Friday, 13th December 2024

ಎರಡನೇ ಪ್ರೀಮಿಯಂ ಎಕ್ಸ್‌ಪೀರಿಯನ್ಸ್‌ ಸೆಂಟರ್‌ ಅನ್ನು ಉದ್ಘಾಟಿಸಿದ ಸ್ಯಾಮ್‌ಸಂಗ್

ಬೆಂಗಳೂರಿನಲ್ಲಿ ರಿಟೇಲ್ ವ್ಯವಹಾರ ವಿಸ್ತರಣೆಯ ಭಾಗವಾಗಿ ಮಾಲ್ ಆಫ್ ಏಷ್ಯಾ

• ಸೊಗಸಾದ ವಿನ್ಯಾಸದೊಂದಿಗೆ ಸುಸಜ್ಜಿತವಾಗಿರುವ ಸ್ಯಾಮ್‌ಸಂಗ್ ನ ಹೊಸ ಪ್ರೀಮಿಯಂ ಸ್ಟೋರ್ ಸ್ಮಾರ್ಟ್‌ಥಿಂಗ್ಸ್, ಗೇಮಿಂಗ್ ಝೋನ್, ಆಡಿಯೋ ವಿಶುವಲ್, ಸರ್ವೀಸ್ ಸೆಂಟರ್ ಹೊಂದಿದೆ. ಇಲ್ಲಿ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಟ್ಯಾಬ್ಲೆಟ್‌ಗಳನ್ನು ಪ್ರದರ್ಶಿಸಲಾಗುತ್ತದೆ ಮತ್ತು ಸ್ಟೋರ್+ ಮೂಲಕ ಎಲ್ಲಾ ಹೊಸ ಫಿಜಿಟಲ್ ಅನುಭವವನ್ನು ನೀಡಲಾಗುತ್ತದೆ.
• ಸೀಮಿತ ಅವಧಿಗೆ ಆಯ್ದ ಗ್ಯಾಲಕ್ಸಿ ಸಾಧನಗಳನ್ನು ಖರೀದಿಸುವಾಗ ಗ್ರಾಹಕರು ಆರಂಭಿಕ ಕೊಡುಗೆಗಳು, 2ಎಕ್ಸ್ ಲಾಯಲ್ಟಿ ಪಾಯಿಂಟ್‌ಗಳು (ರೂ.15000ಕ್ಕಿಂತ ಹೆಚ್ಚಿನ ಖರೀದಿಗೆ) ಮತ್ತು ಆಯ್ದ ಗ್ಯಾಲಕ್ಸಿ ಸಾಧನಗಳ ಜೊತೆಗೆ ಗ್ಯಾಲಕ್ಸಿ ಬಡ್ಸ್ ಎಫ್ಇ ಅನ್ನು ರೂ. 2999ಕ್ಕೆ ಲಭ್ಯವಾಗಿಸುವಂತಹ ಕೊಡುಗೆ ಪಡೆಯಲಿದ್ದಾರೆ.

ಬೆಂಗಳೂರು: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಕಂಪನಿಯಾದ ಸ್ಯಾಮ್‌ಸಂಗ್ ಬೆಂಗಳೂರಿನ ಮಾಲ್ ಆಫ್ ಏಷ್ಯಾದಲ್ಲಿ ಮತ್ತೊಂದು ಹೊಸ ಪ್ರೀಮಿಯಂ ಎಕ್ಸ್‌ಪೀರಿಯನ್ಸ್ ಸ್ಟೋರ್ ಅನ್ನು ಉದ್ಘಾಟಿಸಿದೆ. ಮಾರಾಟ ಮತ್ತು ಸರ್ವೀಸ್ ಒದಗಿಸುವ ಒನ್ ಸ್ಟಾಪ್ ಮಳಿಗೆಯಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಈ ಮಳಿಗೆ ತನ್ನ ಕನೆಕ್ಟೆಡ್ ಡಿವೈಸ್ ಸಿಸ್ಟಮ್ ಆದ ಸ್ಯಾಮ್‌ಸಂಗ್‌ಸ್ಮಾರ್ಟ್‌ಥಿಂಗ್ಸ್‌ ಪ್ರದರ್ಶಿಸುವುದು ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಅವಕಾಶ ಒದಗಿಸಿ ಗ್ರಾಹಕರಿಗೆ ವೈವಿಧ್ಯಮಯ ಅನುಭವಗಳನ್ನು ನೀಡುತ್ತದೆ.

ಹೊಸ ಪ್ರೀಮಿಯಂ ಎಕ್ಸ್‌ಪೀರಿಯೆನ್ಸ್ ಸ್ಟೋರ್, ಮಾಲ್ ಆಫ್ ಏಷ್ಯಾದಲ್ಲಿ 1200 ಚದರ ಅಡಿಗಳಷ್ಟು ವಿಸ್ತಾರವಾದ ಮಳಿಗೆಯಾಗಿದೆ. ಇಲ್ಲಿ ಸ್ಯಾಮ್‌ಸಂಗ್ ಉತ್ಪನ್ನಗಳು ಮತ್ತು ಸರ್ವೀಸ್ ಗಳ ಸಮಗ್ರ ಶ್ರೇಣಿಯನ್ನು ಒದಗಿಸುವುದಲ್ಲದೆ ಬೆಂಗಳೂರಿನ ಉತ್ತರ ಭಾಗದ ಗ್ರಾಹಕರ ಅಗತ್ಯತೆಗಳನ್ನು ಪೂರೈಸಲಾಗುತ್ತದೆ.

ಮಳಿಗೆಗೆ ಬರುವ ಗ್ರಾಹಕರು ಉಡುಗೊರೆಗಳು, 2ಎಕ್ಸ್ ಲಾಯಲ್ಟಿ ಪಾಯಿಂಟ್‌ಗಳು (ರೂ.15000ಕ್ಕಿಂತ ಹೆಚ್ಚಿನ ಎಲ್ಲಾ ಖರೀದಿಗೆ) ಮತ್ತು ಆಯ್ದ ಗ್ಯಾಲಕ್ಸಿ ಸಾಧನಗಳೊಂದಿಗೆ ಗ್ಯಾಲಕ್ಸಿ ಬಡ್ಸ್ ಎಫ್ಇ ರೂ.2999ನಲ್ಲಿ ಪಡೆಯುವಂತಹ ಸೀಮಿತ ಅವಧಿಯ ಕೊಡುಗೆ ಪಡೆಯುತ್ತಾರೆ. ರೂ. 20000 ಮೌಲ್ಯದ ಸ್ಯಾಮ್‌ಸಂಗ್ ಉತ್ಪನ್ನಗಳ ಖರೀದಿ ಮಾಡುವ ಮೊದಲ 200 ಗ್ರಾಹಕರು ಆರಂಭಿಕ ಕೊಡುಗೆಗಳನ್ನು ಪಡೆಯುತ್ತಾರೆ. ಜೊತೆಗೆ, ಗ್ರಾಹಕರು ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಸ್ಮಾರ್ಟ್‌ವಾಚ್‌ಗಳ ಮೇಲೆ 22.5% ಕ್ಯಾಶ್‌ಬ್ಯಾಕ್, 10%ವರೆಗಿನ ವಿದ್ಯಾರ್ಥಿ ರಿಯಾಯಿತಿ ಮತ್ತು ಆಯ್ದ ವಸ್ತುಗಳಲ್ಲಿ ರೂ.22000ವರೆಗಿನ ಹೆಚ್ಚುವರಿ ಪ್ರಯೋಜನಗಳನ್ನು ಪಡೆಯಲಿದ್ದಾರೆ.

ಮಳಿಗೆಯಲ್ಲಿ ಸ್ಯಾಮ್‌ಸಂಗ್ ತನ್ನ ‘ಲರ್ನ್@ಸ್ಯಾಮ್‌ಸಂಗ್’ ಕಾರ್ಯಕ್ರಮದ ಭಾಗವಾಗಿ ಟೆಕ್-ಸ್ಯಾವಿ ಗ್ರಾಹಕರಿಗೆ ವಿಶೇಷವಾಗಿ ಜೆನ್ ಝಡ್ ಮತ್ತು ಮಿಲೇನಿಯಲ್ಸ್‌ಗಾಗಿ ವಿವಿಧ ಗ್ಯಾಲಕ್ಸಿ ವರ್ಕ್‌ಶಾಪ್‌ಗಳನ್ನು ಆಯೋಜಿಸುತ್ತದೆ. ಗ್ರಾಹಕರ ಆಸಕ್ತಿಗಳ ಆದ್ಯತೆಯ ಕುರಿತಾದ ಎಐ ಶಿಕ್ಷಣ ಕಾರ್ಯಾಗಾರಗಳನ್ನು ನಡೆಸಲಾಗುತ್ತದೆ.

“ನಗರದಲ್ಲಿರುವ ನಮ್ಮ ಪ್ರಮುಖ ಎಕ್ಸ್ ಪೀರಿಯನ್ಸ್ ಸೆಂಟರ್ ಆಗಿರುವ ಸ್ಯಾಮ್‌ಸಂಗ್ ಒಪೇರಾ ಹೌಸ್‌ಗೆ ಆರು ವರ್ಷಗಳು ಸಂದಿವೆ. ಅದಕ್ಕೆ ಸಿಕ್ಕ ಪ್ರತಿಕ್ರಿಯೆಯನ್ನು ಗಮನಿಸಿ ಬೆಂಗಳೂರಿನ ಮಾಲ್ ಆಫ್ ಏಷ್ಯಾದಲ್ಲಿ ಮತ್ತೊಂದು ಪ್ರೀಮಿಯಂ ಎಕ್ಸ್‌ಪೀರಿಯೆನ್ಸ್ ಸ್ಟೋರ್ ಅನ್ನು ಪರಿಚಯಿಸಲು ನಾವು ಸಂತೋಷಪಡುತ್ತೇವೆ. ನಾವು ಇಲ್ಲಿ ಗ್ರಾಹಕರಿಗೆ ಅಪೂರ್ವ ಅನುಭವವನ್ನು ಒದಗಿಸಲಿದ್ದೇವೆ. ಪ್ರೊಡಕ್ಟಿವಿಟಿ ಮಾಸ್ಟರ್‌ಕ್ಲಾಸ್, ಪೋಟ್ರೇಟ್ ಫೋಟೋಗ್ರಫಿ, ನೈಟೋಗ್ರಫಿ ಮತ್ತು ಫೋಟೋ ಎಡಿಟಿಂಗ್ ಸೆಷನ್‌ಗಳು ಸೇರಿದಂತೆ ವಿವಿಧ ಆಸಕ್ತಿಕರ ವಿಷಯಗಳನ್ನು ‘ಲರ್ನ್ @ ಸ್ಯಾಮ್‌ಸಂಗ್’ ಕಾರ್ಯಾಗಾರಗಳನ್ ಮೂಲಕ ತಿಳಿಸಿಕೊಡುತ್ತೇವೆ. ನಮ್ಮ ಹೊಸ ಮಳಿಗೆಯು ಬೆಂಗಳೂರಿನ ವೈವಿಧ್ಯಮಯ ಗ್ರಾಹಕರ ಅಗತ್ಯಗಳನ್ನು ಪೂರೈಸಲು ಕಾರ್ಯನಿರ್ವಹಿಸುತ್ತದೆ” ಎಂದು ಸುಮಿತ್ ವಾಲಿಯಾ, ಉಪಾಧ್ಯಕ್ಷರು, D2C ವ್ಯಾಪಾರ, ಸ್ಯಾಮ್ಸಂಗ್ ಇಂಡಿಯಾ ಹೇಳಿದರು.

ಹೊಸದಾಗಿ ಪ್ರಾರಂಭಿಸಲಾದ ಮಳಿಗೆಯು ಸ್ಮಾರ್ಟ್‌ಥಿಂಗ್ಸ್ ಸ್ಟೇಷನ್, ಗೇಮಿಂಗ್ ಝೋನ್, ಆಡಿಯೋ-ವಿಶುವಲ್ ಝೋನ್ ಜೊತೆಗೆ ವಿಶೇಷ ಅನುಭವ ಒದಗಿಸುತ್ತದೆ. ಇತ್ತೀಚೆಗೆ ಬಿಡುಗಡೆಯಾದ ಪ್ರಮುಖ ಸ್ಮಾರ್ಟ್‌ಫೋನ್ ಸರಣಿಗಳಾದ ಗ್ಯಾಲಕ್ಸಿ ಎಸ್24, ಗ್ಯಾಲಕ್ಸಿಝಡ್ ಫೋಲ್ಡ್5 ಮತ್ತು ಗ್ಯಾಲಕ್ಸಿ ಝಡ್ ಫ್ಲಿಪ್ 5 ಸೇರಿದಂತೆ ಸ್ಮಾರ್ಟ್ ಫೋನ್ ಮತ್ತು ವೇರೇಬಲ್ ಸಾಧನಗಳ ಸರಣಿಯನ್ನು ಪ್ರದರ್ಶಿಸುತ್ತದೆ.

ಮಾಲ್ ಆಫ್ ಏಷ್ಯಾ ಮಳಿಗೆಯಲ್ಲಿ ಗ್ರಾಹಕರು ಸ್ಯಾಮ್‌ಸಂಗ್‌ನ ಸ್ಟೋರ್ + ಮೂಲಕ ಫಿಜಿಟಲ್ ಎಕ್ಸ್ ಪೀರಿಯನ್ಸ್ ಪಡೆಯಬಹುದು. ಸ್ಟೋರ್ + ಮೂಲಕ ಗ್ರಾಹಕರು ಆನ್‌ಲೈನ್‌ನಲ್ಲಿ, ಮಳಿಗೆಯಲ್ಲಿ ಅಥವಾ ಡಿಜಿಟಲ್ ಕಿಯೋಸ್ಕ್ ಬಳಸಿ ಸ್ಯಾಮ್‌ಸಂಗ್ ಉತ್ಪನ್ನಗಳ 1,200ಕ್ಕೂ ಹೆಚ್ಚು ಆಯ್ಕೆಗಳನ್ನು ಬ್ರೌಸ್ ಮಾಡಬಹುದಾಗಿದೆ. ಗ್ರಾಹಕರು ಅಂಗಡಿಯಿಂದ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಬಹುದು ಮತ್ತು ಉತ್ಪನ್ನಗಳನ್ನು ನೇರವಾಗಿ ಮನೆಗೆ ಡೆಲಿವರಿ ಪಡೆಯಬಹುದು.

ಗ್ರಾಹಕರು ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಸ್ಮಾರ್ಟ್‌ವಾಚ್‌ಗಳಿಗಾಗಿ ಸ್ಯಾಮ್‌ಸಂಗ್‌ನ ಡಿಜಿಟಲ್ ಲೆಂಡಿಂಗ್ ಪ್ಲಾಟ್‌ಫಾರ್ಮ್ (ಸಾಲದ ವೇದಿಕೆ) ಸ್ಯಾಮ್‌ಸಂಗ್ ಫೈನಾನ್ಸ್+ ಮತ್ತು ಸ್ಯಾಮ್‌ಸಂಗ್‌ನ ಡಿವೈಸ್ ಕೇರ್ ಪ್ಲಾನ್ ಸ್ಯಾಮ್‌ಸಂಗ್ ಕೇರ್+ ನೆರವನ್ನು ಮಳಿಗೆಯಲ್ಲಿ ಪಡೆಯಬಹುದು.