Saturday, 14th December 2024

ಮಂದಿರ ನಿರ್ಮಾಣವಾದ ಬಳಿಕ ಮೊದಲ ಬಾರಿ ರಾಮನವಮಿ ಆಚರಣೆ

ಅಯೋಧ್ಯೆ: ಅಯೋಧ್ಯೆ ರಾಮಮಂದಿರದಲ್ಲಿ ರಾಮಲಲ್ಲಾನ ಮೇಲೆ ಸೂರ್ಯರಶ್ಮಿ ಸ್ಪರ್ಶಿಸಿದೆ.

500 ವರ್ಷಗಳ ಹೋರಾಟದ ಫಲವಾಗಿ ಜ.22ರಂದು ಮಂದಿರ ನಿರ್ಮಾಣವಾಗಿ ಬಾಲ ರಾಮನ ಪ್ರತಿಷ್ಠೆ ಕೂಡ ನಡೆದಿತ್ತು. ಇದೀಗ ರಾಮ ಮಂದಿರ ನಿರ್ಮಾಣವಾದ ನಂತರ ಮೊದಲ ರಾಮ ನವಮಿಯನ್ನು ಆಚರಣೆ ಮಾಡಲಾಗಿದೆ. ಈ ಸಮಯದಲ್ಲಿ ಬಾಲ ರಾಮನ ಮೇಲೆ ಸೂರ್ಯರಶ್ಮಿಯ ಸ್ಪರ್ಶವಾಗಿದೆ.

ಸೂರ್ಯರಶ್ಮಿ ನೇರವಾಗಿ ರಾಮ ಹಣೆಗೆ ಬೀಳುವಂತೆ ಮಾಡಲು ಈ ಹಿಂದೆ ವಿಜ್ಞಾನಿಗಳು ಒಂದು ಪ್ರಯೋಗ ಕೂಡ ನಡೆಸಿದರು. ಇದೀಗ ಈ ವಿಧಾನ ಯಶಸ್ವಿಯಾಗಿದೆ. ಜನವರಿ 22 ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ರಾಮನ ವಿಗ್ರಹವನ್ನು ಪ್ರಾಣ ಪ್ರತಿಷ್ಠೆಯನ್ನು ಮಾಡಲಾಗಿತ್ತು.

ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (CSIR)-ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್ಸ್ಟಿಟ್ಯೂಟ್ (CBRI), ರೂರ್ಕಿಯ ಹಿರಿಯ ವಿಜ್ಞಾನಿಗಳ ಪ್ರಕಾರ, ಯೋಜಿತ ಈ ಸೂರ್ಯರಶ್ಮಿಯು 58 ಮಿ.ಮೀ. ಗಾತ್ರವನ್ನು ಹೊಂದಿದ್ದು, ರಾಮ ಲಲ್ಲಾನ ಹಣೆಯ ಮೇಲೆ ತಿಲಕದಂತೆ ಪ್ರಜ್ವಲಿಸಲಿದೆ. ಇದು ಸುಮಾರು ಮೂರರಿಂದ ಮೂರೂವರೆ ನಿಮಿಷಗಳು ಮೂಡಲಿದೆ. ಎರಡು ನಿಮಿಷಗಳ ಪೂರ್ಣ ಪ್ರಕಾಶ ರಾಮನ ಮೇಲೆ ಬೀಳಲಿದೆ ಎಂದು ಹೇಳಿದರು.

ಅಯೋದ್ಯೆಯಲ್ಲಿ ಮಾಡಿರುವ ಸೂರ್ಯರಶ್ಮಿ ಪ್ರಯೋಗವನ್ನು ಈಗಾಗಲೇ ಕೆಲವು ಜೈನ ದೇವಾಲಯಗಳಲ್ಲಿ ಮತ್ತು ಒರಿಸ್ಸಾ ರಾಜ್ಯದಲ್ಲಿರುವ ಕೊನಾರ್ಕ್‌ ಸೂರ್ಯ ದೇವಾಲಯದಲ್ಲಿಯೂ ಈ ಪ್ರಯೋಗ ನಡೆದಿದೆ.