Friday, 13th December 2024

ಡೆನ್ಮಾರ್ಕ್‌ನ 10ನೇ ರಾಜನಾಗಿ ಫೆಡ್ರಿಕ್‌ ಅಧಿಕಾರ ಗ್ರಹಣ

ಕೋಪೆನ್‌ಹೇಗನ್: ಡೆನ್ಮಾರ್ಕ್‌ನ ರಾಣಿ ಮಾರ್ಗರೇತ್ ಅಧಿಕಾರ ತ್ಯಜಿಸಿದ್ದು, ಅವರ ಪುತ್ರ ಫೆಡ್ರಿಕ್‌ 10ನೇ ರಾಜನಾಗಿ ಅಧಿಕಾರ ಗ್ರಹಣ ಮಾಡಿದರು.

ರಾಜನಾಗಿ ಫೆಡ್ರಿಕ್ ಅಧಿಕಾರ ಗ್ರಹಣ ಮಾಡುವ ಗಳಿಗೆಗೆ ಲಕ್ಷಾಂತರ ಜನರು ಸಾಕ್ಷಿಯಾದರು.

ಇದಕ್ಕೂ ಮೊದಲು ರಾಣಿ ಮಾರ್ಗರೇತ್‌ ಕೋಪನ್‌ಹೇಗನ್‌ನ ಪ್ರಮುಖ ರಸ್ತೆಗಳಲ್ಲಿ ಕುದುರೆ ಸಾರೋಟಿನಲ್ಲಿ ಸಾಗಿ ಅರಮನೆ ತಲುಪಿದರು. ರಸ್ತೆಯ ಇಕ್ಕೆಲೆ ಗಳಲ್ಲಿ ನಿಂತಿದ್ದ ಅಸಂಖ್ಯಾತ ನಾಗರಿಕರು ಕೈಬೀಸಿ ಈ ಸಂದರ್ಭಕ್ಕೆ ಸಾಕ್ಷಿಯಾದರು.

ಕ್ರಿಸ್ತಿಯಾನ್ಸ್‌ಬರ್ಗ್‌ ಅರಮನೆಯಲ್ಲಿ ನಡೆದ ಸಮಾರಂಭದಲ್ಲಿ 83 ವರ್ಷದ ರಾಣಿ ಮಾರ್ಗರೇತ್, ಅಧಿಕಾರ ತ್ಯಜಿಸುವ ಘೋಷಣೆಗೆ ಸಹಿ ಹಾಕಿದರು. ಈ ಮೂಲಕ 52 ವರ್ಷದ ಅವರ ಸುದೀರ್ಘ ಆಡಳಿತಾವಧಿಯ ಯುಗ ಅಂತ್ಯವಾದರೆ, ರಾಜನಾಗಿ ಅವರ 55 ವರ್ಷ ವಯಸ್ಸಿನ ಅವರ ಪುತ್ರ ಫೆಡ್ರಿಕ್‌ ಅವರ ಅಧಿಕಾರವಧಿ ಆರಂಭಗೊಂಡಿತು.

ಬಳಿಕ ರಾಣಿ ಮಾರ್ಗರೇತ್ ಅವರು ಸಚಿವ ಸಂಪುಟದಿಂದ ನಿರ್ಗಮಿಸಿದರು. ರಾಜ ಫೆಡ್ರಿಕ್, ಅವರ ಪತ್ನಿ, ಅವರ 18 ವರ್ಷದ ಪುತ್ರನಾದ ನೂತನ ರಾಜ ಕುಮಾರ ಈ ಸಂದರ್ಭದಲ್ಲಿ ಇದ್ದರು. ‘ರಾಜನಿಗೆ ದೇವರು ಒಳ್ಳೆಯದು ಮಾಡಲಿ’ ಎಂಬ ಹಾರೈಕೆ ಹಾಗೂ ಆನಂದಭಾಷ್ಪದೊಂದಿಗೆ ರಾಣಿ ನಿರ್ಗಮಿಸಿ ದರು.

ಫೆಡ್ರಿಕ್ ಅವರು ನೂತನ ರಾಜನಾಗಿ ಅಧಿಕಾರ ಸ್ವೀಕರಿಸಿರುವುದನ್ನು ಪ್ರಧಾನಿ ಮ್ಯಾಟೆ ಫ್ರೆಡೆರಿಕ್ಸೆನ್ ಅವರು ಅರಮನೆಯ ಮಹಡಿಯಲ್ಲಿ ಘೋಷಿಸಿದರು. ಈ ಸಂದರ್ಭ ರಾಣಿ ಮೇರಿ ಅವರು ಇದ್ದರು. ಆಸ್ಟ್ರೇಲಿಯಾದಲ್ಲಿ ಜನಿಸಿದ ಮೇರಿ, ಈ ಮೂಲಕ ಡೆನ್ಮಾರ್ಕ್‌ನ ರಾಣಿಯಾದ ಪ್ರಥಮ ಸಾಮಾನ್ಯಪ್ರಜೆ ಎಂಬ ಹಿರಿಮೆಗೂ ಪಾತ್ರರಾದರು.