ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನದ ಮೂಲಕ ಕಾಂಗ್ರೆಸ್ಗೆ ಮತ ಹಾಕಿರುವುದಕ್ಕೆ ಶಾಸಕರಿಗೆ ಸೋಮಶಕರ್ಮಣಿಯಾದರು ಬಿಜೆಪಿ ಕಾರ್ಯಕರ್ತರು ಪ್ರತಿಭಟನೇ ನಡೆಸಿದ್ದಾರೆ. ನಂತರ ಎಸ್ ಟಿ ಸೋಮಶೇಖರ್ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹಾಗೂ ವಿಪಕ್ಷ ನಾಯಕ ಆರ್ ಅಶೋಕ ವಿರುದ್ಧ ಗುಡುಗಿದ್ದಾರೆ.
ನಾನೇನು ಪಾಕಿಸ್ತಾನದಲ್ಲಿ ಇದ್ದೀನಾ, ಇವರು ಹೆದರಿಸೋದಕ್ಕೆ. ಯಾವ ಮಗನೂ ಹುಟ್ಟಿಲ್ಲ ನನ್ನ ಹೆದರಿಸೋದಕ್ಕೆ. ಇವರಂತೆ ಇಲ್ಲೀಗಲ್ ಇಲ್ಲ ನಾನು, ಸ್ಟ್ರೈಟ್ ಇದ್ದೀನಿ. ಏನ್ ಮಾಡ್ತಾರೆ ನೋಡೋಣ ತಾಕತ್ತು ಇದ್ರೆ ನನ್ನನ್ನು ಹೆದರಿಸಲಿ. ನನ್ನ ವಿರುದ್ದ ಪ್ರತಿಭಟನೆ ಮಾಡ್ತಾರಲ್ಲ ನನ್ನ ಎದುರಿಗೆ ಮಾಡ್ಲೀ ಒಂದೊಂದೆ ಒಂದೊಂದೆ ಹೊರ ತೆಗೆಯುತ್ತೇನೇ ಎಂದು ಗುಡುಗಿದ್ದಾರೆ.
ಹೌದು ಅಡ್ಡ ಮತ ಮಾಡಿದ್ದೀನಿ ಏನ್ ಇವಾಗ? ಯಾವುದಕ್ಕೂ ಹೆದರುವ ಮನುಷ್ಯ ನಾನಲ್ಲ. ಇದೇ ಹಿಮಾಚಲ ಪ್ರದೇಶದಲ್ಲಿ ಎಷ್ಟು ಜನ ಬಿಜೆಪಿಗೆ ವೋಟ್ ಹಾಕಿಲ್ಲ. ಕೋರ್ಟ್ ಆದೇಶ, ಆತ್ಮಸಾಕ್ಷಿ ಮತ ಯಾರಿಗೆ ಹಾಕ ಬೇಕು ಅವರಿಗೆ ಹಾಕಿದ್ದೇನೆ. ಇದು ಅಪವಿತ್ರ ಮೈತ್ರಿ, ಎಂಪಿ ಎಲೆಕ್ಷನ್ ಗಾಗಿ ಮೋದಿ ಕೈಕಾಲು ಹಿಡಿದು ಮಾಡಿಕೊಂಡಿದ್ದಾರೆ. ಇದು ರಾಜ್ಯಸಭಾ ಎಲೆಕ್ಷನ್ ಗಾಗಿ ಅಲ್ಲ, ಜೆಡಿಎಸ್ ಅವರಿಗೆ ಅರ್ಥ ಆಗಬೇಕು. ಜೆಡಿಎಸ್ ಗೆ ಬಿಜೆಪಿ ಮಾಡಿದ್ದ ದ್ರೋಹ ಇದು ಎಂದು ಕಿಡಿ ಕರಿದ್ದಾರೆ.
ಇನ್ನು ಪಾಕಿಸ್ತಾನ್ ಜಿಂದಾಬಾದ್ ಕೂಗಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಎಸ್.ಟಿ.ಸೋಮಶೇಖರ್, ಇದು ನೂರಕ್ಕೆ ನೂರಷ್ಟು ತಪ್ಪು. ಪೊಲೀಸರು ಹಾಗೂ ಗೃಹಮಂತ್ರಿಗಳಿಗೆ ಮಾತನಾಡಿದ್ದೇನೆ. ಯಾರೇ ಕೂಗಿದ್ರು ಅವರ ವಿರುದ್ದ ಕ್ರಮ ಜರುಗಿಸ ಬೇಕು. ಬಿಜೆಪಿ ಅವರಿಗೆ ಇದು ಒಂದು ಅಂಶದ ಕಾರ್ಯಕ್ರಮ. ಅವರು ವಿಧಾನಸಭೆಯಲ್ಲಿ ಜನರ ಪರವಾಗಿ ಸರ್ಕಾರಕ್ಕೆ ಚುರುಕು ಮುಟ್ಟಿಸೋ ಕ್ರಮ ಮಾಡಬೇಕು. ಅದು ಬಿಟ್ಟು ಚಿಕ್ಕ ಚಿಕ್ಕ ವಿಚಾರವನ್ನಿಟ್ಟುಕೊಂಡು ಪ್ರತಿಭಟನೆ ಮಾಡ್ತಾರೆ ಎಂದರು.