ತುಮಕೂರು: ಒಕ್ಕಲಿಗ ಯುವ ಬ್ರಿಗೇಡ್ ಹಾಗೂ ಎನ್. ಆರ್ .ಐ ಒಕ್ಕಲಿಗರ ಬ್ರಿಗೇಡ್ ಸಹಯೋಗದಲ್ಲಿ ದುಡಿಯುವ ಕೈಗಳಿಗೆ ಉದ್ಯೋಗ ಮೇಳ ಎಂಬ ಪರಿಕಲ್ಪನೆಯಡಿಯಲ್ಲಿ ನಗರದ ಸಿದ್ದಗಂಗಾ ಪಾಲಿಟೆಕ್ಟಿಕ್ ಕಾಲೇಜು ಆವರಣದಲ್ಲಿ ಜನವರಿ 28ರಂದು ಉಚಿತ ಬೃಹತ್ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ.
ಎಸ್ ಎಸ್ ಎಲ್ ಸಿ ಯಿಂದ ಪದವಿ, ಸ್ನಾತಕೋತ್ತರ ಪದವಿ ಪಡೆದ ನಿರುದ್ಯೋಗಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ. ಟೆಕ್ ಮಹೇಂದ್ರ, ರಿಲಯನ್ಸ್ ಡಿಜಿಟಲ್, ಲೇಬರ್ ನೆಟ್, ಎನ್.ಟಿ.ಸಿ ಲಾಜಿಸ್ಟಿಕ್ ಕಂಪನಿಗಳು ಸೇರಿದಂತೆ ಅಂತರಾಷ್ಟ್ರೀಯ, ರಾಷ್ಟ್ರೀಯ ಮಟ್ಟದ ಹಲವು ಕಂಪನಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲಿದ್ದು ನಿರುದ್ಯೋಗಿಗಳು ಸದುಪಯೋಗ ಪಡಿಸಿಕೊಳ್ಳಬೇಕೆಂದು ಬ್ರಿಗೇಡ್ ನ ಅಧ್ಯಕ್ಷ ನಂಜೇಗೌಡ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ನಂಜೇಗೌಡ-9945282846, ಮೋಹನ್ -9686564192, ಚಿರಾಗ್-9632501500 ಇವರನ್ನು ಸಂಪರ್ಕಿಸಬಹುದಾಗಿದೆ.