ಬೆಂಗಳೂರು: ಒಂದು ವಾರದಿಂದ ಏರಿಳಿತ ಕಾಣುತ್ತಿದ್ದ ಚಿನ್ನದ ದರವು ಶುಕ್ರವಾರ ಮತ್ತೆ ಇಳಿಕೆ ಕಂಡಿದೆ. ಮದುವೆ ಹಾಗೂ ಶುಭ ಕಾರ್ಯಗಳು ಜರುಗುತ್ತಿದ್ದು, ಚಿನ್ನ ಬೆಳ್ಳಿ ಆಭರಣಗಳಿಗೆ ಭರ್ಜರಿ ಬೇಡಿಕೆ ಇದೆ.
ಚಿನ್ನ ಖರೀದಿ ಮಾಡಬೇಕು ಎಂಬ ಆಲೋಚನೆ ಹೊಂದಿದ್ದವರಿಗೆ ಒಳ್ಳೆಯ ಅವಕಾಶ. ಸದ್ಯ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ಚಿನ್ನ 10 ಗ್ರಾಂಗೆ 900 ರೂ., 72.650 ಆಗಿದೆ. ಧಾರಣೆಯು ಕೆ.ಜಿ. 500 ರೂ. ಇಳಿದು 92,100ಕ್ಕೆ ಕುಸಿದಿದೆ. ದೆಹಲಿ ಮಾರುಕಟ್ಟೆಗಳಲ್ಲಿ ಸ್ಪಾಟ್ ಚಿನ್ನದ ಬೆಲೆಯು 10 ಗ್ರಾಂಗೆ 72,650 ರೂ.ನಲ್ಲಿ ವಹಿವಾಟು ನಡೆಸುತ್ತಿದೆ. 900 ರೂ.ಗಳಷ್ಟು ಕಡಿಮೆಯಾಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯು ಒಂದು ಔನ್ಸ್ಗೆ (28.34 ಗ್ರಾಂ) ಕ್ರಮವಾಗಿ 2.340 ಡಾಲ್ ( ಅಂದಾಜು 1.94 ಲಕ್ಷ ) ಮತ್ತು 30.45 ಡಾಲರ್ನಂತೆ ( ಅಂದಾಜು 2.531 ರೂ.) ಮಾರಾಟವಾಗಿದೆ.
ಅಮೆರಿಕ ಫೆಡರ್ಲ್ ರಿಸರ್ವ್ ಬಡ್ಡಿದರ ಕಡಿತಕ್ಕೆ ಇನ್ನೂ ನಿರ್ಧರಿಸಿಲ್ಲ. ಇಳುವರಿ ಮತ್ತು ಡಾಲರ್ ಸೂಚ್ಯಂಕವು ಏರಿಕೆಯಾಗಿದೆ. ಹೂಡಿಕೆದಾರರು ಲಾಭ ಗಳಿಕೆ ಯತ್ತ ಗಮನ ಹರಿಸಿದ್ದು ಹಳದಿ ಲೋಹದ ಮಾರಾಟಕ್ಕೆ ಮುಂದಾಗಿದ್ದಾರೆ. ಇದರಿಂದ ಚಿನ್ನ ಬೆಲೆಯಲ್ಲಿ ಇಳಿಕೆಯಾಗಿದೆ ಎಂದು ಹೇಳುತ್ತಾರೆ.
ಮಹಾನಗರಗಳಲ್ಲಿ ಚಿನ್ನದ ರೇಟ್ಳ ಬೆಂಗಳೂರಿನಲ್ಲಿ ಶುಕ್ರವಾರ 22 ಕ್ಯಾರಟ್ ಬಂಗಾರದ ಬೆಲೆ ( ಗ್ರಾಂ) ರೂ. 6,750 ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 6,750 ರೂ. 6,730 ರೂ. 6,730 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಚಿನ್ನದ ಬೆಲೆ 6,745 ರೂ. ಆಗಿದೆ.