Saturday, 14th December 2024

ತ್ಯಾಜ್ಯ ಮರುಬಳಕೆಗೆ ಇಡಬೇಕಿದೆ ಕ್ರಾಂತಿಕಾರಿ ಹೆಜ್ಜೆ

ಗಂಟಾಘೋಷ

ಗುರುರಾಜ್ ಗಂಟಿಹೊಳೆ

ಕೊಳೆಯದ ವಸ್ತುಗಳನ್ನು ಪುನರ್‌ಬಳಸುವ ಆಧುನಿಕ ವಿಧಾನಗಳನ್ನು ಮತ್ತು ಕೊಳೆಯುವ ವಸ್ತುಗಳನ್ನು ಸಮರ್ಪಕವಾಗಿ ಸಂಗ್ರಹಿಸಿ, ಆರೋಗ್ಯ ಯುತವಾಗಿ ಬಳಸುವ ಮಾರ್ಗಗಳನ್ನು ಕೂಡಲೇ ಅನುಸರಿಸುವ ಕಾಲಘಟ್ಟದಲ್ಲಿದ್ದೇವೆ. ಪ್ರಸ್ತುತ ದಿನಗಳಲ್ಲಿ ತ್ಯಾಜ್ಯವೆಂಬುದು ಬಹುದೊಡ್ಡ ಸಮಸ್ಯೆ ಯಾಗಿ ಕಾಡುತ್ತಿದೆ. ತ್ಯಾಜ್ಯವನ್ನು ಸಂಗ್ರಹಿಸುವ ಮತ್ತು ಅದನ್ನು ಸಮರ್ಪಕವಾಗಿ ವಿಲೇವಾರಿ ಮಾಡುವ ವಿಚಾರವಂತೂ ತ್ಯಾಜ್ಯಕ್ಕಿಂತಲೂ ಬಹುದೊಡ್ಡ ಸಮಸ್ಯೆಯಾಗಿದೆ.

ಹೀಗಾಗಿ, ಕಸ ಅಥವಾ ತ್ಯಾಜ್ಯವನ್ನು ನಿರ್ವಹಿಸುವ ಹಂತದಲ್ಲಿಯೇ ನಾವಿಂದು ನಮ್ಮ ಆಧುನಿಕ ತಂತ್ರeನವನ್ನು, ಬುದ್ಧಿಮತ್ತೆಯನ್ನು ಬಳಸಬೇಕಾಗಿದೆ.
ಹಿಂದಿನ ಕಾಲದಲ್ಲಿ ತ್ಯಾಜ್ಯವೇ ಇರುತ್ತಿರಲಿಲ್ಲ ಅಥವಾ ಇದ್ದರೂ ಅವುಗಳನ್ನು ಗzಗೆ, ಹೊಲಕ್ಕೆ ಹಾಕುವಂತಹ ಗೊಬ್ಬರದಂತೆ ಮರುಬಳಸಬಹು
ದಾದ ಕಸಗಳಾಗಿರುತ್ತಿದ್ದವು. ಇಂದಿನ ತಲೆಮಾರು, ಪ್ಲಾಸ್ಟಿಕ್ ಮತ್ತು ಇತರೆ Pಟ್ಚ್ಚಛಿooಛಿb ಊಟಟb, PZhಛಿb IZಠಿಛ್ಟಿಜಿZ ಗಳನ್ನು ಯೆತೇಚ್ಛವಾಗಿ
ಬಳಸುತ್ತಿದೆ. ಓದು, ವಿದ್ಯೆ ಹೆಚ್ಚುತ್ತ ಹೋದಂತೆ ಹಾನಿಕಾರಕ ಕಸವನ್ನು ಬಳಸಬಾರದೆಂಬ ವಿವೇಕ ಹೊಂದಬೇಕಿದ್ದ ಇಂದಿನ ವಿದ್ಯಾವಂತ ತಲೆಮಾರು ತ್ಯಾಜ್ಯದ ಕುರಿತು ಅಸಡ್ಡೆ ಹೊಂದಿರುವುದು ಬೇಸರದ ಸಂಗತಿ.

ಪೆಪ್ಸಿ-ಕೋಲಾದಂತಹ ಮತ್ತು ಇತರೆ ದೃಢವಾದ ಪ್ಲಾಸ್ಟಿಕ್ ಬಾಟಲಿಗಳು ವಿವಿಧ ಕಾರ್ಯಗಳಿಗಾಗಿ ಗೃಹಬಳಕೆಯಲ್ಲಿ ಬಳಸುವ ರೂಢಿ ನಮ್ಮ ಜನರಿಗಿದೆ.
ಇಂತಹ ತ್ಯಾಜ್ಯಗಳು ಇಡೀ ಜೀವ ಸಂಕುಲಕ್ಕೆ ಮಾರಕವಾಗಿವೆ. ಇಂತಹ ಬಾಟಲಿಗಳನ್ನು ಸಣ್ಣ ಎಳೆಗಳಂತೆ ಕತ್ತರಿಸುವ ಚಿಕ್ಕ ಯಂತ್ರಕ್ಕೆ ಹಾಕಿದರೆ,
ನೂಡಲ್ಸನಂತೆ ಪ್ಲಾಸ್ಟಿಕ್ ಎಳೆಗಳು ಬರುತ್ತವೆ. ಇವುಗಳನ್ನು ಸಣ್ಣಗೆ ಕತ್ತರಿಸುವ ಯಂತ್ರಕ್ಕೆ ಹಾಕಿದರೆ, ಅಕ್ಕಿಯಂತೆ ಚಿಕ್ಕ ಚಿಕ್ಕ ಪ್ಲಾಸ್ಟಿಕ್ ಕಣಗಳು ಹೊರಬರುತ್ತವೆ. ನಂತರ, ಮಿಠಾಯಿ (ಇಟಠಿಠಿಟ್ಞ ಇZbqs) ತಯಾರಿಸುವ ತಿರುಗು ಯಂತ್ರಕ್ಕೆ ಹಾಕಿದರೆ, ಶುದ್ಧ ಹತ್ತಿಯಂತೆ ಪ್ಲಾಸ್ಟಿಕ್ ಕಾಟನ್ ಹತ್ತಿ ಸಿಗುತ್ತದೆ.

ಈ ಹತ್ತಿಯನ್ನು ಬಳಸಿಕೊಂಡೇ ಅತ್ಯಂತ ಅಗ್ಗದ ದರದ ಚಳಿಗಾಲಕ್ಕೆ ಬೇಕಾದ ತಲೆ, ಕಾಲು, ಕೈಗವಸು ಸೇರಿದಂತೆ ಬಹುತೇಕ (ಕೃತಕ) ಉಣ್ಣೆ ಮತ್ತು ಹತ್ತಿ
ಬಟ್ಟೆಗಳು ತಯಾರಾಗಿ ಇಂದು ಮಾರುಕಟ್ಟೆಯನ್ನು ಆಳುತ್ತಿವೆ. ಇದರಲ್ಲಿ ಜಪಾನ್, ಸೌತ್ ಕೋರಿಯಾ, ತೈವಾನ್ ದೇಶಗಳು ಇಂತಹ ತ್ಯಾಜ್ಯಗಳನ್ನು ಮರುಬಳಕೆ ಮಾಡುವಲ್ಲಿ ಉಳಿದ ದೇಶಗಳಿಗಿಂತ ಮುಂದಿವೆ ಎನ್ನಬಹುದು. ಇದರಂತೆಯೇ, ಗಾಜನ್ನು ಪುಡಿ ಮಾಡಿ ಆಸಾಲ್ಟ ಪಾದಚಾರಿ ವಸ್ತುಗಳಲ್ಲಿ ಬಳಸಬಹುದು.

ಬಣ್ಣ- ವಿಂಗಡಣೆಯ ಗಾಜನ್ನು ಪುಡಿ ಮಾಡಿ, ಗಾಜಿನ ತಯಾರಿಕೆಯಲ್ಲಿ ಅತ್ಯಗತ್ಯ ಅಂಶವಾದ ಕುಲೆಟ್ ಆಗಿ ಮಾರಾಟ ಮಾಡಲಾಗುತ್ತದೆ. ಸ್ಟೀಲ್ ಕ್ಯಾನ್‌ಗಳನ್ನು ಬೇಲ್ಡ್ ಮಾಡಲಾಗುತ್ತದೆ ಮತ್ತು ಉಕ್ಕಿನ ಗಿರಣಿಗಳಿಗೆ ಸ್ಕ್ರ್ಯಾಪ್ ಆಗಿ ರವಾನಿಸಲಾಗುತ್ತದೆ ಮತ್ತು ಸ್ಮೆಲ್ಟರ್ ಗಳಿಂದ ಮರುಬಳಕೆಗಾಗಿ ಅಲ್ಯೂಮಿನಿಯಂ ಅನ್ನು ಕರಗಿಸಿ ಬಳಸಲಾಗುತ್ತದೆ. ಅಲ್ಯೂಮಿನಿಯಂ ಪುರಸಭೆಯ ಘನ ತ್ಯಾಜ್ಯದ ಚಿಕ್ಕ ಘಟಕಗಳಲ್ಲಿ ಒಂದಾಗಿದ್ದು, ಮರುಬಳಕೆ ಮಾಡಬಹುದಾದ ಬೆಲೆಯುಳ್ಳ ವಸ್ತುವಾಗಿದೆ. ಪ್ಲಾಸ್ಟಿಕ್ ಮರುಬಳಕೆ ಮಾಡುವುದು ಒಂದು ಸವಾಲಾಗಿದೆ. ಹೆಚ್ಚಾಗಿ ಅದರ ಉತ್ಪಾದನೆಯಲ್ಲಿ ಬಳಸ ಲಾಗುವ ವಿವಿಧ ಪಾಲಿ ಮರಿಕ್ ವಸ್ತುಗಳಿಂದಾಗಿ ಮಿಶ್ರಿತ ಥರ್ಮೋಪ್ಲಾಸ್ಟಿಕ್‌ಗಳನ್ನು ಪ್ಲಾಸ್ಟಿಕ್ ಲುಂಬರ್‌ನಂತಹ ಕಡಿಮೆ-ಗುಣ ಮಟ್ಟದ ಉತ್ಪನ್ನ ಗಳನ್ನು ತಯಾರಿಸಲು ಮಾತ್ರ ಬಳಸಬಹುದು.

ಬಾಟಲಿಗಳನ್ನು ಕತ್ತರಿಸಿ, ಪೊರಕೆ ಇತ್ಯಾದಿ ದಿನಬಳಕೆ ವಸ್ತುಗಳನ್ನು ತಯಾರಿಸ ಬಹುದು. ಕಾಗದದ ಸ್ಟ್ರೀಮ, ಸುಕ್ಕುಗಟ್ಟಿದ ವಸ್ತುಗಳು ಮತ್ತು ಮಿಶ್ರ ಕಾಗದಗಳನ್ನು ತೆಗೆದುಹಾಕಲು ಹಳೆಯ ಪತ್ರಿಕೆಗಳನ್ನು ಕನ್ವೇಯರ್ ಬೆಲ್ಟ್‌ನಲ್ಲಿ ಕೈಯಿಂದ ವಿಂಗಡಿಸಲಾಗುತ್ತದೆ. ನಂತರ ಅವುಗಳನ್ನು ಪೇಪರ್
ಮಿಲ್‌ಗಳಿಗೆ ಸಾಗಿಸಲು ಟ್ರೇಲರ್‌ಗಳಲ್ಲಿ ಲೋಡ್ ಮಾಡಲಾಗುತ್ತದೆ. ಇವುಗಳನ್ನು ಹೆಚ್ಚು ಪತ್ರಿಕೆಗಳ ತಯಾರಿಕೆಯಲ್ಲಿ ಮರುಬಳಕೆ ಮಾಡಲಾಗುತ್ತದೆ.
ಮಿಶ್ರಿತ ಕಾಗದವನ್ನು ಸುಕ್ಕುಗಟ್ಟಿದ ಕಾಗದದಿಂದ ಬೇರ್ಪಡಿಸಿ ಟಿಶ್ಯೂ ಗಿರಣಿಗಳಿಗೆ ಮಾರಾಟ ಮಾಡಲಾಗುತ್ತದೆ. ಪಲ್ಪಿಂಗ್, ಡಿ-ಇಂಕಿಂಗ್ ಮತ್ತು
ಸ್ಕ್ರೀನಿಂಗ್ ತ್ಯಾಜ್ಯ ಕಾಗದದ ಪ್ರಕ್ರಿಯೆಗಳು ಸಾಮಾನ್ಯ ವಾಗಿ ಮರದ ನಾರುಗಳಿಂದ ಕಾಗದವನ್ನು ತಯಾರಿಸುವುದಕ್ಕಿಂತ ಹೆಚ್ಚು ದುಬಾರಿಯಾಗಿದ್ದರೂ, ಹೆಚ್ಚಿನ ಸಂಸ್ಕರಣಾ ಘಟಕಗಳ ಸ್ಥಾಪನೆಯೊಂದಿಗೆ ಮರು ಬಳಕೆಯ ಕಾಗದದ ಮಾರುಕಟ್ಟೆಯು ಬೆಳೆದಿದೆ.

ರಬ್ಬರ್ ಅನ್ನು ಕೆಲವೊಮ್ಮೆ ಘನತ್ಯಾಜ್ಯದಿಂದ ಪುನಃ ಪಡೆದುಕೊಳ್ಳಲಾಗುತ್ತದೆ ಮತ್ತು ಚೂರು ಚೂರು, ಸುಧಾರಿತ ಮತ್ತು ರಿವಲ್ಕನೈಸೇಶನ್ ಎಂಬ
ಪ್ರಕ್ರಿಯೆಯಲ್ಲಿ ಮರುಬಳಕೆಗೆ ರೂಪಿಸಲಾಗುತ್ತದೆ. ಚೂರುಚೂರು ರಬ್ಬರ್ ಅನ್ನು ಆಸಾಲ್ಟ ಪಾದಚಾರಿಗಳು ಮತ್ತು ಕೃತಕ ಟ-ಗಳಲ್ಲಿ ಬಳಸಬಹುದು
ಮತ್ತು ನೇರವಾಗಿ ಹೊರಗಡೆ ಮಲ್ಚ ಆಗಿ ಮಾರಾಟ ಮಾಡಲಾಗುತ್ತದೆ. ತಿರಸ್ಕರಿಸಿದ ಟೈರ್‌ಗಳನ್ನು ಟೈರ್ ಆಟದ ಮೈದಾನಗಳಲ್ಲಿ ಮತ್ತು ಮಕ್ಕಳ ಬಳಕೆಗಾಗಿ ಸ್ವಿಂಗ್ ಸೇರಿದಂತೆ ಇತರ ಮನರಂಜನಾ ಪರಿಕರಗಳನ್ನಾಗಿ ನಾವು ಬಳಸಿಕೊಳ್ಳಬಹುದಾಗಿದೆ.

ನಮ್ಮ ಚಿಕ್ಕಪುಟ್ಟ ಊರಿನ ಹಾದಿಬೀದಿಗಳಿಂದ ಹಿಡಿದು ದೇಶದ ರಾಷ್ಟ್ರಪತಿ ಭವನ, ಪ್ರಧಾನ ಮಂತ್ರಿ ಕಚೇರಿಯವರೆಗೂ ವ್ಯಾಪಿಸಿರುವ ತ್ಯಾಜ್ಯ ಸಮಸ್ಯೆಗೆ
ಮುಕ್ತಿ ನೀಡಲು, ಅದರ ಸಮರ್ಪಕ ನಿರ್ವಹಣೆ ಮತ್ತು ಅವುಗಳನ್ನು ಮರುಬಳಕೆ ಮಾಡುವ ವಿಚಾರ – ವಿಧಾನಗಳಿಗೆ ಇಂದಿನ ಜ್ಞಾನ-ತಂತ್ರಜ್ಞಾನ ಉಪಯೋಗಿಸಬೇಕಿರುವುದು ಅಗತ್ಯವಾಗಿದೆ. ಘನ ತ್ಯಾಜ್ಯ ನಿರ್ವಹಣೆ ಎಂಬ ಪದವು ಘನ ತ್ಯಾಜ್ಯಗಳನ್ನು ಸಂಗ್ರಹಿಸುವುದರಿಂದ ಹಿಡಿದು ಸಾಗಣೆ, ಸಂಸ್ಕರಣೆ, ಬೇರ್ಪಡಿಸುವಿಕೆ ಮತ್ತು ವಿಲೇವಾರಿ ಎಂಬಂತಹ ಪ್ರಕ್ರಿಯೆಯ ವಿಧಾನವನ್ನು ತಿಳಿಸುತ್ತದೆ.

ಘನ ತ್ಯಾಜ್ಯವು ದ್ರವವಲ್ಲದ ಹಾಗೂ ಕರಗದ ವಸ್ತುವಾಗಿದ್ದು, ಪುರಸಭೆಯ ಕಸದಿಂದ ಕೈಗಾರಿಕಾ ತ್ಯಾಜ್ಯದವರೆಗೆ ಕೆಲವೊಮ್ಮೆ ಅಪಾಯಕಾರಿ ಪದಾರ್ಥ
ಗಳೂ ತ್ಯಾಜ್ಯಕ್ಕೆ ಸೇರುತ್ತವೆ. ಇದು ಮನೆಯ ತ್ಯಾಜ್ಯ, ವಾಣಿಜ್ಯ ತ್ಯಾಜ್ಯ, ಸಾಂಸ್ಥಿಕ ತ್ಯಾಜ್ಯ, ಅಡುಗೆ ಮತ್ತು ಮಾರುಕಟ್ಟೆ ತ್ಯಾಜ್ಯ, ಜೈವಿಕ ವೈದ್ಯಕೀಯ ತ್ಯಾಜ್ಯ ಮತ್ತು ಇ-ತ್ಯಾಜ್ಯವನ್ನು ಒಳಗೊಂಡಿದೆ. ಬಹುತೇಕ ಅಭಿವೃದ್ಧಿ ಹೊಂದಿದ ನಗರಗಳ ಬೀದಿಗಳಲ್ಲಿ ಪ್ರತಿದಿನ ಹಲವಾರು ಟನ್‌ಗಳಷ್ಟು ಕಸವನ್ನು
ಸಂಗ್ರಹಿಸದೆ ಹಾಗೇ ಬಿಡಲಾಗುತ್ತದೆ.

ಇದು ರೋಗವನ್ನು ಹರಡುವ, ಒಳಚರಂಡಿಗೆ ಅಡ್ಡಿಪಡಿಸುವ ಮತ್ತು ಇತರ ಮೂಲಸೌಕರ್ಯ ಸಮಸ್ಯೆಗಳನ್ನು ಹುಟ್ಟುಹಾಕಿ ಕೀಟಗಳ ಸಂತಾನೋ ತ್ಪತ್ತಿಯ ಸ್ಥಳವಾಗಿ ಪರಿಣಮಿಸುತ್ತದೆ. ಭಾರತವು ಪ್ರತಿ ವರ್ಷ ೨೭೭ ಮಿಲಿಯನ್ ಟನ್ ಘನತ್ಯಾಜ್ಯವನ್ನು ಉತ್ಪಾದಿಸುತ್ತದೆ ಎಂದು ಅಂದಾಜಿ ಸಲಾಗಿದೆ. ಇದು ೨೦೩೦ರಲ್ಲಿ ೩೯೦ ಮಿಲಿಯನ್ ಟನ್‌ಗಳನ್ನು ಮತ್ತು ೨೦೫೦ರ ವೇಳೆಗೆ ೬೦೦ ಮಿಲಿಯನ್ ಟನ್‌ಗಳನ್ನು ಮುಟ್ಟುವ ಸಾಧ್ಯತೆಯಿದೆ ಎಂದು ಹಲವರ ಅಭಿಪ್ರಾಯ. ತ್ಯಾಜ್ಯ ನಿರ್ವಹಣೆಯ ಪ್ರಾಮುಖ್ಯತೆ: ತ್ಯಾಜ್ಯ ನಿರ್ವಹಣೆಯು ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು. ಅದು ಪರಿಸರ ಸಂರಕ್ಷಣೆ ಮತ್ತು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚುತ್ತಿದ್ದು, ಮಿತಿಯಿಲ್ಲದೆ ತ್ಯಾಜ್ಯ ಉತ್ಪಾದನೆ ಯಾಗುತ್ತಿದೆ.

ಅದರ ಅಪಾಯಕಾರಿ ಪರಿಣಾಮಗಳ ಬಗ್ಗೆ ಇಂದಿನ ಜನತೆ ಸರಿಯಾಗಿ ತಿಳಿದಿಲ್ಲ, ನಾವು ಎಲ್ಲ ಕಸವನ್ನು ಸರಿಯಾದ ವಿಲೇವಾರಿ ವಿಧಾನಗಳಿಲ್ಲದ
ಸ್ಥಳದಲ್ಲಿ ಎಸೆಯುತ್ತೇವೆ ಅಥವಾ ಸುಟ್ಟುಹಾಕುತ್ತೇವೆ, ಇದು ಮಾಲಿನ್ಯಕಾರಕಗಳನ್ನು ಗಾಳಿಯಲ್ಲಿ ಬಿಡುಗಡೆ ಮಾಡುತ್ತದೆ. ಮನೆಗಳು, ಕೈಗಾರಿಕೆಗಳು ಮತ್ತು ಕಾರ್ಖಾನೆಗಳ ಎಲ್ಲ ತ್ಯಾಜ್ಯವನ್ನು ವ್ಯವಸ್ಥಿತವಾಗಿ ನಿರ್ವಹಿಸಬೇಕು; ಇಲ್ಲದಿದ್ದರೆ, ಇದು ವಿವಿಧ ಪರಿಸರ ಸಮಸ್ಯೆಗಳು ಮತ್ತು ಆರೋಗ್ಯ ಸಮಸ್ಯೆಗಳಿಗೆ ಕಾರಣ ವಾಗ ಬಹುದು. ಅದಕ್ಕಾಗಿಯೇ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಲು, ಪ್ರತ್ಯೇಕಿಸಲು, ಸಾಗಿಸಲು ಮತ್ತು ವಿಲೇವಾರಿ ಮಾಡಲು ಪರಿಣಾಮಕಾರಿ ಮತ್ತು ಆಧುನಿಕ ಮಾರ್ಗಗಳನ್ನು ನಾವು ಕಂಡುಕೊಳ್ಳಬೇಕಾಗಿದೆ ತ್ಯಾಜ್ಯ ನಿರ್ವಹಣೆಯ ವಿಧಾನಗಳು: ತ್ಯಾಜ್ಯ ನಿರ್ವಹಣೆಗೆ ಹಲವಾರು ವಿಧಾನಗಳಿದ್ದು, ಇದು ನಾವು ನಿರ್ವಹಿಸುವ ತ್ಯಾಜ್ಯದ ಪ್ರಕಾರವನ್ನು ಅವಲಂಬಿಸಿ ಬದಲಾಗುತ್ತದೆ. ತ್ಯಾಜ್ಯವನ್ನು ಘನ, ದ್ರವ ಮತ್ತು ಅನಿಲ ಎಂದು ವರ್ಗೀಕರಿಸಬಹುದು ಮತ್ತು ಅವು ನಮ್ಮ ಮನೆಗಳು, ಆಸ್ಪತ್ರೆಗಳು, ಕಾರ್ಖಾನೆಗಳು ಅಥವಾ ಪರಮಾಣು ವಿದ್ಯುತ್ ಸ್ಥಾವರಗಳಿಂದ ಉತ್ಪತ್ತಿಯಾಗುತ್ತವೆ.

ಪ್ರತಿಯೊಂದು ರೀತಿಯ ತ್ಯಾಜ್ಯವು ವಿಭಿನ್ನ ವಿಲೇವಾರಿ ವಿಧಾನವನ್ನು ಹೊಂದಿರುವುದರಿಂದ, ಘನತ್ಯಾಜ್ಯ ನಿರ್ವಹಣೆಗೆ ಭೂ ಗುಂಡಿಗಳು ಸೂಕ್ತವಾಗಿವೆ.
ಲ್ಯಾಂಡಿಲ್ ಎಂಬುದು ಆಳವಾದ ಕಸದ ಹೊಂಡವಾಗಿದ್ದು, ಇದು ಸಾಮಾನ್ಯವಾಗಿ ನಗರದಿಂದ ದೂರದಲ್ಲಿ ನಿರ್ಮಿಸಿ, ಅಲ್ಲಿ ಘನ ತ್ಯಾಜ್ಯಗಳನ್ನು ಸುರಿ
ಯಲಾಗುತ್ತದೆ, ಇದು ವರ್ಷಗಳಲ್ಲಿ ಕೊಳೆಯುತ್ತದೆ. ಸುಡುವಿಕೆಯು ತ್ಯಾಜ್ಯ ನಿರ್ವಹಣೆಗೆ ಮತ್ತೊಂದು ಜನಪ್ರಿಯ ವಿಧಾನವಾಗಿ ಕಸ ವಿಲೇವಾರಿ ಮಾಡುವ ಗುತ್ತಿಗೆದಾರರಿಂದ ಬಳಕೆಯಾಗುತ್ತಿದೆ. ಆದರೆ ದಹನ ಪ್ರಕ್ರಿಯೆಯು ಪರಿಸರವನ್ನು ಕಲುಷಿತಗೊಳಿಸುವ ಹಸಿರುಮನೆ ಅನಿಲ (ಎಛಿಛ್ಞಿeಟ್ಠoಛಿ ಎZoಛಿo) ಗಳನ್ನು ಹೆಚ್ಚಾಗಿ ಬಿಡುಗಡೆ ಮಾಡುವುದರಿಂದ ಇದು ಹೆಚ್ಚು ಅಪಾಯಕಾರಿ ವಿಧಾನ ಎಂಬುದನ್ನು ನಿರ್ವಹಣೆಗಾರರು ಮರೆಯಬಾರದು.

ತ್ಯಾಜ್ಯದ ಮರುಬಳಕೆಯು ತ್ಯಾಜ್ಯ ವಸ್ತುಗಳನ್ನು ಉಪಯುಕ್ತ ವಸ್ತುಗಳನ್ನಾಗಿ ಪರಿವರ್ತಿಸುವ ಮೂಲಕ ಉತ್ಪಾದಕವೆಂದು ಪರಿಗಣಿಸಲಾಗಿದೆ, ಮರುಬಳಕೆ ಮತ್ತು ತ್ಯಾಜ್ಯವನ್ನು ಕಡಿಮೆ ಮಾಡುವುದು ಸಹ ಕಡಿಮೆ ವೆಚ್ಚದಾಯಕವಾಗಿದೆ. ಭೂಮಿಯೊಳಗೆ ಮುಚ್ಚುವುದು ಮತ್ತು ಸುಡುವಿಕೆಗಿಂತ
ಭಿನ್ನವಾಗಿ, ಮರುಬಳಕೆಯು ಪರಿಸರಕ್ಕೆ ಯಾವುದೇ ರೀತಿಯಲ್ಲಿ ಹಾನಿಯಾಗುವುದಿಲ್ಲ.

ಸಾವಯವ ತ್ಯಾಜ್ಯಗಳನ್ನು ಮರುಬಳಕೆ ಮಾಡ ಬಹುದಾದ್ದರಿಂದ, ನಾವು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕು, ಈ ಮೂಲಕ ಪ್ಲಾಸ್ಟಿಕ್
ಮಾಲಿನ್ಯವನ್ನು ತಪ್ಪಿಸಬಹುದು. ಪ್ರಸ್ತುತ ತ್ಯಾಜ್ಯ ಸಂಗ್ರಹದ ಬಹುಪಾಲು ಭಾಗಕ್ಕೆ ಪ್ಲಾಸ್ಟಿಕ್ ಕೊಡುಗೆಯೇ ಅಧಿಕವಾಗಿದೆ. ಏಕೆಂದರೆ ಅವುಗಳು
ಕೊಳೆಯದೇ ಇರುವ ವಸ್ತು(ವಿಘಟನೀಯ) ಗಳಾಗಿವೆ. ಆಹಾರ ತ್ಯಾಜ್ಯ ಮತ್ತು ಸಸ್ಯ ಉತ್ಪನ್ನಗಳನ್ನು ನಿರ್ವಹಿಸಲು ಸಾವಯವ ಸೂಕ್ತ ವಿಧಾನ
ವಾಗಿರುವುದರಿಂದ ನಾವು ಮಿಶ್ರಗೊಬ್ಬರವನ್ನು ಬಳಸುವ ಅಭ್ಯಾಸ ಮಾಡಬೇಕು. ಕಾಂಪೋಸ್ಟಿಂಗ್ ಮೂಲಕ, ಸಾವಯವ ತ್ಯಾಜ್ಯವನ್ನು ಗೊಬ್ಬರವಾಗಿ
ಪರಿವರ್ತಿಸಲಾಗುತ್ತದೆ, ಇದು ಮಣ್ಣನ್ನು ಪೋಷಿಸುತ್ತದೆ. ಸಸ್ಯಗಳು ಮತ್ತು ಮರಗಳ ಬೆಳವಣಿಗೆಯನ್ನು ಬೆಂಬಲಿಸುತ್ತದೆ.

ಪುರಸಭೆಯ ಘನತ್ಯಾಜ್ಯ: ಉತ್ಪನ್ನ ಪ್ಯಾಕೇಜಿಂಗ್, ಅಂಗಳದ ಟ್ರಿಮ್ಮಿಂಗ್‌ಗಳು, ಪೀಠೋಪಕರಣಗಳು, ಬಟ್ಟೆಗಳು, ಬಾಟಲಿಗಳು, ಕ್ಯಾನ್‌ಗಳು, ಆಹಾರ, ದಿನಪತ್ರಿಕೆಗಳು, ಉಪಕರಣಗಳು, ಎಲೆಕ್ಟ್ರಾನಿಕ್ಸ್ ಮತ್ತು ಬ್ಯಾಟರಿಗಳಂತಹ ಪ್ರತಿದಿನದ ಸರಕುಗಳು ಪುರಸಭೆಯ ಘನ ತ್ಯಾಜ್ಯವನ್ನು ತಯಾರಿಸುತ್ತವೆ. ಹೆಚ್ಚು ತ್ತಿರುವ ನಗರೀಕರಣ ಮತ್ತು ಜೀವನಶೈಲಿಯ ಬದಲಾವಣೆಯೊಂದಿಗೆ, ಪುರಸಭೆಯ ತ್ಯಾಜ್ಯದ ಪ್ರಮಾಣವೂ ಏರುತ್ತಿದೆ.

ಪುರಸಭೆಯ ಘನತ್ಯಾಜ್ಯ ನಿರ್ವಹಣೆಯು ಪ್ರಸ್ತುತ ಸಮಯದಲ್ಲಿ ಅಗತ್ಯವಾಗಿದ್ದು, ಇದಕ್ಕೆ ಸೂಕ್ತ ಕಸ ವಿಲೇವಾರಿ ಮಾಡುವವರ ಕುರಿತಂತೆಯೂ
ಗಮನಹರಿಸಬೇಕಿದೆ. ಯಾರು, ಯಾವಾಗ ಮತ್ತು ಎಲ್ಲಿ ತ್ಯಾಜ್ಯವನ್ನು ವಿಲೇವಾರಿ ಮಾಡುತ್ತಾರೆ, ಅವರಿಗೆ ಸಂಬಳ ಅಥವಾ ಕೂಲಿ ಯಾರು ಕೊಡು
ತ್ತಾರೆ ಮತ್ತು ಇದಕ್ಕೆ ನೌಕರಿದ್ದಾರೆಯೇ ಅಥವಾ ಗುತ್ತಿಗೆ ಕೊಡಲಾಗಿದೆಯೇ ಎಂಬುದರ ಕುರಿತು ಸಮರ್ಪಕ ಮಾರ್ಗಸೂಚಿ ಜಾರಿಗೊಳಿಸಬೇಕಿದೆ.

ನಗರೀಕರಣದ ನಂತರ, ನಾವು ನಮ್ಮ ದೈನಂದಿನ ಜೀವನದಲ್ಲಿ ಹೆಚ್ಚಿನ ಸಂಖ್ಯೆಯ ತ್ಯಾಜ್ಯಗಳನ್ನು ಉತ್ಪಾದಿಸುತ್ತಿರುವುದನ್ನು ಎಡೆಯೂ ಕಾಣ
ಬಹುದಾಗಿದೆ. ತ್ಯಾಜ್ಯವು ಅನಗತ್ಯ ಮತ್ತು ಬಳಸಿದ ನಂತರದ ವಸ್ತುಗಳು ಅಥವಾ ಆಹಾರದ ಪೊಟ್ಟಣಗಳು, ಒಡೆದ ಪ್ಲಾಸ್ಟಿಕ್ ಪಾತ್ರೆಗಳು, ಕಾಗದದ
ಚೀಲಗಳು ಇತ್ಯಾದಿಗಳಂತಹ ಸರಕುಗಳ ಯಾವುದೇ ಬಳಕೆ ಇಲ್ಲದಂತಹ ತ್ಯಾಜ್ಯಗಳ ಪ್ರಕಾರಗಳನ್ನು ಗುರುತಿಸುವ ಮೂಲಕ, ತ್ಯಾಜ್ಯಗಳ ವಿವಿಧ
ಮೂಲಗಳನ್ನು ಸುಲಭವಾಗಿ ಗುರುತಿಸಬಹುದು. (ಅ) ದ್ರವ ತ್ಯಾಜ್ಯಗಳು-ಕೈಗಾರಿಕಾ ಉತ್ಪಾದನೆ, ತೊಳೆಯುವುದು, -ಶಿಂಗ್ ಅಥವಾ ಕೈಗಾರಿಕೆಗಳ
ಇತರ ಪ್ರಕ್ರಿಯೆಗಳಿಂದ ದ್ರವ ರೂಪದಲ್ಲಿ ಉತ್ಪತ್ತಿ ಯಾಗುವ ತ್ಯಾಜ್ಯಗಳನ್ನು ದ್ರವ ತ್ಯಾಜ್ಯ ಎಂದು ಕರೆಯಲಾಗುತ್ತದೆ.

(ಆ) ಅನಿಲ ತ್ಯಾಜ್ಯಗಳು-ಆಟೋಮೊಬೈಲ್ ಗಳು, ಕಾರ್ಖಾನೆಗಳು ಅಥವಾ ಪೆಟ್ರೋಲಿಯಂನಂತಹ ಪಳೆಯುಳಿಕೆ ಇಂಧನಗಳ ದಹನ ಮೂಲ
ಗಳು ಅನಿಲಗಳನ್ನು ಬಿಡುಗಡೆ ಮಾಡುತ್ತವೆ, ಈ ತ್ಯಾಜ್ಯಗಳನ್ನು ಅನಿಲ ತ್ಯಾಜ್ಯ ಎಂದು ಕರೆಯಲಾಗುತ್ತದೆ. ಇವು ಇತರೆ ಅನಿಲಗಳೊಳಗೆ ಮಿಶ್ರಣ
ಗೊಂಡು ಹೊಗೆ ಮತ್ತು ಆಮ್ಲದ ಮಳೆಗೆ ಕಾರಣ ವಾಗುತ್ತವೆ.

(ಇ) ಘನತ್ಯಾಜ್ಯಗಳು-ಮಾನವ ಸಮಾಜದಿಂದ ಉತ್ಪತ್ತಿಯಾಗುವ ತ್ಯಾಜ್ಯದ ಬಹುಪಾಲು ಭಾಗವು ಘನತ್ಯಾಜ್ಯಗಳ ರೂಪದಲ್ಲಿದೆ. ಘನತ್ಯಾಜ್ಯದ ವಿಧ
ಗಳನ್ನು ಅವುಗಳ ಮೂಲ ಅಥವಾ ಕೃಷಿ ತ್ಯಾಜ್ಯಗಳು, ನಗರ ತ್ಯಾಜ್ಯಗಳು, ವಿಕಿರಣಶೀಲ ತ್ಯಾಜ್ಯಗಳು, ಕೈಗಾರಿಕಾ ತ್ಯಾಜ್ಯಗಳು ಮತ್ತು ಜೈವಿಕ ವೈದ್ಯಕೀಯ
ತ್ಯಾಜ್ಯಗಳಂತಹ ಪ್ರಕಾರಗಳಲ್ಲಿ ವರ್ಗೀಕರಿಸ ಬಹುದು. ಹಾಗೆಯೇ, ಜೈವಿಕ ವಿಘಟನೀಯ ಮತ್ತು ಜೈವಿಕ ವಿಘಟನೀಯವಲ್ಲದ ತ್ಯಾಜ್ಯಗಳ ಕುರಿತೂ
ನಾವು ಇಂದು ಗಮನಹರಿಸಬೇಕಾಗಿದೆ.

ಕೊಳೆಯುವಂತಹ ಮತ್ತು ಕೊಳೆಯದೇ ಇರುವಂತಹ ತ್ಯಾಜ್ಯಗಳನ್ನು ಅತ್ಯಂತ ಸ್ಪಷ್ಟವಾಗಿ ಸಂಗ್ರಹಿಸುವ ಮತ್ತು ಸೂಕ್ತವಾಗಿ ಬೇರ್ಪಡಿಸುವ ಜವಾಬ್ದಾರಿ ತಂಡಗಳ ಅವಶ್ಯಕತೆ ಇಂದು ಅಗತ್ಯವಿದೆ. ಕೊಳೆಯದೇ ಇರುವಂತಹ ವಸ್ತುಗಳನ್ನು ಸಂಗ್ರಹಿಸಿ, ಅದರಲ್ಲೂ ಮರುಬಳಕೆ ಮಾಡಬಹುದೇ ಎಂಬ ಸಾಮಾನ್ಯ ಜ್ಞಾನದೊಂದಿಗೆ ಅವುಗಳನ್ನು ಪರಿಸರಕ್ಕೆ ಹಾನಿಯಾಗದಂತೆ ಬೇರ್ಪಡಿಸಿ, ಮರುಬಳಕೆಗೆ ಸಂಗ್ರಹಿಸುವ ಬುದ್ದಿವಂತಿಕೆಯೂ ವಿಲೇವಾರಿ ಮಾಡುವವರಿಗೆ ಬೇಕಿದೆ. ಇದರೊಂದಿಗೆ, ರಾಜ್ಯದಲ್ಲಿ ಅಥವಾ ಸ್ಥಳೀಯ ಮಟ್ಟದ ಪಾಲಿಕೆಗಳಲ್ಲಿ ಹೆಚ್ಚಾಗಿ ಸಂಗ್ರಹವಾಗುವ ಮರುಬಳಕೆ ಮಾಡಬಹುದಾದ ತ್ಯಾಜ್ಯವನ್ನು ಗುತ್ತಿಗೆಯಾಧಾರದಲ್ಲಿ ಅಥವಾ ಖರೀದಿ ಮಾಡುವಂತಹ ಕೆಲ ವಿದೇಶಿ ಕಂಪನಿ ಗಳೊಂದಿಗೆ ಸಹಭಾಗಿತ್ವ ಹೊಂದುವ ಮುಂದಾಲೋಚನೆಯು ನಮ್ಮ ನಗರಪಾಲಿಕೆ, ಪಂಚಾಯಿತಿಗಳ ಆಡಳಿತಾಧಿಕಾರಿಗಳು ತೋರಬೇಕಿದೆ.

ಬಹಿರ್ದೆಸೆಗೆ ಊರಿನ ರಸ್ತೆಬದಿಗಳಲ್ಲಿ ಬಹಿರಂಗ ವಾಗಿ ಹೋಗುತ್ತಿದ್ದ ಪರಿಸ್ಥಿತಿಯು ಬದಲಾಗಿ, ೧೨ ಕೋಟಿ ಪಾಯಖಾನೆಗಳನ್ನು ಗ್ರಾಮೀಣ ಸ್ವಚ್ಚ
ಭಾರತ ಅಭಿಯಾನದಡಿ, ಇಂದು ಪ್ರತಿ ಮನೆಯಲ್ಲೂ ಶೌಚಾಲಯಗಳನ್ನು ಹೊಂದುವಂತಾಗಿದೆ. ಹೀಗೆ ನಮ್ಮ ಶುದ್ಧಿಯ ಜತೆಗೆ ನಮ್ಮ ಮನೆಯ ಅಕ್ಕಪಕ್ಕ, ನಮ್ಮ ಊರಿನ, ನಮ್ಮ ರಾಜ್ಯದ ಹಾದಿಬೀದಿಗಳೂ ಶುದ್ಧವಾಗಿರಬೇಕಲ್ಲವೇ.!? ಒಂದು ಸಮುದಾಯ, ಒಂದು ಊರು ಶುದ್ಧ ಮತ್ತು ಸುಶಿಕ್ಷಿತ ವಾಗಿದ್ದರೆ, ದೇಶಕ್ಕೆ ಉತ್ತಮ ಮಾದರಿ ಹಾಕಿಕೊಡಬಲ್ಲದು.