ಕೊಲ್ಹಾರ: ಸನಾತನ ಸಂಸ್ಕೃತಿಯುಳ್ಳ ಭಾರತ ದೇಶ ವಿಶ್ವಕ್ಕೆ ಮಾತೃ ಸ್ಥಾನದಲ್ಲಿದೆ ಎಂದು ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ ಹೇಳಿದರು.
ಪಟ್ಟಣದ ಆರಾಧ್ಯ ದೈವ ರಾಜಗುರು ಹಿರೇಪಟ್ಟದೇವರ ಶೀಲವಂತ ಹಿರೇಮಠದ ಗುರುಸಿದ್ಧೇಶ್ವರ ಶಿವಾಚಾರ್ಯರ ಜಾತ್ರಾ ಮಹೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಜನಜಾಗೃತಿ ಧರ್ಮಸಭೆಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು ಭಾರತ ದೇಶ ವಿಶ್ವದ ಚರಿತ್ರೆಯಲ್ಲಿ ತನ್ನ ವೈಶಿಷ್ಟ್ಯತೆಯ ಮೂಲಕ ಬೆಳಕು ನೀಡಿದೆ ಇದು ಸನಾತನ ಸಂಸ್ಕೃತಿಯ ಶಕ್ತಿಯಾಗಿದೆ ಎಂದರು.
ಏರು, ನೀರು, ತೇರು ಈ ಮೂರನ್ನು ಹೊಂದಿರುವ ಪುಣ್ಯಕ್ಷೇತ್ರ ಜಗತ್ಪ್ರಸಿದ್ಧಯಾಗಿ ಹೆಸರು ಪಡೆದುಕೊಳ್ಳುತ್ತದೆ ಅಂತಹ ಮೂರು ಸ್ಥಳಗಳುಳ್ಳ ಪುಣ್ಯಕ್ಷೇತ್ರ ಕೊಲ್ಹಾರ ಪಟ್ಟಣದ ಶೀಲವಂತ ಹಿರೇಮಠವಾಗಿದ್ದು ಶ್ರೀಮಠ ಮುಂದಿನ ದಿನಮಾನಗಳಲ್ಲಿ ಜಗತ್ಪ್ರಸಿದ್ಧಯಾಗಿ ರೂಪುಗೊಳ್ಳುತ್ತದೆ ಎಂದು ಬ.ಬಾಗೇ ವಾಡಿ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯರು ಹೇಳಿದರು. ಜಗತ್ ಪಾಲಕ ಪರಶಿವನು ಶಿವರಾತ್ರಿಯಂದು ಲಿಂಗದಲ್ಲಿ ಪ್ರತ್ಯಕ್ಷವಾಗಿ ಭಕ್ತರ ಕಷ್ಟ ಪರಿಹರಿಸುತ್ತಾನೆ ಪವಿತ್ರ ಶಿವರಾತ್ರಿಯ ಸುಧಿನದಂದು ಪಟ್ಟಣದ ಶೀಲವಂತ ಹಿರೇಮಠದಲ್ಲಿ ಧರ್ಮಸಭೆಯ ಜೊತೆಗೆ 1008 ಲಿಂಗಗಳ ದರುಶನ ಭಾಗ್ಯ ದೊರೆತಿರುವುದು ನಮ್ಮ ನಿಮ್ಮೆಲ್ಲರ ಸೌಭಾಗ್ಯ ಎಂದು ಅವರು ಹೇಳಿದರು.
ಶೀಲವಂತ ಹಿರೇಮಠದ ಕೈಲಾಸನಾಥ ಶ್ರೀಗಳು ಆಶೀರ್ವಚನ ನೀಡುತ್ತಾ ರಾಜಪರಂಪರೆಯುಳ್ಳ ಪಟ್ಟಣದ ರಾಜಗುರು ಪಟ್ಟದೇವರ ಶೀಲವಂತ ಹಿರೇಮಠ ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ ಎಂದು ಹೇಳಿದರು. ಪ್ರತಿವರ್ಷ ಶಿವರಾತ್ರಿಯಂದು ಅಡ್ಡಪಲ್ಲಕ್ಕಿ ಉತ್ಸವ, ಸಹಸ್ರ ಮುತ್ತೈದೆಯ ಉಡಿ ತುಂಬುವ ಕಾರ್ಯಕ್ರಮ, ರುದ್ರಾಭಿಷೇಕ, ಜನಜಾಗೃತಿ ಧರ್ಮಸಭೆಯಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಭಕ್ತರ ಕಷ್ಟ ಪರಿಹರಿಸುವಲ್ಲಿ ಶ್ರೀಮಠ ಎಂದಿಗೂ ಮುಂದಿದೆ ಎಂದು ಅವರು ಹೇಳಿದರು.
ಚಿಮ್ಮಲಗಿ ಅರಳೇಲೆ ಹಿರೇಮಠದ ಸಿದ್ಧ ರೇಣುಕಾ ಶಿವಾಚಾರ್ಯರು, ಜೆಡಿಎಸ್ ಮುಖಂಡ ಅಪ್ಪುಗೌಡ ಪಾಟೀಲ್(ಮನಗೂಳಿ) ಮನಗೂಳಿ ಸಹಿತ ಅನೇಕರು ಮಾತನಾಡಿದರು.
ವೇದಿಕೆಯ ಮೇಲೆ ಶಿರಕೋಳ ಹಿರೇಮಠದ ಗುರುಸಿದ್ಧೇಶ್ವರ ಶಿವಾಚಾರ್ಯರು, ಡಾ. ಬಕ್ತಿಯಾರಖಾನ ಖಾನ್ ಪಠಾಣ, ಬಿ.ಯು ಗಿಡ್ಡಪ್ಪಗೋಳ, ಎಸ್.ಬಿ ಪತಂಗಿ, ಟಿ.ಟಿ ಹಗೇದಾಳ, ಚಿನ್ನಪ್ಪ ಗಿಡ್ಡಪ್ಪಗೋಳ, ಕುಮಾರಸ್ವಾಮಿ ಹಿರೇಮಠ, ಪುಂಡಲೀಕ ಕಂಬಾರ, ಪ ಪಂ ಸದಸ್ಯ ಸಿ.ಎಸ್ ಗಿಡ್ಡಪ್ಪಗೋಳ, ದಸ್ತಗೀರ ಕಲಾದಗಿ, ಅಪ್ಪಾಸಿ ಮಟ್ಯಾಳ, ಮಹಾಲಿಂಗೇಶ ಹತ್ತಳ್ಳಿ, ರುದ್ರಗೌಡ ಪಾಟೀಲ್, ಆನಂದ ಪಾರಗೊಂಡ ಸಹಿತ ಅನೇಕರು ಉಪಸ್ಥಿತರಿದ್ದರು.