Saturday, 14th December 2024

ಎನ್ಸಿಸಿ ಶಿಬಿರದಲ್ಲಿ 13 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ: 11 ಜನರ ಬಂಧನ

ಚೆನ್ನೈ : ತಮಿಳುನಾಡಿನ ಕೃಷ್ಣಗಿರಿಯಲ್ಲಿ ನಕಲಿ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್ಸಿಸಿ) ಶಿಬಿರದಲ್ಲಿ ಕನಿಷ್ಠ 13 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಶಿಬಿರದ ಸಂಘಟಕರು, ಶಾಲೆಯ ಪ್ರಾಂಶುಪಾಲರು, ಇಬ್ಬರು ಶಿಕ್ಷಕರು ಮತ್ತು ವರದಿಗಾರ ಸೇರಿದಂತೆ ಹನ್ನೊಂದು ಜನರನ್ನು ಬಂಧಿಸಲಾಗಿದೆ.

ಖಾಸಗಿ ಶಾಲೆಯು ಎನ್ಸಿಸಿ ಘಟಕವನ್ನು ಹೊಂದಿಲ್ಲ ಎಂದು ತನಿಖೆಯಿಂದ ತಿಳಿದುಬಂದಿದೆ. ಅಂತಹ ಶಿಬಿರವನ್ನು ಆಯೋಜಿಸುವುದರಿಂದ ಅವರು ಎನ್ಸಿಸಿ ಘಟಕಕ್ಕೆ ಅರ್ಹತೆ ಪಡೆಯುತ್ತಾರೆ ಎಂದು ಸಂಘಟಕರು ಶಾಲಾ ಆಡಳಿತ ಮಂಡಳಿಗೆ ತಿಳಿಸಿದ್ದಾರೆ.

ಈ ತಿಂಗಳ ಆರಂಭದಲ್ಲಿ ನಡೆದ ಮೂರು ದಿನಗಳ ಶಿಬಿರದಲ್ಲಿ 17 ಬಾಲಕಿಯರು ಸೇರಿದಂತೆ 41 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಬಾಲಕಿಯರಿಗೆ ಮೊದಲ ಮಹಡಿಯಲ್ಲಿರುವ ಶಾಲಾ ಸಭಾಂಗಣದಲ್ಲಿ ಸ್ಥಳಾವಕಾಶ ಕಲ್ಪಿಸಲಾಗಿದ್ದು, ಬಾಲಕರಿಗೆ ನೆಲಮಹಡಿಯಲ್ಲಿ ವಸತಿ ಕಲ್ಪಿಸ ಲಾಗಿದೆ. ಶಿಬಿರದ ಮೇಲ್ವಿಚಾರಣೆಗೆ ಯಾವುದೇ ಶಿಕ್ಷಕರನ್ನು ನಿಯೋಜಿಸಲಾಗಿಲ್ಲ. ಆಡಿಟೋರಿಯಂನಿಂದ ಹೊರಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಬಾಲಕಿಯರು ಆರೋಪಿಸಿದ್ದಾರೆ.