ಪ್ರತಿಫಲನ
ಎಸ್.ಜಿ.ಹೆಗಡೆ
ದೇಶದ ವಿವಿಧ ರಾಜ್ಯಗಳ ದ್ವಿತೀಯ ಪಿಯುಸಿ ಪರೀಕ್ಷೆಯ ಪರಿಣಾಮ ಪ್ರಕಟವಾಗಿವೆ, ಕರ್ನಾಟಕದಲ್ಲಿಯೂ ೧೨ನೇ ತರಗತಿಯ ಸ್ಟೇಟ್ ಬೋರ್ಡ್ ಪರೀಕ್ಷೆಯ ಫಲಿತಾಂಶ ಇತ್ತೀಚೆಗೆ ಪ್ರಕಟವಾಯಿತು. ಆರು ಲಕ್ಷಕ್ಕೂ ಹೆಚ್ಚು ಮಂದಿ ಪರೀಕ್ಷೆ ಬರೆದಿದ್ದರು.
ನಮ್ಮ ನೆರೆಯ ತಮಿಳುನಾಡಿನಲ್ಲಿ ಸುಮಾರು ೮ಲಕ್ಷ ಮತ್ತು ಮಹಾರಾಷ್ಟ್ರದಲ್ಲಿ ಸುಮಾರು ೧೫ ಲಕ್ಷ ವಿದ್ಯಾರ್ಥಿಗಳು ಹನ್ನೆರಡನೇ ಈಯತ್ತೆಯ ಪರೀಕ್ಷೆಗೆ ಕುಳಿತಿದ್ದಾರೆ.
ಅಂದರೆ ದೇಶದಲ್ಲಿ ಸುಮಾರು ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ೧೨ನೇ ತರಗತಿಗೆ ರಾಜ್ಯಗಳಿಂದ, ಸುಮಾರು ೩೮ ಲಕ್ಷ ವಿದ್ಯಾರ್ಥಿಗಳು ಸಿಬಿಎಸ್‌ಇ ಮೂಲಕ ಪರೀಕ್ಷೆಗಿಳಿದಿದ್ದು ಎಲ್ಲ ಸಿಲಬಸ್ ಸೇರಿ ಪರೀಕ್ಷೆಗೆ ಕುಳಿತವರ ಸಂಖ್ಯೆ ಅಂದಾಜು ೧.೫ ಕೋಟಿ ಯಷ್ಟಿರಬಹುದು. ಅಂದರೆ ನಮ್ಮ ಜನಸಂಖ್ಯೆಯ ಒಟ್ಟೂ ೧ ಪ್ರತಿಶತದಷ್ಟು ವಿದ್ಯಾರ್ಥಿಗಳು ಪ್ರತಿವರ್ಷ ೧೨ನೇ ತರಗತಿ ಪ್ರವೇಶಿಸುತ್ತಾರೆ.
ಅಷ್ಟೆಲ್ಲ ಭಾರೀ ಸಂಖ್ಯೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ೧೨ನೇ ತರಗತಿಯು ವಿದ್ಯಾರ್ಥಿ ಬದುಕಿನ ಮಹತ್ವದ ಘಟ್ಟ.
ಈ ಬಾರಿ ರಾಜ್ಯದಿಂದ ಪರೀಕ್ಷೆಗೆ ಕುಳಿತಿದ್ದ ಸುಮಾರು ೬.೮೧ ಲಕ್ಷ ವಿದ್ಯಾರ್ಥಿಗಳಲ್ಲಿ ೫.೫೩ ಲಕ್ಷ ಉತ್ತೀರ್ಣರಾಗಿದ್ದು ಉತ್ತೀರ್ಣ ತೆಯ ಫಲಿತಾಂಶವು ೮೧.೧೫ ಬಂದಿರುವುದು ಹೊಸ ದಾಖಲೆ. ಇಲ್ಲಿಯ ತನಕದ ಉತ್ತಮ ೭೪.೬ ಪ್ರತಿಶತ (ಕೋವಿಡ್ ಕಾಲದ ಸಾಮೂಹಿಕ ಪರಿಣಾಮ ಹೊರತುಪಡಿಸಿ) ಸಂಖ್ಯೆಯನ್ನು ಹೊಸ ದಾಖಲೆಯು ಹಿಂದೆ ಹಾಕಿದೆ.
ಉತ್ತೀರ್ಣತೆಯ ಪರಿಣಾಮವು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದು ವಿಶೇಷ ಸಂಗತಿ. ಸಂಬಂಧಪಟ್ಟ ಎಲ್ಲ ವಿದ್ಯಾಸಂಸ್ಥೆಗಳು ಮತ್ತು ವಿದ್ಯಾರ್ಥಿಗಳ ಗಮನೀಯ ಸಾಧನೆಯು ಅಭಿನಂದನಾರ್ಹ. ಇನ್ನೊಂದು ಮಹತ್ವದ ಸಂಗತಿ ಯೆಂದರೆ ಇದೇ ಮೊದಲ ಬಾರಿಗೆ ೧೨ನೇ ತರಗತಿಯ ವಾರ್ಷಿಕ ಪರೀಕ್ಷೆಯನ್ನು ವರ್ಷದಲ್ಲಿ ಮೂರು ಬಾರಿ ಬರೆಯುವ ಸೌಲಭ್ಯ ಕಲ್ಪಿಸಲಾಗಿದೆ. ಪರೀಕ್ಷೆ-೧ ರಲ್ಲಿ ಉತ್ತೀರ್ಣರಾಗ ದವರು ಅಥವಾ ನಿರೀಕ್ಷಿತ ಪರಿಣಾಮ ಸಿಗದವರು ಅಥವಾ ಹಾಜರಾಗದವರು ಮಿಕ್ಕ ಪರೀಕ್ಷೆ ಬರೆಯ ಬಹುದು.
ಮೂರು ಪರೀಕ್ಷೆ ಸೇರಿ ಒಟ್ಟಾರೆ ಅಥವಾ ವಿಷಯವಾರು ಉತ್ತಮ ಫಲಿತಾಂಶವನ್ನು ಆಯ್ಕೆ ಮಾಡಿಕೊಳ್ಳುವ ವಿಶೇಷ ಅವಕಾಶ ವಿಧ್ಯಾರ್ಥಿಗಳದ್ದಾಗಿದೆ. ಅಂತಹ ಅವಕಾಶಗಳನ್ನು ಪಡೆದುಕೊಳ್ಳುವ ವಿಧಾನವನ್ನು ಈಗಾಗಲೇ ನೀಡಲಾಗಿದೆ. ಎರಡನೆಯ ಪರೀಕ್ಷೆಯ ಫಲಿತಾಂಶವನ್ನೂ ಸಿಇಟಿ ಆಯ್ಕೆಯಲ್ಲಿ ಪರಿಗಣಿಸಲಾಗುವುದೆಂದು ತಿಳಿದಿದೆ. ೧೨ನೇ ತರಗತಿಯ ಮಹತ್ವದ ಹಂತ ದಲ್ಲಿ ಇಂತಹ ಸೌಲಭ್ಯ ನೀಡಿದ ಕ್ರಮ ನಿಜಕ್ಕೂ ಶ್ಲಾಘನೀಯ. ವರ್ಷದಲ್ಲಿ ಒಂದೇ ಪರೀಕ್ಷೆಯ ಒಂದೇ ದಿನದ ವೈಫಲ್ಯ ದಿಂದ ವಿದ್ಯಾರ್ಥಿಗೆ ಇಂತಹ ಮಹತ್ವದ ಸಂದರ್ಭದಲ್ಲಿ ಹಿನ್ನೆಡೆಯಾಗದಂತೆ ರಕ್ಷಿಸುವ ಕ್ರಮವು ವಿದ್ಯಾರ್ಥಿಗಳ ಆತ್ಮವಿಶ್ವಾಸ ವನ್ನು ಹೆಚ್ಚಿಸುವತ್ತ ಯೋಗ್ಯ ಹೆಜ್ಜೆ.
ದ್ವಿತೀಯ ಪಿಯುಸಿ ಎಂದರೆ ಮಕ್ಕಳ ವಿದ್ಯಾರ್ಥಿ ಬದುಕಿನ ಪರ್ವದ ಕಾಲ. ಏಕೆಂದರೆ ಮಕ್ಕಳು ಪ್ರಬುದ್ಧತೆಯ ಹಂತ ತಲುಪುವ
ವಯಸ್ಸು. ಕೇಂದ್ರ ಸರಕಾರ ತಂದ ಇತ್ತೀಚಿನ ನಿಯಮದ ಪ್ರಕಾರ ಒಂದನೇ ಈಯತ್ತೆಗೆ ಸೇರಲು ಜೂನ್ ೧ಕ್ಕೆ ೬ ವರ್ಷಗಳಾಗಿ ರಬೇಕು. ಅಂದಾಗ ಪಿಯುಸಿ ಎರಡನೇ ವರ್ಷ ಮುಗಿಯುವ ತನಕ ಮಕ್ಕಳು ಹೆಚ್ಚುಕಡಿಮೆ ೧೮ ವರ್ಷ ವಯಸ್ಸು ತಲುಪಿರುತ್ತಾರೆ.
ಕಾನೂನಿನ ಪ್ರಕಾರವೂ ದೇಶದ ಪ್ರಬುದ್ಧ ನಾಗರಿಕನೆಂದು ಪರಿಗಣಿಸಲ್ಪಡುತ್ತಾರೆ. ಈ ಹಂತದಲ್ಲಿ ವಿದ್ಯಾರ್ಥಿಗಳು ಮುಂದಿನ ಭವಿಷ್ಯದ ಕುರಿತು ತೆಗೆದುಕೊಂಡ ನಿರ್ಧಾರಕ್ಕೆ ಸ್ವತಹ ಬಾಧ್ಯರಾಗುತ್ತಾರೆ.
ನಿಜವಾಗಿ ಇದೊಂದು ಕನಸು ಕಾಣುವ ಸಮಯ. ‘ಟೀನ್’ ವಯಸ್ಸಿನ ಮುಕ್ತಾಯದ ಸಮೀಪವೂ ತಲುಪಿರುವ ಹಂತವಿದು. ಬದುಕಿನಲ್ಲಿ ತಾನೇನಾಗಬೇಕು, ತಾನೇನು ಸಾಧಿಸಬೇಕು ಎಂಬುದರ ಕುರಿತು ಯೋಚನೆ ತಲೆ ತುಂಬಿರುವಂಥದ್ದು. ಎಲ್ಲಿ ತಲುಪ ಬೇಕು ಎಂಬ ದೂರವನ್ನು ಊಹೆ ಮಾಡುವಂಥದ್ದು. ಕನಸು ಕಾಣುವ ಕಾಲವಷ್ಟೇ ಅಲ್ಲ, ಇದು ಕನಸು ಕಟ್ಟುವ ಕಾಲವೂ ಹೌದು.
ಪರಿಣಾಮ ಪ್ರಕಟವಾದಂತೆ ಅನೇಕ ವಿದ್ಯಾರ್ಥಿಗಳು ತಮ್ಮ ಮುಂದಿನ ಓದು ಮತ್ತು ವೃತ್ತಿಯ ಕುರಿತು ಹೇಳಿಕೊಂಡಿದ್ದು
ಅರ್ಥಗರ್ಭಿತವಾಗಿದೆ. ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಬೆಂಗಳೂರಿನ ಕಾಲೇಜಿನ ಹುಡುಗಿಯು ಮುಂದೆ ಸೈಕಾಲಜಿ ಆಯ್ಕೆ ಮಾಡಿಕೊಂಡು ಸಮಾಜವನ್ನು ಪಾಸಿಟಿವ್ ಸೊಸೈಟಿಯಾಗಿ ಬದಲಾಯಿಸುವ ಆಸೆಯ ಕುರಿತು ಹೇಳಿದ್ದಾಳೆ. ಹಾಗೇ ತಾಂತ್ರಿಕ ಶಿಕ್ಷಣ ಪಡೆದು ಅದೇಷ್ಟೋ ಕ್ಲಿಷ್ಟ ಸಂಗತಿಗಳ ಆವಿಷ್ಕಾರದ ಕುರಿತು ಕೆಲವರು ಹೇಳಿದ್ದರೆ, ವಿಜ್ಞಾನಿಯಾಗಿ ಅಪೂರ್ವ ಕೊಡುಗೆ ಕೊಡುವ ಕುರಿತು ಮಾತಾಡಿದವರಿದ್ದಾರೆ.
ಇಅ ಆಗಿಯೋ, ಯುಪಿಎಸ್ಸಿ ತೇರ್ಗಡೆಯಾದ ಅಧಿಕಾರಿಗಳಾಗಿಯೋ, ವೈದ್ಯನಾಗಿಯೋ ಇನ್ನಿತರ ಅನೇಕ ವೃತ್ತಿಯನ್ನು ಪಡೆದು ಮಿಂಚುವತ್ತ ಯತ್ನ ಮಾಡುವವರಿzರೆ. ಸಮಾಜದ ಎಲ್ಲ ಸ್ಥರ ಗಳನ್ನೂ ತಟ್ಟಬಲ್ಲ ವಿವಿಧ ಕ್ಷೇತ್ರಗಳಲ್ಲಿ ಬದಲಾವಣೆ ತರುವ ಹೊಣೆ ಹೊರುವತ್ತ ಸಾಗುವ ವಿಚಾರವು ಎಲ್ಲರ ಆಶಯ ಸೇರಿ ಸ್ಪಷ್ಟವಿದೆ. ಅಷ್ಟೆಲ್ಲ ಪ್ರಬುದ್ಧ ಮತ್ತು ಸ್ಪಷ್ಟ ಗುರಿಯು ಕೆಲವು ದಶಕಗಳ ಹಿಂದೆ ಅಷ್ಟೊಂದಿರಲಿಲ್ಲ ಅನ್ನಬೇಕು. ಎಲ್ಲ ಕ್ಷೇತ್ರಗಳ ಕುರಿತು ಕಳೆದ ಎರಡು ದಶಕಗಳಷ್ಟು ಯೋಗ್ಯ ಜ್ಞಾನ ಅಥವಾ
ಮಾಹಿತಿಯು ಸುಮಾರು ೫ ದಶಕಗಳ ಹಿಂದೆ ಇರಲಿಲ್ಲ.
ಪದವಿ ಮುಗಿಸಿದ ನಂತರ ಲಭ್ಯವಿರುವ ಕೆಲಸವನ್ನು ‘ಸ್ವೀಕರಿಸುವ ಅಥವಾ ಜೀವನಾಧಾರ’ವೇ ಅಂದಿನ ಸಂಗತಿಯಾಗಿತ್ತು.
ತಾನು ‘ಇದನ್ನು ಆಯ್ಕೆ ಮಾಡಿಕೊಂಡು ದೇಶಕ್ಕೆ ಅಥವಾ ಸಮಾಜಕ್ಕೆ ಇಂತಹ ಕೊಡುಗೆ ನೀಡುವೆ’ ಅನ್ನುವ ನಿಖರತೆಯು ಇತ್ತೀಚಿನ ವಿದ್ಯಾರ್ಥಿ ವಿದ್ಯಮಾನದ ಹೆಚ್ಚಿದ ಅಂಶವೆನ್ನಬೇಕು. ಇಂತಹ ಆಶಯ ಅಥವಾ ಹುಮ್ಮಸ್ಸಿನಿಂದ ಅನೇಕ ನಡೆ, ಪಿಚಾಯಿಯರು ಸೃಷ್ಟಿಯಾಗಬಹುದು. ಎಲ್ಲ ಕ್ಷೇತ್ರಗಳಲ್ಲಿಯೂ ವಿಶೇಷ ಸತ್ವ ನೀಡುವ ಶಕ್ತಿ ಹೊಮ್ಮಬಹುದೆಂಬುದು ಗಮನೀಯ ಸಂಗತಿ.
ಪಿಯುಸಿ ದ್ವಿತೀಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಹೊಸ ಜಗತ್ತನ್ನು ಕಾಣುವ ಉತ್ಸಾಹದಲ್ಲಿರುವ ‘ವಿದ್ಯಾರ್ಥಿಗಳು ತಮ್ಮದೇ
ಗುರಿಯನ್ನು ನಿರ್ಧರಿಸಿಕೊಂಡಿರುವಾಗ ಗುರಿಯನ್ನು ಸಾಧಿಸುವ ದಿಶೆಯಲ್ಲಿ ಸೂಕ್ತ ಮಾದರಿ’ಗಳನ್ನು ಕೂಲಂಕಷವಾಗಿ ತಿಳಿದುಕೊಂಡು ಬೇಕಾದ ವಿಚಾರಗಳನ್ನು ತೆಗೆದುಕೊಳ್ಳುವುದು ಅವಶ್ಯಕ. ಅಂತಹ ಮಾದರಿಯು ಧೀರೂಭಾಯಿ ಅಂಬಾನಿ, ಜಮಶೇಟ್‌ಜಿ ಟಾಟಾ ಇರಬಹುದು. ವಿವಿಧ ವೃತ್ತಿಗಲ್ಲಿ ಶ್ರೇಷ್ಠ ಸಾಧನೆಗೈದ ಎ.ಆರ್.ರೆಹಮಾನ್, ಸಚಿನ್ ತೆಂಡೂಲ್ಕರ್, ಅಮಿತಾಭ್ ಬಚ್ಚನ್ ಹೀಗೆ ಯಾರೂ ಇರಬಹುದು.
ದೇವಿ ಶೆಟ್ಟಿಯವರು ನಾರಾಯಣ ಹೃದಯಾಲಯದಂತಹ ಉತ್ತಮ ಚಿಕಿತ್ಸಾ ಸಂಸ್ಥೆಯೊಂದನ್ನು ಸ್ಥಾಪಿಸಿ ಮಹತ್ವದ ಸಾಧನೆ ಮಾಡಿದ್ದು ಚಿಕಿತ್ಸಾ ಕೇಂದ್ರದ ಕನಸು ಕಾಣುವವರಿಗೆ ಅವರು ನಡೆದ ದಾರಿಯಿಂದ ಅನೇಕ ವಿಚಾರಗಳು ಸಿಗಬಹುದು. ಸುಪ್ರಸಿದ್ಧ ಇನೋಸಿಸ್ ಸಂಸ್ಥೆಯ ಮುಖ್ಯ ಸ್ಥಾಪಕರಾಗಿದ್ದ ನಾರಾಯಣಮೂರ್ತಿಯವರು ಅವಿರತ ಪರಿಶ್ರಮದಿಂದ ಏನೆಲ್ಲ ಸಾಧಿಸಬಹು ದೆಂಬುದಕ್ಕೆ ಮಾದರಿ ಯಾಗುತ್ತಾರೆ. ರಿಲಯ ಎಂಬ ಬೃಹತ್ ಕೈಗಾರಿಕಾ ಸಾಮ್ರಾಜ್ಯವನ್ನು ಸೃಷ್ಟಿಸಿದ ಧೀರೂಭಾಯಿ ತಮ್ಮದೇ
ವೃತ್ತಿ ಆರಂಭಿಸಿದ್ದು ಮುಂಬೈನ ಮಸ್ಜಿದ್ ಬಂದರಿನ ಮೂರು ಖುರ್ಚಿ ಮತ್ತು ಒಂದು ಟೇಬಲ್ ಇದ್ದ ಆಫೀಸ್ ಮೂಲಕ.
‘ಕೈಗಾರಿಕಾ ಪೀಳಿಯ ಕಾರಣಕರ್ತರೆಂದು ತಿಳಿಯಲಾದ ಟಾಟಾ’ ಪೀಳಿಯು ಅತ್ಯಂತ ಸರಳ, ನಮ್ರ, ಸ್ವಚ್ಛ ಚರಿತ್ರೆಗೆ ಹೆಸರಾದ ವರು. ಧೀರೂಭಾಯಿ ಮತ್ತು ಟಾಟಾ ಹೇಳಿದ್ದ ಸ್ಪೂರ್ತಿದಾಯಕ ಹೇಳಿಕೆಗಳನ್ನು ಮುಂದಿನ ಕನಸು ಕಟ್ಟಿರುವ ವಿದ್ಯಾರ್ಥಿಗಳ ಸಂದರ್ಭದಲ್ಲಿ ಹೇಳುವುದು ಸೂಕ್ತ.
‘Think big, Think differently, Think fast, Think ahead, aim for the best’. If you don’t build your dream someone will hire you to help them build theirs’..- ಧೀರೂಭಾಯಿ ಅಂಬಾನಿ ’Always aim at perfection for only then will you achieve excellence’.’ Nothing worthwhile is achieved without deep thought and hard work’ -Jamsetji Tata.
ಇತ್ತೀಚಿನ ದಿನಗಳಲ್ಲಿ ಭವಿಷ್ಯ ನಿರ್ಧರಿಸುವ ಹಂತದಲ್ಲಿ ಕೆಲವರಿಗೆ ತಪ್ಪು ಕಲ್ಪನೆಗಳಿರಲಿಕ್ಕೂ ಸಾಕು. ಆದರೆ ಮಹತ್ವದ ಸಾಧನೆಯು ಸುಲಭ ಸಾಧ್ಯವಲ್ಲವೆಂಬುದನ್ನು ಅರ್ಥಮಾಡಿಕೊಳ್ಳುವ ಜಾಣ್ಮೆಯು ಬಹುತೇಕರಿಗೆ ಈ ಹಂತದಲ್ಲಿಯೇ ಬಂದಿರ ಬಹುದು. ಗುರಿಯನ್ನೆಲ್ಲ ಏರ್ ಕಂಡೀಶನ್ ಕೋಣೆಯಿಂದಲೇ ತಲುಪಲಾಗುವುದಿಲ್ಲ. ಶುರುವಿನಲ್ಲಿ ಎಲ್ಲವೂ ಸಿದ್ಧವಿರುವುದಿಲ್ಲ. ಪಡೆಯಬೇಕೆಂದರೆ ದುಡಿಯಲೇ ಬೇಕು. ವಯಕ್ತಿಕವಾಗಿ ನನಗೂ ಕನಸು ಕಟ್ಟುವ ಹಂತದಲ್ಲಿ ಸ್ವಲ್ಪ ಗೊಂದಲವಿತ್ತೆನ್ನಬೇಕು.
ರಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ಮುಂಬೈಗೆ ಬಂದರೆ ಏನೆಕೈಗೆ ಸುಲಭವಾಗಿ ಸಿಗಬಹುದೆಂದು. ಮುಂಬೈಗೆ ಬಂದು ಕೆಲಸಕ್ಕಿಳಿದಾಗ ವಾಸ್ತವದ ಮನವರಿಕೆಯಾಯಿತು. ಮಾತನಾಡಲು ಭಾಷೆ, ಸರಿಯಾಗಿ ಸಂವಹಿಸುವ ಕಲೆಯಿಂದ
ಹಿಡಿದು ಏನೆ ವಿಚಾರಗಳನ್ನು ಅಳವಡಿಸಿಕೊಳ್ಳುವ ಅಗತ್ಯದ ಕುರಿತು. ಕನಸನ್ನು ನನಸಾಗಿಸುವಾಗ ಏನೆ ಅಡ್ಡಿಯನ್ನು ನಿಭಾಹಿಸ ಬೇಕೆಂದು.
ಹಾಗೆ ನೋಡಿದರೆ ಇತ್ತೀಚಿನ ದಶಕಗಳಲ್ಲಿ ಚಿತ್ರಣವು ಬಹಳಷ್ಟು ಬದಲಾಗಿದೆ. ಅರಿವಿನ ಮಟ್ಟ ಸಾಕಷ್ಟು ಹೆಚ್ಚಿದೆ. ‘ಡಿಗ್ನಿಟಿ ಆಫ್
ಲೇಬರ್’ ವಿಚಾರದಲ್ಲಿ ನಮ್ಮ ಸಮಾಜವು ಅಮೆರಿಕ ಅಥವಾ ಪಾಶ್ಚಾತ್ಯ ಸಮಾಜದತ್ತ ಸಾಗುತ್ತಿರುವುದು ಸ್ವಾಗತಾರ್ಹ ಸಂಗತಿ.
ಇಂದು ಕನಸು ಕಟ್ಟಿಕೊಳ್ಳುವಾಗ ಯಶಸ್ಸು ಸಿಗಬಲ್ಲ ಯಾವುದೇ ಮಾರ್ಗಗಳನ್ನೂ ಆಯ್ಕೆಮಾಡಿಕೊಳ್ಳಲು ಹಿಂಜರಿಯುವುದಿಲ್ಲ. ಹಿಂಜರಿಯಲೂ ಬಾರದು. ಯಾವುದೇ ಉದ್ಯೋಗವಿರಲಿ, ಪ್ರಗತಿಕರವಿದ್ದು ಸಾಕಷ್ಟು ಹಣ ದೊರಕಿದರಾಯಿತು ಅಷ್ಟೆ.
ಯಾವ ಗುರಿಯೂ ಅಸ್ಪ್ರಶ್ಯವಾಗುಳಿದಿಲ್ಲ. ಹಾಗೆ ವಿವಿಧ ವಿಚಾರಗಳನ್ನು ಆಯ್ಕೆ ಮಾಡಿಕೊಂಡ ನೂರೆಂಟು ಉದಾಹರಣೆ ಗಳನ್ನು ನಮ್ಮ ಹತ್ತಿರದಲ್ಲಿಯೇ ಕಾಣಬಹುದಾಗಿದೆ. ಯಾವುದೇ ಕನಸನ್ನು ಕಟ್ಟಿದರೂ ಪಟ್ಟು, ಶ್ರಮ, ಧೈರ್ಯ, ಸಾಹಸ ಪ್ರವೃತ್ತಿ, ರಿ ತೆಗೆದುಕೊಳ್ಳುವುದು ಇವೆಲ್ಲ ಸಿದ್ಧ,ಸಾಬೀತಾದ ಯಶಸ್ಸಿನ ಮೂಲ ದ್ರವ್ಯಗಳು. ಮಹತ್ವದ ಹಂತದಲ್ಲಿರುವ ವಿದ್ಯಾರ್ಥಿಗಳು ಅಂತಹ ದ್ರವ್ಯಗಳನ್ನು ಅರಗಿಸಿಕೊಳ್ಳುವುದು ಸರಿ.
ಪಿಯುಸಿ೧೨ರ ಇತ್ತೀಚಿನ ಉತ್ತೀರ್ಣತೆಯ ಸಂಖ್ಯೆಯು ದಾಖಲೆ ನಿರ್ಮಿಸಿದಂತೆ ಪಡೆಯುವ ಗುಣಗಳೂ ಅದ್ಭುತವಾಗಿವೆ. ಅಚ್ಚರಿ
ಹುಟ್ಟಿಸುವಂತಿದೆ. ಪಿಯುಸಿ ಮುಗಿಸುವ ಹಂತದಲ್ಲಿ ವಿದ್ಯಾರ್ಥಿಗಳು ಎಷ್ಟೆಲ್ಲ ತಿಳಿದುಕೊಂಡು ಏನೆಲ್ಲ ಸಾಧಿಸುವ ಹವಣಿಕೆ ಯಲ್ಲಿದ್ದಾರೆ. ಇದೇ ಸಮಯದಲ್ಲಿ ಕೆಲವು ಸಂಗತಿಗಳನ್ನು ಗಮನದಲ್ಲಿರಿಸಿಕೊಳ್ಳುವದು ಸೂಕ್ತ. ಈಗ ಪಡೆದ ಗುಣಗಳು ಈಗಿನ ತಥ್ಯವಷ್ಟೇ.
ಮುಂದಿನ ಮಹತ್ವದ ಪ್ರಯಾಣ ಬಾಕಿ ಇದೆ. ಉಳಿದ ದಾರಿಯ ನಿಜವನ್ನು ಅರಿತು ಸಾಗುವುದು ಮಹತ್ವ . ಇಂದಿನ ಯಶಸ್ಸು ಮುಂದಿನ ದಾರಿಯ ದಿಶೆಯನ್ನಷ್ಟೇ ತೋರಬಲ್ಲುದೇ ಹೊರತು ದಾರಿಯುದ್ದಕ್ಕೂ ದೀಪವಾಗಿ ನಿಲ್ಲಲಾರದು. ಈಗ ಹಚ್ಚಿದ ಕೆಲವು ದೀಪಗಳು ಮುಂದೆ ಅರಲೂಬಹುದು. ಹೊಸ ದೀಪಗಳನ್ನು ಹಚ್ಚಬೇಕಾದ ಸಂದರ್ಭ ಬರಬಹುದು. ಈಗ ಕಟ್ಟಿದ ಕನಸುಗಳ ಬದಲಾಗಿ ಹೊಸ ಇನ್ನೂ ಅದ್ಭುತ ಕನಸುಗಳನ್ನು ಹಿಂಬಾಲಿಸುವ ಕಾಲ ಬರಬಹುದು. ಭವಿಷ್ಯದ ಹಾದಿಯಲ್ಲಿನ ತೊಡಕು ಗಳನ್ನೂ ಗುರುತಿಸಿಕೊಂಡು ಅವನ್ನು ಜಯಿಸುವುದು ಹೇಗೆ ಎಂಬ ಸೂತ್ರವನ್ನು ಆಗಾಗ ಯೋಜಿಸಬೇಕಾದೀತು.
ಮುಂದಿನ ಯಾನಕ್ಕೆ ಬೇಕಾದ ಶಕ್ತಿಯನ್ನು ತುದಿಯತನಕ ಉಳಿಸಿ ಬೆಳೆಸಿಕೊಳ್ಳುವುದೂ ಗಂಭೀರ ವಿಚಾರ. ನಿಜವೆಂದರೆ ಸರಿಯಾದ ದಿಶೆಯಲ್ಲಿ ಯೋಗ್ಯ ಯತ್ನದಲ್ಲಿ ತೊಡಗಿಕೊಂಡವರಿಗೆ ಯಾವ ಸಾಧನೆಯೂ ಅಸಾಧ್ಯವಾಗಲಾರದು.
(ಲೇಖಕರು ಹವ್ಯಾಸಿ ಬರಹಗಾರರು)