ಜಾಗತಿಕವಾಗಿ ಸರಾಸರಿ 66% ಮಂದಿಯಲ್ಲಿ ಇದೇ ಥರ ನಿಲುವು ಇದೆ. ಕುತೂಹಲಕರ ವಿಚಾರವೆಂದರೆ ಅನುಭವಕ್ಕಿಂತ ಈಗ ಎಐ ಕೌಶಲ್ಯವೇ ಹೆಚ್ಚಾಗಿದೆ. 80% ಮಂದಿ ಭಾರತದ ನಾಯಕರು ಎಐ ಕೌಶಲ್ಯಗಳನ್ನು ಹೊಂದಿರುವ ಕಡಿಮೆ ಅನುಭವ ಇರುವ ಅಭ್ಯರ್ಥಿಗಳನ್ನು ಕೆಲಸಕ್ಕೆ ನೇಮಿಸು ವಲ್ಲಿ ಆದ್ಯತೆ ನೀಡುತ್ತಾರೆ. ಎಐ ಕೌಶಲವಿಲ್ಲದ ಹೆಚ್ಚು ಅನುಭವ ಹೊಂದಿರುವ ಅಭ್ಯರ್ಥಿಗೆ ಕಡಿಮೆ ಆದ್ಯತೆ ನೀಡಲಾಗುತ್ತದೆ.
ಕಳೆದ ವರ್ಷದ ಅಂತ್ಯದ ವೇಳೆಗೆಲಿಂಕ್ಡ್ಇನ್ ನಲ್ಲಿ ಕೋಪೈಲೆಟ್ ಮತ್ತು ಚಾಟ್ ಜಿಪಿಟಿಯಂತಹ ಎಐ ಕೌಶಲ್ಯವನ್ನು ತಮ್ಮ ಪ್ರೊಫೈಲ್ ಸೇರಿಸಿರುವ ಸದಸ್ಯರ ಸಂಖ್ಯೆಯಲ್ಲಿ ಜಾಗತಿಕವಾಗಿ 142x ಹೆಚ್ಚಳ ಕಂಡುಬಂದಿದೆ. ಜೊತೆಗೆನಾನ್-ಟೆಕ್ನಿಕಲ್ ವೃತ್ತಿಪರರು ತಮ್ಮ ಎಐಪರಿಣತಿಯನ್ನು ಹೆಚ್ಚಿಸಿ ಕೊಳ್ಳಲು ಲಿಂಕ್ಡ್ಇನ್ ಲರ್ನಿಂಗ್ ಕೋರ್ಸ್ಗಳನ್ನು ಬಳಸುವ ವಿಚಾರದಲ್ಲಿ 160% ಹೆಚ್ಚಳ ಕಂಡು ಬಂದಿದೆ.
3. ಎಐ ಶಕ್ತಿಬಳಕೆದಾರರಲ್ಲಿ ಏರಿಕೆ-ಮತ್ತು ಅವರು ಭವಿಷ್ಯದ ಕುರಿತು ಏನು ಹೇಳುತ್ತಾರೆ ಎಂಬುದನ್ನು ನೋಡೋಣ:
ಸಂಶೋಧನೆಯ ಪ್ರಕಾರ ನಾಲ್ಕು ವಿಧದ ಎಐಬಳಕೆದಾರರು ಇದ್ದಾರೆ. ಎಐಅನ್ನು ಅಪರೂಪವಾಗಿ ಬಳಸುವ ಬಳಕೆದಾರರಿಂದ ಹಿಡಿದು ವ್ಯಾಪಕವಾಗಿ ಎಐ ಶಕ್ತಿ ಬಳಸುವ ಬಳಕೆದಾರರು ಇದ್ದಾರೆ. ಇವರ ಮಧ್ಯೆ, ಹೊಸಬರು ಮತ್ತು ಪರಿಶೋಧಕರು ಕೂಡ ಇದ್ದಾರೆ. ಅಪರೂಪಕ್ಕೆ ಎಐ ಬಳಸುವವರಿಗೆ ಹೋಲಿಸಿದರೆ, ಎಐಶಕ್ತಿಯ ಭಾರತೀಯ ತೀವ್ರ ಬಳಕೆದಾರರಲ್ಲಿ 90% ತಮ್ಮ ಕೆಲಸದ ದಿನವನ್ನು ಎಐ ಬಳಸುವ ಮೂಲಕವೇ ಪ್ರಾರಂಭಿಸುತ್ತಾರೆ ಮತ್ತು 91%ರಷ್ಟು ಜನರು ಮರುದಿನದ ತಯಾರಿಗಾಗಿಯೂ ಎಐ ಅನ್ನು ಅವಲಂಬಿಸಿದ್ದಾರೆ. ಅದರಲ್ಲಿ 37% ಮಂದು ಸೂಕ್ತವಾದ ಪ್ರಾಂಪ್ಟ್ಗಳನ್ನು ನೀಡುವ ಕುರಿತಾಗಿ ಸಹೋದ್ಯೋಗಿಗಳ ಮಾರ್ಗದರ್ಶನ ಪಡೆಯುತ್ತಾರೆ ಮತ್ತು 47% ಮಂದಿ ಎಐ ಪ್ರಯೋಗ ಮಾಡಲು ಆಸಕ್ತಿ ತೋರುತ್ತಾರೆ.
ಇತರ ಉದ್ಯೋಗಿಗಳಿಗೆ ಹೋಲಿಸಿದರೆಸುಮಾರು 20% ಎಐಶಕ್ತಿಯ ಬಳಕೆದಾರರು ವಿಶೇಷವಾಗಿ ಪ್ರಾಂಪ್ಟ್ಗಳು ಮತ್ತು ನಿರ್ದಿಷ್ಟ ಎಐಬಳಕೆಯ ಕುರಿತು ತರಬೇತಿ ಪಡೆಯಲು ಇಚ್ಛಿಸುತ್ತಾರೆ. ಸುಮಾರು 65% ಮಂದಿ ಜನರೇಟಿವ್ ಎಐ ಮೂಲಕ ಸಿಇಓ ಅವರ ಜೊತೆ ಸಂವಹನ ನಡೆಸುವ ಸಾಧ್ಯತೆ ಹೊಂದಿದ್ದಾರೆ. 34%ಮಂದಿ ವಿಭಾಗದ ಮುಖ್ಯಸ್ಥರಿಂದ ಮತ್ತು ಅವರ 44% ಮಂದಿ ಮ್ಯಾನೇಜರ್ನಿಂದ ಜನರೇಟಿವ್ ಎಐ ಮೂಲಕ ಸಂವಹನ ನಡೆಸಬಹುದಾಗಿದೆ.
ಈ ಕುರಿತು ಮಾತನಾಡಿದ ಮೈಕ್ರೋಸಾಫ್ಟ್ ನ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ವ್ಯವಸ್ಥಾಪಕ ನಿರ್ದೇಶಕಿ ಐರಿನಾ ಘೋಸ್, “ವರ್ಕ್ ಟ್ರೆಂಡ್ ಇಂಡೆಕ್ಸ್ ಮಾಹಿತಿಯು ಎಐ ವೃತ್ತಿ ಸ್ಥಳದಲ್ಲಿನ ವಾಸ್ತವ ಸತ್ಯವಾಗಿದೆ ಎಂಬುದನ್ನು ತೋರಿಸುತ್ತದೆ. ಭಾರತದ ಪರಿಣತಕೆಲಸಗಾರರಲ್ಲಿ 92% ರಷ್ಟು ಎಐ ಅಳವಡಿಕೆ ಯನ್ನು ಕಾಣಬಹುದಾಗಿದ್ದು, ಇದು ಎಐ ಅಳವಡಿಕೆಯ ಅತಿ ಹೆಚ್ಚು ದರವನ್ನು ಸೂಚಿಸುತ್ತದೆ. ಬಿಎಫ್ಎಸ್ಐನಿಂದ ಹಿಡಿದು ಹೆಲ್ತ್ ಕೇರ್ವರೆಗೆ, ಐಟಿಇಎಸ್ನಿಂದ ಹಿಡಿದು ಸಾರ್ವಜನಿಕ ವಲಯಗಳವರೆಗೆ ಎಐ ಕುರಿತಾಗಿ ಎಲ್ಲಾ ಕಡೆ ಉತ್ತೇಜನವನ್ನು ನಾವು ಗಮನಿಸಬಹುದಾಗಿದೆ. ನಾವು ನೋಡುತ್ತಿರುವ ಈ ಎಐ ಹುಮ್ಮಸ್ಸಿನಿಂದಾಗಿ ಸಂಸ್ಥೆಗಳು ಉದ್ಯೋಗಿಗಳಿಗೆ ದಕ್ಷತೆ ಸಾಧಿಸಲು ಮತ್ತು ಅಂತಿಮವಾಗಿ ದೀರ್ಘಾವಧಿಯ ವ್ಯವಹಾ ರದ ಪ್ರಯೋಜನ ಗಳಿಸಲು ಸರಿಯಾದ ಟೂಲ್ ಗಳು ಮತ್ತು ತರಬೇತಿಯಲ್ಲಿ ಹೂಡಿಕೆ ಮಾಡುವ ಕಡೆಗೆ ಗಮನ ಹರಿಸಬಹುದಾಗಿದೆ” ಎಂದು ಹೇಳಿದರು.