ತನ್ನಿಮಿತ್ತ
ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ
೧೯೪೫ ಅಕ್ಟೋಬರ್ ೨೪ರಂದು ಅಧಿಕೃತವಾಗಿ ಜನ್ಮತಾಳಿದ ವಿಶ್ವಸಂಸ್ಥೆಗೆ ೭೫ ವರ್ಷಗಳಾದರೂ ವಿಶ್ವಸಂಸ್ಥೆಯ ಕಾರ್ಯ ವೈಖರಿಯಲ್ಲಿ ರಚನಾತ್ಮಕ ಬದಲಾವಣೆ ಗಳಾಗದಿರುವುದು ವಿಪರ್ಯಾಸ. ಇಷ್ಟೊಂದು ದೊಡ್ಡ ದೀರ್ಘ ಇತಿಹಾಸವಿರುವ ವಿಶ್ವಸಂಸ್ಥೆ ಜಗತ್ತಿನ ಜ್ವಲಂತ ಸಮಸ್ಯೆಗಳಿಗೆ ಪೂರ್ತಿ ಸ್ಪಂದಿಸಿಲ್ಲ ಮತ್ತು ಸ್ಪಂದಿಸುತ್ತಿಲ್ಲ. ಸಮೂರನೆಯ ಮಹಾಯುದ್ಧ ಸಂಭ ವಿಸಲಿಲ್ಲ ನಿಜ.
ಆದರೆ ವಿಶ್ವದಾದ್ಯಂತ ಪ್ರತ್ಯಕ್ಷ ಯಾ ಪರೋಕ್ಷವಾಗಿ ಆರ್ಥಿಕ, ಸಾಮಾಜಿಕ ಮತ್ತು ಶಾಂತಿಯನ್ನು ಕದಡುವ ಛಾಯಾ ಸಮರಗಳು ನಿರಂತರವಾಗಿದೆ. ವಿಶ್ವಸಂಸ್ಥೆಯು ಇಡೀ ವಿಶ್ವದ ಮಾನವ ಜನಾಂಗಕ್ಕೆ ಶಾಂತಿ ನೀಡುವ ಮಹತ್ವಾಕಾಂಕ್ಷೆಯ ಸಂಸ್ಥೆಯಾಗುವು ದೆಂಬ ಎಲ್ಲಾ ರಾಷ್ಟ್ರಗಳ ನಿರೀಕ್ಷಿತ ಕನಸು ನನಸಾಗದಿರುವುದು ದುರಂತ. ಪ್ರತಿಯೊಂದು ದೇಶದ ಹಿತಾಸಕ್ತಿಯನ್ನು ಕಾಪಾಡುವ ವಿಶ್ವ ನಿಯಂತ್ರಕ ಸಂಸ್ಥೆಯಾಗಿ ಮಾನವ ಹಕ್ಕುಗಳ ರಕ್ಷಣೆ, ಗಡಿ ತಗಾದೆಗಳಿಗೆ ಶಾಶ್ವತ ಪರಿಹಾರಗಳನ್ನು ನೀಡಬೇಕಾಗಿರುವ
ವಿಶ್ವದ ಪರಮೋಚ್ಚ ಸಂಸ್ಥೆ ಗೊಂದಲದ ಗೂಡಾಗಿದೆ.
ವಿಶ್ವಸಂಸ್ಥೆ ಪ್ರಬಲ ಸಂಸ್ಥೆಯಾಗಿ ವಿಶ್ವದೆಲ್ಲೆಡೆ ಅದರ ನಿರ್ಧಾರವೇ ಅಂತಿಮವಾಗಬೇಕು. ಆದರೆ ಕೆಲವೇ ಕೆಲವು ಬಲಿಷ್ಠ ರಾಷ್ಟ್ರ ಗಳ ಕೃಪಾಕಟಾಕ್ಷಕ್ಕೆ ಒಳಗಾದಂತೆ ಗೋಚರವಾಗುತ್ತಿವೆ. ವಿಶ್ವಸಂಸ್ಥೆಯ ಅಂಗ ಸಂಸ್ಥೆಯಾಗಿರುವ ವಿಶ್ವ ಆರೋಗ್ಯ ಸಂಸ್ಥೆ ಜಗತ್ತಿನ ಎದುರು ಹಲವಾರು ವಿಷಯಗಳ ಬಗ್ಗೆ ಸಂಶಯಕ್ಕೆ ಕಾರಣವಾಗಿದೆ. ಸ್ವಯಂ ನಿರ್ಧಾರಕ್ಕಿಂತಲೂ ಪ್ರಬಲ ರಾಷ್ಟ್ರಗಳ ಕೈವಾಡಕ್ಕೆ ಮಣಿದು ಗೌರವವನ್ನು ಕಳೆದುಕೊಂಡಿರುವುದು ಗೋಚರವಾಗುತ್ತಿದೆ. ಸೆಕ್ಯೂರಿಟಿ ಕೌನ್ಸಿಲ್ ವಿವಿಧ ರಾಷ್ಟ್ರಗಳಿಗೆ ರಕ್ಷಣೆ ಕೊಡಲು ವಿಫಲವಾಗಿ ಅಪಕೃಪೆಗೆ ಕಾರಣವಾಗಿ ನಂಬಿಕೆ ಕಳೆದುಕೊಂಡಿದೆ.
ತನ್ನ ಅವೈಜ್ಞಾನಿಕ ವಿಟೋ ಪವರ್ನಿಂದ ಅಸಮರ್ಥ ಸಂಸ್ಥೆಯಾಗಿದೆ.’ ಇದಲ್ಲದೆ ಯುದ್ಧಾಪರಾಧ ಮತ್ತು ಮಾನವೀಯತೆಯ ನಿರ್ಣಯಗಳು ವಿಟೋ ಪವರ್ ಹೊಂದಿರುವ ದೇಶಗಳಿಂದಾಗಿ ತಡೆ ಹಿಡಿಯಲಾಗಿದೆ. ‘ವಿಶ್ವಸಂಸ್ಥೆಯು ಭಯೋತ್ಪಾದನೆಗೆ ಸ್ಪಷ್ಟ ವಾದ ವ್ಯಾಖ್ಯಾನ ಕೊಡದಿರುವುದು ದುರಂತವೇ ಸರಿ’. ಮೊದಲನೆಯ ಮಹಾಯುದ್ಧ ಕೊನೆಗೊಂಡಾಗ ಉದಯವಾಗಿದ್ದ ಲೀಗ್ ಆಫ್ ನೇಶನ್ ಯುದ್ಧಗಳನ್ನು ನಿಲ್ಲಿಸುವಲ್ಲಿ ವಿಫಲವಾಗಿ ದುರ್ಬಲವಾದ ಪರಿಣಾಮ ೧೯೪೫ರಲ್ಲಿ ಎರಡನೆಯ ಮಹಾ ಯುದ್ಧದ ಬಳಿಕ ಶಾಂತಿ ಸ್ಥಾಪನೆಯ ಸಲುವಾಗಿ ವಿಶ್ವಸಂಸ್ಥೆ ಪ್ರಾರಂಭವಾಯಿತು.
ಯುದ್ಧ ಮತ್ತು ಅಂತಾರಾಷ್ಟ್ರೀಯ ಬಿಕ್ಕಟ್ಟನ್ನು ನಿವಾರಿಸುವುದು, ರಾಷ್ಟ್ರ ರಾಷ್ಟ್ರಗಳೊಡನೆ ಬಾಂಧವ್ಯ ವೃದ್ಧಿ ಮಾಡುವುದು, ಸಾಮಾಜಿಕ ಉನ್ನತಿಗೆ ಶ್ರಮಿಸುವುದು ಇದರ ಪ್ರಮುಖ ಉದ್ದೇಶವಾದರೂ ಇತ್ತೀಚಿನ ಕೆಲವು ವರ್ಷಗಳ ವಿದ್ಯಮಾನವನ್ನು ಅವಲೋಕಿಸುವಾಗ ವಿಶ್ವಸಂಸ್ಥೆ ಮತ್ತು ಅದರ ಅಂಗ ಸಂಸ್ಥೆಗಳು ವೈಫಲ್ಯಗಳನ್ನು ಕಾಣುತ್ತಿರುವುದರಿಂದ ವಿಶ್ವದ ಕೆಲವು ರಾಷ್ಟ್ರಗಳ ನಡುವೆ ಆತಂಕ ಮತ್ತು ಅಶಾಂತಿ ಮೂಡಿವೆ. ವಿಶ್ವಸಂಸ್ಥೆಯು ೧೯೩ ಸದಸ್ಯ ರಾಷ್ಟ್ರಗಳನ್ನು ಹೊಂದಿದ್ದರೂ ಕೆಲವೇ ಬಲಿಷ್ಠ ರಾಷ್ಟ್ರಗಳ ಬಿಗಿಮುಷ್ಠಿಗೆ ಸಿಲುಕಿದೆ.
ದೇಶಗಳು ತಮ್ಮ ವಿವಾದಗಳನ್ನು ಅಂತರಾಷ್ಟ್ರೀಯ ನ್ಯಾಯಾಲಯಕ್ಕೆ ಒಪ್ಪಿಸಿದ್ದೇ ಆದಲ್ಲಿ ಅದು ಕೊಡುವ ತೀರ್ಪಿನ ಸಂಬಂಽತ ರಾಷ್ಟ್ರಗಳು ಬದ್ಧವಾಗಬೇಕು. ಇಷ್ಟೊತ್ತಿಗೆ ಈ ಸಂಸ್ಥೆ ಪ್ರಬಲವಾದ ಪರಮಾಧಿಕಾರವುಳ್ಳ ನಿಷ್ಪಕ್ಷಪಾತ ಸಂಘಟನೆಯಾಗಿ ವಿಕಾಸ ಗೊಳ್ಳಬೇಕಿತ್ತು. ಆದರೆ ಅದೂ ಕೂಡಾ ಗೊಂದಲದ ಗೂಡಾಗಿದೆ. ವಿಶ್ವದ ಸೂಪರ್ ಪವರ್ ಎಂದುಕೊಂಡಿರುವ ಯುಎಸ್ಎ, ರಷ್ಯಾ, ಚೀನಾ, ಜಪಾನ್, ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ ಎಲ್ಲಾ ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳ ಹಿತಾಸಕ್ತಿಗೆ ಮಾತ್ರ ಸೀಮಿತವಾಗಿದೆಯೇ ಎಂಬಂತಿದೆ.
ವಿಶ್ವದ ಒಟ್ಟು ಜನಸಂಖ್ಯೆ ೭೮೦ ಕೋಟಿ. ಈ ಪ್ರಬಲ ರಾಷ್ಟ್ರಗಳ ಜನಸಂಖ್ಯೆ ೨೫೦ ಕೋಟಿ ಈ ರಾಷ್ಟ್ರಗಳ ಹಿತಾಸಕ್ತಿ ಮತ್ತು ಪ್ರಾಧಾನ್ಯತೆಯನ್ನು ಕಾಪಾಡಲು ಉಳಿದ ೫೩೦ ಕೋಟಿ ಜನಸಂಖ್ಯೆಯನ್ನು ಕಡೆಗಣಿಸಬಾರದು. ವಿಶ್ವಸಂಸ್ಥೆಯ ವಿಟೋ ಪವರ್ ಬಹು ಸಂಖ್ಯಾತರ ಹಿತರಕ್ಷಣೆಗೆ ಫಲಕಾರಿಯಾಗುವುದಿಲ್ಲ. ‘ವಿಶ್ವಸಂಸ್ಥೆಯು ಕೇವಲ ಬಲಶಾಲಿ ರಾಷ್ಟ್ರಗಳ ತಾಳಕ್ಕೆ ನರ್ತಿಸಿದರೆ ಅದರ ಅಸ್ಥಿತ್ವವೇ ಪರಾಭವಗೊಂಡಂತಾಗುತ್ತದೆ.’ ಆದರೆ ಕಾರಣ ಗಳು ಅದರ ಮೇಲೆ ಸವಾರಿ ಮಾಡುತ್ತಿರುವ ಪ್ರಬಲ ರಾಷ್ಟ್ರ ಗಳೇ ಆಗಿವೆ.
ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವವಾದ ಭಾರತಕ್ಕೆ ವಿಶ್ವಸಂಸ್ಥೆಯ ಖಾಯಂ ಭದ್ರತಾ ಮಂಡಳಿಯಲ್ಲಿ ಸದಸ್ಯತ್ವವಿಲ್ಲದಿರು ವುದು ಪ್ರಜಾಪ್ರಭುತ್ವಕ್ಕಾಗಿರುವ ಅನ್ಯಾಯ ಮತ್ತು ಅವಮಾನವೇ ಸರಿ. ಹಿಂದೊಮ್ಮೆ ಭಾರತದ ಪಾಲಿಗೆ ಅಂದಿನ ಸರಕಾರದ ಇಚ್ಛಾಶಕ್ತಿಯ ಕೊರತೆಯಿಂದಾಗಿ ಶಾಶ್ವತ ಸದಸ್ಯತ್ವ ಸ್ಥಾನ ಚೀನಾ ಪಾಲಾಯಿತು. ತದನಂತರ ಭಾರತಕ್ಕೆ ಶಾಶ್ವತ ಸದಸ್ಯತ್ವ ಕೊಡಬೇಕೆಂದಿದ್ದರೂ ಚೀನಾ ತನ್ನ ಕುತಂತ್ರವನ್ನು ಬಳಸುತ್ತಾ ಅಡ್ಡಿ ಮಾಡುತ್ತಲೇ ಇದೆ.
ಇತ್ತೀಚೆಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿಯವರು ವಿಶ್ವಸಂಸ್ಥೆಯಲ್ಲಿ ಸುಧಾ ರಣೆಯ ಅವಶ್ಯಕತೆಗಳನ್ನು ಸಮರ್ಥಿಸಿ ಡಿರುವುದಲ್ಲದೆ ಜಗತ್ತಿನ ಹಲವಾರು ರಾಷ್ಟ್ರಗಳಲ್ಲಿನ ಅಶಾಂತಿಗೆ ವಿಶ್ವಸಂಸ್ಥೆಯ ನಿಷ್ಕ್ರೀ ಯತೆ ಎಂಬ ಧ್ವನಿಯಲ್ಲಿ ಮಾತನಾಡಿದುದು ಹೆಚ್ಚಿನ ಎಲ್ಲಾ ಸದಸ್ಯ ರಾಷ್ಟ್ರಗಳು ಸಮ್ಮತಿಸಿದಂತಿತ್ತು.
ವಿಶ್ವಸಂಸ್ಥೆಯ ಅಂಗ ಸಂಸ್ಥೆಯಾಗಿರುವ ವಿಶ್ವ ಆರೋಗ್ಯ ಸಂಸ್ಥೆ ಚೀನಾದ ಕೈಗೊಂಬೆಯಾಗಿ ವರ್ತಿಸುತ್ತಿದೆ. ಅದರ ಮುಖ್ಯಸ್ಥ ಟೆಡ್ರೋಸ್ ಅದಾನಂ ಚೀನಾದ ಪ್ರಭಾವದಿಂದ ಆಯ್ಕೆಯಾಗಿರುವುದರಿಂದ ಕ್ಲಪ್ತ ಸಮಯಕ್ಕೆ ಕರೋನಾದ ವಿಚಾರ ಬಹಿರಂಗ ಗೊಳಿಸದಿರುವುದರಿಂದ ಈ ಸಾಂಕ್ರಾಮಿಕವು ಭೀಕರವಾಗಿ ಹರಡಿತು. ಇದರಿಂದಾಗಿ, ಕರೋನಾವು ಭೂಮಂಡಲದ ಯಾವೊಂದೂ ಗಡಿಯನ್ನು ಬಿಡದೆ ವಿಶ್ವವನ್ನೇ ತಲ್ಲಣಗೊಳಿಸಿವೆ. ಚೀನಾ, ವಿಶ್ವ ಆರೋಗ್ಯ ಸಂಸ್ಥೆ ಮತ್ತು ಅದರ ಮುಖ್ಯಸ್ಥರೇ ಇದಕ್ಕೆ ಕಾರಣ.
ಇಂದು ಭಾರತವು ಎದುರಿಸುತ್ತಿರುವ ಗಡಿರೇಖೆಯಲ್ಲಿನ ಘರ್ಷಣೆ ಹಾಗೂ ಹಲವಾರು ದೇಶಗಳ ಗಡಿ ವಿವಾದವೇ ಬಹುತೇಕ ಯುದ್ಧಗಳಿಗೆ ಕಾರಣವಾಗಿದೆ. ಪಾಕಿಸ್ತಾನ ಮತ್ತು ಚೀನಾದೊಂದಿಗೆ ತಮ್ಮ ಗಡಿ ತಗಾದೆ ಇದ್ದೇ ಇದೆ. ಪಾಕಿಸ್ತಾನ ಭಯೋ ತ್ಪಾದಕರನ್ನು ಸೃಷ್ಟಿಸಿ, ಶಾಂತಿ ಭಂಗ, ಪ್ರಕ್ಷುಬ್ದತೆ ಮತ್ತು ಗೊಂದಲವನ್ನು ಸೃಷ್ಟಿಸುತ್ತಲೇ ಇದೆಯಾದರೆ, ಚೀನಾ ದೀರ್ಘಾ ವಧಿಯಲ್ಲಿ ಭಾರತದ ವಿರೋಧಿ, ತನ್ನ ಆರ್ಥಿಕ ಲಾಭಕ್ಕಾಗಿ ಚಟುವಟಿಕೆಗಳನ್ನು ನಡೆಸುತ್ತಲೇ ಬಂದಿದೆ.
ಚೀನಾ ಸಂಖ್ಯಾಧರದಲ್ಲಿ ದೊಡ್ಡದಿದೆ ಮತ್ತು ಆರ್ಥಿಕವಾಗಿ ಸಶಕ್ತವಾಗಿದೆ ಆದರೆ ಭಾರತದ ಪಡೆಯ ಮನೋಸ್ಥೈರ್ಯವು ಆಗಾಧವಾದುದು. ಡ್ರ್ಯಾಗನ್ ಚೀನಾ ಒಂದಲ್ಲ ಒಂದು ದಿನ ಭಾರತಕ್ಕೆ ಅಪಾಯಕಾರಿಯಾಗಿ ಪರಿಣಮಿಸುವುದರ ಬಗ್ಗೆ ಸಂಶಯ ವಿಲ್ಲ. ನಮ್ಮ ದೇಶದ ಪ್ರಸಕ್ತ ಪ್ರಬುದ್ಧ ಆಡಳಿತ ವೈಖರಿಯಿಂದ ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ‘ಆರ್ಟಿಕಲ್ ೩೭೦’ ಪರಿಹಾರ ಕಾಣದ ಸಮಸ್ಯೆಯಾಗಿದ್ದರೂ ಪರಿಹಾರ ದೊರಕಿದೆ.
ಇದು ನಮ್ಮ ದೇಶದ ಆಂತರಿಕ ಸಮಸ್ಯೆ. ಈ ನಿಟ್ಟಿನಲ್ಲಿ ಸಮಸ್ಯೆ ಪರಿಹಾರವಾದುದನ್ನು ಜನಮೆಚ್ಚಲೇ ಬೇಕು. ಈಗ ನಿರಂತರ ಸಮಸ್ಯೆಯಾಗಿ ಕಾಡುತ್ತಿರುವ ಅಂತಾರಾಷ್ಟ್ರೀಯ ಗಡಿ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವತ್ತ ಮತ್ತು ಇಡೀ ಜಗತ್ತಿನ ಈ ರೀತಿ ಸಮಸ್ಯೆಗಳಿಗೆ ಅನುಗುಣವಾಗುವಂತೆ ಪ್ರಬಲ ಮಾರ್ಗೋಪಾಯವನ್ನು ‘ವಿಶ್ವ ಸಂಸ್ಥೆಗೆ ಸದಸ್ಯ ರಾಷ್ಟ್ರಗಳು ಒತ್ತಡ ಹೇರುವುದರ ಮುಖಾಂತರ ಬಗೆಹರಿಸಿಕೊಳ್ಳ ಬೇಕಾಗಿದೆ.’
‘ಯುದ್ಧ ಮತ್ತು ಶಾಂತಿ’ ಅಂತಾರಾಷ್ಟ್ರೀಯ ಸಂಬಂಧದ ಪ್ರಮುಖ ವಿಷಯ. ಇತ್ಯರ್ಥಕ್ಕೆ ಯುದ್ಧ ಬಳಸದಂತೆ ಮಾಡುವುದರಲ್ಲಿ ವಿಶ್ವಸಂಸ್ಥೆಯು ಪರಿಣಾಮಕಾರಿಯಾದ ಪಾತ್ರವನ್ನು ವಹಿಸಬಹುದು. ವಿಶ್ವರಕ್ಷಣೆ ವಿಶ್ವಸಂಸ್ಥೆಯ ಉದ್ದೇಶವಾಗಿರಬೇಕು. ಪ್ರಸ್ತುತ ಸನ್ನಿವೇಶವನ್ನು ಯುದ್ಧಕ್ಕೆ ಕಾರಣವಾದ ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಮಾನಸಿಕ ವೈಮನಸ್ಸುಗಳನ್ನು ಬಗೆಹರಿಸಿ ಮನುಕುಲವು ಎದುರಿಸುತ್ತಿರುವ ಸಾಂಕ್ರಾಮಿಕ ಪಿಡುಗಿನ ನಿವಾರಣೆಗೆ ಪ್ರಥಮ ಆದ್ಯತೆ ನೀಡಬೇಕು. ಸಿಂಹಾವಲೋಕನ ಮಾಡಿ ದಲ್ಲಿ ವಿಶ್ವಸಂಸ್ಥೆ ಮತ್ತು ಅದರ ವಿಶೇಷ ದಳಗಳು ಅನೇಕ ಸಮಸ್ಯೆಗಳನ್ನು ಪರಿಹರಿಸುವುದು ತಿಳಿದು ಬರುತ್ತದೆ.
ಯಾವುದೇ ರಾಷ್ಟ್ರವಿರಲಿ, ಯಾವುದೇ ಕಾರಣವಿರಲಿ ಶಸ್ತ್ರ ಸನ್ನದ್ಧರಾಗುವ ಮೊದಲು ಪರಸ್ಪರ ಹೊಂದಾಣಿಕೆಯ ಮೂಲಕ ಶಾಂತಿಯನ್ನು ಸಾಧಿಸಬಹುದು. ಯುದ್ಧದಿಂದಾಗುವ ಅಪಾರ ಸಾವು ನೋವು ಮತ್ತು ನಷ್ಟ ಹಾಗೂ ಆರ್ಥಿಕ ಅನಾಹುತವು ರಾಜಕೀಯ ಅಭದ್ರತೆಗೂ ನಾಂದಿಯಾಗಬಹುದು. ‘ಇಂದಿನ ಆಧುನಿಕ ಯುದ್ಧೋಪಕರಣಗಳು ಇಡೀ ಮಾನವ ಸಮುದಾಯ
ಗಳನ್ನು ಕ್ಷಣಾರ್ಧದಲ್ಲಿ ನಾಶಮಾಡಬಲ್ಲಂಥ ವಿನಾಶಕಾರಕ ಸ್ವರೂಪದ್ದಾಗಿದೆ.’ ಯುದ್ಧಗಳನ್ನುಂಟು ಮಾಡಬಹುದಾದ ವಿವಾದಗಳನ್ನು ಸಂಧಾನ, ಮಧ್ಯಸ್ಥಿಕೆ ರಾಯಭಾರತ್ವ, ಅಂತಾರಾಷ್ಟ್ರೀಯ ನ್ಯಾಯಾಲಯ, ಮುಂತಾದವುಗಳ ಮೂಲಕ ಬಗೆಹರಿಸಲು ಪ್ರಯತ್ನ ನಡೆಸಬೇಕು.
ವಿಶ್ವಸಂಸ್ಥೆಯು ಯಾವುದೇ ರಾಷ್ಟ್ರಕ್ಕೆ ಸಂಬಂಧಿಸಿದ ತಪ್ಪು ಒಪ್ಪುಗಳನ್ನು ನ್ಯಾಯಯುತವಾಗಿ ಬಗೆಹರಿಸಬೇಕು. ನಾವು ನಮ್ಮ ದೇಶದ ಭೂಪಟದಲ್ಲಿ ತೋರಿಸುತ್ತಿರುವ ವಿಧಿವತ್ತಾದ ತರ್ಕಬದ್ಧವಾಗಿ ನಮೂದಿಸಿರುವ ಕಾಶ್ಮೀರದ ಉತ್ತರ ಭಾಗದ ಮತ್ತು ಪೂರ್ವ ಹಾಗೂ ಪಶ್ಚಿಮದ ಪ್ರದೇಶಗಳ ಬಗ್ಗೆ ನಮ್ಮ ನೆರೆ ರಾಷ್ಟ್ರಗಳ ವಿವಾದವಿದೆ. ಗಿಲ್ಗೀಟ್ ಬಾಲ್ಟೀಸ್ಥಾನ್, ಆಝಾದ್ ಕಾಶ್ಮೀರ್, ಅಕ್ಸಾಯ್ ಚಿನ್ನ ಹಲವಾರು ಸಾವಿರ ಚದರ ಮೀಟರ್ಗಳಿಗೂ ಹೆಚ್ಚಿನ ಪ್ರದೇಶದ ಬಗ್ಗೆ ಅಸಮರ್ಪಕ ವಿವಾದವಿದೆ. ಇಲ್ಲಿ
ಗಡಿ ಘರ್ಷಣೆಯಾಗುತ್ತಲೇ ಇರುತ್ತದೆ. ಇದಕ್ಕೆ ಶಾಶ್ವತ ಪರಿಹಾರ ಬೇಡವೇ? ಯೋಧರು ಈ ಗಡಿ ಪ್ರದೇಶದಲ್ಲಿ ಹುತಾತ್ಮರಾಗುತ್ತಲೇ ಇದ್ದಾರೆ.
ಯುದ್ಧಗಳಿಗೆ ಕಾರಣ ವಾಗಿರುವ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ನೀಡಬೇಕಾದ ‘ವಿಶ್ವಸಂಸ್ಥೆಗೆ ಲೋಕ ಕಲ್ಯಾಣಕ್ಕೆ
ಮುತ್ಸದ್ದಿಯಾದ ನಾಯಕರ ಅಗತ್ಯವಿದೆ.’ ವ್ಯಾಪಾರ ವಹಿವಾಟು ಶ್ರೀಮಂತ ರಾಷ್ಟ್ರವೆನ್ನುವ ಹೆಗ್ಗಳಿಕೆಗಿಂತಲೂ ಆಪತ್ಭಾಂಧವ, ಶಾಂತಪ್ರಿಯ, ವಿವಾದಾಸ್ಪದರಲ್ಲದ, ನಿಷ್ಪಕ್ಷಪಾತ ಜನನಾಯಕರು ಬೇಕಾಗಿದೆ. ‘ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವದ ಅಽನಾಯಕನಾಗಿರುವ ಮೋದಿಯವರಿಂದ ಇದು ಸಾಧ್ಯ.’ ಭಾರತವು ವಿಶ್ವಕ್ಕೆ ಅನಾದಿಕಾಲದಿಂದಲೂ ಅಪಾರ ಕೊಡುಗೆ ನೀಡಿದೆ.
ಶಾಂತಿಪ್ರಿಯವಾದ ಭಾರತವು ಯಾರನ್ನೂ ವಂಚಿಸಿಲ್ಲ.
ವಿಶ್ವಕ್ಕೆ ಮಾದರಿಯಾಗಿರುವ ಮೋದಿಯಂತವರ ಮಾರ್ಗದರ್ಶನ ಮತ್ತು ಮುಂದಾಳತ್ವದಿಂದ ‘ವಿಶ್ವಸಂಸ್ಥೆ ಬಲಿಷ್ಠವಾಗ ಬೇಕಾಗಿದೆ.’ ಗತಕಾಲದ ಬಗೆಗಿನ ನಿರರ್ಥಕ ವಾಗ್ವಾದಗಳಿಗೆ ಆಸ್ಪದ ಕೊಡದೆ ನ್ಯಾಯಸಮ್ಮತವಾಗಿ ವಿವಿಧ ದೇಶಗಳ ಗಡಿರೇಖೆಯ ವಿವಾದಗಳನ್ನು ವ್ಯವಸ್ಥಿತ ರೀತಿಯಲ್ಲಿ ಕಾರ್ಯಭಾರವನ್ನು ನೆರವೇರಿಸಬೇಕಾಗಿದೆ. ‘ವಿಶ್ವಶಾಂತಿಗೆ ಭಂಗ ತರುವ ಸಮಸ್ಯೆಗಳನ್ನು ವಿಶ್ವಸಂಸ್ಥೆ ಬಗೆಹರಿಸಬೇಕಲ್ಲವೇ?’ ೧೯೩ ರಾಷ್ಟ್ರಗಳ ಪ್ರತಿನಿಧಿಗಳಿಂದೊಡಗೂಡಿದ ವಿಶ್ವಸಂಸ್ಥೆ ವಿಶ್ವಶಾಂತಿಗೆ ಭಂಗ ತರುವ ಯಾವುದೇ ಸಮಸ್ಯೆ ಇರಲಿ ಅದನ್ನು ಸೆಕ್ರೆಟರಿ ಜನರಲ್ ಭದ್ರತಾ ಸಮಿತಿಗೆ ಸ್ಪಷ್ಟಪಡಿಸಿ ಹಲವು ರಾಷ್ಟ್ರಗಳಿಂದ ಆಯ್ಕೆಯಾದ
ಅಽಕಾರಿಗಳ ಒಮ್ಮತವನ್ನು ಸ್ಥಾಪಿಸುವ ಜವಾಬ್ಧಾರಿಯನ್ನು ವಹಿಸುವುದರಲ್ಲಿ ಮುಗ್ಗರಿಸುತ್ತಿದೆ.
ಈ ವಿಷಯಗಳ ಪರಿಹಾರಕ್ಕೆ ಭಾರತವು ಮುಂಚೂಣಿಯಲ್ಲಿ ನಿಂತು ಎಲ್ಲಾ ದೇಶಗಳ ಸ್ನೇಹ ಸೌಹಾರ್ದದೊಂದಿಗೆ ವಿಶ್ವದ ಗುರು ವಾಗಬೇಕಾಗಿದೆ. ಅಂತಹ ನಾಯಕತ್ವ ನಮ್ಮಲಿದೆ. ಪ್ರಸಕ್ತ ಸನ್ನಿವೇಶದಲ್ಲಿ ಪ್ರಮುಖ ಜಾಗತಿಕ ಸಂಸ್ಥೆಗಳಾದ ವಿಶ್ವ ವ್ಯಾಪಾರ ಸಂಸ್ಥೆ, ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ, ವಿಶ್ವಬ್ಯಾಂಕ್ ಶ್ರೀಮಂತ ರಾಷ್ಟ್ರಗಳ ಅಣತಿಯಂತೆ ನಡೆಯುವುದು ನಿಲ್ಲಬೇಕು. ವಿಶ್ವಸಂಸ್ಥೆ ಖಾಯಂ ಭದ್ರತಾ ಮಂಡಳಿಯ ಸದಸ್ಯತ್ವವನ್ನು ವಿಸ್ತರಿಸಬೇಕು. ‘ವಿಟೋ ಪವರ್ ತೆಗೆಯಬೇಕು’ ಎಲ್ಲಾ ೧೯೩ ಸದಸ್ಯ ರಾಷ್ಟ್ರಗಳ ಅಭಿಪ್ರಾಯವನ್ನು ಗೌರವಿಸಬೇಕು.
ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಚೀನಾದ ಹಸ್ತಕ್ಷೇಪಕ್ಕೆ ಕಡಿವಾಣ ಹಾಕಬೇಕು. ವೈರಸ್ ಬಗೆಗಿನ ಸತ್ಯಾಂಶಗಳು ಬಹಿರಂಗವಾಗ ಬೇಕು.