Wednesday, 11th December 2024

ಜುಲೈ 10ರಂದು 13 ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆ

ನವದೆಹಲಿ: ಏಳು ರಾಜ್ಯಗಳ 13 ವಿಧಾನಸಭಾ ಸ್ಥಾನಗಳಿಗೆ ಜುಲೈ 10ರಂದು ಉಪಚುನಾವಣೆ ನಡೆಯಲಿದೆ ಎಂದು ಭಾರತದ ಚುನಾವಣಾ ಆಯೋಗ ಘೋಷಿಸಿದೆ.

ಬಿಹಾರ, ತಮಿಳುನಾಡು ಮತ್ತು ಮಧ್ಯಪ್ರದೇಶದ ತಲಾ ಒಂದು, ಪಶ್ಚಿಮ ಬಂಗಾಳದ ನಾಲ್ಕು ಮತ್ತು ಉತ್ತರಾಖಂಡ, ಪಂಜಾಬ್ ಮತ್ತು ಹಿಮಾಚಲ ಪ್ರದೇಶದ ತಲಾ ಎರಡು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ.

ಉಪಚುನಾವಣೆಯ ವೇಳಾಪಟ್ಟಿ

  • ಅಧಿಸೂಚನೆ ಪ್ರಕಟಣೆ: ಜೂ.14
  • ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ: ಜೂ.21
  • ನಾಮಪತ್ರ ಪರಿಶೀಲನೆ: ಜೂ.24
  • ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ: ಜೂ.26
  • ಮತದಾನದ ದಿನಾಂಕ: ಜುಲೈ 10
  • ಫಲಿತಾಂಶ: ಜುಲೈ 13

ಜುಲೈ 10 ರಂದು ಉಪಚುನಾವಣೆ ನಡೆಯಲಿರುವ ಕ್ಷೇತ್ರಗಳ ಪಟ್ಟಿ

ಬಿಹಾರ: ಬಿಮಾ ಭಾರತಿ ರಾಜೀನಾಮೆಯಿಂದ ತೆರವಾಧ ರುಪೌಲಿ ಕ್ಷೇತ್ರ
ಪಶ್ಚಿಮ ಬಂಗಾಳ: ಶ್ರೀ ಕೃಷ್ಣ ಕಲ್ಯಾಣಿ ರಾಜೀನಾಮೆಯಿಂದ ತೆರವಾದ ರಾಯ್​ಗಂಜ್ ಸ್ಥಾನ
ಪಶ್ಚಿಮ ಬಂಗಾಳ: ಮುಕುಟ್​​ ಮಣಿ ಅಧಿಕಾರಿ ರಾಜೀನಾಮೆಯಿಂದ ತೆರವಾದ ರಣಘಾಟ್ ದಕ್ಷಿಣ ಕ್ಷೇತ್ರ
ಪಶ್ಚಿಮ ಬಂಗಾಳ: ಬಿಸ್ವಜಿತ್ ದಾಸ್ ರಾಜೀನಾಮೆಯಿಂದ ಬಾಗ್ಡಾ ಸ್ಥಾನ
ಪಶ್ಚಿಮ ಬಂಗಾಳ: ಸಾಧನ್ ಪಾಂಡೆ ನಿಧನದಿಂದ ತೆರವಾದ ಮಣಿಕ್​ತಾಲ್​ ಕ್ಷೇತ್ರ
ತಮಿಳುನಾಡು: ತಿರು ಎನ್​ ಪುಗಳೆಂದಿ ನಿಧನದಿಂದ ತೆರವಾದ ವಿಕ್ರಾವಂಡಿ ಕ್ಷೇತ್ರ
ಮಧ್ಯಪ್ರದೇಶ: ಕಮಲೇಶ್ ಪ್ರತಾಪ್ ಶಾ ರಾಜೀನಾಮೆಯಿಂದಾಗಿ ಅಮರವಾರಾ ಸ್ಥಾನ
ಉತ್ತರಾಖಂಡ: ರಾಜೇಂದ್ರ ಸಿಂಗ್ ಭಂಡಾರಿ ರಾಜೀನಾಮೆಯಿಂದಾಗಿ ಬದರೀನಾಥ್ ಸ್ಥಾನ
ಉತ್ತರಾಖಂಡ: ಸರ್ವತ್ ಕರೀಂ ಅನ್ಸಾರಿ ಅವರ ನಿಧನದಿಂದಾಗಿ ಮಂಗಳೌರ್ ಕ್ಷೇತ್ರ
ಪಂಜಾಬ್​: ಶೀತಲ್ ಅಂಗುರಾ ಅವರ ರಾಜೀನಾಮೆಯಿಂದ ತೆರವಾದ ಪಂಜಾಬ್ ಜಲಂಧರ್ ಪಶ್ಚಿಮ ಸ್ಥಾನ
ಹಿಮಾಚಲ ಪ್ರದೇಶ: ಹೋಶ್ಯಾರ್ ಸಿಂಗ್ ಅವರ ರಾಜೀನಾಮೆಯಿಂದಾಗಿ ಡೆಹ್ರಾಡೂನ್ ಕ್ಷೇತ್ರ
ಹಿಮಾಚಲ ಪ್ರದೇಶ: ಆಶಿಶ್ ಶರ್ಮಾ ಅವರ ರಾಜೀನಾಮೆಯಿಂದಾಗಿ ತೆರವಾದ ಹಮೀರ್ಪುರ ಸ್ಥಾನ
ಹಿಮಾಚಲ ಪ್ರದೇಶ: ಕೆ.ಎಲ್.ಠಾಕೂರ್ ಅವರ ರಾಜೀನಾಮೆಯಿಂದಾಗಿ ತೆರವಾದ ನಲಘರ್ ಸ್ಥಾನ

ಚುನಾವಣೆಗೆ ನಡೆಯುವ ವಿಧಾನಸಭಾ ಕ್ಷೇತ್ರದ ಸಂಪೂರ್ಣ ಅಥವಾ ಯಾವುದೇ ಭಾಗವನ್ನು ಒಳಗೊಂಡಿರುವ ಜಿಲ್ಲೆಗಳಲ್ಲಿ ಮಾದರಿ ನೀತಿ ಸಂಹಿತೆ (ಎಂಸಿಸಿ) ತಕ್ಷಣದಿಂದ ಜಾರಿಗೆ ಬರಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಜುಲೈ 15 ರೊಳಗೆ ಉಪಚುನಾವಣೆಗಳನ್ನು ಪೂರ್ಣಗೊಳಿಸಬೇಕು ಎಂದು ಅದು ಹೇಳಿದೆ.