ವೀಕೆಂಡ್ ವಿತ್ ಮೋಹನ್
camohanbn@gmail.com
೧೯೯೧ ರಲ್ಲಿ ಭಾರತದ ಆರ್ಥಿಕತೆ ಪಾತಾಳಕ್ಕೆ ಕುಸಿದು, ದೇಶ ದಿವಾಳಿಯಾಗುವ ಹಂತಕ್ಕೆ ತಲುಪಿತ್ತು. ಭಾರತೀಯರ ಚಿನ್ನವನ್ನು ಲಂಡನ್ನಿನ ಬ್ಯಾಂಕಿ
ನಲ್ಲಿ ಅಡವಿಟ್ಟು ವಿಶ್ವಬ್ಯಾಂಕಿನ ಬಳಿಕ ಬೇಡಿ ಸಾಲ ತಂದು ದೇಶ ನಡೆಸಬೇಕಾಯಿತು. ೧೯೪೭ ರಿಂದ ೧೯೯೧ರವರೆಗೆ ಸುಮಾರು ೪೦ ವರ್ಷಗಳ ಕಾಲ ದೇಶವನ್ನಾಳಿದ ನೆಹರು, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯವರ ಕೆಟ್ಟ ಆರ್ಥಿಕ ನೀತಿಯ ಪರಿಣಾಮ ಭಾರತ ದಿವಾಳಿ ಹಂತಕ್ಕೆ ತಲುಪಿತ್ತು.
ಮನಮೋಹನ್ ಸಿಂಗ್ ಆರ್ಥಿಕ ಸಚಿವರಾದ ನಂತರ ಭಾರತದ ಮಾರುಕಟ್ಟೆಯನ್ನು ಖಾಸಗಿ ಬಂಡವಾಳಶಾಹಿಗಳಿಗೆ ಮುಕ್ತವಾಗಿ ತೆರೆಯಲಾಯಿತು. ಪರಿಣಾಮ ನೆಹರು ಕುಟುಂಬದ ಲೈಸ ರಾಜ್ ಪದ್ಧತಿ ಕೊನೆಗೊಂಡಿತು. ಕಾಂಗ್ರೆಸ್ಸಿನವರು ಮನಮೋಹನ್ ಸಿಂಗ್ ಅವರ ಆರ್ಥಿಕ ನೀತಿಯ ಬಗ್ಗೆ ಬೆನ್ನು ತಟ್ಟಿಕೊಳ್ಳುತ್ತಾರೆ. ಆದರೆ ವಂಶಪಾರಂ ಪರಾಡಳಿತ ನಡೆಸಿ, ಆರ್ಥಿಕತೆಯನ್ನು ಹಾಳು ಮಾಡಿದ್ದರ ಬಗ್ಗೆ ಮಾತನಾಡುವುದಿಲ್ಲ. ಕಮ್ಯುನಿಸ್ಟರ ಸನ್ನಿಗೆ ಒಳಗಾಗಿದ್ದ ನೆಹರು ತಮ್ಮ ಅಧಿಕಾರಾವಧಿಯಲ್ಲಿ ಆಯಕಟ್ಟಿನ ಜಾಗಗಳಲ್ಲಿ ಅವರನ್ನೇ ಪ್ರಮುಖ ಹುzಗಳಲ್ಲಿ ಕೂರಿಸಿದ್ದರು.
ವಿದೇಶಿ ಕಮ್ಯುನಿ ಆರ್ಥಿಕ ತಜ್ಞರ ಮಾತುಗಳು ಅವರಿಗೆ ವೇದವಾಕ್ಯವಾಗಿತ್ತು. ಸಮಾಜವಾದದ ಹೆಸರಿನಲ್ಲಿ ಸಂಪತ್ತನ್ನು ಹಂಚಬೇಕೆನ್ನುವುದು ಕಮ್ಯು ನಿಸ್ಟರ ಮನಸ್ಥಿತಿ. ಸಂಪತ್ತುಗಳನ್ನು ಹಂಚುವ ಮೊದಲು ಸಂಪಾದಿಸಬೇಕೆಂಬ ಕನಿಷ್ಠ ಜ್ಞಾನ ಜಗತ್ತಿನ ಯಾವ ದೇಶದ ಕಮ್ಯುನಿಸ್ಟರಿಗಿಲ್ಲ. ಆಸ್ತಿ
ಸಂಪಾದಿಸಿ ನಂತರ ಹಂಚುವುದು ಉತ್ತಮ ಆರ್ಥಿಕ ನೀತಿಯ ಪ್ರಮುಖ ಲಕ್ಷಣ. ಆಸ್ತಿ ಸಂಪಾದನೆಯಾಗಬೇಕಾದರೆ ಬಂಡವಾಳಶಾಹಿವಾದವನ್ನೂ ಉತ್ತೇಜಿಸಬೇಕು.
ಒಂದೆಡೆ ಬಂಡವಾಳ ಮತ್ತೊಂದೆಡೆ ಸಮಾಜವಾದದ ಸಮತೋಲನೆಯಿದ್ದರೆ ಮಾತ್ರ, ಉತ್ತಮ ಆರ್ಥಿಕತೆ ಹೊಂದಿರುವ ದೇಶವನ್ನು ಕಟ್ಟಲು ಸಾಧ್ಯ. ನೆಹರು ಕುಟುಂಬಸ್ಥರು ಜಾರಿಗೊಳಿಸಿದ ಆರ್ಥಿಕ ನೀತಿಗಳಲ್ಲಿ ಸಮತೋಲನೆಯಿರಲಿಲ್ಲ. ದೇಶದ ಪ್ರತಿಯೊಂದು ವ್ಯವಹಾರವನ್ನೂ ಸರಕಾರವೇ
ನಿಯಂತ್ರಿಸುತ್ತಿತ್ತು. ಆದರೆ ವ್ಯವಹಾರ ನಡೆಸುವುದು ಸರಕಾರದ ಕೆಲಸವಲ್ಲ. ವ್ಯವಹಾರ ನಡೆಸುವವರಿಗೆ ಉತ್ತಮ ವಾತಾವರಣ ಕಲ್ಪಿಸಿಕೊಡುವುದು ಮಾತ್ರ ಸರಕಾರದ ಕೆಲಸ ಎನ್ನುವುದನ್ನು ಅರ್ಥ ಮಾಡಿಕೊಳ್ಳಲೇ ಇಲ್ಲ.
೧೯೯೨ರಲ್ಲಿ ಪಿ.ವಿ.ನರಸಿಂಹರಾವ್ ನೇತೃತ್ವದ ಕಾಂಗ್ರೆಸ್ ಸರಕಾರ, ನೆಹರು ಕುಟುಂಬಸ್ಥರು ಮಾಡಿದ್ದ ಅನಾಹುತಗಳನ್ನು ಸರಿಪಡಿಸಲು ಭಾರತದ ಆರ್ಥಿಕತೆಯನ್ನು ಜಗತ್ತಿಗೆ ತೆರೆದಿಟ್ಟಿತು. ಇಂದಿರಾ ಗಾಂಧಿ ಅವಧಿಯಲ್ಲಿ ವಿದೇಶದಲ್ಲಿ ಓದಲು ಹೋಗುವವರ ಶಿಕ್ಷಣದ ಖರ್ಚನ್ನು ವಿದೇಶಿ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಬೇಕಾದರೆ ತಿಂಗಳುಗಳ ಸಮಯ ಬೇಕಿತ್ತು. ಇಲ್ಲಸಲ್ಲದ ಷರತ್ತುಗಳೊಂದಿಗೆ ಸರಕಾರದ ಅನುಮತಿ ಪಡೆದು ಹಣ ವರ್ಗಾ ಯಿಸಬೇಕಿತ್ತು.
ವಿದೇಶದಲ್ಲಿ ಸತ್ತವರ ಮೃತದೇಹವನ್ನು ಭಾರತಕ್ಕೆ ತರಲು ತಿಂಗಳುಗಟ್ಟಲೆ ಸಮಯ ಬೇಕಿತ್ತು, ವಿದೇಶಿ ಕಂಪನಿಗಳು ಭಾರತದಲ್ಲಿ ಬಂಡವಾಳ ಹೂಡಲು ಸಾಧ್ಯವಿರಲಿಲ್ಲ. ವಿವಿಧ ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಖಾಸಗಿ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಲಾಗಿತ್ತು. ವಿದೇಶಿ ತಂತ್ರಜ್ಞಾನ ದೇಶಕ್ಕೆ ಕಾಲಿಡಲು ಕಾನೂನು ತೊಡಕಿತ್ತು. ಲೈಸ ರಾಜ್ ಪರಿಣಾಮ ಭಾರತದ ಅಭಿವೃದ್ದಿಯಾಗಿರಲಿಲ್ಲ. ದೇಶ ದಿವಾಳಿ ಹಂತಕ್ಕೆ ತಲುಪಿದ ನಂತರ ಭಾರತವನ್ನು
ಮುಕ್ತ ಮಾರುಕಟ್ಟೆಗೆ ತೆರದಿಡುವಂತೆ ಮಾಡುವ ಯೋಜನೆಗಳನ್ನು ಜಾರಿಗೆ ತರಲಾಯಿತು. ಆದರೆ ಹಳೆಯ ಚಾಳಿಯಂತೆ ೨೦೨೪ರ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಆಸ್ತಿ ಮರುವಿತರಣೆ ಬಗ್ಗೆ ಪ್ರಸ್ತಾಪಿಸಿದೆ. ರಾಹುಲ್ ಗಾಂಧಿ ಪ್ರಚಾರಕ್ಕೆ ಹೋದ ಜಾಗಗಳಲ್ಲಿ ಈ ಬಗ್ಗೆ ಪ್ರಸ್ತಾಪಿಸುತ್ತಿದ್ದಾರೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿರುವ ಆಸ್ತಿ ಮರು ವಿತರಣೆಯ ಹಿಂದಿರುವವರು, ಜಗತ್ತಿನೆಡೆ ಸೋತು ಸುಣ್ಣವಾಗಿರುವ ಕಮ್ಯುನಿಸ್ಟರು.
ಚೀನಾ ದೇಶದ ಮಾವೋ ಸಿದ್ದಾಂತವನ್ನು ಭಾರತದ ಮೇಲೆ ಹೇರಲು ಪ್ರಯತ್ನ ಪಟ್ಟು ವಿಫಲರಾಗಿ ಭಾರತದ ಹಲವು ರಾಜ್ಯಗಳಲ್ಲಿ ನಕ್ಸಲರ ಸೃಷ್ಟಿಗೆ ಕಾರಣಕರ್ತರಾದವರು. ಕಾಶ್ಮೀರಿ ಪ್ರತ್ಯೇಕತಾವಾದಿಗಳನ್ನು ಬೆಂಬಲಿಸುವವರು, ಸೈನಿಕರನ್ನು ಅತ್ಯಾಚಾರಿಗಳು ಎನ್ನುವವರು ಸಮಾಜವಾದದ ಮುಖ ವಾಡ ಧರಿಸಿ ಮತ್ತೊಮ್ಮೆ ದೇಶವನ್ನು ೫೦ ವರ್ಷಗಳ ಹಿಂದೆ ಸರಿಸುವ ಸಂಚಿನಲ್ಲಿ ಭಾಗಿಯಾಗಿzರೆ. ಕಮ್ಯುನಿಸ್ಟರ ಸಿದ್ದಾಂತಗಳನ್ನು ನಂಬಿದ ಜಗತ್ತಿನ ಆರ್ಥಿಕತೆಗಳು ಕುಸಿದು ಬಿದ್ದಿವೆ, ಅಭಿವೃದ್ಧಿಯ ಪಥದಲ್ಲಿದ್ದ ವೆನೆಜುಲಾ ದೇಶ ಕಮ್ಯುನಿಸ್ಟರ ಆರ್ಥಿಕ ನೀತಿಗಳಿಗೆ ಸಿಕ್ಕು ದಿವಾಳಿಯಾಯಿತು.
ಜಿಂಬಾಬ್ವೆ ನೆಲಕಚ್ಚಿತು, ಕಮ್ಯುನಿ ದೇಶ ಚೀನಾ ಮಾತು ಕೇಳಿ ಶ್ರೀಲಂಕಾ ಸರ್ವನಾಶವಾಯಿತು.
ಕಮ್ಯುನಿಸ್ಟರ ಕಪಿಮುಷ್ಟಿಯಲ್ಲಿದ್ದ ರಷ್ಯಾ ವಿಶ್ವದ ಆರ್ಥಿಕತೆಯ ಮೊದಲ ಐದು ಸ್ಥಾನದಿಂದ ಹೊರಬಿದ್ದಿದೆ. ಚೀನಾ ಹೆಸರಿಗಷ್ಟೇ ಕಮ್ಯುನಿ ದೇಶ. ಆದರೆ ಅಮೆರಿಕ ನಂತರ ಜಗತ್ತಿನ ಅತಿ ಹೆಚ್ಚು ಬಿಲೇನಿಯರ್ಗಳನ್ನು ಹೊಂದಿರುವ ದೇಶ ಚೀನಾ. ಮಾವೋವಾದಿಗಳ ಮಾತುಗಳನ್ನು ಕೇಳಿ, ನೆಹರು ಭಾರತ ಸ್ವತಂತ್ರಗೊಂಡ ನಾಲ್ಕೇ ವರ್ಷಗಳಲ್ಲಿ ಆಸ್ತಿ ಮರುವಿತರಣೆಯ ಬಗ್ಗೆ ಪ್ರಸ್ತಾಪಿಸಿದ್ದರು. ಒಂದೆಡೆ ಬ್ರಿಟಿಷರು ಭಾರತದ ಸಂಪತ್ತನ್ನು ಕೊಳ್ಳೆ ಹೊಡೆದಿದ್ದರು,
ಅವರು ದೇಶ ಬಿಟ್ಟ ನಾಲ್ಕೇ ವರ್ಷಗಳಲ್ಲಿ ನೆಹರು ಆಸ್ತಿ ಮರುವಿತರಣೆಯ ಬಗ್ಗೆ ಪ್ರಸ್ತಾಪಿಸಿದ್ದು ತರ್ಕವೇ ಇಲ್ಲದ ಮಾತು.
೧೯೫೩ರಲ್ಲಿ ನೆಹರು ‘ಎಸ್ಟೇಟ್ ತೆರಿಗೆ’ ಜಾರಿಗೆ ತಂದರು, ಇದರನ್ವಯ ಪಿತ್ರಾರ್ಜಿತವಾಗಿ ಅಪ್ಪನಿಂದ ಮಕ್ಕಳಿಗೆ ಬರುವ ಆಸ್ತಿಯ ಮೇಲೆ ತೆರಿಗೆ ಹಾಕಲಾ ಯಿತು. ನೆಹರು ಜಾರಿಗೆ ತಂದಿದ್ದ ಎಸ್ಟೇಟ್ ತೆರಿಗೆ ಪದ್ದತಿಯಲ್ಲಿ ಶೇ.೮೫ರಷ್ಟು ಪಿತ್ರಾರ್ಜಿತ ಆಸ್ತಿಗೆ ತೆರಿಗೆ ಕಟ್ಟಬೇಕಿತ್ತು. ಇದರ ಪರಿಣಾಮ ದೇಶದಲ್ಲಿ ಕಪ್ಪು ಹಣದೊಂದಿಗೆ ಬೇನಾಮಿ ಆಸ್ತಿಗಳ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗಿತ್ತು. ಎಸ್ಟೇಟ್ ತೆರಿಗೆಯೊಂದಿಗೆ ‘ವೆಲ್ತ್ ತೆರಿಗೆ’ಯನ್ನೂ ಕಾಂಗ್ರೆಸ್ ಜಾರಿಗೆ ತಂದಿತ್ತು. ಇದರ ಪ್ರಕಾರ, ತಂದೆಯಿಂದ ಪಿತ್ರಾರ್ಜಿತವಾಗಿ ಮಕ್ಕಳಿಗೆ ಬರುವ ಆಸ್ತಿಗೂ ತೆರಿಗೆ ಕಟ್ಟಬೇಕಿತ್ತು ಮತ್ತು ಪ್ರತಿವರ್ಷ ಆಸ್ತಿಯ
ಮಾರುಕಟ್ಟೆ ಮೌಲ್ಯದ ಮೇಲೂ ವೆಲ್ತ ತೆರಿಗೆ ಕಟ್ಟಬೇಕಿತ್ತು.
೧೯೮೫ರಲ್ಲಿ ವಿ.ಪಿ.ಸಿಂಗ್ ವಿತ್ತ ಸಚಿವರಾಗಿದ್ದ ಸಂದರ್ಭ ದಲ್ಲಿ ನೆಹರು ಜಾರಿಗೊಳಿಸಿದ್ದ ಎಸ್ಟೇಟ್ ತೆರಿಗೆಯನ್ನು ತೆಗೆದುಹಾಕಿದರು.ನರೇಂದ್ರ ಮೋದಿ ಯವರು ಅಧಿಕಾರಕ್ಕೆ ಬಂದ ನಂತರ ೨೦೧೬ರಲ್ಲಿ ವೆಲ್ತ್ ತೆರಿಗೆಯನ್ನು ತೆಗೆದು ಹಾಕಿದರು. ೧೯೭೧ರಲ್ಲಿ ಇಂದಿರಾಗಾಂಧಿ ತಮ್ಮ ಪಕ್ಷವೇ ೨೪ ವರ್ಷಗಳ ಕಾಲ ಆಡಳಿತ ನಡೆಸಿದ ನಂತರ ’ಗರೀಬಿ ಹಠಾವೋ’ ಎಂಬ ಘೋಷವಾಕ್ಯದೊಂದಿಗೆ ಚುನಾವಣೆಯಲ್ಲಿ ಗೆದ್ದರು. ಅಧಿಕಾರಕ್ಕೆ ಬಂದ ನಂತರ ತಮ್ಮ ತಂದೆಯಂತೆ ಕಮ್ಯುನಿಸ್ಟರ ಸಲಹೆಯ ಮೇರೆಗೆ ಶೇ.೮೫ಷ್ಟು ಆದಾಯ ತೆರಿಗೆಯನ್ನು ಜನರ ಮೇಲೆ ಹೇರುವ ಮೂಲಕ ಮತ್ತೊಂದು ಕೆಟ್ಟ ಆರ್ಥಿಕ ನೀತಿಗೆ ನಾಂದಿ ಹಾಡಿದರು. ಅದರ ಪರಿಣಾಮ ಭಾರತದಲ್ಲಿ ಕಪ್ಪುಹಣದ ವ್ಯವಹಾರಗಳಲ್ಲಿ ಏರಿಕೆಯಾಯಿತು.
ರಾಜೀವ್ ಗಾಂಧಿಯ ಪರಮಮಿತ್ರ ’ಸ್ಯಾಮ್ ಪಿತ್ರೋಡ’ ಈಗ ಮತ್ತೊಮ್ಮೆ ಪಿತ್ರಾರ್ಜಿತ ಆಸ್ತಿಯ ಮೇಲೆ ತೆರಿಗೆ ಹೇರುವ ಬಗ್ಗೆ ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿzರೆ. ಭಾರತಕ್ಕೆ ಮಾಹಿತಿ ಮತ್ತು ತಂತ್ರಜ್ಞಾನದ ಕ್ರಾಂತಿಯನ್ನು ರಾಜೀವ್ ಗಾಂಧಿ ಪರಿಚಯಿಸಿದ್ದರ ಹಿಂದಿನ ಕೈ ಸ್ಯಾಮ್ ಪಿತ್ರೋಡನದ್ದು ಎಂದು ಕಾಂಗ್ರೆಸ್ಸಿನವರು ಹೇಳುತ್ತಿರುತ್ತಾರೆ. ಅದರೆ ರಾಜೀವ್ ಗಾಂಧಿ ಪ್ರಧಾನಿಯಾಗುವ ಮೊದಲೇ ದೇಶದಲ್ಲಿ ಮಾಹಿತಿ ಮತ್ತು
ತಂತ್ರಜ್ಞಾನ ಆಧಾರಿತ ಕಂಪನಿಗಳು ಸ್ಥಾಪನೆಯಾಗಿದ್ದವು. ತನ್ನ ಮಿತ್ರ ಹೇಳಿದ ಮಾತನ್ನು ಚಾಚು ತಪ್ಪದೆ ಪಾಲಿಸುವುದು ರಾಜೀವ್ ಗಾಂಧಿಯವರ ಗುಣವಾಗಿತ್ತು.
ರಾಜೀವ್ ನಿಧನದ ಬಳಿಕ ಸೋನಿಯಾ ಮತ್ತು ರಾಹುಲ್ ಗಾಂಧಿಯವರು ಸ್ಯಾಮ್ ಪಿತ್ರೋಡ ಸಲಹೆಗಳನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದರು. ಈಗಲೂ ಪರಿಗಣಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಅನಿವಾಸಿ ಘಟಕದ ಅಧ್ಯಕ್ಷರಾಗಿರುವ ಸ್ಯಾಮ್ ಪಿತ್ರೋಡ ರಾಹುಲ್ ಗಾಂಧಿ ವಿದೇಶದಲ್ಲಿ ಭಾಗಿಯಾಗುವ ಕಾರ್ಯಕ್ರಮಗಳನ್ನು ಯೋಜನೆ ಮಾಡುತ್ತಾನೆ. ರಾಹುಲ್ ಗಾಂಧಿ ವಿದೇಶಗಳಲ್ಲಿ ಭಾರತದ ವಿರುದ್ಧ ನೀಡುವ ಹೇಳಿಕೆಗಳ ಹಿಂದಿನ ಕೈ ‘ಸ್ಯಾಮ್ ಪಿತ್ರೋಡ’ ಅಮೆರಿಕ ದೇಶದ ಆರು ರಾಜ್ಯಗಳಲ್ಲಿ ಪಿತ್ರಾರ್ಜಿತ ಅಸ್ತಿ ಮಕ್ಕಳಿಗೆ ಬಂದಾಗ ಶೇ.೫೫ರಷ್ಟು ತೆರಿಗೆಯನ್ನು ಅಂದಿನ ಮಾರುಕಟ್ಟೆಯ ಮೌಲ್ಯದ ಮೇಲೆ ಕಟ್ಟಬೇಕೆಂಬ ಕಾಯ್ದೆ ಜಾರಿಯಲ್ಲಿದೆ. ಜಪಾನ್ನಲ್ಲಿಯೂ ಶೇ.೫೫ರಷ್ಟು ತೆರಿಗೆ ಕಟ್ಟಬೇಕೆಂಬ ಕಾಯಿದೆ ಜಾರಿಯಲ್ಲಿದೆ.
ಅದೇ ಮಾದರಿಯಲ್ಲಿ ಪಿತ್ರಾರ್ಜಿತ ಆಸ್ತಿಯ ಮೇಲೆ ತೆರಿಗೆ ಹೇರುವ ಕಾನೂನನ್ನು ಭಾರತದಲ್ಲೂ ಜಾರಿಗೆ ತರಬೇಕಾಗುತ್ತದೆಯೆಂಬ ವಿಷಯವನ್ನು ಸ್ಯಾಮ್
ಪಿತ್ರೋಡ ಪ್ರಸ್ತಾಪಿಸಿದ್ದಾರೆ. ಗಾಂಧಿ ಕುಟುಂಬದ ಪರಮಾಪ್ತನ ಬಾಯಲ್ಲಿ ಬಂದ ಮೇಲೆ, ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೂ ಒಪ್ಪಲೇ ಬೇಕು. ಕಾಂಗ್ರೆಸ್ ಮತ್ತು ಮುಸಲ್ಮಾನರ ಓಲೈಕೆ ರಾಜಕಾರಣ ರೈಲು ಹಳಿಗಳಿದ್ದಂತೆ, ಸ್ವಾತಂತ್ರ್ಯ ಪೂರ್ವದಿಂದಲೂ ಎರಡೂ ಹಳಿಗಳು ಒಟ್ಟಿಗಿರುತ್ತವೆ. ಮುಸಲ್ಮಾನರ ಮತಬ್ಯಾಂಕನ್ನು ಗಟ್ಟಿ ಮಾಡಿಕೊಳ್ಳಲು ’ವಕ್ಫ್’ ಕಾಯಿದೆಯನ್ನು ಜಾರಿಗೆ ತಂದರು. ಇಂದು ಭಾರತದಲ್ಲಿ ಅತಿ ಹೆಚ್ಚು ಆಸ್ತಿ ಯನ್ನು ಹೊಂದಿರುವವರಲ್ಲಿ ವಕ್ ಬೋರ್ಡ್ ಭಾರತೀಯ ರೈಲ್ವೆ ನಂತರದ ಸ್ಥಾನದಲ್ಲಿದೆ.
ಒಂದು ಅಂದಾಜಿನ ಪ್ರಕಾರ ಸುಮಾರು ೩,೦೦,೦೦೦ ಕೋಟಿ ಮೌಲ್ಯದ ಆಸ್ತಿ ವಕ್ಫ್ ಮಂಡಳಿಯಲ್ಲಿದೆ. ರಾಹುಲ್ ಗಾಂಧಿಗೆ ವಕ್ಫ್ ಬೋರ್ಡಿನ ಆಸ್ತಿ ಯನ್ನು ಮರು ವಿತರಣೆ ಮಾಡುತ್ತೇವೆಂದು ಹೇಳುವ ಧೈರ್ಯವಿದೆಯೇ? ಶ್ರೀಕೃಷ್ಣನ ಸ್ಥಾನ ದ್ವಾರಕದಲ್ಲಿರುವ ದ್ವೀಪವನ್ನು ವಕ್ಫ್ ಆಸ್ತಿ ಎಂದು ವಕ್ಫ್ ಬೋರ್ಡ್ ವಾದ ಮಾಡಿತ್ತು, ಸೂರತ್ ನಗರದ ಪಾಲಿಕೆಯ ಕಟ್ಟಡವನ್ನು ತನ್ನ ಆಸ್ತಿಯೆಂದು ಹೇಳಿತ್ತು. ಕರ್ನಾಟಕದಲ್ಲಿಯೂ ವಕ್ಫ್ ಮಂಡಳಿಗೆ ಸೇರಿದ ಸಾವಿರಾರು ಕೋಟಿ ಮೌಲ್ಯದ ಆಸ್ತಿಯಿದೆ, ವಕ್ಫ್ ಆಸ್ತಿ ಮರು ವಿತರಣೆಯ ಬಗ್ಗೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳಿಲ್ಲ.
೨೦೦೬ರಲ್ಲಿ ಕಾಂಗ್ರೆಸ್ಸಿನ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಭಾರತದಲ್ಲಿರುವ ಆಸ್ತಿಯ ಮೇಲೆ ಮುಸಲ್ಮಾನರಿಗೆ ಮೊದಲ ಹಕ್ಕಿದೆಯೆಂದು ತಮ್ಮ ಭಾಷಣದಲ್ಲಿ ಹೇಳಿದ್ದರು. ಇವರ ಮಾತುಗಳನ್ನೇ ಅನೇಕ ಕಾಂಗ್ರೆಸ್ ನಾಯಕರು ಬೇರೆ ಬೇರೆ ರಾಜ್ಯಗಳಲ್ಲಿ ಹೇಳುತ್ತಾ ಬಂದಿzರೆ. ೫೦ ಪುಟಗಳ ಬಯೋ ಡೇಟಾ ಹೊಂದಿರುವ ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಬಾಯಲ್ಲಿ ಸುಮ್ಮನೆ ಮಾತುಗಳು ಬರುವುದಿಲ್ಲ. ಕಾಂಗ್ರೆಸ್ಸಿನ ಓಲೈಕೆ ರಾಜಕಾರಣ ಈ ಮಾತುಗಳನ್ನಾಡಿಸುವಂತೆ ಮಾಡುತ್ತವೆ. ಅವರ ಮಾತು ಕೇವಲ ಮಾತಿಗೆ ನಿಲ್ಲಲಿಲ್ಲ, ಅಽಕಾರಕ್ಕೆ ಬಂದ ರಾಜ್ಯಗಳಲ್ಲಿ ಹೆಚ್ಚಿನ ಹಣವನ್ನು ಮುಸಲ್ಮಾನರ ಯೋಜನೆಗಳಿಗೆ ಕಾಂಗ್ರೆಸ್ ಸರಕಾರ ಮೀಸಲಿಡುತ್ತಾ ಬಂದಿದೆ. ೧೯೪೭ರಲ್ಲಿ ಅಖಂಡ ಭಾರತ ಧರ್ಮದ ಆಧಾರದ ಮೇಲೆ ವಿಭಜನೆಯಾದ ನಂತರ ರಚಿತವಾದ ಭಾರತದ ಸಂವಿಧಾನದಲ್ಲಿ ‘ಜಾತ್ಯತೀತ’ ಎಂಬ ಪದವೇ ಇರಲಿಲ್ಲ.
ಆದರೆ ಇಂದಿರಾಗಾಂಧಿ ಸಂವಿಧಾನದ ಮೂಲವನ್ನೇ ಬದಲಾಯಿಸಿ ’ಜಾತ್ಯತೀತ’ಎಂಬ ಪದವನ್ನು ಸೇರಿಸಿಬಿಟ್ಟರು. ಇಂದಿರಾ ಗಾಂಧಿಯವರಿಗೆ ’ಜಾತ್ಯ ತೀತ’ ಪದವನ್ನು ಸೇರಿಸಿಯೆಂಬ ಸಲಹೆಯನ್ನು ನೀಡಿದವರೇ ಎಡಚರರು. ಮುಸಲ್ಮಾನರ ಓಲೈಕೆಯ ಬಗ್ಗೆ ಮಾತನಾಡುವಾಗ ಕಾಂಗ್ರೆಸ್ ಜಾತ್ಯತೀತ ಪದವನ್ನು ತನ್ನ ಗುರಾಣಿಯನ್ನಾಗಿಸಿಕೊಳ್ಳುತ್ತದೆ. ಒಂದೆಡೆ ‘ಭಾರತ’ ಲೈಸೆ ರಾಜ್ ಸಂಸ್ಕೃತಿಯಿಂದ ಹೊರಬಂದು ಅಭಿವೃದ್ಧಿಯೆಡೆಗೆ ಮುನ್ನುಗ್ಗುತ್ತಿದ್ದರೆ, ಕಾಂಗ್ರೆಸ್ ಮಾತ್ರ ತನ್ನ ಪ್ರಣಾಳಿಕೆಯಲ್ಲಿ ಮತ್ತೊಮ್ಮೆ ಮಾವೋವಾದಿಗಳ ಸಲಹೆಯಂತೆ ತನ್ನ ಹಳೆಯ ತಪ್ಪುಗಳನ್ನು ಮತ್ತೆ ಮರುಕಳಿಸುವ ಮುನ್ಸೂ ಚನೆ ನೀಡಿದೆ. ಆಸ್ತಿಗಳನ್ನು ಸಮೀಕ್ಷೆ ಮಾಡಿಸಿ ಮರು ವಿತರಣೆ ಮಾಡುವ ಯೋಜನೆ, ಪಿತ್ರಾರ್ಜಿತ ಆಸ್ತಿಯ ಮೇಲೆ ತೆರಿಗೆ ಹೇರುವ ಯೋಚನೆಯನ್ನು ಮಾಡಿದೆ.ಒಟ್ಟಾರೆ ಒಟ್ಟಾರೆ ಭಾರತವನ್ನು ೫೦ ವರ್ಷಗಳ ಹಿಂದಕ್ಕೆ ದೂಡುವ ಯೋಚನೆಗಳು ಕಾಂಗ್ರೆಸ್ಸಿಗರ ಮಾತುಗಳಲ್ಲಿ ಅರ್ಥವಾಗುತ್ತಿದೆ.