ನವದೆಹಲಿ: ಪಾಕಿಸ್ತಾನದ ವಿರುದ್ಧ ಪದಾರ್ಪಣೆ ಮಾಡಿದ ಸುಮಾರು ಎರಡು ದಶಕಗಳ ನಂತರ, ಭಾರತದ ನಾಯಕ ಸುನಿಲ್ ಚೆಟ್ರಿ ಅವರು ಮಂಗಳವಾರ ಗುವಾಹಟಿಯಲ್ಲಿ ಅಫ್ಗಾನಿಸ್ತಾನ ವಿರುದ್ಧದ ವಿಶ್ವಕಪ್ ಅರ್ಹತಾ ಟೂರ್ನಿಯಲ್ಲಿ ತಮ್ಮ 150 ನೇ ಅಂತರರಾಷ್ಟ್ರೀಯ ಪಂದ್ಯ ಆಡುತ್ತಿದ್ದಾರೆ.
2026ರ ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನ ಎರಡನೇ ಸುತ್ತಿನಲ್ಲಿ ಭಾರತವು ಅಫ್ಗಾನಿಸ್ತಾನ ವಿರುದ್ಧ ಗೋಲ್ ರಹಿತ ಡ್ರಾ ಸಾಧಿಸಿತು.
ಈ ಮೂಲಕ ಪೋರ್ಚುಗೀಸ್ ಸೂಪರ್ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ (205) ಅಗ್ರಸ್ಥಾನದಲ್ಲಿದ್ದರೆ, 150 ಅಥವಾ ಅದಕ್ಕಿಂತ ಹೆಚ್ಚು ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ ವಿಶ್ವದ 40ನೇ ಆಟಗಾರ ಎಂಬ ಹೆಗ್ಗಳಿಕೆಗೆ ಚೆಟ್ರಿ ಪಾತ್ರರಾಗಲಿದ್ದಾರೆ.
ಈ ಸಂದರ್ಭದಲ್ಲಿ ಚೆಟ್ರಿ ಅವರನ್ನು ಸನ್ಮಾನಿಸುವುದಾಗಿ ಎಐಎಫ್‌ಎಫ್ ಘೋಷಿಸಿದೆ.
2005ರ ಜೂನ್ 12ರಂದು ಕ್ವೆಟ್ಟಾದಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಸೌಹಾರ್ದ ಪಂದ್ಯದಲ್ಲಿ ಚೆಟ್ರಿ ಮೊದಲ ಬಾರಿಗೆ ರಾಷ್ಟ್ರೀಯ ತಂಡದ ಪರ ಆಡಿದ್ದರು. 1-1 ರಿಂದ ಸಮಬಲ ಸಾಧಿಸಿದ್ದ ಪಂದ್ಯದಲ್ಲಿ ಅವರು ಒಂದು ಗೋಲು ಗಳಿಸಿದ್ದರು. ಈವರೆಗೂ 149 ಪಂದ್ಯಗಳನ್ನು ಆಡಿ, ದಾಖಲೆಯ 93 ಗೋಲುಗಳನ್ನು ಗಳಿಸಿದ್ದಾರೆ.
39 ವರ್ಷದ ಆಟಗಾರ ಬ್ಲೂ ಟೈಗರ್ಸ್ ಪರ ಪ್ರಥಮ, 25, 50, 75, 100 ಮತ್ತು 125ನೇ ಪಂದ್ಯಗಳಲ್ಲಿ ಕನಿಷ್ಠ ಒಂದು ಗೋಲು ಗಳಿಸಿದ ವಿಶಿಷ್ಟ ದಾಖಲೆ ಹೊಂದಿದ್ದಾರೆ.