Saturday, 14th December 2024

ಎಲಾನ್ ಮಸ್ಕ್ ಹೇಳಿದರೆ ಎಲ್ಲಮ್ಮನೇ ಹೇಳಿದಂತಾಗುವುದೇ ?

ಪ್ರಚಲಿತ

ವಿರೇಶ್ ಎಸ್.ಅಬ್ಬಿಗೇರಿ, ನಾಗರಹಳ್ಳಿ

ಭಾರತದಲ್ಲಿ ಲೋಕಸಭಾ ಚುನಾವಣೆ ಏನೋ ಮುಗಿದಿದೆ. ಆದರೆ ಸಕಾರ ಅಸ್ತಿತ್ವಕ್ಕೆ ಬಂದು ಕಾರ್ಯ ಪ್ರವೃತ್ತವಾಗಿದ್ದರೂ ಚುನಾವಣಾ ಕಾವು ಮಾತ್ರ ಇನ್ನೂ ಇಳಿದಿಲ್ಲ. ಇನ್ನೊಂದರ್ಥ ದಲ್ಲಿ ಹೇಳುವುದಾದರೆ, ಪ್ರತಿ ಚುನಾವಣೆ ಬಳಿಕದ ಪದ್ಧತಿ, ಆಚಾರಗಳಂತೆ ಇವಿಎಂ ಮೇಲಿನ ದೋಷಾರೋಪಣೆ ಮಾತ್ರ ನಿಂತಿಲ್ಲ. ಪ್ರತಿ ವರ್ಷದಂತೆಯೇ ನರೇಂದ್ರ ಮೋದಿಯವರಂತೆ ಈ ಬಾರಿಯೂ ಇವಿಎಂ ಮಷಿನ್ ಕೂಡ ಚುನಾವಣೆಯ ಮುಖ್ಯ ಕೇಂದ್ರ
ಬಿಂದುವಾಗಿತ್ತು.

ಈ ಬಾರಿ ಕಾಂಗ್ರೆಸ್ ಸೇರಿದಂತೆ ವಿರೋಧಿ ಮೈತ್ರಿಕೂಟಕ್ಕೆ ಹೆಚ್ಚು ಸೀಟುಗಳು ಬಂದಿರುವುದರಿಂದ ಈ ಬಾರಿ ಇವಿಎಂ ಮೇಲೆ ಹೆಚ್ಚು ಆಪಾದನೆಗಳು ಬರಲಿಕ್ಕಿಲ್ಲ ಎಂದು ಭಾವಿಸಲಾಗಿತ್ತು. ಆದರೆ ಈಗ ಪಕ್ಕಾ ಆಗಿರುವ ಸುದ್ದಿ ಎಂದರೆ ವಿರೋಧ ಪಕ್ಷಗಳು ತಾವು ಅಧಿಕಾರಕ್ಕೆ ಬರುವ ವರೆಗೂ ಹೀಗೆ ದೂರುವುದನ್ನು ನಿಲ್ಲಿಸಲಾರವು. ಜತೆಗೆ ಈ ಬಾರಿ ಚುನಾವಣೆ ಮುಗಿದ ಮೇಲೆ ಹೆಚ್ಚು ದೂರದೇ ಸುಮ್ಮನಾಗಿದ್ದ ಕಾಂಗ್ರೆಸ್, ಯಾವಾಗ ಟೆಸ್ಲಾ ಮತ್ತು ಎಕ್ಸ್‌ನ ಮಾಲೀಕ ಎಲಾನ್ ಮಸ್ಕ್ ಇವಿಎಂಗಳನ್ನು ಹ್ಯಾಕ್ ಮಾಡಲು ಸಾಧ್ಯ ಎಂದು ಹೇಳಿದನೋ, ಆಗ ಕಾಂಗ್ರೆಸ್ ಮತ್ತೆ ರೊಚ್ಚಿಗೆದ್ದಿದೆ.

ಇಷ್ಟು ದಿನ ಸುಮ್ಮನಿದ್ದ ಕಾಂಗ್ರೆಸ್ ನಾಯಕರು, ಹೌದೌದು, ಇವಿಎಂಗಳನ್ನು ಹ್ಯಾಕ್ ಮಾಡಬಹುದು ಎಂದು ದನಿಗೂಡಿಸುತ್ತಿzರೆ. ಅಲ್ಲ ಈ ಎಲಾನ್ ಮ ಹೇಳಿದರೆ ಏನು ದೇವರೇ ಬಂದು ಪ್ರತ್ಯಕ್ಷನಾಗಿ ಹೇಳಿದಂತೆಯಾ? ಆತ ಹೇಳಿದ ಮಾತ್ರಕ್ಕೆ ಹ್ಯಾಕ್ ಮಾಡಲು ಸಾಧ್ಯ ಎಂದು ತೀರ್ಮಾನವಾಗೇಬಿಟ್ಟಿತಾ? ಮಸ್ಕ್ ಕೂಡ ಹೇಳಿದ್ದು ಇತ್ತೀಚೆಗೆ ಪುರ್ಟೋರಿಕೋದಲ್ಲಿ ನಡೆದ ಚುನಾವಣೆಯಲ್ಲಿ ನಡೆದ ಗಲಾಟೆ ಮತ್ತು ಅತಂತ್ರದಿಂದಾಗಿ. ಅಲ್ಲಿನ ಚುನಾವಣೆಯಲ್ಲಿ ಇನ್ನಿಲ್ಲದ ಅಕ್ರಮಗಳು ನಡೆದು ಕುಲಗೆಟ್ಟು ಹೋಗಿದೆ. ಅದನ್ನು ತಂದು ಭಾರತದ ಚುನಾವಣೆಗಳಿಗೂ ಹೋಲಿಸಿ ಮಾತನಾಡುವುದು ಸರಿಯಲ್ಲ.

ಅಷ್ಟಕ್ಕೂ ಮಸ್ಕ್ ಏನು ಸಂಭಾವಿತ, ಸಾಮಾನ್ಯನಲ್ಲ. ಆತ ಹೇಳಿ ದ್ದು, ಬರೆದಿದ್ದು ಎಲ್ಲ ವಿವಾದವೇ. ಮೊನ್ನೆ ಮೊನ್ನೆ ತೈವಾನ್ ಚೀನಾದ ಭಾಗ ಎಂದು ಹೇಳಿ ಕೆಂಗಣ್ಣಿಗೆ ಗುರಿಯಾಗಿದ್ದ. ಬ್ರೆಜಿಲ್ ನ್ಯಾಯಾಧೀಶರ ವಿರುದ್ಧ, ಉಕ್ರೇನ್‌ನ ವಿರುದ್ಧ ಹೀಗೆ ತನ್ನ ತಲೆಗೆ ಏನು ಬರುತ್ತದೆಯೋ ಅದನ್ನೆಲ್ಲ ಹೇಳುವ, ಸತ್ಯವೋ, ಸುಳ್ಳೋ ಎಂದೂ ನೋಡದೇ ಪೋಸ್ಟ್ ಮಾಡುತ್ತಾನೆ. ಆತನ ಮಾತು ಕಟ್ಟಿಕೊಂಡು ಪ್ರತಿಪಕ್ಷಗಳು ಧರಣಿಗೆ ಕೂಡಲು ಬಂದಿವೆ.

ಎಲ್ಲವನ್ನೂ ಒಂದೇ ತಕ್ಕಡಿಯಲ್ಲಿ ಹಾಕು ತೂಗುವುದು ಕೂಡ ತಪ್ಪು. ಭಾರತ ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶ, ಇಲ್ಲಿನ ಚುನಾವಣೆಗಳು ಅತ್ಯಂತ ಪಾರದರ್ಶಕತೆಯಿಂದ ನಡೆಯುವುದರಿಂದಲೇ ಇಡೀ ಜಗತ್ತು ನಮ್ಮ ದೇಶದ ಚುನಾವಣೆಯನ್ನು ನೋಡಿ ಬೆಕ್ಕಸ ಬೆರಗಾಗುತ್ತದೆ. ನಮ್ಮ ದೇಶದ ಚುನಾವಣೆಯಲ್ಲಿ ಯಾವುದೇ ರೀತಿಯ ಅಕ್ರಮಗಳು ನಡೆಯುವುದಿಲ್ಲ. ಆದರೆ ಇದನ್ನು ಅರಿಯದ ಕುತಂತ್ರಿಗಳು, ಇಲ್ಲಿ ದೇಶದ ಘನತೆಗೆ ಧಕ್ಕೆ ಬರುತ್ತದ ಎನ್ನುವುದನ್ನೂ ಲೆಕ್ಕಿಸದೆ ಜಾಗತಿಕ ಮಟ್ಟದಲ್ಲಿ ದೇಶದ ವ್ಯವಸ್ಥೆಯ ವಿರುದ್ಧ ಮಾತನಾಡುವುದನ್ನು ಕುಲಕಸುಬು ಮಾಡಿಕೊಂಡಿವೆ. ಬಾಯಿಗೆ ಬಂದದ್ದು ಮಾತನಾಡುತ್ತವೆ.

ಅದೂ ಅಲ್ಲದೆ ಪುರ್ಟೋರಿಕೋದ ಚುನಾವಣೆಯಲ್ಲಿ ಬಳಸಲಾದ ಇವಿಎಂ ಬೇರೆ, ನಮ್ಮ ದೇಶದಲ್ಲಿ ಬಳಸಲಾಗುವ ಇವಿಎಂಗಳು ಬೇರೆಯೇ. ನಮ್ಮ ಚುನಾವಣೆಯಲ್ಲಿ ಬಳಕೆಯಾಗುವ ಇವಿಎಂನ ಚಿಪ್‌ನ್ನು ರೀಪ್ರೋಗ್ರಾಂ ಮಾಡಲು ಬರುವುದಿಲ್ಲ. ಇದರೊಂದಿಗೆ ಮಷಿನ್ ಕೂಡ ಸ್ಟ್ಯಾಂಡ್ ಅಲೋನ್ ಆಗಿರುತ್ತದೆ. ಅಂದರೆ ಅದಕ್ಕೆ ಒತ್ತಿದ ವೋಟನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಮಾತ್ರ ಇರುತ್ತದೆ. ಅದನ್ನು ಹೊರಗಿನ ಯಾವ ಯಂತ್ರದೊಂದಿಗೂ
ಸಂಪರ್ಕ ಸಾಽಸುವಂತೆ ಮಾಡಲಾಗದು. ಹಾಗಾಗಿ ಇದನ್ನು ಹ್ಯಾಕ್ ಮಾಡಲಾಗುವುದಿಲ್ಲ ಎಂದು ಈಗಾಗಲೇ ಅನೇಕ ಬಾರಿ ಚುನಾವಣಾ ಆಯೋಗ ಹೇಳಿದೆ. ಹೇಳುತ್ತಿದೆ. ಮುಂದೆಯೂ ಹೇಳಲುತ್ತದೆ. ಅಲ್ಲ, ಇಷ್ಟೆಲ್ಲ ಮಾತಾಡುವ ಪ್ರತಿಪಕ್ಷದ ನಾಯಕರು ಏಕೆ ಒಮ್ಮೆ ತಮಗೆ ಗೊತ್ತಿರುವ ಅತ್ಯದ್ಭುತ ಎಂಜಿನಿಯರ್ ಅನ್ನು ಕರೆದುಕೊಂಡು ಬಂದು ಹ್ಯಾಕ್ ಮಾಡಿ ತೋರಿಸಬಾರದು. ಅಲ್ಲವೆ?