ಬೆಂಗಳೂರು: ಬಹುಭಾಷಾ ನಟಿ ಹೇಮಾ ಚೌಧರಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹಿರಿಯ ನಟಿಗೆ ಇತ್ತೀಚೆಗೆ ಬ್ರೈನ್ ಹ್ಯಾಮರೇಜ್ ಎಂದು ವರದಿಯಾಗಿದೆ. ಸದ್ಯ ತೀವ್ರ ನಿಗಾ ಘಟಕದಲ್ಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ಆಕೆಯ ಪುತ್ರ ಐರ್ಲೆಂಡ್‌ನಲ್ಲಿದ್ದು ಆತನ ಬರುವಿಕೆಗಾಗಿ ಕುಟುಂಬಸ್ಥರು ಕಾಯುತ್ತಿದ್ದಾರೆ. ಆಕೆ ಬೇಗ ಚೇತರಿಸಿಕೊಳ್ಳಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ.
ಹೈದರಾಬಾದ್‌ನಲ್ಲಿ ಹುಟ್ಟಿ ಬೆಳೆದ ಹೇಮಾ ಚೌಧರಿ 180ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಹುಬೇಡಿಕೆಯ ಪೋಷಕ ಕಲಾವಿದೆಯಾಗಿ ಹೇಮಾ ಮಿಂಚಿದ್ದರು. ಕನ್ನಡ ಸಿನಿಮಾಗಳಲ್ಲಿ ತಮ್ಮ ನೆಗೆಟಿವ್ ಪಾತ್ರಗಳಿಂದ ಆಕೆ ಹೆಚ್ಚು ಜನಪ್ರಿಯತೆ ಗಳಿಸಿದ್ದರು.
ಇತ್ತೀಚೆಗೆ ನಟಿ ಲೀಲಾವತಿ ಪುಣ್ಯ ತಿಥಿಯಲ್ಲಿ ಹೇಮಾ ಚೌಧರಿ ಆರೋಗ್ಯವಾಗಿರುವಂತೆ ಕಂಡು ಬಂದಿದ್ದರು. ದಿಢೀರನೆ ಆಕೆಯ ಆರೋಗ್ಯ ಸ್ಥಿತಿ ಚಿಂತಾಜನಕವಾಗಿರುವುದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.
‘ವಿಜಯವಾಣಿ’, ‘ಶುಭಾಶಯ’, ‘ದೀಪ’, ಹಾಗೂ ‘ನೀ ಬರೆದ ಕಾದಂಬರಿ’ ಚಿತ್ರಗಳಲ್ಲಿ ತಮ್ಮ ಪಾತ್ರಗಳಿಂದ ಗಮನ ಸೆಳೆದಿದ್ದರು. 70, 80ರ ದಶಕದಲ್ಲಿ ದಕ್ಷಿಣ ಭಾರತ ಚಿತ್ರರಂಗದ ಬಹುತೇಕ ಎಲ್ಲಾ ಸ್ಟಾರ್ ನಟರ ಸಿನಿಮಾಗಳಲ್ಲಿ ಹೇಮಾ ಬಣ್ಣ ಹಚ್ಚಿದ್ದರು.
ಕೂಚಿಪೂಡಿ ನೃತ್ಯ ಕಲಿತಿರುವ ಆಕೆ 700ಕ್ಕೂ ಅಧಿಕ ವೇದಿಕೆಗಳಲ್ಲಿ ಕುಣಿದಿದ್ದಾರೆ. ಎನ್‌ಟಿಆರ್, ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಚಿರಂಜೀವಿ, ಶಂಕರ್ ನಾಗ್, ಟೈಗರ್ ಪ್ರಭಾಕರ್ ಸೇರಿದಂತೆ ಸಾಕಷ್ಟು ಟರ ಸಿನಿಮಾಗಳಲ್ಲಿ ನಟಿಸಿದ್ದಾರೆ.