Saturday, 23rd November 2024

ಪುಟಿದೆದ್ದ ಸೆನ್ಸೆಕ್ಸ್, ನಿಫ್ಟಿ ಸೂಚ್ಯಂಕ

ವದೆಹಲಿ: ದೆಹಲಿಯಲ್ಲಿ ನರೇಂದ್ರ ಮೋದಿ ಅವರನ್ನು ತಮ್ಮ ನಾಯಕನನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದ ನಂತರ, ಷೇರುಪೇಟೆ ಮಾರುಕಟ್ಟೆ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಗುರುವಾರ ಪುಟಿದೆದ್ದಿದೆ.

ಗುರುವಾರದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 696.46 ಪಾಯಿಂಟ್ ಏರಿಕೆ ಕಂಡು 75,078.70 ಕ್ಕೆ ತಲುಪಿದೆ.ನಿಫ್ಟಿ ಕೂಡ 179.15 ಪಾಯಿಂಟ್ ಏರಿಕೆ ಕಂಡು 22,799.50 ಕ್ಕೆ ತಲುಪಿದೆ.

ಬುಧವಾರ, 30 ಷೇರುಗಳ ಸೆನ್ಸೆಕ್ಸ್ 2,303.19 ಪಾಯಿಂಟ್ ಅಥವಾ 3.20% ಏರಿಕೆ ಕಂಡು 74,382.24 ಕ್ಕೆ ಸ್ಥಿರವಾಯಿತು. ದಿನದ ವಹಿವಾಟಿನಲ್ಲಿ ಇದು ಶೇಕಡಾ 3.40 ರಷ್ಟು ಏರಿಕೆಯಾಗಿ 74,534.82 ಕ್ಕೆ ತಲುಪಿದೆ. 50 ಷೇರುಗಳ ನಿಫ್ಟಿ 735.85 ಪಾಯಿಂಟ್ ಅಥವಾ 3.36% ಏರಿಕೆ ಕಂಡು 22,620.35 ಕ್ಕೆ ತಲುಪಿದೆ. ಮೊನ್ನೆ ಮಂಗಳವಾರ ಲೋಕಸಭೆ ಚುನಾವಣೆ ಫಲಿತಾಂಶ ದಿನ ಸೆನ್ಸೆಕ್ಸ್ ಪಾತಾಳಕ್ಕೆ ಕುಸಿದಿತ್ತು.