ಭಾಗ್ಯನಗರ: ಎಂ.ಐ.ಎಂ.ನ ಮುಖಂಡ ಮತ್ತು ತೆಲಂಗಾಣದ ಶಾಸಕ ಅಕ್ಬರುದ್ದೀನ ಓವೈಸಿ ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿದ ನಂತರ, ತದನಂತರ ತೆಲಂಗಾಣ ಬಿಜೆಪಿ ಶಾಸಕರು ಪ್ರಮಾಣ ವಚನ ಸ್ವೀಕರಿಸಲು ಹೋದರು.
ಹಿರಿಯ ಕಾಂಗ್ರೆಸ್ ಮುಖಂಡ ಗದ್ದಾಮ ಪ್ರಸಾದ ಕುಮಾರ ಇವರು ಸಭಾಧ್ಯಕ್ಷ ಹುದ್ದೆಯನ್ನು ಸ್ವೀಕರಿಸಿದರು.
ತೆಲಂಗಾಣದ ಮೂರನೇ ವಿಧಾನಸಭೆಯ ಸಭಾಧ್ಯಕ್ಷರಾಗಿ ಕುಮಾರ್ ಅವರು ಪ್ರಮಾಣ ವಚನ ಸ್ವೀಕರಿಸಿದ ಬಳಿಕ, ಶಾಸಕರಾದ ಟಿ.ರಾಜಸಿಂಗ್, ಯೆಲೇಟಿ ಮಹೇಶ್ವರ್ ರೆಡ್ಡಿ, ವೆಂಕಟರಮಣ ರೆಡ್ಡಿ, ಪಾಯಲ ಶಂಕರ, ಪೈಡಿ ರಾಕೇಶ ರೆಡ್ಡಿ, ರಾಮಾರಾವ ಪಟೇಲ ಪವಾರ, ಧನಪಾಲ ಸೂರ್ಯನಾರಾಯಣ ಮತ್ತು ಪಲವಯಿ ಹರೀಶ ಬಾಬು ಈ 8 ಜನ ಶಾಸಕರಿಗೆ ಸಭಾಧ್ಯಕ್ಷರು ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಗದ್ದಾಂ ಪ್ರಸಾದ ಕುಮಾರ ಅವರು ತೆಲಂಗಾಣ ವಿಧಾನಸಭೆಯ ಮೊದಲ ದಲಿತ ಸಭಾಧ್ಯಕ್ಷರಾಗಿದ್ದಾರೆ.