ಬೆಂಗಳೂರು: ಮೆಟ್ರೋ ಮತ್ತು ನಾನ್-ಮೆಟ್ರೋಗಳಲ್ಲಿ ಬ್ಯಾಂಕಿಂಗ್ ಗ್ರಾಹಕರು ತಮ್ಮ ಪ್ರೀಮಿಯಂ ಉಳಿತಾಯ ಖಾತೆಗಳಿಗೆ ಕಾಂಪ್ಲಿಮೆಂಟರಿ ಕೊಡುಗೆಗಳು ಮತ್ತು ಮೌಲ್ಯವರ್ಧಿತ ಸೇವೆಗಳನ್ನು ನಿರೀಕ್ಷಿಸುತ್ತಾರೆ.
ನಾನ್-ಮೆಟ್ರೋಗಳಲ್ಲಿ ಹೆಚ್ಚಿನ ಜನರು ವಿಮಾ ರಕ್ಷಣೆಗೆ ಪ್ರಾಧಾನ್ಯತೆ ನೀಡುತ್ತಾರೆ ಎನ್ನುತ್ತದೆ ಪ್ರೀಮಿಯಂ ವಿಭಾಗದಲ್ಲಿ ನಡೆಸಿದ ಸಮೀಕ್ಷೆ. ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನಡೆಸಿದ ಅಧ್ಯಯನವೊಂದರ ಪ್ರಕಾರ, ನಾನ್-ಮೆಟ್ರೋ ಗ್ರಾಹಕರಲ್ಲಿ 42%, 10 ರೂಗಳ ಲಕ್ಷಗಳ ಆಕಸ್ಮಿಕ ವಿಮಾ ರಕ್ಷಣೆ ಯನ್ನು ನೀಡುವ ಪ್ರೀಮಿಯಂ ಉಳಿತಾಯ ಖಾತೆಗಳ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದರೆ ಮೆಟ್ರೋ ಗ್ರಾಹಕರಲ್ಲಿ 67% ಶಾಪಿಂಗ್ ಮತ್ತು ಪ್ರಯಾಣಕ್ಕೆ ಸಂಬಂಧಿಸಿದ ಕೊಡುಗೆಗಳಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಮೆಟ್ರೋ ಮತ್ತು ನಾನ್-ಮೆಟ್ರೋ ಗ್ರಾಹಕರಲ್ಲಿ ಜನಪ್ರಿಯವಾಗಿರುವ ಒಂದು ಗಮನಾರ್ಹ ವೈಶಿಷ್ಟ್ಯವೆಂದರೆ ಕಾಂಪ್ಲಿಮೆಂಟರಿ ವಿಮಾನ ನಿಲ್ದಾಣದ ಲಾಂಜ್ ಸೌಲಭ್ಯ. ಇದರ ಬಗ್ಗೆಯೇ 50% ಮೆಟ್ರೋ ಗ್ರಾಹಕರು ಮತ್ತು 31% ನಾನ್-ಮೆಟ್ರೋ ಗ್ರಾಹಕರು ಆಸಕ್ತಿಯನ್ನು ವ್ಯಕ್ತಪಡಿಸಿದ್ದಾರೆ.
ಉಜ್ಜೀವನ್ ಎಸ್.ಎಫ್.ಬಿ. ಯ 400+ ಶಾಖೆಗಳಲ್ಲಿ ಈ ಸಮೀಕ್ಷೆಯನ್ನು ನಡೆಸಲಾಯಿತು. ನಾನ್-ಮೆಟ್ರೋ ನಗರಗಳಲ್ಲಿ, 50% ಗ್ರಾಹಕರು ಗುಪ್ತ ಶುಲ್ಕಗಳು ಮತ್ತು ಹೆಚ್ಚಿನ ವಹಿವಾಟು ಶುಲ್ಕಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವುದು ಬ್ಯಾಂಕಿಂಗ್ ಸೇವೆಗಳಲ್ಲಿ ಪಾರದರ್ಶಕತೆಯ ಅಗತ್ಯವನ್ನು ಎತ್ತಿ ತೋರಿಸುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, 56% ಮೆಟ್ರೋ ಗ್ರಾಹಕರು ತಮ್ಮ ಕಾರ್ಡ್ಗಳು ನೀಡುವ ಸೀಮಿತ ಕೊಡುಗೆಗಳು ಮತ್ತು ಪ್ರಚಾರ ಕೊಡುಗೆಗಳ ಬಗ್ಗೆ ಚಿಂತಿತರಾಗಿದ್ದರು. ಇದು ಸೂಕ್ತವಾದ ಪರ್ಕ್ಗಳು ಮತ್ತು ವಿಶೇಷ ಪ್ರಯೋಜನಗಳ ಬಯಕೆಯನ್ನು ಸೂಚಿಸುತ್ತದೆ. ಮೌಲ್ಯವರ್ಧಿತ ಸೇವೆಗಳ ಕೊರತೆ ನಾನ್-ಮೆಟ್ರೋ (37%) ಮತ್ತು ಮೆಟ್ರೋ ಗ್ರಾಹಕರು (33%) ಇಬ್ಬರಲ್ಲೂ ಸಾಮಾನ್ಯ ಸವಾಲಾಗಿ ಹೊರಹೊಮ್ಮಿದೆ.
ಸಂಶೋಧನೆಗಳ ಕುರಿತು ಪ್ರತಿಕ್ರಿಯಿಸಿದ ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ನ ಎಂಡಿ ಮತ್ತು ಸಿಇಒ ಶ್ರೀ ಇಟ್ಟೀರ ಡೇವಿಸ್, “ಬ್ಯಾಂಕ್ಗಳು ವೈಯಕ್ತಿಕ ಗೊಳಿಸಿದ ಪ್ರೀಮಿಯಂ ಬ್ಯಾಂಕಿಂಗ್ ಪರಿಹಾರಗಳನ್ನು ಒದಗಿಸಲು ವಿವಿಧ ಪ್ರದೇಶಗಳಲ್ಲಿನ ಗ್ರಾಹಕರ ಕ್ಷಿಪ್ರವಾಗಿ ವಿಕಸನಗೊಳ್ಳುತ್ತಿರುವ ನಿರೀಕ್ಷೆಗಳನ್ನು ಅರ್ಥಮಾಡಿಕೊಳ್ಳುವುದು ಹೆಚ್ಚು ಮುಖ್ಯವಾಗುತ್ತಿದೆ. ನಮ್ಮ ಮೌಲ್ಯಯುತ ಗ್ರಾಹಕರ ನಿರೀಕ್ಷೆಗಳು ಮತ್ತು ಆದ್ಯತೆಗಳಿಗೆ ಸ್ಪಂದಿಸಲು ಅನುಪಮವಾದ ಅನುಭವಗಳ ಸಹಿತವಾದ ಮತ್ತು ಅರ್ಥಪೂರ್ಣ ಪರಿಹಾರಗಳನ್ನು ನೀಡುವುದು ಬಹಳ ಮುಖ್ಯವಾಗುತ್ತದೆ.”
ಹೊಸ ಮತ್ತು ಈಗಿರುವ ಗ್ರಾಹಕರಿಗೆ ಪ್ರೀಮಿಯಂ ಬ್ಯಾಂಕಿಂಗ್ ಅನುಭವವನ್ನು ಒದಗಿಸಲು ಉಜ್ಜೀವನ್ ಎಸ್ಎಫ್ಬಿ ಇತ್ತೀಚೆಗೆ ಮ್ಯಾಕ್ಸಿಮಾ ಉಳಿತಾಯ ಖಾತೆ ಮತ್ತು ಬಿಸಿನೆಸ್ ಮ್ಯಾಕ್ಸಿಮಾ ಚಾಲ್ತಿ ಖಾತೆಯನ್ನು ಪ್ರಾರಂಭಿಸಿದೆ. ಮೆಟ್ರೋ ಮತ್ತು ನಾನ್-ಮೆಟ್ರೋಗಳಾದ್ಯಂತ ಈ ವೈವಿಧ್ಯಮಯ ಗ್ರಾಹಕ ವಿಭಾಗದ ಗ್ರಾಹಕರಿಗೆ ಉತ್ತಮ ವೈಶಿಷ್ಟ್ಯಗಳು, ವಿವಿಧ ಸೇವೆಗಳು ಮತ್ತು ಪ್ರಯೋಜನಗಳನ್ನು, ಆರ್ಥಿಕ ಅಗತ್ಯಗಳನ್ನು ಪೂರೈಸಲು ಅನುವಾಗುವಂತೆ ಈ ಖಾತೆಗಳನ್ನು ವಿನ್ಯಾಸಗೊಳಿಸಲಾಗಿದೆ. ಸಾಂಪ್ರದಾಯಿಕ ಬ್ಯಾಂಕಿಂಗ್ ಪ್ರಯೋಜನಗಳ ಜೊತೆಗೆ ಈ ಖಾತೆಗಳು ಯೋಗಕ್ಷೇಮ ಸೇವೆಗಳು, ವಿಶೇಷ ವ್ಯಾಪಾರಿ ಕೊಡುಗೆಗಳು, ವಿಮಾನ ನಿಲ್ದಾಣದ ಲಾಂಜ್ ಗೆ ಪ್ರವೇಶ ಮತ್ತು ಪ್ರೀಮಿಯಂ ಆರೋಗ್ಯ ತಪಾಸಣೆಗೆ ಅವಕಾಶವನ್ನು ಒದಗಿಸುತ್ತವೆ.