ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಒಂದು ಹೆಜ್ಜೆಯಾಗಿ, ಭಾರತದ ಅತಿದೊಡ್ಡ ಅಮ್ಯೂಸ್‌ಮೆಂಟ್ ಪಾರ್ಕ್ ವಂಡರ್ಲಾ ಹಾಲಿಡೇಸ್ ಲಿಮಿಟೆಡ್, ತಮ್ಮ ಮತದಾನದ ಗುರುತು ತೋರಿಸುವ ಗ್ರಾಹಕರಿಗೆ ತಮ್ಮ ಬೆಂಗಳೂರು ಪಾರ್ಕ್‌ಗೆ ಟಿಕೆಟ್‌ಗಳ ಮೇಲೆ ಶೇ. 15ರಷ್ಟು ರಿಯಾಯಿತಿಯನ್ನು ನೀಡುವುದಾಗಿ ಘೋಷಿಸಿದೆ.
ಈ ಆಫರ್ ಏಪ್ರಿಲ್ 26, 27 ಮತ್ತು 28 ರಂದು ವಂಡರ್‌ಲಾ ಬೆಂಗಳೂರು ಪಾರ್ಕ್‌ನಲ್ಲಿ ಅನ್ವಯಿಸುತ್ತದೆ. ಈ ಕೊಡುಗೆಯು ಆನ್‌ಲೈನ್ ಹಾಗೂ ಆಫ್‌ಲೈನ್ ಎರಡಲ್ಲೂ ಲಭ್ಯವಿದೆ. ಪಾರ್ಕ್‌ನಲ್ಲಿ ಎಂಟ್ರಿ ಪಡೆಯುವ ವೇಳೆ ನೀವು ಮತ ಚಲಾಯಿಸಿರುವ ಗುರುತನ್ನು ತೋರಿಸಿ ಒಳ ಪ್ರವೇಶಿಸಬಹುದು.
ಈ ಉಪಕ್ರಮದ ಬಗ್ಗೆ ಪ್ರತಿಕ್ರಿಯಿಸಿದ ವಂಡರ್‌ಲಾ ಹಾಲಿಡೇಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ.ಅರುಣ್ ಚಿಟ್ಟಿಲಪಿಲ್ಲಿ, “ಜವಾಬ್ದಾರಿಯುತ ನಾಗರಿಕರಾಗಿ, ಮತದಾನವು ನಮ್ಮ ಕರ್ತವ್ಯವಾಗಿದೆ. ವಂಡರ್ಲಾದಲ್ಲಿ, ಈ ಉಪಕ್ರಮವು ವ್ಯಕ್ತಿಗಳನ್ನು ಮತ ಚಲಾಯಿಸಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಮ್ಮ ಪುಟ್ಟ ಹೆಜ್ಜೆಯಾಗಿದೆ ಎಂದರು.
ಮತದಾರರಲ್ಲಿ ಜಾಗೃತಿ: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬನ್ನಿಕುಪ್ಪೆ ಗ್ರಾಮ ಪಂಚಾಯತ್ ಮತ್ತು ಕರ್ನಾಟಕ ಚುನಾವಣಾ ಆಯೋಗದ ವತಿಯಿಂದ ಮತದಾನದ ಮಹತ್ವವನ್ನು ಸಾರುವ ಜಾಗೃತಿ ಅಭಿಯಾನವನ್ನು ವಂಡರ್ಲಾ ಬೆಂಗಳೂರು ಉದ್ಯಾನವನದಲ್ಲಿ ಆಯೋಜಿಸಲಾಗಿತ್ತು.
ಮಾಗಡಿ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಕೃಷ್ಣ, ರಾಮನಗರ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಗಿರಿಧರ್, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಕೃಷ್ಣಪ್ಪ ಮತ್ತು ವಂಡರ್‌ಲಾ ಬೆಂಗಳೂರು ಪಾರ್ಕ್ ಮುಖ್ಯಸ್ಥ ರುದ್ರೇಶ್ ಎಚ್.ಎಸ್, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಎನ್‌ಆರ್‌ಎಲ್‌ಎಂ ಗ್ರಾಮ ಪಂಚಾಯ್ತಿ ಸದಸ್ಯರು ಪಾರ್ಕ್‌ಗೆ ಭೇಟಿ ನೀಡುತ್ತಿದ್ದ ಜನರಿಗೆ ಮತಚಲಾಯಿಸುವ ಕುರಿತು ಜಾಗೃತಿ ಮೂಡಿಸಿದರು.