ಮಾಸ್ಕೋ (ರಷ್ಯಾ) – ಉಕ್ರೇನ್ ಮೇಲೆ ರಷ್ಯಾ ನಡೆಸಿದ ಅತಿದೊಡ್ಡ ದಾಳಿಗೆ ಪ್ರತಿಕ್ರಿಯೆಯಾಗಿ, ಉಕ್ರೇನ್ ರಷ್ಯಾದ ಬೆಲ್ಗೊರೊಡ್ ನಗರದ ಮೇಲೆ ದಾಳಿ ಮಾಡಿದೆ. ಇದರಲ್ಲಿ ರಷ್ಯಾದ 21 ಜನರು ಸಾವನ್ನಪ್ಪಿದ್ದರೆ, 111 ಜನರು ಗಾಯಗೊಂಡಿದ್ದಾರೆ.
ಕ್ಲಸ್ಟರ್ ಬಾಂಬ್‌ಗಳಿಂದ ಉಕ್ರೇನ್ ದಾಳಿ ನಡೆಸಿದೆ ಎಂದು ರಷ್ಯಾ ಹೇಳಿಕೊಂಡಿದೆ. ಬೆಲ್ಗೊರೊಡ್ ನಗರವು ಉಕ್ರೇನಿಯನ್ ಗಡಿಯಿಂದ ಕೇವಲ 30 ಕಿಲೋಮೀಟರ್ ದೂರದಲ್ಲಿದೆ. 32 ಉಕ್ರೇನಿಯನ್ ಡ್ರೋನ್‌ಗಳನ್ನು ಹೊಡೆದುರುಳಿಸಿದೆ ಎಂದು ರಷ್ಯಾ ಹೇಳಿಕೊಂಡಿದೆ.
ಕ್ಲಸ್ಟರ್ ಬಾಂಬ್ ಅನ್ನು ಗಾಳಿಯಲ್ಲಿ ಬಿಡುಗಡೆ ಮಾಡಿದಾಗ, ಅದು ಅನೇಕ ಸಣ್ಣ ಬಾಂಬ್‌ಗಳನ್ನು ಬಿಡುಗಡೆ ಮಾಡುತ್ತದೆ. ಈ ಸಣ್ಣ ಬಾಂಬ್‌ಗಳು ಸಾಮಾನ್ಯ ಬಾಂಬ್‌ಗಳಿಗಿಂತ ದೊಡ್ಡ ಪ್ರದೇಶದ ಮೇಲೆ ಪರಿಣಾಮ ಬೀರುತ್ತವೆ. ಹೆಚ್ಚಿನ ಸಂದರ್ಭಗಳಲ್ಲಿ ಸಾಮಾನ್ಯ ನಾಗರಿಕರೂ ಅದಕ್ಕೆ ಬಲಿಯಾ ಗುತ್ತಾರೆ. ಇವುಗಳನ್ನು ವಿಮಾನಗಳ ಮೂಲಕ ಆಕಾಶದಿಂದ ಹಾರಿಸಬಹುದು ಮತ್ತು ಫಿರಂಗಿಗಳ ಮೂಲಕ ನೆಲದಿಂದ ಕೂಡ ಹಾರಿಸಬಹುದು.