ಅಭಿಮತ
ರಂಗನಾಥ ಎನ್.ವಾಲ್ಮೀಕಿ
ಸೋತೆನೆಂದು ಕುಗ್ಗಬೇಡ ಗೆಲ್ಲಲು ಸಿದ್ಧನಾಗು’ ಎಂದು ಹೇಳುವ ‘ಗೆದ್ದೆನೆಂದು ಬೀಗಬೇಡ ಸೋಲಲು ಸಿದ್ಧನಾಗು’ ಎಂದು ಹೇಳಲು ಕಾರಣ ಏನೆಂದರೆ ಸೋಲು ಗೆಲುವು ಇವೆರಡೂ ಹಣದಂತೆ ಚಂಚಲೆ ಸದಾ ಒಬ್ಬರ ಬಳಿ ಇರದು. ಇವು ಆಗಾಗ ಸ್ಥಾನಪಲ್ಲಟ ಮಾಡುತ್ತಿರುತ್ತವೆ. ಇಂದು ಗೆದ್ದವರು ಮುಂದೆ
ಸೋಲಬಹುದು. ಮುಂದೆ ಸೋತವರೂ ಮತ್ತೊಂದು ದಿನ ಗೆಲ್ಲಬಹುದು. ಸೋಲಾಗಲಿ ಗೆಲುವಾಗಲಿ ಎರಡೂ ಸ್ಥಿರವಲ್ಲ.
ಈ ಸತ್ಯ ನಾವು ಅರ್ಥ ಮಾಡಿಕೊಳ್ಳಬೇಕು. ಸೋತಾಗ ಕುಗ್ಗದಿರುವುದು ಎಷ್ಟು ಮುಖ್ಯವೋ ಗೆದ್ದಾಗ ಅಹಂಕಾರ ಪಡದೇ ಗೆದ್ದಾನೆಂದು ಬೀಗದಿರುವುದು ಅಷ್ಟೇ ಮುಖ್ಯ. ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಿ ಎರಡನ್ನು ಮುಕ್ತ ಮನದಿಂದ ಒಪ್ಪಿಕೊಳ್ಳಬೇಕು. ಗೆಲುವು ಸಿಕ್ಕಾಗ ಸೋತವರನ್ನು ಸಂತೈಸುವ, ಸಮಾಧಾನ ಪಡಿಸುವ ಮನೋಗುಣ ಬಹಳ ಅಗತ್ಯ. ಗೆಲುವಿನ ಅಹಂನಲ್ಲಿ ತೇಲಬಾರದು.
ನಮ್ಮ ಸಮಾಜದಲ್ಲಿ ಅದೆಷ್ಟೋ ಜನರನ್ನು ಕಾಣುತ್ತೇವೆ. ತಮ್ಮದೇ ಆದ ಒಂದು ತಂಡವನ್ನು ಕಟ್ಟಿಕೊಂಡು ಗೆz ಎಂಬ ಭ್ರಮೆಯಲ್ಲಿ ತೇಲುತ್ತಿರುತ್ತಾರೆ ವಾಸ್ತವವಾಗಿ ಅವರು ಸೋತಿರುತ್ತಾರೆ. ಸೋಲನ್ನು ಒಪ್ಪಿಕೊಳ್ಳುವ ಮನಸ್ಥಿತಿ ಇಲ್ಲದೇ ವಿನಾಕಾರಣ ಎದುರಾಳಿಗಳನ್ನು ಕೆಣಕಲು ಹೋಗಿ ಮತ್ತೆ ಮತ್ತೆ ಸೋಲುತ್ತಾರೆ. ಅಪರೂಪಕ್ಕೆ ಗೆದ್ದು ಬೀಗುತ್ತಾರೆ. ಹತ್ತಿದ ಏಣಿ ಒಂದು ದಿನ ಇಳಿಯಲೇಬೇಕು ಎಂಬ ಸತ್ಯ ಸದಾ ತಿಳಿಯಬೇಕು. ಕ್ರೀಡೆ, ರಾಜಕೀಯ, ವ್ಯಾಪಾರ, ಶಿಕ್ಷಣ, ಉದ್ಯೋಗ ಎ ಕಡೆ ಸ್ಪರ್ಧೆ ಇರುವುದು ಇದು ಸಹಜ ಕೂಡಾ.
ಎಲ್ಲರ ಜೊತೆ ಆರೋಗ್ಯಕರ ಸ್ಪರ್ಧೆಯಲ್ಲಿ ನಾವು ಭಾಗಿಯಾಗಬೇಕು ವಿನಹ ನಾನೇ ಶ್ರೇಷ್ಠ ನನಗೆಲ್ಲ ಗೊತ್ತು ಉಳಿದವರು ಕನಿಷ್ಠ ಎಂಬ ಭಾವನೆ ಬೆಳೆಸಿ ಕೊಳ್ಳುವುದು ಅಪಾಯಕಾರಿ ನಡೆ. ಈ ನಡೆಯೇ ಗೆಲ್ಲುವ ಮುನ್ನ ಸೋಲನ್ನು ಒಪ್ಪಿಕೊಂಡಂತೆ ಆಗುವುದು. ನಮ್ಮ ಪ್ರಾಮಾಣಿಕ ಗೆಲುವು ಹೇಗಿರ ಬೇಕೆಂದರೆ ನಮ್ಮ ಗೆಲುವು ಕಂಡು ಎದುರಾಳಿಗಳು ಸಂತೋಷದಿಂದ ಸಂಭ್ರಮ ಪಡುವಂತಿರಬೇಕು. ಆಗ ಗೆಲುವಿಗೆ ಸಾರ್ಥಕತೆ. ಆಗ ಗೆದ್ದವ ಬೀಗುವು ದಿಲ್ಲ. ಪ್ರಪಂಚ ಬಲು ವಿಶಾಲವಾಗಿದೆ. ಇದನ್ನು ಅರಿಯಬೇಕು. ಅದನ್ನು ಅರಿಯದೇ ಕೆಲವರು ತಮ್ಮದೇ ಸೀಮಿತ ಪ್ರಪಂಚ ರಚಿಸಿಕೊಂಡು ಅದಕ್ಕೆ ತಾವೇ ರಾಜ, ನಾಯಕ, ಮುಖ್ಯಸ್ಥ ಅಂತ ಬೀಗುತ್ತಾರೆ. ತನ್ನ ಪ್ರದೇಶ ಬಿಟ್ಟು ಬೇರಡೆ ಹೋದಾಗಲೇ ಅಂತವರಿಗೆ ಇತರ ಸಾಧಕರನ್ನು ನೋಡಿ ತಾನು ಬಲು ಚಿಕ್ಕವ ತನ್ನ ಸಾಧನೆ ತೃಣಕ್ಕೆ ಸಮಾನ ಎಂದು ತಿಳಿಯುವುದು.
ಒಂದೇ ಮಾತಲ್ಲ ಹೇಳುವದಾದರೆ ನಾವು ಬಾವಿಯಲ್ಲಿ ಇರುವ ಕಪ್ಪೆಯಂತೆ ವರ್ತಿಸಬಾರದು. ವಿಶಾಲ ಗುಣ ವಿಶಾಲ ಮನೋಭಾವ ತುಂಬಾ ಅಗತ್ಯ.
ಸಾಧನೆಗೆ ವಯಸ್ಸು ಯಾವತ್ತೂ ಅಡ್ಡಿಯಲ್ಲ ಅದೆಷ್ಟೋ ಸಂದರ್ಭಗಳಲ್ಲಿ ನಮಗಿಂತ ಚಿಕ್ಕ ವಯಸ್ಸಿನವರು ಬಹು ದೊಡ್ಡ ಸಾಧನೆ ಮಾಡಿರುತ್ತಾರೆ ಹಿರಿಯರಾದ ನಾವು ಅಂತವರ ಬಗ್ಗೆ ಅಭಿಮಾನ ಪಡಬೇಕು ಹೊರತು ನಾನು ಮಾಡದೇ ಇರುವುದನ್ನು ಅವರು ಮಾಡಿದರಲ್ಲ ಎಂದು ಅಸೂಯೆ ಪಡಬಾರದು. ಅರಿ ಷಡ್ವರ್ಗಗಳನ್ನು ದೂರ ಮಾಡಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಸೋಲು ಗೆಲುವು ಸಹಜ. ಗೆದ್ದ ಸಂಭ್ರಮ ಇರಲಿ ಅದು ಅಹಂಕಾರದ
ಸ್ವರೂಪ ಪಡೆಯಬಾರದು. ಈ ಬದುಕು ಶಾಶ್ವತವಲ್ಲ ಆರಂಭ ಇರುವಂತೆ ಈ ನಮ್ಮ ಬದುಕಿಗೆ ಅಂತ್ಯನೂ ಇದೆ.
ಹೀಗಿರುವಾಗ ನಾವು ಗಳಿಸುವ ಹಣ, ಆಸ್ತಿ , ಅಂತಸ್ತು , ಕೀರ್ತಿ ಅದು ಹೇಗೆ ಶಾಶ್ವತವಾಗಿರಲು ಸಾಧ್ಯ. ಹೀಗಾಗಿ ಯಾವಾಗಲೋ ಗೆದ್ದೇನೆಂದು ಬೀಗಬೇಡ. ಇಂದು ಗೆಲುವು ಸಿಕ್ಕಿರಬಹುದು ಸದಾ ಅದು ನಮ್ಮ ಬಳಿ ಇರದು. ಅದು ಗೆಲುವು ಆಗಿರಬಹುದು ,ಅಧಿಕಾರ , ಕೀರ್ತಿ , ಅಂತಸ್ತು, ಹುದ್ದೆ ಆಗಿರಬಹುದು. ಗೆದ್ದನೆಂದು ಬೀಗಬಾರದು ಮುಂದೆ ಗೆಲುವು ನಮ್ಮಿಂದ ಕೈಜಾರಿ ಇನ್ನೊಬ್ಬರ ಪಾಲಾಗಬಹುದು ಆಗ ಸೋಲು ಸ್ವೀಕರಿಸುವ ಮನೋಗುಣ ನಮ್ಮದಾಗ ಬೇಕು. ನಿನ್ನೆ ಮೊನ್ನೆ ಬಂದವರು ನಮಗಿಂತ ಉನ್ನತ ಕೀರ್ತಿ, ಯಶಸ್ಸು ಗಳಿಸುವರೆಂದು ಅಸೂಯೆ ಪಡುವುದೇಕೆ. ಪ್ರಾಮಾಣಿಕ ಪ್ರಯತ್ನ ಪಡುವವರು, ಪ್ರತಿಭಾವಂತರು ಗೆಲುವನ್ನು ಪಡೆಯಬಹುದು. ಅದು ಅವರ ಪ್ರತಿಭೆ, ಪರಿಶ್ರಮಕ್ಕೆ ಸಲ್ಲುವ ಗೌರವ ಹೀಗಾಗಿ ನಾವು ಸೋಲು ಗೆಲುವು ಸಮನಾಗಿ ಸ್ವೀಕರಿಸುತ್ತಾ ಸಾಗೋಣ ಗೆದ್ದಾಗ ಹಿಗ್ಗದೇ ಸೋತಾಗ ಕುಗ್ಗದೇ ಮುನ್ನಡೆಯೋಣ.
(ಲೇಖಕರು: ಶಿಕ್ಷಕರು ಹಾಗೂ ಹವ್ಯಾಸಿ ಬರಹಗಾರರು)