Saturday, 14th December 2024

ಅಗರ್ತಲಾದಿಂದ ಬಾಂಗ್ಲಾ ಮೂಲಕ ಕೋಲ್ಕತ್ತಾಗೆ ರೈಲು ಸೇವೆ ಆರಂಭ

ಗರ್ತಲಾ: ಅಗರ್ತಲಾದಿಂದ ಬಾಂಗ್ಲಾದೇಶದ ಮೂಲಕ ಕೋಲ್ಕತ್ತಾಗೆ ರೈಲು ಸೇವೆಯನ್ನು ಆರಂಭವಾಗಲಿದೆ ಎಂದು ತ್ರಿಪುರದ ಮುಖ್ಯಮಂತ್ರಿ ಮಾಣಿಕ್ ಸಹಾ ಹೇಳಿದ್ದಾರೆ.

ಅಗರ್ತಲಾ ರೈಲು ನಿಲ್ದಾಣದಲ್ಲಿ ನಡೆದ ಅಗರ್ತಲಾ-ದಿಯೋಘರ್ ನಡುವಿನ ಎಕ್ಸ್‍ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿ ಮಾತನಾಡಿದರು. ರೈಲು ಸಂಪರ್ಕದಿಂದಾಗಿ ರಾಜ್ಯದಲ್ಲಿ ಅಬಿವೃದ್ದಿಗೆ ಮತ್ತಷ್ಟು ಉತ್ತೇಜನ ಸಿಗಲಿದೆ ಎಂದು ಮುಖ್ಯಮಂತ್ರಿ ಸಹಾ ಹೇಳಿದ್ದಾರೆ.

ಅಗರ್ತಲಾದಿಂದ ಕೋಲ್ಕತ್ತಾಗೆ ಸಂಪರ್ಕ ಕಲ್ಪಿಸುವ ಉದ್ದೇಶಿತ ರೈಲು ನೆರೆ ರಾಷ್ಟ್ರ ಬಾಂಗ್ಲಾದೇಶದ ಗಂಗಾಸಾಗರ ಮೂಲಕ ಸಂಪರ್ಕವಿದ್ದು ಇದರ ಪ್ರಾಯೋಗಿಕ ಚಾಲನೆಯನ್ನು ಈಗಾಗಲೇ ಯಶಸ್ವಿಯಾಗಿ ನಡೆಸಲಾಗಿದೆ ಎಂದು ಹೇಳಿದರು.

ಈಶಾನ್ಯ ರಾಜ್ಯಕ್ಕೆ ರಸ್ತೆ ಹೆದ್ದಾರಿ, ರೈಲ್ವೆ, ವಾಯುಮಾರ್ಗ ಒದಗಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭರವಸೆ ನೀಡಿದ್ದರು ಮತ್ತು ಅದನ್ನು ಮಾಡಿದ್ದಾರೆ. ಪ್ರಸ್ತುತ ಅಗರ್ತಲಾ ನಿಲ್ದಾಣವನ್ನು ವಿಶ್ವದರ್ಜೆಯನ್ನಾಗಿಸಲು ಕೇಂದ್ರವು 260 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದೆ ಮತ್ತು ಮೂರು ರೈಲು ನಿಲ್ದಾಣಗಳಾದ ಧರ್ಮನಗರ, ಉದಯಪುರ ಮತ್ತು ಕುಮಾರ್‍ಘಾಟ್ ಅನ್ನು ಅಮೃತ್ ಭಾರತ್ ನಿಲ್ದಾಣಗಳಾಗಿ ಪರಿವರ್ತಿಸಲು 93 ಕೋಟಿ ರೂಪಾಯಿಗಳನ್ನು ನೀಡಲಾಗಿದೆ ಎಂದು ಸಿಎಂ ಹೇಳಿದರು.