ತಿರುವನಂತಪುರಂ: ಗೂಗಲ್ ಪೇ ಮತ್ತು ಫೋನ್ ಪೇನಂತಹ ಯುಪಿಐ (ಯೂನಿಫೈಡ್ ಪೇಮೆಂಟ್ ಇಂಟರ್ಫೇಸ್) ವೇದಿಕೆ ಮೂಲಕ ಜನರಿಗೆ ವಂಚನೆ ಮಾಡಲು ಕ್ರಿಮಿನಲ್ಗಳು ಹೊಸ ಹೊಸ ತಂತ್ರ ರೂಪಿಸುತ್ತಿರುವುದು ಪೊಲೀಸ್ ಅಧಿಕಾರಿಗಳ ಕಳವಳಕ್ಕೆ ಕಾರಣವಾಗಿದೆ.
ಎಲ್ಐಸಿ ಹೆಸರಲ್ಲಿ ವಂಚಿಸುವ ಪ್ರಯತ್ನ ನಡೆದಿತ್ತು.
ಯುವತಿಯ ತಂದೆಯಿಂದ ಫೋನ್ ನಂಬರ್ ಪಡೆದು ಆಕೆಗೆ ಕರೆ ಮಾಡಿದ್ದ ವಂಚಕನೊಬ್ಬ ಮಗು ಎಂದು ಮಾತು ಆರಂಭಿಸಿ, ನಿಮ್ಮ ತಂದೆಯ ಖಾತೆಗೆ 25 ಸಾವಿರ ರೂ. ಎಲ್ಐಸಿ ಹಣ ಕಳುಹಿಸಬೇಕಿದೆ. ಆದರೆ, ನಿಮ್ಮ ತಂದೆ ಬಳಿ ಯುಪಿಐ ಖಾತೆ ಇಲ್ಲದ ಕಾರಣ ನಿಮ್ಮ ಯುಪಿಐ ನಂಬರ್ಗೆ ಹಣ ಪಾವತಿಸುತ್ತೇನೆ ಎಂದು ಹೇಳಿದ್ದಾನೆ. ಆರಂಭದಲ್ಲಿ ಆತನ ಮಾತು ನಂಬಿದ ಯುವತಿ ತನ್ನ ಗೂಗಲ್ ಪೇ ಮಾಹಿತಿ ನೀಡಿದ್ದಾಳೆ.
ಬಳಿಕ ವಂಚಕ 20000 ಮತ್ತು 50000 ರೂ.ನಂತೆ ಎರಡು ಬಾರಿ ಹಣದ ವಹಿವಾಟು ನಡೆಸುತ್ತಾನೆ. ನಂತರ ಮಾತು ಮುಂದುವರಿಸುವ ವಂಚಕ 5 ಸಾವಿರ ಕಳುಹಿಸುವ ಬದಲು ಮಿಸ್ ಆಗಿ 50000 ಕಳಹಿಸಿದ್ದೇನೆ. ದಯವಿಟ್ಟು 45 ಸಾವಿರ ರೂ. ಹಣವನ್ನು ವಾಪಸ್ ಕಳುಹಿಸು ಎಂದು ಕೇಳುತ್ತಾನೆ. ಬಹಳ ಮುಗ್ದನಂತೆ ಮಾತನಾಡುತ್ತಾನೆ. ಆತನ ಮಾತುಗಳಿಂದ ಅನುಮಾನ ಬಂದು ಗೂಗಲ್ ಪೇ ಪರಿಶೀಲಿಸಿದಾಗ ಹಣ ಬಂದಿರುವ ಮೆಸೇಜ್ ಮಾತ್ರ ಇರುತ್ತದೆ. ಆದರೆ, ಬ್ಯಾಂಕ್ ಖಾತೆಗೆ ಮಾತ್ರ ಹಣ ಕ್ರೆಡಿಟ್ ಆಗಿರುವುದಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ ವಂಚಕ ತಕ್ಷಣ ಕಾಲ್ ಕಟ್ ಮಾಡುತ್ತಾನೆ.
ಅದೃಷ್ಟವಶಾತ್ ಯುವತಿ ವಂಚಕನ ಜಾಲದಿಂದ ಬಚಾವ್ ಆಗುತ್ತಾಳೆ. ಒಂದು ವೇಳೆ ಯಾಮಾರಿದ್ದರೆ, 45 ಸಾವಿರ ಹಣ ವಂಚಕ ಜೇಬು ಸೇರುತ್ತಿತ್ತು. ಇದೀಗ ಈ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ತನಿಖೆ ನಡೆಯುತ್ತಿದೆ.
ಇತ್ತೀಚೆಗಷ್ಟೇ ಮಹಾರಾಷ್ಟ್ರ ಮೂಲದ ಯುವತಿಯೊಬ್ಬಳು ಇನ್ನೇನು ವಂಚಕರ ಬಲೆಗೆ ಬೀಳುವಷ್ಟರಲ್ಲಿ ಬಚಾವ್ ಆಗಿದ್ದಳು.