Saturday, 14th December 2024

ನನ್ನ ಹಕ್ಕು ನನ್ನ ತೆರಿಗೆ

ಪ್ರತಿಸ್ಪಂದನ

ನಿತ್ಯಾನಂದ ಹೆಗಡೆ, ಮೂರೂರು

ಇದು ನಿಜವಾಗಿಯೂ ಪರಿಣಾಮಕಾರಿ ಪ್ರತಿಭಟನೆ. ಇದನ್ನು ಯಾವಾಗಲೋ ಮಾಡಬೇಕಿತ್ತು, ಚೂರು ತಡವಾಯಿತು. ಬೇಸರವಿಲ್ಲ, ಲೋಕಸಭೆ ಚುನಾವಣೆ ಸಮಯ ನಿಜವಾಗಿ ಬಂದುದು ಅಚಾನಕ್. ನಾವೇನು ಮಾಡೋಣ, ಇಷ್ಟು ಸಮಯ ನೋಡಿ ನೋಡಿ ತಾಳ್ಮೆಯಿಂದಿದ್ದೆವು; ಇನ್ನು ತಡೆಯ ಲಾಗದು ಎನಿಸಿದಾಗ ನಾವು ನಮ್ಮ ಹಕ್ಕನ್ನು ಪ್ರತಿಪಾದಿಸಲು ಹೊರಟಿದ್ದು. ಅದರಲ್ಲೂ ಈಗ ನೋಡಿದರೆ ನಮ್ಮ ಬೆಂಗಳೂರಿಗೆ ಬಹಳ ಅನ್ಯಾಯ ವಾಗಿದೆ, ನಮ್ಮದು ನಮಗೆ ಸಿಕ್ಕಿಲ್ಲ.

ಹೌದು ಸ್ವಾಮಿ, ಕೋಲಾರದವರ ತೆರಿಗೆ ಚೂರು ಜಾಸ್ತಿ ಇದ್ದೀತು, ನಾವು ಅದನ್ನು ಬೆಣ್ಣೆ ಮೆತ್ತಿ ಸರಿಮಾಡುತ್ತೇವೆ.  ಈ ಐಟಿ-ಬಿಟಿಯವರು ತಮ್ಮ ತೆರಿಗೆ ಕಟ್ಟಿದ್ದು, ಯಾವ ಪ್ರತಿಫಲ ಬೇಡ ಅಂತ ಅವರೇ ಹೇಳಿದ್ದಾರೆ, ನಾವು ಹೇಳಿದ್ದೇವೋ… ನಾವು ಉದ್ಧಾರ ಮಾಡಿದ ಕರ್ನಾಟಕದಲ್ಲಿ ನಮ್ಮ ಸಹೋದರರಿಗೆ
ಹತ್ತು ಸಾವಿರ ಕೋಟಿ ಹಣವನ್ನು ಅವರ ದರ್ಗಾ ಮೊದಲಾದ ಚಟು ವಟಿಕೆಗೆ ನೀಡಿದ್ದೇವೆ. ಅದೇನೂ ದೊಡ್ಡದಲ್ಲ.

ನಮ್ಮ ಹಿಂದೂ ದೇವಾಲಯದ ಹುಂಡಿಯ ಉತ್ಪನ್ನದಲ್ಲಿ ನಾವಷ್ಟೇ ಕಾಣಿಕೆ ಹಾಕಿದ್ದೋ… ಅನ್ಯಧರ್ಮೀಯರ ಪಾಲಿಲ್ಲವೋ… ಕ್ರಿಶ್ಚಿಯ ನ್ನರು ತುಂಬಾ
ಶ್ರೀಮಂತರು, ಆದರೆ ನಾವು ಬಡವರ ಹಾಗೂ ಅಲ್ಪಸಂಖ್ಯಾತರ ಪರ ಅಲ್ಲವೋ…. ಹಾಗಾಗಿ ಚೂರುಪಾರು ಹಿಂದೂ ದೇವಾಲಯಗಳ ಕಾಣಿಕೆ ಹಂಚುವು ದರಲ್ಲಿ ತಪ್ಪೇನು? ಅಲ್ಲಾ, ಈ ಮೋದಿಯವರಿಗೆ ಸರಿಯಾದ ತಿಳಿವಳಿಕೆ ಇಲ್ಲ, ಪಾಪ ಆ ರಾಷ್ಟ್ರಪತಿಯವರಿಗೂ ತಿಳವಳಿಕೆ ಬೇಡವೋ…. ನಮ್ಮ ಕರ, ನಮ್ಮ ಹಕ್ಕು. ನಮಗೆ ಬಹಳ ಬರಬೇಕಿದೆ.

ನಾವು ಕೆಲ ಬಡವರಿಗೆ, ಕೆಲ ಪಾಪದ ಬಡ ಹೆಂಗಸರಿಗೆ ಉಚಿತ ಬಸ್, ತಿಂಗಳಿಗೆ ಎರಡು ಸಾವಿರ ಮತ್ತು ಕರೆಂಟು ಎರಡು ನೂರು ಯುನಿಟ್ಟು ಮತ್ತು ಹತ್ತು ಕೆ.ಜಿ. ಅಕ್ಕಿ ಕೊಟ್ಟಿಲ್ಲವೋ…  ಈ ನರೇಂದ್ರ ಮೋದಿಯವರಿಗೆ ಮೊರೆ ಇಟ್ಟೆವು, ಕರ್ನಾಟಕದ ತೆರಿಗೆ ಕರ್ನಾಟಕಕ್ಕೆ ಕೊಡಿ ಅಂತ…. ಇಷ್ಟು ಹೇಳಿದ್ದೇ ತಡ ನಮ್ಮ ರಾಜ್ಯದ ಹಲವು ಜಿಲ್ಲೆಯವರು ನಾವು ಹೆಚ್ಚು ತೆರಿಗೆ ಕಟ್ಟಿದ್ದೇವೆ, ನಮ್ಮ ಜಿಲ್ಲೆಗೆ ಫಲ ನೀಡಿ ಅಂದರು. ಆಮೇಲೆ ಅದ್ಯಾರೋ, ಜಿಲ್ಲೆಯ ಸಮೀಕ್ಷೆ ಯಲ್ಲಿ ಶಿರಸಿ ತಾಲೂಕಿನಷ್ಟು ಕರ ತೆರುವವರಿಲ್ಲ ಅಂತ ಒಬ್ಬರು ಪತ್ರಕರ್ತರು ಬೊಬ್ಬಿಡುತ್ತಿದ್ದಾರೆ.

ನಾವೇನೋ ಕರ್ನಾಟಕ ಉದ್ಧಾರ ಮಾಡಿ ಯುನಿಟಿಯನ್ನು ಕಾಪಾಡ ಹೊರಟರೆ, ಈ ಕೆಲ ತಿಳಿಗೇಡಿಗಳಿಗೆ ಬುದ್ಧಿಯೇ ಇಲ್ಲವಾ… ಇಡೀ ಕರ್ನಾಟಕ ಒಂದೇ. ಇಲ್ಲಿ ಕಾರವಾರಕ್ಕೋ ಅಂಕೋಲಾಕ್ಕೋ ಕುಮಟಾಕ್ಕೋ ಉಡುಪಿಗೋ ಬಿಜಾಪುರಕ್ಕೋ ಬಾಗಲಕೋಟೆಗೋ ಬೀದರ್‌ಗೋ ಅನ್ಯಾಯ ವಾದರೆ ಆಮೇಲೆ ಸರಿಪಡಿಸೋಣ. ಅವರವರ ತೆರಿಗೆಯ ಹಕ್ಕು ಅವರವ ರದು. ಈ ಕೆಲ ಸಾಫ್ಟ್ ವೇರ್ ಎಂಜಿನಿಯರ್‌ಗಳು ತಮ್ಮ ತೆರಿಗೆಗೆ ತಮಗೇನು ಕೊಡುತ್ತೀರಿ ಸಿದ್ದರಾಮಯ್ಯನವರೆ? ನಮಗೆ ವಿದ್ಯುತ್ ಫ್ರೀ ಇಲ್ಲ, ನಿಮ್ಮ ಗೃಹಜ್ಯೋತಿ ಯಿಲ್ಲ, ನಿಮ್ಮ ಅಕ್ಕಿಯಿಲ್ಲ, ನಿಮ್ಮ ಯಾವುದೂ ವಿನಾಯಿತಿ ಇಲ್ಲ ಅಂದಾಗ,
ನಮ್ಮ ತೆರಿಗೆ ನಮಗೇನು ಕೊಡುವಿರಿ ಅನ್ನುತ್ತಾರೆ. ಇಂಥವರಿಗೆ ತಿಳಿಹೇಳುವುದು ಹೇಗೆ? ಅದೇನೇ ಇರಲಿ, ನಮ್ಮ ಕರ ನಮ್ಮ ಹಕ್ಕು, ಅದೂ ಬೆಂಗಳೂರಿಗರ
ಹಕ್ಕು… ಅಲ್ಲವಾ!

(ಲೇಖಕರು ಹವ್ಯಾಸಿ ಬರಹಗಾರರು)