Saturday, 23rd November 2024

ಭರ್ಜರಿ ಏರಿಕೆ ಕಂಡ ಸೆನ್ಸೆಕ್ಸ್ ಸೂಚ್ಯಂಕ

ಮುಂಬೈ: ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಹಾಗೂ ನಿಫ್ಟಿ ಸೋಮವಾರ ವಹಿವಾಟಿನಲ್ಲಿ ಭರ್ಜರಿ ಏರಿಕೆ ಕಂಡವು.

ಸೆನ್ಸೆಕ್ಸ್ ಸೂಚ್ಯಂಕವು 431.03 ಪಾಯಿಂಟ್ ಹೆಚ್ಚಳವಾಗಿ, 40,414.01 ಪಾಯಿಂಟ್ ನೊಂದಿಗೆ ವ್ಯವಹಾರ ನಡೆಸಿದರೆ, ನಿಫ್ಟಿ ಸೂಚ್ಯಂಕವು 106.9 ಪಾಯಿಂಟ್ ಏರಿಕೆಯಾಗಿ 11,869.35 ಅಂಶದೊಂದಿಗೆ ವ್ಯವಹಾರ ನಡೆಸಿತು.

ನಿಫ್ಟಿಯಲ್ಲಿನ ಬ್ಯಾಂಕ್ ಸೂಚ್ಯಂಕ 2% ಏರಿಕೆ ಕಂಡರೆ, ಎನರ್ಜಿ 1% ಹೆಚ್ಚಳ ಆಯಿತು. ಜಾಗತಿಕ ಮಟ್ಟದ ಮಾರುಕಟ್ಟೆಗಳ ಪ್ರಭಾವ, ಯುಎಸ್ ನಲ್ಲಿ ಆರ್ಥಿಕ ಪ್ಯಾಕೇಜ್ ಬಗ್ಗೆ ಭರವಸೆ ಇತ್ಯಾದಿ ಅಂಶಗಳು ಏರಿಕೆಗೆ ಪುಷ್ಟಿ ನೀಡಿದವು. ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಎಚ್ ಡಿಎಫ್ ಸಿ, ಒಎನ್ ಜಿಸಿ ಹಾಗೂ ಗೇಲ್ ಷೇರುಗಳು ನಿಫ್ಟಿಯಲ್ಲಿ ಪ್ರಮುಖವಾಗಿ ಏರಿಕೆ ದಾಖಲಿಸಿದವು. 2.50%ಗೂ ಹೆಚ್ಚು ಮೇಲಕ್ಕೆ ಏರಿದವು.