ಪ್ರಯಾಗರಾಜ್: ಜ್ಞಾನವಾಪಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದ 5 ಅರ್ಜಿಗಳ ವಿಚಾರಣೆಯನ್ನು ಅಲಹಾಬಾದ್ ಹೈಕೋರ್ಟ್ ಡಿ.8 ರಂದು ನಡೆಸಿದ್ದು, ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು.
ಈ ಪೈಕಿ ಮೂರು ಅರ್ಜಿಗಳು 1991ರಲ್ಲಿ ವಾರಣಾಸಿ ನ್ಯಾಯಾಲಯದಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿವೆ.
ಎಎಸ್ಐ ಸರ್ವೆ ಆದೇಶದ ವಿರುದ್ಧ ಎರಡು ಅರ್ಜಿಗಳು ಸಲ್ಲಿಕೆಯಾಗಿದ್ದವು. 1991ರ ಈ ಪ್ರಕರಣದಲ್ಲಿ ವಿವಾದಿತ ನಿವೇಶನವನ್ನು ಹಿಂದೂಗಳಿಗೆ ಹಸ್ತಾಂ ತರಿಸಬೇಕೆಂಬ ಬೇಡಿಕೆ ಇತ್ತು. ಇದಲ್ಲದೇ ಇಲ್ಲಿ ಪೂಜೆಗೆ ಅನುಮತಿಯನ್ನೂ ಕೋರಲಾಗಿತ್ತು.
ವಾರಣಾಸಿಯ ಜಿಲ್ಲಾ ನ್ಯಾಯಾಲಯದಲ್ಲಿ 1991ರಲ್ಲಿ ಈ ಪ್ರಕರಣ ದಾಖಲಾಗಿತ್ತು. ಅಲಹಾಬಾದ್ ಹೈಕೋರ್ಟ್ ತನ್ನ ತೀರ್ಪಿನಲ್ಲಿ ನಿರ್ಧರಿಸಬೇಕಾದ ಪ್ರಮುಖ ವಿಷಯವೆಂದರೆ, ವಾರಣಾಸಿ ನ್ಯಾಯಾಲಯವು ಈ ಪ್ರಕರಣವನ್ನು ಆಲಿಸಬಹುದೇ ಅಥವಾ ಇಲ್ಲವೇ ಎಂಬುದು ತಿಳಿಸಲಿದೆ. ಈ ಸಂದರ್ಭ ದಲ್ಲಿ 1991ರ ಪೂಜಾ ಸ್ಥಳಗಳ ಕಾಯಿದೆಯನ್ನು ಅನ್ವಯಿಸಬಹುದೇ ಅಥವಾ ಇಲ್ಲವೇ ಎನ್ನುವ ಕುರಿತು ಈ ಪ್ರಕರಣದ ತೀರ್ಪು ಅನ್ನು ಮೂರು ಬಾರಿ ಕಾಯ್ದಿರಿಸಿದ ನಂತರ, ನ್ಯಾಯಾಲಯವು ಮತ್ತೆ ಅರ್ಜಿಗಳನ್ನು ಆಲಿಸಿತ್ತು.
1936ರ ದೀನ್ ಮೊಹಮ್ಮದ್ ಪ್ರಕರಣದ ತೀರ್ಪಿನ ಬಗ್ಗೆ ಮುಸ್ಲಿಂ ಕಡೆಯಿಂದ ನ್ಯಾಯಾಲಯದಲ್ಲಿ ಮಾಹಿತಿ ನೀಡಲಾಗಿದೆ.
ಮೂರು ಬಾರಿ ತೀರ್ಪನ್ನು ಕಾಯ್ದಿರಿಸಿದ ನಂತರ ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಮತ್ತೊಮ್ಮೆ ನಡೆಸಿತು. ಇತ್ತೀಚೆಗಷ್ಟೇ ಜ್ಞಾನವಾಪಿ ಸಂಕಿರ್ಣದಲ್ಲಿ ಎಎಸ್ಐ ಸಮೀಕ್ಷೆ ನಡೆಸಿತ್ತು. ಈ ಪ್ರಕರಣದಲ್ಲಿ ವರದಿ ಸಲ್ಲಿಸಲು ಸಮೀಕ್ಷಾ ತಂಡ ನ್ಯಾಯಾಲಯದಿಂದ ಕಾಲಾವಕಾಶ ಕೋರಿತ್ತು.
ಜ್ಞಾನವಾಪಿ ಮಸೀದಿಯಲ್ಲಿ ಪೂಜೆಗೆ ಅವಕಾಶ ಕೋರಿ ಹಿಂದೂ ಮಹಿಳೆಯರು 2021ರಲ್ಲಿ ವಾರಣಾಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದರು.
ಅರ್ಜಿ ಸಲ್ಲಿಸಿದ ನಂತರ ನ್ಯಾಯಾಲಯವು ಮಸೀದಿಯಲ್ಲಿ ವಿಡಿಯೋ ಸಮೀಕ್ಷೆಗೆ ಅನುಮತಿ ನೀಡಿತ್ತು. ಈಗಾಗಲೇ, ಜ್ಞಾನವಾಪಿ ಮಸೀದಿಯ ವಿಡಿಯೋ ಸಮೀಕ್ಷೆ ಮುಗಿದಿತ್ತು. ಸಮೀಕ್ಷೆ ಸಮಯದಲ್ಲಿ ಶಿವಲಿಂಗ ಪತ್ತೆಯಾಗಿತ್ತು. ಶಿವಲಿಂಗ ಪತ್ತೆಯಾದ ಕಾರಣ ವೈಜ್ಞಾನಿಕ ಸಮೀಕ್ಷೆಗೆ ಮನವಿ ಮಾಡಲಾ ಗಿತ್ತು. ಜೊತೆಗೆ ವೈಜ್ಞಾನಿಕ ಸಮೀಕ್ಷೆಯು ಮುಗಿದಿದೆ.