Wednesday, 11th December 2024

ಚಿತ್ರರಂಗಕ್ಕೆ ಇಳಯ ದಳಪತಿ ವಿಜಯ್ ಗುಡ್ ಬೈ

ಚೆನ್ನೈ: ಟ ವಿಜಯ್ ಚಿತ್ರರಂಗಕ್ಕೆ ಗುಡ್ ಬೈ ಹೇಳಿದ್ದಾರೆ ಎಂದು ಹೇಳಲಾಗಿದೆ.

2 ಸಿನಿಮಾಗಳು ಕಂಪ್ಲೀಟ್ ಆದ ಬಳಿಕ ಸಂಪೂರ್ಣವಾಗಿ ಸಿನಿಮಾರಂಗವನ್ನು ಬಿಡುತ್ತೇನೆ ಎಂದುವಿಜಯ್ಹೇಳಿದ್ದಾರೆ . ‘ಗೋಟ್’ ವಿಜಯ್ ಅವರ ಕೊನೆ ಸಿನಿಮವಾಗಲಿದೆ.

ವೆಂಕಟ್ ಪ್ರಬಾಹು ನಿರ್ದೇಶನದ ‘ದಿ ಗ್ರೇಟೆಸ್ಟ್ ಆಫ್ ಆಲ್ ಸಾರ್ವಂ’ (ಜಿಒಟಿ) ಚಿತ್ರದ ಚಿತ್ರೀಕರಣದಲ್ಲಿರುವ ನಟ ವಿಜಯ್ ತಮ್ಮ ಪಕ್ಷದ ಹೆಸರನ್ನು ಬಹಿರಂಗಪಡಿಸುವ ಮೂಲಕ ತಮ್ಮ ರಾಜಕೀಯ ಪ್ರವೇಶವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.

ದಳಪತಿ ವಿಜಯ್ ಅವರು ರಾಜಕೀಯಕ್ಕೆ ಎಂಟ್ರಿ ನೀಡಲಿ, ಅವರಿಂದ ಸಮಾಜದಲ್ಲಿ ಬದಲಾವಣೆ ಬರಲಿ ಎಂಬುದು ಅಭಿಮಾನಿಗಳ ಆಸೆಯೂ ಆಗಿತ್ತು. ಅದಕ್ಕಾಗಿ ದಳಪತಿ ವಿಜಯ್ ಅವರು ಸಿನಿಮಾ ರಂಗಕ್ಕೆ ವಿದಾಯ ಹೇಳಿ ರಾಜಕೀಯಕ್ಕೆ ಪ್ರವೇಶ ನೀಡಿದ್ದಾರೆ.

ದಳಪತಿ ವಿಜಯ್ ಅವರಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ಅವರ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಭಾರಿ ಸದ್ದು ಮಾಡುತ್ತವೆ. ವಿಜಯ್ ಅವರ ಈ ನಿರ್ಧಾರದಿಂದ ತಮಿಳು ಚಿತ್ರರಂಗಕ್ಕೆ ಒಂದು ಮಟ್ಟಿಗೆ ಹೊಡೆತ ಬೀಳಬಹುದು.