Wednesday, 11th December 2024

ಶೌರ್ಯ ಪ್ರಶಸ್ತಿಗೆ ಭಾಜನರಾಗಿದ್ದ ಮಹಿಳೆ ಕ್ಯಾನ್ಸರ್’ಗೆ ಬಲಿ

ಮಿಜೋರಾಂ: ಕೊಡಲಿಯಿಂದ ಹುಲಿಗೆ ಒಂದೇ ಒಂದು ಏಟು ಕೊಟ್ಟು ಹತ್ಯೆ ಮಾಡಿ ಶೌರ್ಯ ಪ್ರಶಸ್ತಿಗೆ ಭಾಜನರಾಗಿದ್ದ ಲಾಲಜಾಡಿಂಗಿ ಎಂಬ ಮಹಿಳೆ ಕ್ಯಾನ್ಸರ್​ನಿಂದ ಮೃತಪಟ್ಟಿದ್ದಾರೆ.

ಅಂದು ಹತ್ಯೆ ಮಾಡಿದ್ದ ಹುಲಿಯ ಮಮ್ಮಿಯನ್ನೇ ನಾವು ಮ್ಯೂಸಿಯಂನಲ್ಲಿ ಕಾಣಬಹುದಾಗಿದೆ.

ಈಗ ಲಾಲ್ಜಾಡಿಂಗಿ ಅವರಿಗೆ 72 ವರ್ಷ ವಯಸ್ಸು, ಕ್ಯಾನ್ಸರ್​ನಿಂದ ಅವರು ಸಾವನ್ನಪ್ಪಿದ್ದಾರೆ. ಮ್ಯೂಸಿಯಂನಲ್ಲಿರುವ ಹುಲಿ ಯಾವಾಗಲೂ ಪ್ರವಾಸಿಗ ರನ್ನು ಅದರಲ್ಲೂ ಮಕ್ಕಳನ್ನು ಗಮನಸೆಳೆಯುತ್ತದೆ. ಆದರೆ ಆ ಹುಲಿ ಮ್ಯೂಸಿಯಂಗೆ ಬರುವಂತೆ ಮಾಡಿದ್ದ ಮಹಿಳೆಯನ್ನು ಜನರು ಅಷ್ಟಾಗಿ ನೆನಪಿಟ್ಟು ಕೊಂಡಿಲ್ಲ.

ಲಾಲ್ಜಾಡಿಂಗಿ ಅವರು ಪತಿ, ನಾಲ್ವರು ಮಕ್ಕಳು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ. ಅವರು 26 ವರ್ಷದವರಿದ್ದಾಗ ದೂರದ ಕಾಡಿಗೆ ಹೋಗಿದ್ದರು. ಆಗ ಹುಲಿಯೊಂದಿಗೆ ಮುಖಾಮುಖಿಯಾಗಿದ್ದಾರೆ. ”ಮರವನ್ನು ಕತ್ತರಿಸುತ್ತಿದ್ದಾಗ ಏನೋ ಶಬ್ದ ಕೇಳಿಸಿತ್ತು, ಮೊದಲು ಕಾಡುಹಂದಿ ಇರಬಹುದು ಎಂದು ಕೊಂಡೆ. ಸ್ನೇಹಿತರನ್ನು ಕರೆದೆ ಆದರೆ ಯಾರಿಗೂ ಕೇಳಿಸಲಿಲ್ಲ, ಪೊದೆಯಿಂದ ಒಮ್ಮೆಲೆ ಹುಲಿ ಕಾಣಿಸಿಕೊಂಡಾಗ ಭಯವಾಯಿತು.

ಯೋಚಿಸಲು ಸಮಯ ಇರಲಿಲ್ಲ, ತಕ್ಷಣ ಅದರ ಹಣೆಗೆ ಕೊಡಲಿಯಿಂದ ಹೊಡೆದೆ ಒಂದೇ ಹೊಡೆತಕ್ಕೆ ಹುಲಿ ಸತ್ತಿದ್ದು ನನ್ನ ಅದೃಷ್ಟ, ಒಂದೊಮ್ಮೆ ಬೇರೆ ಭಾಗಕ್ಕೆ ಪೆಟ್ಟಾಗಿದ್ದರೆ ಹುಲಿ ನನಗೆ ಎರಡನೇ ಅವಕಾಶ ನೀಡುತ್ತಿರಲಿಲ್ಲ ಎಂದಿದ್ದಾರೆ.

ಲಾಲ್ಜಾಡಿಂಗಿ 1980ರಲ್ಲಿ ಶೌರ್ಯ ಪ್ರಶಸ್ತಿಯನ್ನು ಭಾರತ ಸರ್ಕಾರವು ನೀಡಿತ್ತು. ಅಂದಿನ ರಾಷ್ಟ್ರಪತಿ ನೀಲಂ ಸಂಜೀವರೆಡ್ಡಿ ಅವರಿಂದ ಪ್ರಶಸ್ತಿ ಸ್ವೀಕರಿಸಿದ್ದರು.