾಬಾಸಾಹೇಬರ ಹೆಸರನ್ನೇ ಮುನ್ನೆಲೆಗೆ ತರುತ್ತಾರೆ. ಸಾಮರಸ್ಯದ ವಿರುದ್ಧ ಬ್ರಾಹ್ಮಣ್ಯದ ಪದಬಳಕೆ ಮಾಡುತ್ತಾರೆ,ರಾಷ್ಟ್ರೀಯತೆಯ ವಿರುದ್ಧ ಕೋಮು ವಾದವೆಂಬ ಪದಬಳಕೆ ಮಾಡುತ್ತಾರೆ, ಭಯೋತ್ಪಾದಕರ ಪರವಾಗಿ ನಿಂತಾಗ ಮಾನವ ಹಕ್ಕುಗಳ ಪದಪ್ರಯೋಗ ಮಾಡುತ್ತಾರೆ.
ರಷ್ಯಾದ ಕಮ್ಯುನಿಸ್ಟ್ ಸೌಧ ಕುಸಿದು ಬಿದ್ದ ನಂತರ ಚೀನಾ ದೇಶದ ಕಡೆ ಮುಖ ಮಾಡಿದ ಎಡಚರರು ಭಾರತ ಮತ್ತು ಚೀನಾ ನಡುವಿನ ಯುದ್ಧದಲ್ಲಿ ಚೀನಿ ಸೈನಿಕರ ಬೆಂಬಲಕ್ಕೆ ನಿಂತು, ಭಾರತ ಸೋತರೆ ಕಾರ್ಮಿಕರ ರಾಷ್ಟ್ರ ಮಾಡಬಹುದೆಂಬ ದೇಶವಿರೋಧಿ ಸಮರ್ಥನೆ ಕೊಟ್ಟಿದ್ದರು. ಎಡಚರರ ಸಲಹೆಯ ಮೇರೆಗೆ ನೆಹರು ಇಂಡಿಯಾ/ಚೀನಾ ಭಾಯ್ ಭಾಯ್ ಎಂದು ಹೇಳಿ ಸೈನ್ಯದ ನಿಶ್ಶಕ್ತೀಕರಣ ಮಾಡಿದ್ದರು. ಪರಿಣಾಮ ಭಾರತದ ಬಹುದೊಡ್ಡ ಭೂಭಾಗ ಚೀನಿಯರ
ಪಾಲಾಯಿತು,೧೯೬೨ ರ ಚೀನಾ ಯುದ್ಧದ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷರು ಭಾರತಕ್ಕೆ ಯುದ್ಧ ಸಾಮಗ್ರಿಗಳ ನ್ನೊಳಗೊಂಡ ವಿಮಾನವನ್ನು ಕೋಲ್ಕತಾಕ್ಕೆ ಕಳುಹಿಸಿರುತ್ತಾರೆ.
ಕೋಲ್ಕತಾ ವಿಮಾನ ನಿಲ್ದಾಣದಲ್ಲಿ ತಮ್ಮ ಪ್ರಾಬಲ್ಯ ಹೊಂದಿದ್ದ ಎಡಚರರು ಕೂಲಿಯಾಳುಗಳ ಮುಷ್ಕರಕ್ಕೆ ಕರೆ ನೀಡಿ ವಿಮಾನದಲ್ಲಿದ್ದಂತಹ ಯುದ್ಧ ಸಾಮಗ್ರಿ ಗಳು ಹೊರ ಬರದಂತೆ ಸುಮಾರು ಒಂದು ವಾರಗಳ ಕಾಲ ನೋಡಿ ಕೊಳ್ಳುತ್ತಾರೆ, ಅತ್ತ ಗಡಿಯಲ್ಲಿ ಸೈನಿಕರು ಯುದ್ಧ ಸಾಮಗ್ರಿ ಗಳಿಲ್ಲದೆ ಹುತಾತ್ಮರಾಗ ಬೇಕಾಗುತ್ತದೆ.ತಮ್ಮ ವ್ಯವಸ್ಥೆಯನ್ನು ಬಳಸಿಕೊಂಡು ಚೀನಿಯರ ಪರವಾಗಿ ನಿಂತು ಭಾರತ ವಿರೋಧಿ ಕೆಲಸ ನಡೆಸುವ ಎಡಚರರ ಚಾಳಿ ಹೊಸತಲ್ಲ. ಹಾಗಂತ ಚೀನಾ ಕಮ್ಯುನಿಸ್ಟ್ ರಾಷ್ಟ್ರವಾಗಿ ಉಳಿದಿಲ್ಲ, ಚೀನಾ ದೇಶದಲ್ಲಿ ಸಾವಿರಾರು ಜನ ಬಿಲೇನಿಯೆರ್ಗಳಿದ್ದಾರೆ. ಅಲ್ಲಿನ ಆಡಳಿತ ಪಕ್ಷ ಮಾತ್ರ ಕಮ್ಯುನಿಸ್ಟ್ ಹೆಸರಿನದ್ದು ಬಿಟ್ಟರೆ,ಇಡೀ ದೇಶದ ಸಂಪತ್ತು ಬಂಡವಾಳಶಾಹಿಗಳ ಬಳಿಯಲ್ಲಿದೆ.
ಒಂದಲ್ಲ,ಎರಡಲ್ಲ ಹಲವು ಬಾರಿ ಭಾರತವನ್ನು ಚೂರು ಚೂರು ಮಾಡುವ ಭಾರತದ ಸಾರ್ವಭೌಮತ್ವವನ್ನು ನಾಶ ಮಾಡುವ ಕೆಲಸವನ್ನು ವಿದೇಶಿ ಶಕ್ತಿಗಳ ಆಜ್ಞೆಯೊಂದಿಗೆ ಮಾಡುತ್ತಲೇ ಬಂದಿದ್ದಾರೆ. ಭಾರತದ ಮೇಲೆ ಬ್ರಿಟಿಷರ ಆಕ್ರಮಣವನ್ನು ಸಮರ್ಥಿಸಲು ಬಳಸಿದ್ದ ಆರ್ಯ ಮತ್ತು ದ್ರಾವಿಡವೆಂಬ ಸುಳ್ಳು ವಾದವನ್ನು ಹೆಚ್ಚಾಗಿ ಉಚ್ಛರಿಸು ವವರು ಎಡಚರರು, ಬ್ರಿಟಿಷರ ಉತ್ತರ ಮತ್ತು ದಕ್ಷಿಣ ಭಾರತವನ್ನು ಒಡೆಯುವ ಈ ಸಿದ್ಧಾಂತವನ್ನು ಎಡಚರರು ಇಂದಿಗೂ ಹೇಳುತ್ತಲೇ ಇರುತ್ತಾರೆ.ಎಡಚರ ಪ್ರಾಧ್ಯಾಪಕ ನನ್ನು ಭಾರತಕ್ಕೆ ಬಂದಂತಹ ಮೊದಲ ಆರ್ಯ ದೊರೆಯ ಹೆಸರೇನೆಂದು ಕೇಳಿದರೆ,ಅವರ ಬಳಿ ಉತ್ತರವಿಲ್ಲ.
ಆರ್ಯರ ಒಬ್ಬೇ ಒಬ್ಬ ರಾಜನ ಹೆಸರನ್ನು ಕೇಳಿದರೆ ಇವರ ಬಳಿ ಉತ್ತರವಿಲ್ಲ, ಆರ್ಯರ ವಾಸ್ತುಶಿಲ್ಪ ಯಾವುದು? ಅವರು ಯಾವ ಸಂಸ್ಥೆಗಳನ್ನು ಕಟ್ಟಿದ್ದರೆಂದು ಕೇಳಿದರೆ ಇವರ ಬಳಿ ಉತ್ತರವಿಲ್ಲ,ಆರ್ಯರ ಕೊನೆಯ ರಾಜನ ಹೆಸರೇನೆಂದು ಕೇಳಿದರೂ ಇವರ ಬಳಿ ಉತ್ತರವಿಲ್ಲ. ಆರ್ಯರು ಮಾಡಿದ ಯುದ್ಧಗಳು ಯಾವುವು ? ಕ್ರಿಸ್ತಪೂರ್ವ ಯಾವ ಇಸವಿಯಲ್ಲಿ ಆರ್ಯರು ಭಾರತಕ್ಕೆ ಬಂದರು ಅಥವಾ ನಾಶವಾದರೆಂಬ ಪ್ರಶ್ನೆ ಕೇಳಿದರೆ ಇವರ ಬಳಿ ಉತ್ತರವಿಲ್ಲ. ರಾಜಕೀಯವಾಗಿ ೩೦ ವರ್ಷಗಳ ಕಾಲ ಕಮ್ಯುನಿಸ್ಟ್ ಪಕ್ಷ ಅಧಿಕಾರದಲ್ಲಿದ್ದಂತಹ ಪಶ್ಚಿಮ ಬಂಗಾಳ ಅಭಿವೃದ್ಧಿಯ ಪಥವನ್ನೇ ಕಾಣಲಿಲ್ಲ, ರಷ್ಯಾ ದೇಶವಂತೂ ಆರ್ಥಿಕತೆಯಲ್ಲಿ ಜಗತ್ತಿನ ಟಾಪ್ ೫ ದೇಶಗಳಲ್ಲಿಯೂ ಇಲ್ಲ,ವೆನುಜಿಲಾ ದೇಶ ವಂತೂ ದಿವಾಳಿಯಾಗಿ ಹೋಯಿತು.
ಕಮ್ಯುನಿಸ್ಟ್ ಸಿದ್ಧಾಂತವನ್ನು ನಂಬಿ ಅಭಿವೃದ್ಧಿ ಹೊಂದಿದ ಜಗತ್ತಿನ ಒಂದೇ ಒಂದು ದೇಶವಿಲ್ಲ,ಚೀನಾದ ಕಮ್ಯುನಿಸಂ ಕೇವಲ ರಾಜಕೀಯಕ್ಕಷ್ಟೇ ಸೀಮಿತ. ದೆಹಲಿಯ ಸಂಸತ್ತಿನ ಒಳನುಗ್ಗಿದ ಮೈಸೂರಿನ ಮನೋರಂಜನ್ ಎಂಬ ಯುವಕನ ಮನೆಯಲ್ಲಿ ಸಿಕ್ಕ ಹಲವು ಪುಸ್ತಕಗಳು ಎಡಚರ ತತ್ವಗಳದ್ದೇ ಆಗಿವೆ, ಚಿಗುವೀರನ ‘ಗೊರಿ ವಾರ್ ಫಾರ್’,ಚೀನಾ ದೇಶದ ಹಳೆಯ ಮಿಲಿಟರಿ ಆಧಾರಿತ ಪುಸ್ತಕ ’ಆರ್ಟ್-ವಾರ್’,ಎಡಚರರು ವಿರೋಧಿಸುವ ‘ಅಂಬಾನಿ ಅಂಡ್ ಸನ್ಸ್’ ಪುಸ್ತಕ, ಭೂಗತ ಪಾತಕಿ ಮತ್ತು ಉಗ್ರ ದಾವೂದ್ ಇಬ್ರಾಹಿಂ ಕುರಿತಾದ ಪುಸ್ತಕಗಳು.
ತನ್ನ ಸ್ವಇಚ್ಛೆಯಿಂದ ಕೆಲಸ ಮಾಡದೆ ನಿರುದ್ಯೋಗಿ ಯಾಗಿದ್ದ ಮೈಸೂರಿನ ಮನೋರಂಜನ, ನಿರುದ್ಯೋಗದ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದವಾಗಿ ಕಾಣುತ್ತದೆ. ಎಡಚರರ ದೇಶವಿರೋಧಿ ಧೋರಣೆಗಳು,ಶತ್ರು ರಾಷ್ಟ್ರಗಳ ಜತೆ ಕೈಜೋಡಿಸಿ ಭಾರತದಲ್ಲಿ ಷಡ್ಯಂತ್ರ ನಡೆಸಿ ಭಯದ ವಾತಾವರಣ ನಡೆಸುವ ತಂತ್ರಗಾರಿಕೆ ಹೊಸತೇನಲ್ಲ. ಇಡೀ ಜಗತ್ತೇ ಹೊಸಕಿ ಹಾಕಿರುವ ಸತ್ತು ಹೋದ ಕಮ್ಯುನಿಸ್ಟ್ ಸಿದ್ಧಾಂತವನ್ನು ಮುನ್ನೆಲೆಗೆ ತರುವ ವ್ಯರ್ಥ ಪ್ರಯತ್ನಗಳನ್ನು
ಆಗಾಗ ಮಾಡುತ್ತಲೇ ಇರುತ್ತಾರೆ,ಕಾಂಗ್ರೆಸ್ ಪಕ್ಷ ಅಧಿಕಾರಕ್ಕಾಗಿ ನೆಹರು ಕಾಲದಿಂದಲೂ ಅವರಿಗೆ ಶ್ರೀರಕ್ಷೆಯಾಗಿ ನಿಂತಿರುವ ಕಾರಣ ಭಾರತದಲ್ಲಿ ಮತ್ತೊಮ್ಮೆ ಅರಾಜಕತೆ ಸೃಷ್ಟಿಸುವ ಕೆಲಸಕ್ಕೆ ಎಡಚರರು ಕೈ ಹಾಕುವುದರಲ್ಲಿ ಯಾವುದೇ ಅನುಮಾನವಿಲ್ಲ.