ಬೆಂಗಳೂರು : ಇಂಧನ ಇಲಾಖೆಯ ಸಾಫ್ಟ್ ವೇರ್ ವ್ಯವಸ್ಥೆ ಉನ್ನತೀಕರಣ ಪ್ರಯುಕ್ತ ಸ್ಥಗಿತಗೊಂಡಿದ್ದ ವಿದ್ಯುತ್ ಸರಬರಾಜು ಕಂಪನಿಗಳ (ಎಸ್ಕಾಂ) ಆನ್ ಲೈನ್ ಬಿಲ್ ಪಾವತಿ ಸೇರಿ ವಿವಿಧ ಸೇವೆಗಳು ಪುನಾರಂಭಗೊಂಡಿವೆ.
ಸಾಫ್ಟ್ ವೇಲ್ ಅಪ್ ಡೇಟ್ ಕಾರಣದಿಂದಾಗಿ ಎಸ್ಕಾಂ ಆನ್ ಲೈನ್ ಸೇವೆ ಸ್ಥಗಿತಗೊಂಡಿತ್ತು. ಈ ಹಿನ್ನಲೆಯಲ್ಲಿ ವಿದ್ಯುತ್ ಗ್ರಾಹಕರು ಬಿಲ್ ಪಾವತಿ ಮಾಡಲು ಸಾಧ್ಯವಾಗಿರಲಿಲ್ಲ.
ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ಉನ್ನತೀಕರಣದ ಸಲುವಾಗಿ ಮಾರ್ಚ್ 10 ರಿಂದ 19ರವರೆಗೆ ಎಲ್ಲಾ 5 ಎಸ್ಕಾಂಗಳ ನಗರ ಪ್ರದೇಶಗಳ (RAPDRP) ಸ್ಥಗಿತಗೊಂಡಿದ್ದ ಆನ್ ಲೈನ್ ವಿದ್ಯುತ್ ಸೇವೆಗಳು ಇದೀಗ ಪುನಾರಂಭಗೊಂಡಿದ್ದು, ಈ ತಿಂಗಳ 30ರೊಳಗೆ ಎಲ್ಲಾ ಆನ್ ಲೈನ್ ಸೇವೆಗಳು ಯಥಾಸ್ಥಿತಿಗೆ ಬರಲಿವೆ ಎಂದು ತಿಳಿಸಿದೆ.
ಸಾಫ್ಟ್ ವೇರ್ ಉನ್ನತೀಕರಣ ಸಂದರ್ಭದಲ್ಲಿ ವಿದ್ಯುತ್ ಬಿಲ್ ವಿಳಂಬ ಪಾವತಿಗೆ ಬಡ್ಡಿ ವಿಧಿಸುವುದಿಲ್ಲ ಹಾಗೂ ಈ ಸಂದರ್ಭದಲ್ಲಿ ಬಿಲ್ ಪಾವತಿಸ ದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಆನ್ ಲೈನ್ ಉನ್ನತೀಕರಣ ಸಂದರ್ಭದಲ್ಲಿ ವಿದ್ಯುತ್ ಬಿಲ್ ಪಾವತಿ, ಹೊಸ ಸಂಪರ್ಕಕ್ಕಾಗಿ ಆನ್‌ಲೈನ್ ಅರ್ಜಿ ಸಲ್ಲಿಕೆ, ಹೆಸರು ಮತ್ತು ಜಕಾತಿ ಬದಲಾವಣೆ ಸೇರಿದಂತೆ ಯಾವುದೇ ಆನ್ ಲೈನ್ ಸೇವೆಗಳು ಗ್ರಾಹಕರಿಗೆ ಲಭ್ಯವಿರಲಿಲ್ಲ.
ಇದನ್ನು ಹಂತ ಹಂತವಾಗಿ ಸರಿಪಡಿಸುವ ಕೆಲಸ ನಡೆಯುತ್ತಿದ್ದು, ಮಾರ್ಚ್ 30ರೊಳಗೆ ಆನ್ ಲೈನ್ ವಿದ್ಯುತ್ ಸೇವೆಗಳು ಯಥಾಸ್ಥಿತಿಯಲ್ಲಿ ಕಾರ್ಯ ನಿರ್ಹಹಿಸಲಿದೆ ಎಂದು ಇಂಧನ ಇಲಾಖೆ ತಿಳಿಸಿದೆ.