ನವದೆಹಲಿ: ನವೆಂಬರ್ ತಿಂಗಳ 4ರಿಂದ 9ರವರೆಗೆ ಯುಎಇನಲ್ಲಿ ನಡೆಯಲಿರುವ “ಮಹಿಳಾ ಕ್ರಿಕೆಟ್ ಟಿ20 ಚಾಲೆಂಜ್’ ಪಂದ್ಯಾ ವಳಿಗಾಗಿ, ಸೂಪರ್ ನೋವಾಸ್, ಟ್ರಾಯ್‌ಬ್ಲೇಸರ್ಸ್ ಹಾಗೂ ವೆಲಾಸಿಟಿ ಎಂಬ ತಂಡಗಳನ್ನು ಬಿಸಿಸಿಐ ಪ್ರಕಟಿಸಿದೆ.
ಹರ್ಮನ್ ಪ್ರೀತ್ ಕೌರ್, ಮಿಥಾಲಿ ರಾಜ್ ಮತ್ತು ಸ್ಮೃತಿ ಮಂಧನಾ ಕ್ರಮವಾಗಿ ತಂಡಗಳ ನಾಯ ಕತ್ವ ವಹಿಸಲಿದ್ದಾರೆ. ಈ ಸಮಯದಲ್ಲಿ ಮಹಿಳಾ ಬಿಬಿಎಲ್ ನಡೆಯುವ ಕಾರಣ ಈ ಬಾರಿ ಆಸೀಸ್ ವನಿತೆಯರು ಕೂಟದಿಂದ ತಪ್ಪಿಸಿಕೊಳ್ಳಲಿದ್ದಾರೆ.
ತಂಡಗಳು: ಸೂಪರ್‌ನೋವಾಸ್: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಜೆಮಿಮಾ ರೊಡ್ರಿಗಸ್, ಚಮರಿ ಅಟಪಟ್ಟು, ಪ್ರಿಯಾ, ಅನುಜಾ, ರಾಧಾ, ತಾನಿಯಾ, ಶಶಿಕಲಾ ಸಿರಿವರ್ಧನೆ, ಪೂನಮ್ ಯಾದವ್, ಶಕೇರಾ, ಅರುಂಧತಿ, ಪೂಜಾ, ಮುಸ್ಕಾನ್.
ಟ್ರಾಯ್‌ಬ್ಲೇಸರ್ಸ್: ಸ್ಮತಿ ಮಂದಾನಾ (ನಾಯಕಿ), ದೀಪ್ತಿ ಶರ್ಮಾ, ಪುನಮ್ ರವೂತ್, ರಿಚಾ ಘೋಷ್, ಹೇಮಲತಾ, ನುಝಾಟ್ ಪರ್ವಿನ್, ರಾಜೇಶ್ವರಿ ಗಾಯಕ್ವಾಡ್, ಹರ್ಲೀನ್ ಡಿಯೋಲ್, ಜುಲಾನ್ ಗೋಸ್ವಾಮಿ, ಸಿಮ್ರನ್ ದಿಲ್ ಬಹದ್ದೂರ್, ಸಲ್ಮಾ ಖಟೂನ್, ಸೋಫಿ ಎಕ್ಲೆಸೊನ್, ನಠ್ಟಂಕನ್ ಚಾಂಥಮ್, ದಿಯಾಂದ್ರ ಡೊಟಿನ್, ಕಾಶ್ವಿ ಗೌತಮ್.
ವೆಲಾಸಿಟಿ: ಮಿಥಾಲಿ ರಾಜ್ (ನಾಯಕಿ), ವೇದಾಕೃಷ್ಣಮೂರ್ತಿ, ಶೆಫಾಲಿ, ಸುಷ್ಮಾ ವರ್ಮಾ, ಏಕ್ತಾ ಬಿಶ್ಟ್, ಮಾನ್ಸಿ ಜೋಶಿ, ಶಿಖಾ, ದೇವಿಕಾ, ಸುಶ್ರೀ ದಿಬ್ಯದರ್ಶಿನಿ, ಮನಾಲಿ ದಕ್ಷಿಣಿ, ಲೇಕ್ ಕ್ಯಾಸ್ಪೆರೆಟ್, ಡೇನಿಯಲ್ ವ್ಯಾಟ್, ಸುನೆ, ಜಹಾರನಾ, ಅನಘಾ.