Wednesday, 11th December 2024

ಡಾ.ಅಮಿತ್ ನಾಥ್ ತಂಡದಿಂದ ಒಂದೇ ವರ್ಷದಲ್ಲಿ 150 ಕೋಟಿ ರೂಪಾಯಿ ವ್ಯವಹಾರ

ಬೆಂಗಳೂರು: ಭಾರತೀಯ ವ್ಯಾಪಾರ ಉದ್ಯಮದಲ್ಲಿ ಹೆಸರುವಾಸಿಯಾಗಿರುವ ಡಾ.ಅಮಿತ್ ನಾಥ್ ಅವರ ತಂಡ ಕಳೆದ ಒಂದು ವರ್ಷದಲ್ಲಿ 150 ಕೋಟಿ ರೂಪಾಯಿಗಳ ಬ್ಯುಸಿನೆಸ್ ನಡೆಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ತಮ್ಮ ತಂಡ ಗಳಿಸಿದ ಈ ಒಂದು ಯಶಸ್ಸನ್ನು ಅವಿಸ್ಮರಣೀಯವಾಗಿಸುವ ಉದ್ದೇಶ ದಿಂದ ಇತ್ತೀಚೆಗೆ ಬೆಂಗಳೂರಿನಲ್ಲಿ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಭಾರತೀಯ ಬ್ಯುಸಿನೆಸ್ ಉದ್ಯಮದಲ್ಲಿ ಮಾಸ್ಟರ್ ಮೈಂಡ್ ಎನಿಸಿರುವ ಅಮಿತ್ ನಾಥ್ ಅವರು ತಮ್ಮ ಎಫ್ಇಎಸ್ ಟಿ ಎಂಬ ಬ್ಯುಸಿನೆಸ್ ಕೋರ್ಸ್ ಮೂಲಕ ಕಳೆದ 10 ತಿಂಗಳಲ್ಲಿ ದೇಶಾದ್ಯಂತದ 5 ಸಾವಿರಕ್ಕೂ ಅಧಿಕ ಜನರಿಗೆ ವ್ಯವಹಾರ ನಡೆಸುವ ಬಗ್ಗೆ ತರಬೇತಿ ನೀಡಿದ್ದಾರೆ ಮತ್ತು ಅವರನ್ನು ನುರಿತ ಮಾಸ್ಟರ್ ಕ್ಲೋಸರ್ ಗಳನ್ನಾಗಿ ಮಾಡಿದ್ದಾರೆ.

ಈ ಅಭೂತಪೂರ್ವ ಯಶಸ್ಸನ್ನು ಆಚರಿಸುವುದು ಮತ್ತು ಆರ್ಥಿಕವಾಗಿ ಸ್ವತಂತ್ರರಾಗಲು ಹಾಗೂ ಭಾರತೀಯ ವ್ಯಾಪಾರ ಉದ್ಯಮದ ಬೆಳವಣಿಗೆಗೆ ಕೊಡುಗೆ ನೀಡಲು ಇತರರನ್ನು ಪ್ರೇರೇಪಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರು ತಮ್ಮ ಕ್ಲೋಸಿಂಗ್ ಡೀಲ್ಸ್ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಂಡರು. ಅಲ್ಲದೇ, ವ್ಯಾಪಾರದ ಬೆಳವಣಿಗೆಯ ಬಗೆಗಿನ ಉತ್ತಮ ಅಭ್ಯಾಸಗಳು, ಯಶಸ್ಸಿಗೆ ಕಾರಣವಾದ ಪ್ರಕರಣಗಳು, ಪ್ರಶಂಸೆಗಳ ವಿನಿಮಯ ಮತ್ತು ಇನ್ನೂ ಹೆಚ್ಚಿನ ವಿಚಾರಗಳನ್ನು ಚರ್ಚಿಸಿದರು. ಈ ವಿಶೇಷ ಸಮಾರಂಭದಲ್ಲಿ ಸುಮಾರು 30 ಜನರು ಭಾಗಿಯಾಗಿದ್ದರು. ದೇಶದ ನಾನಾ ಭಾಗಗಳಿಂದ ಆಗಮಿಸಿದ್ದವರು ಏರೋಸ್ಪೇಸ್, ಪ್ಲಾಸ್ಟಿಕ್ ತಯಾರಿಕೆ, ಸೆಕ್ಯೂರಿಟಿ ಕ್ಯಾಮೆರಾ ಉದ್ಯಮ, ಸಣ್ಣ ವ್ಯಾಪಾರಿಗಳು ಮತ್ತು ಉದ್ಯೋಗಸ್ಥ ವೃತ್ತಿಪರರಾಗಿದ್ದಾರೆ. ಡಾ.ನಾಥ್ ಅವರು ಈ ಕಾರ್ಯಕ್ರಮಕ್ಕಾಗಿ ವಿಶೇಷವಾಗಿ ರಚಿಸಲಾದ ಕ್ಲೋಸರ್ ಗಳಿಗಾಗಿ ತಮ್ಮ ಸೀಮಿತ ಆವೃತ್ತಿಯ `ಬ್ಲ್ಯಾಕ್ ಬುಕ್’ ಅನ್ನು ಹಂಚಿಕೊಂಡರು. ಕ್ರ್ಯಾಕಿಂಗ್ ಡೀಲ್ಸ್, ವಿಧಾನಗಳು ಮತ್ತು ಪ್ಲಾಟ್ ಫಾರ್ಮ್ ಕ್ಲೋಸಿಂಗ್ ಪ್ರಸ್ತುತಪಡಿಸುವ ಬಗ್ಗೆ ಕೆಲವು ಸಲಹೆಗಳು ಮತ್ತು ಕಾರ್ಯತಂತ್ರಗಳ ಬಗ್ಗೆ ಮಾಹಿತಿ ಹಂಚಿಕೊಂಡರು.

ಫೆಸ್ಟಿಯನ್ ಗಳ ಯಶಸ್ಸು ಮತ್ತು ಈ ಕ್ಲೋಸ್ಡ್ ಈವೆಂಟ್ ಬಗ್ಗೆ ಮಾತನಾಡಿದ ಡಾ.ಅಮಿತ್ ನಾಥ್ ಅವರು, “ಈ ಕಾರ್ಯಕ್ರಮದಲ್ಲಿ 30 ಮಂದಿ ಪಾಲ್ಗೊಂಡಿದ್ದು, ಇವರು 150 ಕೋಟಿ ರೂಪಾಯಿಗೂ ಅಧಿಕ ಮೊತ್ತದ ವ್ಯಾಪಾರ ನಡೆಸಿದ್ದಾರೆ. ಒಂದು ವೇಳೆ ಇಡೀ ಫೆಸ್ಟ್ ಕುಟುಂಬದ ಸದಸ್ಯರೆಲ್ಲರೂ ಸೇರಿದ್ದರೆ ಈ ಮೊತ್ತ 200 ಕೋಟಿ ರೂಪಾಯಿಗೂ ಅಧಿಕವಾಗುತ್ತಿತ್ತು. ಇದು ಫೆಸ್ಟ್ ಮತ್ತು ಫೆಸ್ಟಿಯನ್ ಗಳ ಶಕ್ತಿಯಾಗಿದೆ’’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.