Friday, 13th December 2024

ಯಶವಂತಪುರದಲ್ಲಿ ಮಹಿಳಾ ಮತ್ತು ಮಕ್ಕಳ ಆರೆೈಕೆಯಲ್ಲಿ ಹೆೊಸ ಕಾರಂತಿಗೆ ಸ್ಪರ್ಶ ಆಸ್ಪತ್ರೆಗಳ ಸಮೂಹ ಸಜ್ಜು

ಬೆಂಗಳೂರು: ಸ್ಪರ್ಶ ಆಸ್ಪತ್ರೆಗಳ ಸಮೂಹವು ಯಶವಂತಪುರದಲ್ಲಿ ಮಹಿಳಾ ಮತ್ತು ಮಕ್ಕಳ ಆರೈಕೆಗೆ ಮೀಸಲಾದ ವಿಶೇಷ ಕೇಂದ್ರವನ್ನು ಅನಾವರಣ ಗೊಳಿಸಿಸುವ ಮೂಲಕ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ.

ಈ ಅಪೂರ್ವ ಸಾಧನೆ ಉತ್ತಮ ಪರಿಸರದಲ್ಲಿ ಅತ್ಯುನ್ನತ ಗುಣಮಟ್ಟದ ಆರೈಕೆಯನ್ನು ಒದಗಿಸುವ ಮೂಲಕ ಮಹಿಳೆಯರು ಮತ್ತು ಮಕ್ಕಳ ಯೋಗಕ್ಷೇಮಕ್ಕೆ ಆದ್ಯತೆ ನೀಡುವ ನಮ್ಮ ಅಚಲ ಬದ್ಧತೆಯನ್ನು ಒತ್ತಿ ಹೇಳುತ್ತದೆ. ಮಹಿಳಾ ಆರೋಗ್ಯಕ್ಕಾಗಿ ನಮ್ಮ ಆದ್ಯತೆಯು ಇನ್‌ಫೆಂಟ್ರಿ ರಸ್ತೆ ಮತ್ತು ಆರ್‌.ಆರ್‌ ನಗರ ಸೇರಿದಂತೆ ಎಲ್ಲಾ ಸ್ಪರ್ಶ್‌ ಆಸ್ಪತ್ರೆಗಳಿಗೆ ವ್ಯಾಪಿಸಿದೆ. ಈಗ ಈ ಎಲ್ಲಾಆಸ್ಪತ್ರೆಗಳು ಈಗ ಮಹಿಳೆಯರ ಚಿಕಿತ್ಸಾ ಘಟಕಗಳನ್ನುಹೊಂದಿವೆ.

ನಮ್ಮಆರೋಗ್ಯ ಸೇವೆಗಳಿಗೆ ಈ ಮಹತ್ವದ ಸೇರ್ಪಡೆ ಅತ್ಯುತ್ತಮ ಚಿಕಿತ್ಸೆಯೊಂದಿಗೆ ಅಸಂಖ್ಯಾತ ಜೀವಗಳ ಮೇಲೆ ಧನಾತ್ಮಕವಾಗಿ ಪರಿಣಾಮ ಬೀರುತ್ತದೆ ಎಂದು ನಾವು ದೃಢವಾಗಿ ನಂಬುತ್ತೇವೆ.

ಆಸ್ಪತ್ರೆಯು ಹೆಸರಾಂತ ವೈದ್ಯರೊಂದಿಗೆ ಸುಸಜ್ಜಿತವಾಗಿದೆ ಮತ್ತು ಒಂದೇ ಸೂರಿನಡಿ ಅಗತ್ಯ ಮಲ್ಟಿ ಸ್ಪೆಷಾಲಿಟಿ ಪರಿಣತಿಯ ಚಿಕಿತ್ಸೆಯ ಅಗತ್ಯವಿರುವ ಬಹು-ಅಪಾಯದ ಗರ್ಭಧಾರಣೆ ಮತ್ತು ಶಸ್ತ್ರಚಿಕಿತ್ಸೆಗಳನ್ನು ಕೈಗೊಳ್ಳಲು ಬೇಕಾದ ಸೌಲಭ್ಯಗಳನ್ನು ಹೊಂದಿದೆ.

ಈ ಘಟಕವು ಸಂಕೀರ್ಣ ಶಸ್ತ್ರ ಚಿಕಿತ್ಸೆಗಳಿಗೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಮತ್ತು ರೊಬೊಟಿಕ್ಶಸ್ತ್ರ ಚಿಕಿತ್ಸಾ ಸೌಲಭ್ಯಗಳನ್ನು ಹೊಂದಿದ್ದು, ಕಾಸ್ಮೆಟಿಕ್, ಸ್ತ್ರೀರೋಗಶಾಸ್ತ್ರ, ಐವಿಎಫ್‌ಮತ್ತುಚರ್ಮಶಾಸ್ತ್ರದಸೂಪರ್ಸ್ಪೆಷಾಲಿಟಿಗಳಲ್ಲಿನಮ್ಮಪ್ರಾವೀಣ್ಯತೆಮತ್ತುಕೌಶಲ್ಯಕ್ಕೆನಿದರ್ಶನವಾಗಿದೆ. ಅಕಾಲಿಕವಾಗಿ  ಜನಿಸಿದ ಶಿಶುಗಳು ಅಥವಾ ನಿರ್ದಿಷ್ಟ ವೈದ್ಯಕೀಯ ಮಧ್ಯಸ್ಥಿಕೆಗಳ ಅಗತ್ಯವಿರುವ ಶಿಶುಗಳಿಗೆ ಅಗತ್ಯವಿರುವ ನಿರ್ಣಾಯಕ ಆರೈಕೆಯನ್ನು ಒದಗಿಸುವ ಮೂರನೇ ಹಂತದ ಎನ್‌.ಐ.ಸಿ.ಯುವನ್ನು (Level III A NICU) ಹೊಂದಿದೆ. ಪಿ.ಐ.ಸಿ.ಯು (PICU) ತೀವ್ರವಾಗಿ ಅಸ್ವಸ್ಥವಾಗಿರುವ ಮಕ್ಕಳ ಆರೈಕೆಯಲ್ಲಿ ಪರಿಣತಿ ಹೊಂದಿದೆ.

ತನ್ನ ಸಂತಸ ವ್ಯಕ್ತಪಡಿಸಿದ ಮಹಿಳಾ ವಿಶ್ವ ಸ್ನೂಕ ರ್ಚಾಂಪಿಯನ್ವಿದ್ಯಾವಿಪಿಳ್ಳೈ,  “ಇಂದು ಈ ಕಾರ್ಯಕ್ರಮದ ಭಾಗವಾಗಿರಲು ನನಗೆ ಸಂತೋಷವಾಗಿದೆ. ಸ್ಪರ್ಶ್ಆಸ್ಪತ್ರೆಯು ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ರಕ್ಷಣೆಗೆ ನೀಡಿದ ಆದ್ಯತೆ ಮೆಚ್ಚುವಂತದ್ದು. ಈ ಮೀಸಲಾದ ವಿಶೇಷತೆ ಅಕ್ಕಪಕ್ಕದ ಜನರಿಗೆ ಅಮೂಲ್ಯ ಸೌಲಭ್ಯ ಒದಗಿಸುವುದಲ್ಲದೆ, ಕ್ಲಿನಿಕಲ್ಪರಿಣತಿಯ ಮೂಲಕ ಹೆಚ್ಚು ಪರಿಣಾಮಕಾರಿ ಎನಿಸಬಲ್ಲುದು. ಇದು ಮಹಿಳೆಯರು ಮತ್ತು ಮಕ್ಕಳ ಸಮಗ್ರ ಆರೈಕೆಗೆ ವಿವಿಧ ಸೇವೆಗಳನ್ನು ಒದಗಿಸುತ್ತದೆ.”

ಯಶವಂತಪುರದ ಮಹಿಳಾ ಮತ್ತು ಮಕ್ಕಳ ಸ್ಪರ್ಶ್ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ಸಲಹಾ ತಜ್ಞೆ ಡಾ. ಪದ್ಮಲತಾ ವಿವಿ ಮಾತನಾಡಿ, “ನಮ್ಮ ಮಹಿಳಾ ಮತ್ತು ಮಕ್ಕಳ ಆರೈಕೆ ಘಟಕವು ಗರ್ಭಾವಸ್ಥೆಯನ್ನು ಹೆಚ್ಚು ಕಠಿಣಗೊಳಿಸು ರಕ್ತ ಹೆಪ್ಪುಗಟ್ಟುವಿಕೆ, ಹೃದ್ರೋಗ ಅಥವಾ ಕ್ಯಾನ್ಸರ್‌ನಂತಹ ಯಾವುದೇ ಜೀವನದ ಸಂಕೀರ್ಣ ಸವಾಲುಗಳನ್ನು ನಿಭಾಯಿಸಲು ಸಜ್ಜಾಗಿದೆ. ಈ ಘಟಕವನ್ನು ಅಸಾಧಾರಣ ಉತ್ಕೃಷ್ಟತೆಗೆ ಯಾವುದೇ ಕೊರತೆಯಿಲ್ಲದಂತೆ ವಿನ್ಯಾಸಗೊಳಿಸುವ ಮೂಲಕ, ಉತ್ತಮ ವಾತಾವರಣದಲ್ಲಿ ಸಹಾನುಭೂತಿಯ ಆರೈಕೆಯೊಂದಿಗೆ ತಾಯಂದಿರು ಮತ್ತು ಮಕ್ಕಳು ಉನ್ನತ ಮಟ್ಟದ ವೈದ್ಯಕೀಯ ಆರೈಕೆ ಪಡೆಯುವ ಖಾತರಿನೀಡುತ್ತೇವೆ.”

ಮಹಿಳೆಯರು ಮತ್ತು ಮಕ್ಕಳ ವಿಶೇಷ ಆರೈಕೆಯ ಮಹತ್ವವನ್ನು ವಿವರಿಸಿದ,  ಯಶವಂತಪುರದ ಮಹಿಳಾ ಮತ್ತು ಮಕ್ಕಳ ಸ್ಪರ್ಶ್ಆಸ್ಪತ್ರೆಯ ಶಿಶುವೈದ್ಯ ಮತ್ತು ಇಂಟರ್ವೆಂಟನಿಸ್ಟ್ಡಾ.ಅನಿಲ್ಎಂ.ಯು ಮಾತನಾಡಿ, “ಪ್ರತಿಯೊಂದುತಾಯಿ- ಮಗುವಿನ ಜೋಡಿಯಲ್ಲಿ ಪ್ರತ್ಯೇಕ ವೈದ್ಯಕೀಯ ಅಗತ್ಯತೆಗಳಿರುತ್ತವೆ. ಸೂಕ್ತಔಷಧಿಯಂತೆಯೇ, ಕಾಳಜಿಯು ಅವರ ನಿರ್ದಿಷ್ಟ ದೈಹಿಕ ಮತ್ತು ಭಾವನಾತ್ಮಕ ಯೋಗಕ್ಷೇಮಕ್ಕೆ ಅನುಗುಣ ವಾಗಿ ಹೊಂದಿಕೆಯಾಗಬೇಕು. ನಮ್ಮಉದ್ದೇಶ ಕೇವಲ ಪ್ರತ್ಯೇಕಗಮನನೀಡುವುದರಮೇಲೆಕೇಂದ್ರೀಕೃತವಾಗಿಲ್ಲ,ನೀಡುವಉತ್ತಮ-ಗುಣಮಟ್ಟದ ಚಿಕಿತ್ಸೆಕುಟುಂಬಗಳಲ್ಲಿವಿಶ್ವಾಸಮೂಡಿಸಬೇಕು. ಅವರಲ್ಲಿ ತಮ್ಮ ಮಗುವಿನ ಯೋಗಕ್ಷೇಮವು ಇಲ್ಲಿರುವ ಎಲ್ಲರಿಗೆ ಮೊದಲ ಆದ್ಯತೆಯಾಗಿದೆ ಎಂದು ಅವರಿಗೆ ಅನಿಸಬೇಕು ಎಂದು ನಾವು ಬಯಸುತ್ತೇವೆ,” ಎಂದರು.

ಈ ಸೌಲಭ್ಯವು ನವಜಾತ ಶಿಶುವಿನಿಂದ ವೃದ್ಧಾಪ್ಯದವರೆಗಿನ ಸೌಲಭ್ಯಗಳನ್ನು ಒದಗಿಸುತ್ತದೆ, ಸಮುದಾಯದ ಯೋಗಕ್ಷೇಮಕ್ಕಾಗಿ ಆಸ್ಪತ್ರೆಯ ಅಚಲ ಬದ್ಧತೆಯನ್ನು ಪ್ರದರ್ಶಿಸುತ್ತದೆ.