Saturday, 14th December 2024

ಯೂಟ್ಯೂಬರ್ ಎಲ್ವಿಶ್ ಯಾದವ್‌’ಗೆ ಬಿಗ್ ರಿಲೀಫ್

ಗುರುಗ್ರಾಮ್: ಹಾವಿನ ವಿಷವನ್ನು ಖರೀದಿಸಿ ಮಾರಾಟ ಮಾಡಿದ ಪ್ರಕರಣದಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಅಡಿಯಲ್ಲಿ ಯೂಟ್ಯೂಬರ್ ಮತ್ತು ಬಿಗ್ ಬಾಸ್ ಒಟಿಟಿ 2ವಿಜೇತ ಎಲ್ವಿಶ್ ಯಾದವ್‌ ಗುರುಗ್ರಾಮ್ ನ್ಯಾಯಾಲಯದಿಂದ ಬಿಗ್ ರಿಲೀಫ್ ಸಿಕ್ಕಿದೆ.

ಅವರನ್ನು ಮಾರ್ಚ್ 17 ರಂದು ಬಂಧಿಸಲಾಗಿತ್ತು.

ಎನ್‌ಡಿಪಿಎಸ್‌ನ ಕೆಳ ನ್ಯಾಯಾಲಯದಲ್ಲಿ ಜಾಮೀನು ವಿಚಾರಣೆ ನಡೆಯಿತು. ನೋಯ್ದಾ ಪೊಲೀಸರು ಎಲ್ವಿಶ್ ಯಾದವ್ ಅವರನ್ನು ಎನ್‌ಡಿಪಿಎಸ್ ಕಾಯ್ದೆ ಮತ್ತು ವನ್ಯಜೀವಿ ರಕ್ಷಣೆಯ ಅಡಿಯಲ್ಲಿ ಜೈಲಿಗೆ ಕಳುಹಿಸಿದ್ದರು.

ಎಲ್ವಿಶ್ ಹಾವಿನ ವಿಷ ಕಳ್ಳಸಾಗಣೆ ಪ್ರಕರಣದಲ್ಲಿ ಗೌತಮ್ ಬುದ್ಧ ನಗರದ ಬಕ್ಸರ್ ಜೈಲಿನಲ್ಲಿ ಬಂಧಿಯಾಗಿದ್ದರು. ಮಾ.17 ರಂದು, ಎಲ್ವಿಶ್ ಮತ್ತು ಇತರ ಐವರನ್ನು ಪೊಲೀಸರು ಬಂಧಿಸಿದರು. ಇದೇ ವೇಳೆ ಪೊಲೀಸರು ಬ್ಯಾಂಕ್ವೆಟ್ ಹಾಲ್ ಮೇಲೆ ದಾಳಿ ನಡೆಸಿ 4 ಹಾವು ಮೋಡಿ ಮಾಡುವವರು ಸೇರಿದಂತೆ 5 ಜನರನ್ನು ಬಂಧಿಸಿ 9 ಹಾವುಗಳು ಮತ್ತು ಅವುಗಳ ವಿಷವನ್ನು ವಶಪಡಿಸಿಕೊಂಡಿದ್ದಾರೆ