ನವದೆಹಲಿ: ಕಾಂಗ್ರೆಸಿನ ಮಾಜಿ ರಾಷ್ಟ್ರೀಯ ಮಾಧ್ಯಮ ಸಂಯೋಜಕಿ ರಾಧಿಕಾ ಖೇರಾ ಮಂಗಳವಾರ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರಿದರು.
ಬಿಜೆಪಿ ಸೇರುವ ಮುನ್ನ ರಾಧಿಕಾ ಖೇರಾ ಅವರು ಛತ್ತೀಸ್ ಗಢ ಕಾಂಗ್ರೆಸ್ ಮಾಧ್ಯಮ ಅಧ್ಯಕ್ಷ ಸುಶೀಲ್ ಆನಂದ್ ಶುಕ್ಲಾ ವಿರುದ್ಧ ಗಂಭೀರ ಆರೋಪ ಮಾಡಿದ್ದರು.
ಸೋಮವಾರ ಖೇರಾ ಅವರು ಕಾಂಗ್ರೆಸಿನ ಛತ್ತೀಸ್ಗಢ ಕಚೇರಿಯಲ್ಲಿ ಅನುಭವಿಸಿದ ನಿಂದನೆಯ ಬಗ್ಗೆ ಮತ್ತು ಭೂಪೇಶ್ ಬಘೇಲ್, ಸಚಿನ್ ಪೈಲಟ್ ಮತ್ತು ಜೈರಾಮ್ ರಮೇಶ್ ಅವರಂತಹ ನಾಯಕರು ಪದೇ ಪದೇ ಕರೆ ಮಾಡಿದರೂ ತನ್ನ ರಕ್ಷಣೆಗೆ ಬರಲಿಲ್ಲ ಎಂಬುದರ ಬಗ್ಗೆ ಸುದೀರ್ಘವಾಗಿ ಮಾತನಾಡಿದರು.
ಛತ್ತೀಸ್ ಗಢದಲ್ಲಿ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ್ ಯಾತ್ರೆ ನಡೆದಾಗ ಸುಶೀಲ್ ಆನಂದ್ ಶುಕ್ಲಾ ಅವರು ತಮಗೆ ಮದ್ಯ ನೀಡಿದ್ದರು ಎಂದು ಅವರು ಆರೋಪಿಸಿದ್ದಾರೆ.