Saturday, 23rd November 2024

ಆಂಗಸ್ ಮ್ಯಾಡಿಸನ್ ಆರ್ಥಿಕ ಇತಿಹಾಸ ಮತ್ತು ಭಾರತ

ಶಿಶಿರಕಾಲ

shishirh@gmail.com

ಹಿಟ್ಲರ್ ಯೆಹೂದಿಗಳನ್ನು ಕೊಂದದ್ದನ್ನು ಮಾನವ ಇತಿಹಾಸದ ಭೀಕರ ಘಟನೆ ಎಂದೇ ಪರಿಗಣಿಸುವುದುಂಟು. ಕೇವಲ ೧೯೪೧-೧೯೪೫ರ ಅವಧಿಯಲ್ಲಿ ಸುಮಾರು ೬೦ ಲಕ್ಷ ಯೆಹೂದಿಗಳ ಹತ್ಯೆ ಯಾಯಿತು. ಬೇಸರದ ವಿಷಯವೆಂದರೆ, ಹೋಲೋಕಾಸ್ಟ್ ಅನ್ನು ಅಮಾನವೀಯ ವೆನ್ನುವ ಇದೇ ಪಶ್ಚಿಮದ ಸಂಭಾವಿತ ದೇಶಗಳು ಭಾರತದಲ್ಲಿ ಬ್ರಿಟಿಷರು ನಡೆಸಿದ ನರಮೇಧದ ಬಗ್ಗೆ ಸೊಲ್ಲೆತ್ತುವುದಿಲ್ಲ.

ವಿಜಯನಗರ ಸಾಮ್ರಾಜ್ಯದಲ್ಲಿ ಹೇಗಿತ್ತಂತೆ ಗೊತ್ತೇ? ಹಂಪಿಯಲ್ಲಿ ಚಿನ್ನವನ್ನು ಬೀದಿ ಬದಿಯಲ್ಲಿ ರಾಶಿ ಹಾಕಿ ಮಾರುತ್ತಿದ್ದರಂತೆ! ಇದೇ ರೀತಿಯಲ್ಲಿ
ಮೌರ್ಯರು, ಗುಪ್ತರು, ಚೋಳರು, ಗಂಗರು, ಮರಾಠರು, ಪಲ್ಲವರು, ಹೊಯ್ಸಳರು, ಅಹೋಮರು- ಹೀಗೆ ಸಾಲು ಸಾಲು ರಾಜರ ಕಾಲದ ವೈಭವಗಳ ಬಗ್ಗೆ ಅಲ್ಲಲ್ಲಿ ಚೂರುಪಾರು ಕೇಳುವುದಿದೆ. ನಮ್ಮ ಹಣೆಬರಹಕ್ಕೆ, ಇಂಥ ವೈಭವೋಪೇತವಾಗಿ ಮೆರೆದ ರಾಜ ಮನೆತನದ ಬಗ್ಗೆ ಶಾಲಾ ಪಠ್ಯಗಳಲ್ಲಿ ಒಂದು ಪೇಜಿನೊಳಗೆ ವಿವರಣೆ ಮುಗಿದುಬಿಡುತ್ತದೆ.

ಡಿಗ್ರಿ ಹಂತದ ಇತಿಹಾಸ ಪಠ್ಯದಲ್ಲಿಯೂ ಅಷ್ಟಕ್ಕಷ್ಟೇ. ಅಸಲಿಗೆ ಆ ರಾಜರುಗಳ ಆಡಳಿತ, ಅಂದಿನ ಆರ್ಥಿಕತೆ, ಸಾಮಾಜಿಕ ಸ್ಥಿತಿಗತಿ ಇವುಗಳ ಬಗ್ಗೆ ನಮ್ಮ ಪಠ್ಯ ಜಾಸ್ತಿ ಹೇಳುವುದೇ ಇಲ್ಲ. ಕೊನೆಯಲ್ಲಿ ಆ ರಾಜ ಮನೆತನ ಯಾವ ಯುದ್ಧದಿಂದಾಗಿ ಅಂತ್ಯವಾಯಿತು ಎಂದೊಂದು ಸಾಲು. ಇಂದು ನಮ್ಮ ಭಾರತದ ಮಕ್ಕಳು ಇತಿಹಾಸ ಕಲಿಯುವುದೆಂದರೆ, ಒಂದಿಷ್ಟು ದಿನಾಂಕ, ಇಸವಿಗಳನ್ನು ಬಾಯಿಪಾಠ ಮಾಡಿ ಪರೀಕ್ಷೆಯಲ್ಲಿ ಒಪ್ಪಿಸಿ ಬರುವುದು. ಪಾಶ್ಚಿಮಾತ್ಯ ದೇಶ ಗಳಲ್ಲಿ ಭಾರತದ ಇತಿಹಾಸವನ್ನಂತೂ ಸಂಪೂರ್ಣ ಮರೆಮಾಚಲಾಗುತ್ತದೆ.

ಅಮೆರಿಕದ ಮಕ್ಕಳಿಗೆ ಅಮೆರಿಕನ್ನರ ಆರುನೂರು ವರ್ಷದ ಇತಿಹಾಸ ಬಿಟ್ಟರೆ ರೋಮನ್ನರ ಇತಿಹಾಸ ಮಾತ್ರ ವೈಭವದ್ದು. ಗಣಿತ, ಭೂಗೋಳ, ತತ್ವಜ್ಞಾನ ಇದೆಲ್ಲದರ ಉಗಮ ರೋಮನ್ ಎಂಪೈರ್. ಇಲ್ಲಿನ ಪಠ್ಯಗಳಲ್ಲಿ ಭಾರತದ ಐತಿಹಾಸಿಕ ಔನ್ನತ್ಯದ ಬಗ್ಗೆ ಒಂದು ಸಾಲು ಕೂಡ ಇರುವುದಿಲ್ಲ.
ಕೆಲವೊಮ್ಮೆ ‘ಭಾರತದಲ್ಲಿ ಹೀಗಿತ್ತು ಎಂಬ ಉಲ್ಲೇಖ ಕೆಲವೆಡೆ ಇದೆ. ಅದು ಚರ್ಚಾಸ್ಪದ ಮತ್ತು ಅದಕ್ಕೆ ಬೇಕಾದ ಸಾಕ್ಷ ಗಳು ಸಿಗುವುದಿಲ್ಲ’ ಎಂಬ ಅಡಿ ಟಿಪ್ಪಣಿ ಕಾಣಿಸುತ್ತದೆ. ಇತಿಹಾಸದ ಪುಸ್ತಕಗಳಲ್ಲಿ ಈ ಅಡಿ ಟಿಪ್ಪಣಿ ಹತ್ತಾರು ಕಡೆ ಕಾಣಿಸಿಕೊಳ್ಳುವುದರ ಮೂಲಕ ಭಾರತ ವೈಭವೋಪೇತವಾಗಿ,
ಅತ್ಯಂತ ಮುಂದುವರಿದಿತ್ತು ಎಂಬ ಎಲ್ಲ ವಾದವೂ ಸುಳ್ಳು ಎಂಬುದನ್ನೂ ಪರೋಕ್ಷವಾಗಿ ಹೇಳುತ್ತವೆ.

ಭಾರತದಷ್ಟೇ ಚೀನಾದ ಇತಿಹಾಸವನ್ನು ಕೂಡ ಪಶ್ಚಿಮದಲ್ಲಿ ಸಂಪೂರ್ಣ ಮರೆಮಾಚಲಾಗುತ್ತದೆ. ‘ಭಾರತ ಬ್ರಿಟಿಷರಿಂದ ಆಳಲ್ಪಟ್ಟಿತು, ಆಳ್ವಿಕೆ ಚೆನ್ನಾಗಿಯೇ ಇತ್ತು, ಬ್ರಿಟಿಷರಿಂದಲೇ ರಸ್ತೆಗಳು, ಬಂದರುಗಳು, ರೈಲ್ವೆ ಮಾರ್ಗಗಳು, ಕಾರ್ಖಾನೆಗಳು ಬಂದವು. ಬ್ರಿಟಿಷರಿಗಿಂತ ಮೊದಲು ಈ ದೇಶದಲ್ಲಿ ಏನೂ ಇರಲಿಲ್ಲ. ಅವರು ಬಿಟ್ಟು ಹೋದಾಗಲೂ ಇದು ಹಾವಾಡಿಗರ ದೇಶವಾಗಿತ್ತು’- ಇದು ಪಶ್ಚಿಮದ ಇತಿಹಾಸದಲ್ಲಿ ಭಾರತ. ಪಶ್ಚಿಮದವರು ಓದುವ ಇತಿಹಾಸ ಬಿಡಿ. ನಮಗೆ ಭಾರತ ದಲ್ಲಿಯೇ ನಿಜವಾದ ಇತಿಹಾಸ ತಿಳಿಯಬೇಕೆಂದರೆ ಅದೊಂದು ಭಗೀರಥ ಯತ್ನ. ಅದಕ್ಕೆ ಸ್ವಂತದ ಕುತೂಹಲವಿರ
ಬೇಕು. ನಮಗೆ ನಾವೇ ರಿಸರ್ಚ್ ಮಾಡಿಕೊಳ್ಳಬೇಕು.

ಒಂದಕ್ಕೊಂದು ತಾಳೆ ಹಾಕಿ, ಯಾವುದು ಸತ್ಯ ಯಾವುದು ಸುಳ್ಳಿರಬಹುದು ಎಂದು ಊಹಿಸಿಕೊಳ್ಳಬೇಕು. ಒಂದು ಕಡೆ ಭಾರತದ ಭವ್ಯ ಇತಿಹಾಸದ ರಾಜಮನೆತನಗಳು, ಇನ್ನೊಂದು ಕಡೆ ಭಾರತವೆಂಬ ಪರಮ ದಾರಿದ್ರ್ಯದ ದೇಶವನ್ನು ಉದ್ಧರಿಸಿದ್ದೇ ಬ್ರಿಟಿಷರು. ಶಿಕ್ಷಣವೇ ಇಲ್ಲದ ಗಮಾರರಂತಿದ್ದ ಭಾರತೀಯ ರಿಗೆ ಶಿಕ್ಷಣ ಕೊಟ್ಟದ್ದೇ ಬ್ರಿಟಿಷರು. ಅವರಿಂದಲೇ ಭಾರತ ಉದ್ಧಾರವಾಯಿತು ಎಂದು ಸಾರುವ ಇನ್ನೊಂದು ಇತಿಹಾಸ ಎಂಬ ನಿರೂಪಣೆ. ಇದೇ ಸತ್ಯ ವೆಂದು ಸಾರುವ ನೂರಾರು ಪ್ರಶಸ್ತಿ ಪಡೆದ ಪುಸ್ತಕಗಳು. ಇವೆರಡು ನಿರೂಪಣೆಗಳ ನಡುವೆ ಇತಿಹಾಸ ಇದ್ದಂತೆ ಅರಿಯುವುದು ಕಷ್ಟವಾಗಿ ಬಿಡುತ್ತದೆ.

ಯಾವುದು ಸತ್ಯ, ಯಾವುದು ಸುಳ್ಳು ಎಂಬ ಗೊಂದಲ ಎದುರಾಗುತ್ತದೆ. ನೀವು ಆಂಗಸ್ ಮ್ಯಾಡಿಸನ್ ಎಂಬ ಹೆಸರನ್ನು ಕೇಳಿರಬಹುದು. ಬ್ರಿಟಿಷ್ ಆರ್ಥಿಕ ಇತಿಹಾಸಕಾರ. ಆಂಗಸ್ ಮ್ಯಾಡಿಸನ್ ೨೦೧೦ರಲ್ಲಿ ತೀರಿಕೊಂಡಾಗ ಲಂಡನ್ನಿನ ಪ್ರತಿಷ್ಠಿತ ಎಕನಾಮಿಸ್ಟ್ ಪತ್ರಿಕೆ ಱಅ ಟ್ಞಜ, mZooಜಿಟ್ಞZಠಿಛಿ ZZಜ್ಟಿ ಡಿಜಿಠಿe ಞಚಿಛ್ಟಿo eZo ಜ್ಞಿZqs ಟಞಛಿ ಠಿಟ Z ಛ್ಞಿbಱ ಎಂದು ಬರೆದಿತ್ತು. ಆಂಗಸ್ ಮ್ಯಾಡಿಸನ್ ಅಂಕಿ- ಸಂಖ್ಯೆಗಳ ಮನುಷ್ಯ. ಅವನಿಗೆ ಐತಿಹಾಸಿಕ ಸಂಖ್ಯೆಗಳೆಂದರೆ ಪಂಚಪ್ರಾಣ. ಯಾವುದೊ ಒಂದು ಕಾಲಘಟ್ಟದ ಜನಸಂಖ್ಯೆ ಅಥವಾ ಇನ್ಯಾವುದೋ ಒಂದು ಸಂಖ್ಯೆ ಅವನಿಗೆ ಸಿಕ್ಕರೆ ಅದರ ಸುತ್ತಲಿನ ಇತಿಹಾಸವನ್ನು ಬಿಚ್ಚಿಡುವ ಆರ್ಥಿಕ ಪ್ರವೀಣ.

ಬದುಕಿನ ಸುಮಾರು ೬೦ ವರ್ಷ ಐತಿಹಾಸಿಕ ಆರ್ಥಿಕ ಡೇಟಾ ಇಟ್ಟುಕೊಂಡು ಕ್ಲಿಷ್ಟಕರ ಲೆಕ್ಕಾಚಾರಗಳನ್ನು ಮಾಡುತ್ತ, ಒಂದಕ್ಕೊಂದು ಹೋಲಿಸಿ ಹಲವಾರು ವೈಟ್ ಪೇಪರ್, ಐತಿಹಾಸಿಕ ಪುಸ್ತಕಗಳನ್ನು ಬರೆದವನು. ಇತಿಹಾಸದಲ್ಲಿನ ಕೆಲವು ತಪ್ಪುಗಳನ್ನು ಇವನ ಕೆಲಸದಿಂದ ಸರಿಪಡಿಸಿಕೊಳ್ಳ ಲಾಯಿತು. ಆತ ಐತಿಹಾಸಿಕ ಅಂಕಿ-ಸಂಖ್ಯೆಗಳನ್ನು ಕೂಡಿಹಾಕುತ್ತ, ಸುಮಾರು ೫೬ ದೇಶಗಳ ಎರಡು ಶತಮಾನದ (೧೮೨೦ರ ನಂತರದ) ಜಿಡಿಪಿ (ಗ್ರಾಸ್ ಡೊಮೆಸ್ಟಿಕ್ ಪ್ರಾಡಕ್ಟ್) ವಿವರವನ್ನು ೧೯೯೫ ರಲ್ಲಿ ಪ್ರಕಟಿಸಿದ್ದ. ನಂತರ ಸಹಜವಾಗಿ ಇದು ಬ್ರಿಟಿಷ್ ಪಾಶ್ಚಾತ್ಯ ಇತಿಹಾಸವನ್ನೇ ಪ್ರಶ್ನಿಸುವ ಲಕ್ಷಣಗಳು ಕಂಡಾಗ ಸಾಕಷ್ಟು ಚರ್ಚೆಗಳಾದವು. ಕೊನೆಯಲ್ಲಿ ಆತ ಹೇಳಿದ್ದನ್ನು ಸುಳ್ಳೆಂದು ಯಾರಿಗೂ ಸಿದ್ಧಮಾಡಲಾಗಲಿಲ್ಲ.

ಆಂಗಸ್ ಮ್ಯಾಡಿಸನ್ ಬರೆದಿರುವ ಮಹತ್ವದ ಮತ್ತು ಎರಡು ಸಾವಿರ ವರ್ಷದ ಆರ್ಥಿಕ ಇತಿಹಾಸವಿರುವ, ಸುಮಾರು ನಾಲ್ಕುನೂರು ಪುಟವಿರುವ ಪುಸ್ತಕ ಇಟ್ಞಠಿಟ್ಠ್ಟo ಟ್ಛ ಠಿeಛಿ Uಟ್ಟ್ಝb ಉಟ್ಞಟಞqs ೧೨೦೩೦ ಅಈ: ಉooZqso ಜ್ಞಿ IZಟಉಟ್ಞಟಞಜ್ಚಿ ಏಜಿoಠಿಟ್ಟqs. ಅಲ್ಲಿ ನಮೂದಿಸಿರುವಂತೆ ಕ್ರಿ.ಶ. ೧೫೦೦ರವರೆಗೆ ಭಾರತ ಜಗತ್ತಿನ ಅತ್ಯಂತ ಶ್ರೀಮಂತ ರಾಷ್ಟ್ರವಾಗಿತ್ತು. ನಂತರದಲ್ಲಿ ಒಂದೆರಡು ಬಾರಿ ಚೀನಾ ನಮ್ಮನ್ನು ಹಿಂದಕ್ಕೆ ಹಾಕಿತ್ತು. ಅದಾಗಿ ೧೭೫೦ರ ಭಾರತದ ಜಿಡಿಪಿ, ಜಗತ್ತಿನ ಶೇ.೨೭ರಷ್ಟು ಇತ್ತು. ಆಗ ಚೀನಾ ಜಿಡಿಪಿ ಜಗತ್ತಿನ ಶೇ.೩೨ ರಷ್ಟಿತ್ತು. ಎಂದರೆ ಜಗತ್ತಿನ ಅರ್ಧಕ್ಕರ್ಧ ಜಿಡಿಪಿ ಆಗ ಭಾರತ ಮತ್ತು ಚೀನಾ. ಇದು ದೆಹಲಿಯ ಸುಲ್ತನತ್, ಮೊಘಲ್ ಆಡಳಿತವಿದ್ದ ಸಮಯ. ಎಂದರೆ ಅದಕ್ಕಿಂತ ಮೊದಲು ಆ ಪ್ರಮಾಣದಲ್ಲಿ ಮುಸ್ಲಿಮ್ ರಾಜರು ಗಳು ಲೂಟಿ ಮಾಡಿ ಮುಗಿಸಿದ ನಂತರದಲ್ಲಿಯೂ ಅಷ್ಟು ಶ್ರೀಮಂತಿಕೆ ಉಳಿದುಕೊಂಡಿತ್ತು.

ನಮ್ಮ ದೇಶವನ್ನು ಬ್ರಿಟಿಷರು ಮಾಡಿದಷ್ಟು ಪ್ರಮಾಣದಲ್ಲಿ ಸಂಪತ್ತಿನ ಲೂಟಿ, ಶೋಷಣೆ ಮತ್ತು ಹತ್ಯೆಯನ್ನು ಇನ್ಯಾರೂ ಇನ್ನೆಲ್ಲಿಯೂ ಮಾಡಿಲ್ಲ. ೧೭೫೦ರ ಭಾರತದ ಜಿಡಿಪಿ, ಜಗತ್ತಿನ ಶೇ.೨೭ರಷ್ಟು ಇತ್ತು ಎಂದೆನಲ್ಲ, ಅದು ಬ್ರಿಟಿಷರ ಕೈಗೆ ಸಿಕ್ಕಿ ಇನ್ನೂರು ವರ್ಷದಲ್ಲಿ ಹೇಗಾಯಿತೆಂದರೆ ೧೯೪೭ ಆಗುವಾಗ ನಮ್ಮ ಜಿಡಿಪಿ ಪಾಲು ಶೇ.೨೭ರಿಂದ ಶೇ.೩ಕ್ಕೆ ಬಂದುಮುಟ್ಟಿತ್ತು!! ಅದೇ ಸಮಯದಲ್ಲಿ ಇಂಗ್ಲೆಂಡಿನ ಜಿಡಿಪಿ ಜಾಗತಿಕ ಪಾಲು ಶೇ.೩ ಇದ್ದದ್ದು ಶೇ.೯ಕ್ಕೆ ತಲುಪಿತ್ತು.

ಆಂಗಸ್ ಮ್ಯಾಡಿಸನ್ ಇಂದಿರುವ ಯಾವ ಸರಕಾರಿ ಲೆಕ್ಕಾಚಾರವಿಲ್ಲದಿರುವ ಕಾಲದ ಆರ್ಥಿಕ ಲೆಕ್ಕಾಚಾರವನ್ನು ಹೇಳುತ್ತಿರುವುದು. ಏನೇ ಹೇಳಿದರೂ ಇಲ್ಲಿ ಕೆಲವೊಂದಿಷ್ಟು ಊಹೆಗಳು, ಅಂದಾಜಿನ ಲೆಕ್ಕಾಚಾರಗಳು ಹಲವು ಅನುಮಾನ ಗಳಿಗೆ ಎಡೆ ಮಾಡಿಕೊಡುತ್ತವೆ ಎಂಬುದು ಸುಳ್ಳಲ್ಲ. ಆತ
ಹೇಳಿದ್ದೇ ಲೆಕ್ಕವೆಂದೇನಲ್ಲ. ಆದರೆ ಉಳಿದ ಆರ್ಥಿಕ ಇತಿಹಾಸ ಕಾರರ ಪ್ರಕಾರ ಆತ ಹೇಳಿದ ಅಂಕಿ-ಸಂಖ್ಯೆಗಳಲ್ಲಿ ಹೆಚ್ಚೆಂದರೆ ಶೇ.೫ರಷ್ಟು ತಪ್ಪಿರಬಹುದು. ಆ ತಪ್ಪಿನ ಸಾಧ್ಯತೆಯನ್ನು ಪರಿಗಣಿಸಿದರೂ ಭಾರತ ಅತ್ಯಂತ ಶ್ರೀಮಂತ ರಾಷ್ಟ್ರವಾಗಿತ್ತು.

ಆತ ಹೇಳುವ ಪ್ರಕಾರ ಆತನ ಊಹೆಗಿಂತ ಜಾಸ್ತಿ ಸಂಪದ್ಭರಿತ ದೇಶವಾಗಿತ್ತು ಭಾರತ, ೧೭೫೦ರವರೆಗೆ. ಇಷ್ಟು ಪ್ರಮಾಣದ ಸಂಪತ್ತನ್ನು ಒಂದು ದೇಶದಿಂದ, ಅಲ್ಲಿನ ವ್ಯವಸ್ಥೆಯಿಂದ, ಜನರಿಂದ ಇಷ್ಟು ಅಲ್ಪ ಕಾಲದಲ್ಲಿ ಬ್ರಿಟಿಷರು ಹೀರಿದ್ದಾದರೂ ಹೇಗೆ? ಜಮೀನ್ದಾರಿ ಪದ್ಧತಿ, ರೊತ್ವಾರಿ ಪದ್ಧತಿಯ ಬಗ್ಗೆ ಕೇಳಿರಬಹುದು. ಅವರು ಅಂದು ವಿಧಿಸುತ್ತಿದ್ದ ಕರ ಶೇ.೫೦ರಷ್ಟಿತ್ತು. ಎಂದರೆ ಈ ನೆಲದಲ್ಲಿ ಬೆಳೆದ ಸಂಪತ್ತಿನ ಅರ್ಧಕ್ಕರ್ಧ ಬ್ರಿಟಿಷರಿಗೆ ಸುಂಕವಾಗಿತ್ತು. ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿ ಧವಸಧಾನ್ಯ, ವಸ್ತುಗಳನ್ನು ರುಪಾಯಿಯಲ್ಲಿ ಖರೀದಿಸುತ್ತಿತ್ತು. ಅದನ್ನು ಹೊರದೇಶಗಳಲ್ಲಿ, ಇಂಗ್ಲೆಂಡಿನಲ್ಲಿ ಪೌಂಡ್‌ನಲ್ಲಿ ಮಾರುತ್ತಿತ್ತು. ಅಷ್ಟೇ ಅಲ್ಲ, ಆ ಶೇ.೫೦ರ ಸುಂಕದ ಹಣವನ್ನು ಏಟಞಛಿ ಇeZಜಛಿo ಭಾರತವನ್ನು ನೋಡಿಕೊಳ್ಳುವ ಖರ್ಚು ಎಂದು ಇಂಗ್ಲೆಂಡಿಗೆ ಕಳುಹಿಸಲಾಗುತ್ತಿತ್ತು. ಹೀಗೆ ಭಾರತದಿಂದ ರಫ್ತಾಗುವ ಎಲ್ಲವೂ ಸಂಪೂರ್ಣ ಉಚಿತವಾಗುವಂತೆ ವ್ಯವಸ್ಥೆ  ನಿರ್ಮಾಣವಾಗಿತ್ತು. ಈ ರೀತಿ ಅಮಾನವೀಯವಾಗಿ ನಮ್ಮ ಸಂಪತ್ತನ್ನು ಲೂಟಿ ಹೊಡೆದ್ದದ್ದಷ್ಟೇ ಅಲ್ಲ, ಜತೆಯಲ್ಲಿ ಭಾರತದ ರುಪಾಯಿಯನ್ನು ಇನ್ನಷ್ಟು ಅಪಮೌಲ್ಯವಾಗಿಸಿ, ಪೌಂಡ್ ಅನ್ನು ಮೇಲಕ್ಕೆ ಕೂರಿಸಿ, ಆ ಮೂಲಕ ಹಣದ ಬದಲಾವಣೆಯ ಲೆಕ್ಕಾಚಾರದಲ್ಲಿಯೂ ಮೋಸ ಮಾಡಲಾಗುತ್ತಿತ್ತು. ಒಟ್ಟಾರೆ ಆಂಗಸ್ ಮ್ಯಾಡಿಸನ್ ಹೇಳುವಂತೆ ನೂರು ರುಪಾಯಿಯ ವಸ್ತು ಭಾರತದಿಂದ ರಫ್ತಾದರೆ ಭಾರತೀಯರಿಗೆ ಅದರಿಂದ
ಬರುತ್ತಿದ್ದ ಹಣ ಕೇವಲ ೨೫ ಪೈಸೆ! ಇನ್ನೊಬ್ಬ ಆರ್ಥಿಕ ತಜ್ಞ ಉತ್ಸಾ ಪಾಟ್ನಾಯಕ್ ಹೇಳುವ ಲೆಕ್ಕದ ಪ್ರಕಾರ ಸುಮಾರು ೪೫ ಟ್ರಿಲಿಯನ್ ಡಾಲರ್‌ನಷ್ಟು ಸಂಪತ್ತನ್ನು ಬ್ರಿಟಿಷರು (ಕೇವಲ) ೨೦೦ ವರ್ಷದಲ್ಲಿ ಕೊಳ್ಳೆ ಹೊಡೆದದ್ದು.

ಪ್ರಮಾಣ ಇಷ್ಟಿರುವಾಗ ಸಹಜವಾಗಿ ಈ ಲೂಟಿ ಅಂದಿನ ಜನಜೀವನವನ್ನು ಸಂಪೂರ್ಣ ಅಲ್ಲೋಲಕಲ್ಲೋಲವಾಗಿಸಿತ್ತು ಎನ್ನುವುದಕ್ಕೆ ಯಾವುದೇ ಸಾಕ್ಷ್ಯ ಬೇಕಾಗುವುದಿಲ್ಲ. ಇದೆಲ್ಲ ದರ ಪರಿಣಾಮವೇ ನಡೆದ ದಂಗೆಗಳು. ನಮ್ಮ ಅಂದಿನ ಸ್ಥಿತಿಯ ಅಂದಾಜಿಗೆ ಕೇವಲ ಅವುಗಳ ಅಂಕಿ-ಸಂಖ್ಯೆಗಳೇ ಸಾಕು. ೧೭೭೦ರಲ್ಲಿ ಬಂಗಾಳದಲ್ಲಿ ಬರಗಾಲ. ಕೃಷಿಕರೆಲ್ಲ ಕಂಗಾಲೆದ್ದು ಹೋಗಿದ್ದರು. ಈಸ್ಟ್ ಇಂಡಿಯಾ ಕಂಪನಿಯ ಆಡಳಿತ. ಬರಗಾಲದಲ್ಲಿಯೂ ಮಿತಿಮೀರಿದ ಲೂಟಿ, ಸುಂಕ. ಈ ದಂಗೆಯಲ್ಲಿ ಅಂದು ಒಂದು ಕೋಟಿ ಭಾರತೀಯರು ಸತ್ತರು. ಇನ್ನೊಂದಿಷ್ಟು ಲೆಕ್ಕಾಚಾರ ಕೊಡುತ್ತೇನೆ. ೧೭೮೩ರ ಚಾಲೀಸಾ ದಂಗೆ- ಒಂದು ಕೋಟಿ ಹತ್ತು ಲಕ್ಷ. ೧೭೯೧ರ ದೋಜೀ ಬರಾ ದಂಗೆ- ಒಂದು ಕೋಟಿ ಹನ್ನೆರಡು ಲಕ್ಷ. ೧೮೩೭ರ ಆಗ್ರಾ ದಂಗೆ – ೮೦ ಸಾವಿರ, ೧೮೬೮ರ ಅಜಮಿರ್ ದಂಗೆ- ಹದಿನೈದು ಲಕ್ಷ. ೧೮೭೬ರ ಮದ್ರಾಸ್ ದಂಗೆ- ೫೫ ಲಕ್ಷ. ನಂತರದಲ್ಲಿ ೧೮೯೬ರಿಂದ ೧೯೪೪ರವರೆಗೆ ನಡೆದ ದಂಗೆಗಳಲ್ಲಿ ಒಂದೂವರೆ ಕೋಟಿ.

ಇವಿಷ್ಟು ಬ್ರಿಟಿಷರ ಆಡಳಿತ ಅವಧಿಯಲ್ಲಿ ದಂಗೆಯಲ್ಲಿ- ಬ್ರಿಟಿಷರಿಂದ ಕೊಲ್ಲಲ್ಪಟ್ಟ ಭಾರತೀಯರ ಅಫಿಶಿಯಲ್ ಸಂಖ್ಯೆ. ಇದೆಲ್ಲವನ್ನು ದಂಗೆಯೆಂದು ಕರೆಯುವುದೇ ಅಪರಾಧ. ಇವು ಅಸಲಿಗೆ ನರಮೇಧಗಳು. ಇದು ಬಿಟ್ಟು ಹತ್ತು ಸಾವಿರಕ್ಕಿಂತ ಕಡಿಮೆ ಸತ್ತವರ ಘಟನೆಗಳ ವಿವರ ಬೇರೆ. ಇತಿಹಾಸದ ಲೆಕ್ಕಕ್ಕೇ ಸಿಗದವು ಹಲವು. ಕಡಿಮೆಯೆಂದರೂ ೮.೫ ಕೋಟಿ ಜನರು ದಂಗೆಯಲ್ಲಿ, ಬ್ರಿಟಿಷ್ ನರಮೇಧದಲ್ಲಿ ಸತ್ತಿದ್ದಾರೆ, ಅಥವಾ ಬ್ರಿಟಿಷರು ಕೊಂದಿದ್ದಾರೆ. ೧೭೫೦ರಲ್ಲಿ ಭಾರತದ ಜನಸಂಖ್ಯೆ ೧೮ ಕೋಟಿಯಷ್ಟಿತ್ತು. ೧೮೨೦ರಲ್ಲಿ ಸುಮಾರು ಎಪ್ಪತ್ತು ವರ್ಷದಲ್ಲಿ ಏರಿದ ಜನಸಂಖ್ಯೆ ಎಷ್ಟು ಗೊತ್ತೇ? ಕೇವಲ ಎರಡು ಕೋಟಿ. ೧೯೨೦ರಲ್ಲಿ ನಮ್ಮ ಜನ ಸಂಖ್ಯೆ ಕೇವಲ ೨೦ ಕೋಟಿಯಾಗಿತ್ತು. ೧೯೪೭ರಲ್ಲಿ ಭಾರತದ ಜನಸಂಖ್ಯೆ ೩೪ ಕೋಟಿಯಿತ್ತು. ಅಂದರೆ ೧೭೫೦ರಿಂದೀಚೆ ಬ್ರಿಟಿಷರು ಕೇವಲ ೮.೫ ಕೋಟಿ ಜನರನ್ನು ಕೊಂದದ್ದಷ್ಟೇ ಅಲ್ಲ, ಜತೆಯಲ್ಲಿ ನಮ್ಮ ವಂಶಾಭಿವೃದ್ಧಿಯೇ ಕ್ಷೀಣಿಸುವ ಕರಾಳ
ಸ್ಥಿತಿಗೆ ನಮ್ಮನ್ನು ತಂದಿದ್ದರು.

ಅದರ ಭೀಕರತೆಯ ಊಹೆ ನಿಮಗೇ ಬಿಡುತ್ತೇನೆ. ವಿಶ್ವಯುದ್ಧವಾಗದಿದ್ದಲ್ಲಿ, ಅದರಿಂದಾಗಿ ಬ್ರಿಟಿಷರು ದಿವಾಳಿಯಾಗದಿದ್ದಲ್ಲಿ ಭಾರತಕ್ಕೆ ೧೯೪೭ರಲ್ಲಿಯೂ
ಸ್ವಾತಂತ್ರ್ಯ ಬರುತ್ತಿರಲಿಲ್ಲವೆಂದು ಕೆಲವೊಮ್ಮೆ ಅನ್ನಿಸುವುದಿದೆ. ಇವತ್ತು ಜಗತ್ತಿನಲ್ಲಿ ಹೋಲೋಕಾಸ್ಟ್, ಹಿಟ್ಲರ್ ಯೆಹೂದಿಗಳನ್ನು ಕೊಂದದ್ದನ್ನು ಮಾನವ ಇತಿಹಾಸದ ಅತ್ಯಂತ ಭೀಕರ ಘಟನೆ ಎಂದೇ ಪರಿಗಣಿಸುವುದುಂಟು. ಕೇವಲ ನಾಲ್ಕು ವರ್ಷದಲ್ಲಿ, ೧೯೪೧-೧೯೪೫ರ ಅವಽಯಲ್ಲಿ ಸುಮಾರು ೬೦ ಲಕ್ಷ ಯೆಹೂದಿಗಳ ಹತ್ಯೆಯಾಯಿತು. ನಿಜವಾಗಿಯೂ ಅಮಾನವೀಯವೇ ಹೌದು. ಆದರೆ ಬೇಸರದ ವಿಷಯ ವೆಂದರೆ, ಹೋಲೋಕಾಸ್ಟ್ ಅನ್ನು ಅಮಾನವೀಯವೆನ್ನುವ ಇದೇ ಪಶ್ಚಿಮದ ಸಂಭಾವಿತ ದೇಶಗಳು ಭಾರತದಲ್ಲಿ ಬ್ರಿಟಿಷರು ನಡೆಸಿದ ನರಮೇಧದ ಬಗ್ಗೆ ಸೊಲ್ಲೆತ್ತುವುದಿಲ್ಲ.

೮.೫ ಕೋಟಿ ಸತ್ತದ್ದು ಅವರ ಪ್ರಕಾರ ಭಾರತೀಯರೇ ಪರಸ್ಪರ, ಕಾಡು ಜನರಂತೆ, ತಮ್ಮತಮ್ಮೊಳಗೇ ದಂಗೆಯೆದ್ದು, ರಾಜರಾಜರುಗಳ ನಡುವಿನ ಯುದ್ಧದಲ್ಲಿ ಸತ್ತದ್ದು. ಅಂಕಿ- ಸಂಖ್ಯೆಯನ್ನೇ ಆಧಾರವಾಗಿಟ್ಟುಕೊಂಡು ನೋಡಿದರೆ ಯಾವುದು ಹೆಚ್ಚು ಭೀಕರ ಎನ್ನುವುದು ಸ್ಪಷ್ಟವಾಗುತ್ತದೆ.
ಹೀಗಿರುವಾಗ ಕೂಡ ಭಾರತದ ಇತಿಹಾಸ, ಕೊಲೊನಿಯಲ್ ಕ್ರೂರತನಕ್ಕೆ ಪ್ರಪಂಚದ ಇತಿಹಾಸದಲ್ಲಿ ಇಂದಿಗೂ ಜಾಗ ಸಿಕ್ಕಿಲ್ಲ. ಜಗತ್ತಿನ ಇತಿಹಾಸ ಬಿಡಿ- ನಮ್ಮಲ್ಲಿನ ಇತಿಹಾಸವನ್ನೇ ಇನ್ನೂ ಸರಿಮಾಡಿಕೊಂಡಿಲ್ಲವಲ್ಲ. ಹಾಗಿರುವಾಗ ಅವರಿಗೆ ಹಳಿದು ಏನು ಪ್ರಯೋಜನ? ಬ್ರಿಟಿಷರು ಕೊಳ್ಳೆಹೊಡೆದ ಸಂಪತ್ತಿನ ಪ್ರಮಾಣ ೪೫ ಟ್ರಿಲಿಯನ್ ಡಾಲರ್‌ಗೆ ಸಮ ಎಂಬ ಲೆಕ್ಕ ಮೇಲೆ ಹೇಳಿದೆನಲ್ಲ.

ಅದು ಇಂದಿನ ಲೆಕ್ಕಾಚಾರದ ಪ್ರಕಾರ ಬ್ರಿಟಿಷರು ಲೂಟಿ ಮಾಡಿದ್ದು. ಈಗ ಭಾರತದ ಜಿಡಿಪಿ ಎಷ್ಟು ಗೊತ್ತೇ? ಕೇವಲ ೩.೩೮ ಟ್ರಿಲಿಯನ್ ಡಾಲರ್. ಪ್ರಪಂಚದ ಅತ್ಯಂತ ಶ್ರೀಮಂತ ರಾಷ್ಟ್ರ ಅಮೆರಿಕದ ಇಂದಿನ ಜಿಡಿಪಿ ೨೫.೫ ಟ್ರಿಲಿಯನ್ ಡಾಲರ್. ಅದು ಬ್ರಿಟಿಷರು ಭಾರತದಿಂದ ಕೊಳ್ಳೆ ಹೊಡೆದ
ಸಂಪತ್ತಿನ ಅರ್ಧಕ್ಕೆ ಸಮ. ಹಾಗಾದರೆ ಬ್ರಿಟಿಷರ ಆರ್ಥಿಕತೆ ನಂತರದಲ್ಲಿ ಮತ್ತು ಈಗ ಹೇಗಿದೆ? ಇಷ್ಟೆಲ್ಲಾ ಲೂಟಿ ಹೊಡೆದರೂ ಇಂದು ಅವರ ಜಿಡಿಪಿ ಗಾತ್ರ ಕೇವಲ ೩ ಟ್ರಿಲಿಯನ್ ಡಾಲರ್. ನಮಗಿಂತ ಕೆಳಗಿನ ಸ್ಥಾನ ಇಂಗ್ಲೆಂಡಿನದು.

ಬ್ರೆಕ್ಸಿಟ್ ಬಗ್ಗೆ ಕೇಳಿರಬಹುದು. ಯುರೋಪಿಯನ್ ಒಕ್ಕೂಟದಿಂದ ಹೊರಬರಲು ಮುಂದಾದಾಗ ಯುನೈಟೆಡ್ ಕಿಂಗ್ಡಮ್ಮಿನ ಪ್ರಧಾನಿಯೇ ರಾಜೀನಾಮೆ ಕೊಡಬೇಕಾದ ಆರ್ಥಿಕ ಮುಗ್ಗಟ್ಟಿನ ಸ್ಥಿತಿ ನಿರ್ಮಾಣವಾಯಿತು. ಅಂಥ ಸ್ಥಿತಿ ಯಲ್ಲಿರುವ ದೇಶವನ್ನು ಮೇಲಕ್ಕೆತ್ತಲು ಭಾರತೀಯ ಮೂಲದ, ನಮ್ಮೂರ ಅಳಿಯ ಋಷಿ ಸುನಕ್ ಬರ ಬೇಕಾಯಿತು. ಒಟ್ಟಾರೆ ಬ್ರಿಟನ್ ನಮ್ಮಿಂದ ೪೫ ಟ್ರಿಲಿಯನ್ ಡಾಲರ್ ಕದ್ದೊಯ್ದರೂ ಆ ಹಣ, ಸಂಪತ್ತು ಅವರಲ್ಲುಳಿ
ಯಲಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ೧೯೪೫ ರಲ್ಲಿಯೇ ಬ್ರಿಟನ್ ದಿವಾಳಿಯ ಅಂಚಿನಲ್ಲಿ ಬಂದು ನಿಂತಿತ್ತು.

ಅದರ ಖಜಾನೆ ಸಂಪೂರ್ಣ ಖಾಲಿಯಾಗಿತ್ತು. ಕೊಳ್ಳೆ ಹೊಡೆದದ್ದೆಲ್ಲ ವಿಶ್ವಯುದ್ಧದಲ್ಲಿ ಬೂದಿಯಾಗಿತ್ತು. ಮೇಲಿಂದ ಯಥೇಚ್ಛ ಸಾಲ. ಅಪಾತ್ರರ ಮನೆಯಲ್ಲಿ ಲಕ್ಷ್ಮಿ ನಿಲ್ಲುವು ದಿಲ್ಲವಲ್ಲ. ಇತ್ತೀಚಿನ ದಿನಗಳಲ್ಲಿ ಬ್ರಿಟನ್ ಆರ್ಥಿಕ ಸ್ಥಿತಿಯ ಸುದ್ದಿಗಳನ್ನು ಆಗಾಗ ಕೇಳುತ್ತಿರುತ್ತೇವೆ. ಬ್ರೆಕ್ಸಿಟ್ ಅನ್ನು
ಆರ್ಥಿಕವಾಗಿ ಅರಗಿಸಿಕೊಳ್ಳಲು ಇಂಗ್ಲೆಂಡಿಗೆ ಸಾಧ್ಯವಾಗುತ್ತಿಲ್ಲ. ಎರಡು ದಿನಗಳ ಹಿಂದೆ ಬ್ರಿಟನ್ನಿನಲ್ಲಿ ರಿಸೆಶನ್ ಆರಂಭವಾಗಿದೆ ಎಂಬ ಸುದ್ದಿ ಬೇರೆ. ಒಟ್ಟಾರೆ ಬ್ರಿಟಿಷರ ಲೂಟಿ ಮತ್ತು ಅಂದಿನಿಂದ ಇಂದಿನವರೆಗಿನ ಅವರ ಆರ್ಥಿಕ ಸ್ಥಿತಿ ನೋಡಿದರೆ ಇದೊಂದು ಐತಿಹಾಸಿಕ ವ್ಯಂಗ್ಯ ಎಂದೆನಿಸುವುದು ಸುಳ್ಳಲ್ಲ.