ಕೊಲ್ಹಾರ: ವಿಶ್ವದ ಭೂಪಟದಲ್ಲಿ ಭಾರತವು ಬಲಿಷ್ಠವಾಗುತ್ತಿದೆ, ಜಗತ್ತಿನ ಎಲ್ಲ ದೇಶಗಳಲ್ಲಿ ಭಾರತೀಯ ಮೂಲದ ಜನತೆ ದೊಡ್ಡ ದೊಡ್ಡ ಹುದ್ದೆ ಯನ್ನು ಹೊಂದಿರುವುದು ಸಂತಸದ ವಿಷಯವಾಗಿದೆ ಎಂದು ಮೂಲತಃ ಕುಪಕಡ್ಡಿ ಗ್ರಾಮದವರಾದ ದೂರದ ಆಸ್ಟ್ರೇಲಿಯಾದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಪ್ರೊಫೆಸರ್ ಡಾ.ಜಗದೀಶ್ ಹೇಳಿದರು.
ಹುಟ್ಟುರಾದ ಕೊಲ್ಹಾರ ತಾಲೂಕಿನ ಕುಪಕಡ್ಡಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಅವರು ಮಾತನಾಡಿದರು ಶಿಕ್ಷಣ ಬದುಕನ್ನು ಬೆಳಗುವ ಕಿರಣವಾಗಿದೆ, ಗ್ರಾಮೀಣ ಮಟ್ಟದಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳು ವಿಜ್ಞಾನ ವಿಷಯವನ್ನು ಆಸಕ್ತಿಯಿಂದ ಅಭ್ಯಸಿಸಿ ವೈದ್ಯಕೀಯ, ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂದರು. ಕುಪಕಡ್ಡಿ ಗ್ರಾಮದಲ್ಲಿ ಜನಿಸಿ ದೂರದ ಆಸ್ಟ್ರೇಲಿಯಾದಲ್ಲಿ ನಮ್ಮ ದೇಶದ ಕೀರ್ತಿಯನ್ನು ಬೆಳಗುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದೆವೆ ಇದು ನಮ್ಮ ಮಣ್ಣಿನ ಗುಣವಾಗಿದೆ. ಪ್ರಸ್ತುತ ಪ್ರತಿ ಹಳ್ಳಿಗಳಲ್ಲಿ ಕೂಡ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುತ್ತಿರುವುದು ಅತ್ಯಂತ ಖುಷಿಯ ವಿಚಾರ ಎಂದು ಅವರು ಹರ್ಷವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಡಾ.ಸರೋಜಿನಿ ಜಗದೀಶ, ಡಾ.ಪ್ರಜ್ಞಾ ಜಗದೀಶ, ಎಸ್ಡಿಎಂಸಿ ಅಧ್ಯಕ್ಷರಾದ ಮುರುಗೇಶ ಹಳ್ಳಿ, ಪ್ರಕಾಶ ಉಗ್ರಾಣ, ಮಹೇಶ ಉಗ್ರಾಣ, ಸಂಗಮೇಶ ಉಗ್ರಾಣ, ಶಿಕ್ಷಕರಾದ ಹಣಮಂತ ಬಿರಾದಾರ, ಹೇಮಾವತಿ, ಸಿದ್ದು ಕೋಟ್ಯಾಳ, ಬಾಬು ಪವಾರ, ಕವಿತಾ ಹಿರೇಮಠ, ಶಾಂತಪ್ಪ ನಾಗರಳ್ಳಿ, ಲಕ್ಷ್ಮೀ ವನೇಶಿ, ಆನಂದ ಹೊಲ್ದೂರ ಸೇರಿದಂತೆ ಗ್ರಾಮದ ಹಿರಿಯರು ಭಾಗಿಯಾಗಿದ್ದರು.