ನವದೆಹಲಿ: ನಾನು 35 ವರ್ಷ ಕಾಲ ಕಾಂಗ್ರೆಸ್ ಪಕ್ಷದಲ್ಲಿ ಕಳೆದಿದ್ದೇನೆ, ಆದರೆ ಇನ್ಮುಂದೆ ಇರಲು ಬಯಸುವುದಿಲ್ಲ ಎಂದು ಹೇಳಿದ ತಜೀಂದರ್ ಸಿಂಗ್ ಕಾಂಗ್ರೆಸ್ ಪಕ್ಷವನ್ನು ತೊರೆದ, ಕೆಲವೇ ಗಂಟೆಗಳಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.
ಪ್ರಿಯಾಂಕಾ ಗಾಂಧಿಯವರ ಆಪ್ತ ಎಂದು ಕರೆಯಲ್ಪಡುವ ತಜೀಂದರ್ ಸಿಂಗ್ ಬಿಟ್ಟು ಕೇಸರಿ ಪಾಳಯಕ್ಕೆ ಸೇರಿದ್ದಾರೆ. ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಇಂದು ಕಾಂಗ್ರೆಸ್ ಪಕ್ಷವು ವಾಸ್ತವದ ಸಮಸ್ಯೆಗಳಿಂದ ದೂರ ಸರಿದಿದೆ ಎಂದು ನಾನು ಭಾವಿಸುತ್ತೇನೆ. ನಾನು ಯಾರ ವಿರುದ್ಧವೂ ಮಾತನಾಡಲು ಬಯಸುವುದಿಲ್ಲ. ಪಂಜಾಬ್ನ ಒಳಿತಿಗಾಗಿ ನಾನು ಬಿಜೆಪಿ ಸೇರಿದ್ದೇನೆ ಎಂದು ಹೇಳಿದರು.
ಹಿಮಾಚಲ ಪ್ರದೇಶದ ಉಸ್ತುವಾರಿ ಕಾರ್ಯದರ್ಶಿ ಹಾಗೂ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) ಕಾರ್ಯದರ್ಶಿ ಸ್ಥಾನದಿಂದಲೂ ತಜೀಂದರ್ ಸಿಂಗ್ ಕೆಳಗಿಳಿದಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜೀನಾಮೆ ಸಲ್ಲಿಸಿದ ಕೆಲವೇ ಗಂಟೆಗಳ ನಂತರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.