ತುಂಟರಗಾಳಿ
ಸಿನಿಗನ್ನಡ
ಚಿತ್ರರಂಗದಲ್ಲಿ ಈಗ ಹೊಸದೊಂದು ಚಾಳಿ ಶುರು ಆಗಿದೆ. ಅದು ಚಿತ್ರದ ಕಲೆಕ್ಷನ್ ವಿಚಾರದ್ದು. ಮೊದಲೆಲ್ಲ ಸಿನಿಮಾ ಒಂದು, ೧೦೦ ದಿನ ಓಡಿದ್ರೂ ನಿರ್ಮಾ ಪಕರು ಬಾಯಲ್ಲಿ ಕೋಟಿ ಅನ್ನೋಕೆ ಮುಂಚೆ ಕೋಟಿ ಸಲ ಯೋಚನೆ ಮಾಡ್ತಾ ಇದ್ರು. ಈಗ ಮಾತೆತ್ತಿದರೆ ಬಾಯಿಗೆ ಬಂದ ಹಾಗೆ ಮೊದಲ ದಿನವೇ ಕೋಟಿಗಟ್ಟಲೆ ಲೆಕ್ಕದಲ್ಲಿ ಮಾತಾಡ್ತಾರೆ. ಆದ್ರೆ ಇದ್ಯಾ ವುದೂ ಅಫಿಷಿಯಲ್ ಹೇಳಿಕೆ ಅಲ್ಲ.
ಕೆಲವು ‘ಬಿ’ ಮತ್ತು ‘ಸಿ’ ಗ್ರೇಡ್ ವೆಬ್ ಸೈಟುಗಳು, ಯೂಟ್ಯೂಬ್ ಚಾನೆಲ್ಲು ಗಳು ಮೊದಲ ದಿನದ ಮಾರ್ನಿಂಗ್ ಶೋ ಅಥವಾ ಈಗಿನ ಹೊಸ ಟ್ರೆಂಡ್ನಂತೆ ಅರ್ಲಿ
ಮಾನಿಂಗ್ ಶೋ ಮುಗಿಯೋ ಮೊದಲೇ ಕೋಟಿಗಳ ಲೆಕ್ಕ ಬರೆಯೋಕೆ ಶುರು ಮಾಡಿರ್ತವೆ. ಇದಕ್ಕೆ ಚಿತ್ರದ ನಿರ್ಮಾಪಕರು ‘ಹೌದು’ ಅಂತಲೂ ಹೇಳಲ್ಲ, ‘ಇಲ್ಲ’
ಅಂತನೂ ಹೇಳಲ್ಲ. ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ, ‘ಹೌದಾ, ಅಷ್ಟೊಂದ್ ಕಲೆಕ್ಷನ್ ಆಗಿದೆಯಾ, ನಮಗೇ ಗೊತ್ತಿಲ್ಲ’ ಅಂತ ಸ್ವತಃ ನಿರ್ಮಾಪಕರೇ ಹೇಳ್ತಾರೆ. ಇತ್ತೀಚೆಗೆ ಬಿಡುಗಡೆ ಆದ ‘ಸಲಾರ್’ ಚಿತ್ರದ ಕಥೆ ಇದೇ ಆಗಿದ್ದು.
೫೦ ಕೋಟಿ, ೧೦೦ ಕೋಟಿ ಅಂತ ಶುರು ಆಗಿ ೧,೦೦೦ ಕೋಟಿ ಮಾಡುತ್ತೆ ಅಂತೆಲ್ಲಾ ರಿಪೋರ್ಟುಗಳು ಬಂದಿದ್ದವು. ಅದಾದ ನಂತರ ನಿರ್ಮಾಪಕರು ತಮ್ಮ ಅಫಿಷಿಯಲ್ ಸೋಷಿ ಯಲ್ ಮೀಡಿಯಾ ಪೇಜ್ಗಳಿಂದ ಅಂಥ ರಿಪೋರ್ಟ್ಗಳನ್ನು ತೆಗೆದುಹಾಕಿದ್ದರು. ಇವೆಲ್ಲ ಏನಿದ್ರೂ ಚಿತ್ರಮಂದಿರಕ್ಕೆ ಪ್ರೇಕ್ಷಕರನ್ನು ಸೆಳೆ ಯಲು ಮಾಡುವ ತಂತ್ರ ಎನ್ನಲಾಗುತ್ತಿದೆ. ಇದಕ್ಕೆ ಸಹಾಯ ಮಾಡುವಂತೆ ಕಾರ್ಪೋರೇಟ್ ಬುಕ್ಕಿಂಗ್ ಎನ್ನುವ ಹೊಸ ದಂಧೆ ಶುರು ಆಗಿದೆ. ಇದು ಸುಳ್ಳು ಟಿಕೆಟ್ ಬುಕ್ಕಿಂಗ್ ತೋರಿಸುವ ಕೆಲಸ ಎಂದು ಸಿನಿಪಂಡಿತರು ಹೇಳುತ್ತಿದ್ದಾರೆ.
ಅದಾದ ನಂತರ ‘ಸಲಾರ್’ ಚಿತ್ರ ಇದ್ದಕ್ಕಿದ್ದಂತೆ ತನ್ನ ಪ್ರಚಾರ ನಿಲ್ಲಿಸಿದೆ. ಅದರ ಬೆನ್ನಲ್ಲೇ ಆಗಲೇ ಜನವರಿ ಆರಂಭದಲ್ಲೇ ‘ಸಲಾರ್’ ಓಟಿಟಿಗೆ ಬರುತ್ತಿದೆ ಎನ್ನಲಾಗಿದೆ. ಇದೆಲ್ಲದರ ನಡುವೆ ಸಿನಿಮಾ ಎಷ್ಟರ ಮಟ್ಟಿಗೆ ಹಿಟ್ ಆಗಿದೆ ಅನ್ನೋದು ನಮ್ಮ ಊಹೆಗೆ ಬಿಟ್ಟಿದ್ದು. ಸದ್ಯಕ್ಕೆ ನಮ್ಮ ಕನ್ನಡದ ‘ಕಾಟೇರ’ ಚಿತ್ರ ಕೂಡಾ ಇದೇ ರೀತಿಯ ಪ್ರಚಾರದ ಹಾದಿಯಲ್ಲಿದೆ. ಇದನ್ನೆಲ್ಲಾ ನೋಡಿ, ‘ಅದರ ಕಲೆಕ್ಷನ್ ಅಸಲಿಯತ್ತು ಗೊತ್ತಾಗುವುದು ಹೇಗೋ?’ ಅಂತಿದ್ದಾನೆ ಕನ್ನಡ ಪ್ರೇಕ್ಷಕ.
ಲೂಸ್ ಟಾಕ್
ಏನ್ರಪ್ಪಾ, ಫಸ್ಟ್ ಮ್ಯಾಚಲ್ಲಿ ನೋಡಿದ್ರೆ ವಿಕೆಟ್ಟೇ ಬೀಳ್ತಾ ಇರ್ಲಿಲ್ಲ; ಆದ್ರೆ, ಎರಡನೇ ಮ್ಯಾಚು, ಹಂಗ್ ವಿಕೆಟ್ ಎತ್ಬಿಟ್ರಲ್ಲಾ ನೀವು ಬೌಲರ್ಸು?
– ಫಸ್ಟ್ ಮ್ಯಾಚ್ ವಿಕೆಟ್ ಬೀಳ್ಲಿಲ್ಲ ಅಂತ ಇವರಿಗೆ ಫಾರಿನ್ ಪಿಚ್ಚಲ್ಲಿ ಬೌಲಿಂಗ್ ಮಾಡೋಕ್ ಬರಲ್ಲ ಅಂತ ಅಂತೆ-ಕಂತೆಗಳು ಶುರು ಆಗಿದ್ವು. ಅದಕ್ಕೆ ಸೆಕೆಂಡ್
ಮ್ಯಾಚಲ್ಲಿ ಕಂತೆ ಕಂತೆ ಎತ್ಬಿಟ್ವಿ.
ಓ ಹಂಗೆ, ಸರಿ. ಆ ಪಿಚ್ ನೋಡಿ ನಿಮಗೆ ಏನನ್ನಿಸಿತು?
– ನಾವು ಬೌಲರ್ಸ್ ಪಿಚ್ ನೋಡಿ ತುಂಬಾ ಖುಷಿ ಆಗಿದ್ವಿ. ಆದ್ರೆ ಪಾಪ ಈ ಪಿಚ್ಚಲ್ಲಿ ರನ್ ಹೊಡೆಯೋಕೆ ಬ್ಯಾಟ್ಸ್ಮನ್ಗಳು ಪಡ್ತಾ ಇದ್ದ ಕಷ್ಟ ನೋಡಿ
ಪಿಚ್ಚೆನ್ನಿಸ್ತು.
ಆದ್ರೂ ಪಾಪ, ಡೀನ್ ಎಲ್ಗರ್ ಲಾಸ್ಟ್ ಮ್ಯಾಚಲ್ಲಿ ನೀವೆಲ್ಲಾ ಸೇರ್ಕಂಡ್ ಹಿಂಗ್ ಅವರನ್ನ ಸೋಲಿಸಿ ಅವರಿಗೆ ಬೇಜಾರ್ ಮಾಡಿಬಿಟ್ರಲ್ಲಾ?
– ಅಯ್ಯೋ, ಲಾಸ್ಟ್ ಮ್ಯಾಚ್ ಅಂತ ಡೀನ್ ಎಲ್ಗರ್ಗೆ ಒಂದೇ ದಿನ ಎರಡ್ ಸಲ ಬ್ಯಾಟಿಂಗ್ ಕೊಡ್ಸಿದ್ದೀವಿ ಬಿಡಿ.
ಅದ್ಸರಿ, ಹೋಗ್ಲಿ, ನಿಮ್ಮಮನೆಗೆ ಹೋಗಿ ನಿಮ್ಮ ಪೇರೆಂಟ್ಸ್ಗೆ ನಿಮ್ಮ ಈ ಗೆಲುವಿನ ಬಗ್ಗೆ ಏನ್ ಹೇಳಿದ್ರಿ?
– ೫ ದಿನಗಳವರೆಗೆ ನಡೆಯೋ ಟೆಸ್ಟ್ ಮ್ಯಾಚನ್ನ ಎರಡೇ ದಿನದಲ್ಲಿ ಮುಗಿಸಿಬಿಟ್ಟ ಈ ನಿಮ್ಮ ಮಗ….
ಓಹೋ ಬಬ್ರುವಾಹನ ಆಗ್ಬಿಟ್ರಾ. ಸರಿ, ಇದೇ ಥರ ಬೌಲಿಂಗ್ನ ನಮ್ಮ ಆರ್ಸಿಬಿಯಲ್ಲೂ ನಿಮ್ಮಿಂದ ನೋಡಬಹುದಾ?
– ನಕ್ಕೋ ಮಿಯಾ.. ಸೀದಾ ಬುಡಕ್ಕೇ ಬರ್ಬೇಡ. ಯೇಚ್ ಸಪ್ರೇಟು… ವೋಚ್ ಸಪ್ರೇಟು..
(ಕಾಲ್ಪನಿಕ ಸಂದರ್ಶನ)
ನೆಟ್ ಪಿಕ್ಸ್
ಕೆಲಸದ ಹೆಂಗಸು ಕಮಲ, ಯಜಮಾನಿ ಹತ್ರ ಬಂದು ಮುಂದಿನ ತಿಂಗಳಿಂದ ನನ್ನ ಸಂಬಳ ಜಾಸ್ತಿ ಮಾಡಿ ಅಂತ ಕೇಳಿದ್ಲು. ಅದಕ್ಕೆ ಯಜಮಾನಿ, ಅಲ್ಲಾ, ನೀನೇನು ಮಹಾ ಕೆಲಸ ಮಾಡ್ತಿಯಾ ಅಂತ ನಿಂಗೆ ಸಂಬಳ ಜಾಸ್ತಿ ಮಾಡಬೇಕು ಅಂತ ಉಲ್ಟಾ ದಬಾಯಿಸಿದ್ಲು.. ಅದನ್ನ ಕೇಳಿ ಕಮಲಳಿಗೆ ಸಿಟ್ಟು ಬಂತು. ಏನಾರ
ಒಂದ್ ಡಿಸೈಡ್ ಆಗ್ಲಿ ಅಂತ ಅಲ್ಲೇ ಯಜಮಾನಿ ಮುಂದೆ ಕೂತು ಕಮಲ ಮಾತಾಡೋಕೆ ಶುರು ಮಾಡಿದ್ಳು.. ‘ನೋಡಿ, ಅಮ್ಮಾವ್ರೇ, ನನಗೆ ಯಾಕೆ ಸಂಬಳ ಜಾಸ್ತಿ ಮಾಡಬೇಕು ಅನ್ನೋದಕ್ಕೆ ನಾನು ಮೂರು ಕಾರಣ ಹೇಳ್ತೀನಿ’ ‘ಸರಿ, ಹೇಳು’ ‘ಮೊದಲನೆಯದು ನಾನು ಅಡುಗೆ ಮನೆಯಲ್ಲಿ ನಿಮಗಿಂತ ಚೆನ್ನಾಗಿ ಕೆಲಸ
ಮಾಡ್ತೀನಿ’
‘ಯಾರು ಹೇಳಿದ್ದು?’
‘ನಿಮ್ಮ ಗಂಡ’
‘ಸರಿ, ಎರಡನೆಯದು?’
‘ನಾನು ಹಿತ್ತಲ ಕಡೆ, ಪಾತ್ರೆ
ತೊಳೆಯೋದ್ರಲ್ಲೂ ನಿಮಗಿಂತ ಚೆನ್ನಾಗಿ ಕೆಲಸ ಮಾಡ್ತೀನಿ’
‘ಯಾರ್ ಹೇಳಿದ್ದು?’
‘ನಿಮ್ಮ ಗಂಡ’
‘ಸರಿ, ಮೂರನೆಯದು?’
‘ನಾನು ಬೆಡ್ ರೂಮಲ್ಲೂ ನಿಮಗಿಂತ ಬೆಟರ್’ ‘ಏನ್ ಮಾತಾಡ್ತಾ ಇದ್ದೀಯಾ? ಇದನ್ನೂ ನನ್ ಗಂಡನೇ ಹೇಳಿದ್ದಾ?’
‘ಅಲ್ಲ, ನಮ್ಮನೆ ವಾಚ್ಮನ್’
‘ಸಂಬ್ಳ ಎಷ್ಟು ಜಾಸ್ತಿ ಮಾಡ್ಬೇಕು’.
ಲೈನ್ ಮ್ಯಾನ್
ಇನ್ಫೋಸಿಸ್ ನಾರಾಯಣ ಮೂರ್ತಿ ಅವರ ಮಗ ರೋಹನ್ ಮೂರ್ತಿ ಅವರಪ್ಪಂದೇ ಕಂಪನಿ ಇದ್ರೂ ಅಲ್ಲಿ ಕೆಲಸ ಮಾಡಲ್ವಂತೆ. ಯಾಕೆ?
– ರೋಹನ್ ಮೂರ್ತಿ- ವಾರಕ್ ೭೦ ಗಂಟೆ ಯಾವನ್ ಕೆಲ್ಸ ಮಾಡ್ತಾನ್ ಹೋಗು ಗುರೂ.
ಒಂದು ಪಕ್ಷ ಬಿಟ್ಟು ಇನ್ನೊಂದು ಪಕ್ಷಕ್ಕೆ ಹೋಗಿ, ಮತ್ತೆ ಅಧಿಕಾರ ಸಿಗುತ್ತೆ ಅಂತ ಹಳೇ ಪಕ್ಷಕ್ಕೆ ವಾಪಸ್ ಆಗುವ ಕಲೆ
– ‘ಮರಳು’ ನೀತಿ
ಹೊಸ ಹುಡುಗನ ಜತೆ ಹೋಗುವಾಗ ಹಳೇ ಬಾಯ್ ಫ್ರೆಂಡ್ ಎದುರಿಗೆ ಸಿಕ್ರೆ ಹುಡುಗೀರ ರಿಯಾಕ್ಷನ್
-ರಿನ್ನಲ್ಲಿ: ಏಟ್ಞಛಿqs, ಠಿeಜಿo ಜಿo ಞqs ಛ್ಡಿ ಚಿಟqs ಜಿಛ್ಞಿb.
ಇಂಡಿಯಾದಲ್ಲಿ: ಅಯ್ಯೋ, ಇವ್ನ್ ಯಾಕಪ್ಪಾ ಬಂದ ಇಲ್ಲಿ..
ನಲ್ಲಿ ರಿಪೇರಿ ಮಾಡೋನಿಗೆ ಕೊಡಬಹುದಾದ ಬಿರುದು
– ‘ನಳ’ ಮಹಾರಾಜ
ಅರಸಿಕನ ಗಾದೆ
– ಅಲ್ಪನಿಗೆ ಐಶ್ವರ್ಯ ರೈ ಸಿಕ್ರೆ..ಅರ್ಧರಾತ್ರಿಲಿ ಅಕ್ಕಾ ಅಂದ್ನಂತೆ.
ಚಿಲ್ಲಿ ಚಿಕನ್ಲ್ಲಿ ಚಿಕನ್ನಂತೆ ಕಾಣುವ ಕ್ಯಾಪ್ಸಿಕಮ್ ತುಂಡು
– ಡಮ್ಮಿ ‘ಪೀಸ್’
ಚರ್ಚ್ಗಳಿರುವ ದಾರಿ
– ‘ಕ್ರಾಸ್’ ರೋಡ್
ಕೆಟ್ಟ ಕಂಠದವರಿಗೆ ಇರುವ ಸಾಮರ್ಥ್ಯ
– ರಾಗ ನಿರೋಧಕ ಶಕ್ತಿ
ಸಾಲ ಕೊಟ್ಟವರಿಂದ ತಪ್ಪಿಸಿಕೊಳ್ಳಲು ಮನೆಯಲ್ಲೇ ಅಡಗಿ ಕೂತರೆ ಅದು
– ಹೋಮ್ ಆ’ಲೋನ್’
೨೦೨೩ಕ್ಕೆ ಆದಿತ್ಯನಾಥ್ ಹೇಳಿದ್ದು
– ಆಜ್ ಸೇ ತುಮ್ಹಾರಾ ನಾಮ್ ೨೦೨೪