ಶಿವಮೊಗ್ಗ: ನಗರದಲ್ಲಿ ನಡುರಸ್ತೆಯಲ್ಲೇ ಇಬ್ಬರು ರೌಡಿಶೀಟರ್ ಗಳನ್ನು ಭೀಕರವಾಗಿ ಕೊಲೆ ಮಾಡಲಾಗಿದೆ.
ಶಿವಮೊಗ್ಗದ ಲಷ್ಕರ್ ಮೊಹಲ್ಲಾ ಸರ್ಕಲ್ ಬಳಿ ತುಂಗಾನಗರ ಠಾಣಾ ವ್ಯಾಪ್ತಿಯ ರೌಡಿಶೀಟರ್ ಶೋಹೆಬ್ @ ಸೇಬು ಮತ್ತು ದೊಡ್ಡಪೇಟೆ ಠಾಣಾ ವ್ಯಾಪ್ತಿಯ ಇನ್ನೋರ್ವ ರೌಡಿಶೀಟರ್ ಗೌಸ್ ಬರ್ಬರವಾಗಿ ಕೊಲೆಯಾಗಿದ್ದಾರೆ.
ಇನ್ನೊಂದು ಗ್ಯಾಂಗ್ ರೌಡಿ ಶೀಟರ್ ಯಾಸೀನ್ ಕುರೇಶಿ ಮೇಲೆ ಅಟ್ಯಾಕ್ ಮಾಡಿದ್ದು, ಚಾಕುವಿನಿಂದ ಇರಿದಿದ್ದಾರೆ. ರೌಡಿ ಶೀಟರ್ ಯಾಸೀನ್ ಕುರೇಶಿ ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ರೌಡಿಶೀಟರ್ ಶೋಹೆಬ್ @ ಸೇಬು ಮತ್ತು ಗೌಸ್ ಇಬ್ಬರೂ ಯಾಸೀನ್ ಮೇಲೆ ದಾಳಿ ಮಾಡಿದಾಗ ಪ್ರತಿದಾಳಿ ದಾಳಿ ನಡೆದಿದೆ. ಪ್ರತಿದಾಳಿ ವೇಳೆ ಸೇಬು ಮತ್ತು ಗೌಸ್ ಇಬ್ಬರು ರೌಡಿಶೀಟರ್ ಗಳು ಸ್ಥಳದಲ್ಲೇ ಬರ್ಬರವಾಗಿ ಹತ್ಯೆಗೀಡಾಗಿದ್ದಾರೆ.
ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಸ್ಥಳದಲ್ಲಿ ಪೊಲೀಸ್ ಬೀಗಿ ಬಂದೋಬಸ್ತ್ ನಿಯೋಜಿಸಲಾಗಿದೆ. ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ನಡೆದಿದೆ.