ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನೀಡಿರುವ ಪ್ರಾಸಿಕ್ಯೂಷನ್ಗೆ ಗವರ್ನರ್ ಆದೇಶ ವಿಚಾರದಲ್ಲಿ ಗುರುವಾರ ರಾಜ್ಯ ಹೈಕೋರ್ಟ್ ವಿಚಾರಣೆ ನಡೆಸಿತು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ವಾದ ಮಂಡಿಸಿದರು. ಹೈಕೋರ್ಟ್ ನ್ಯಾ.ಎಂ.ನಾಗಪ್ರಸನ್ನ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಿತು.
ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಮಂಡಿಸಿದ ವಾದ ಹೀಗಿತ್ತು…
ಸರ್ಕಾರವನ್ನು ರಾಜ್ಯಪಾಲರು ಇಂತಹ ಕ್ರಮಗಳಿಂದ ಬದಲಿಸಲಾಗದು.
ರಾಜ್ಯಪಾಲರ ಅಧಿಕಾರಗಳಿಗೆ ನಿರ್ಬಂಧಗಳಿವೆ.
ಜನರು ಆಯ್ಕೆ ಮಾಡಿರುವ ಸರ್ಕಾರವನ್ನು ಬದಲಿಸಲಾಗದು.
ರಾಜ್ಯಪಾಲರ ಹುದ್ದೆ ಸಿಕ್ಕಸಿಕ್ಕವರಿಗೆ ಕೊಡುವ ಹುದ್ದೆ ಅಲ್ಲ.
ರಸ್ತೆಯಲ್ಲಿ ಹೋಗುವ ವ್ಯಕ್ತಿ ಕೇಳಿದಾಗ ಕೊಡುವುದಲ್ಲ.
ಟಿ.ಜೆ.ಅಬ್ರಹಾಂಗೆ ದಂಡ ವಿಧಿಸಲು ಮನವಿ.
ಪ್ರಕರಣದಲ್ಲಿ ಸ್ಯಾಕ್ಷನ್ ಪ್ರಮುಖ ಆಧಾರವಾಗಿದೆ
ರಾಮೇಶ್ವರ್ ಪ್ರಸಾದ್ ಪ್ರಕರಣ ಉಲ್ಲೇಖಿಸಿದ ವಕೀಲ ಸಿಂಘ್ವಿ
ಕೋರ್ಟಿಗೆ ಸ್ಯಾಂಕ್ಷನ್ ರಿಲೀವ್ ಮಾಡಲಿರುವ ಆದೇಶಗಳ ಉಲ್ಲೇಖ
ಮೊದಲು ಶೋಕಾಸ್ ನೋಟಿಸನ್ನು ರಾಜ್ಯಪಾಲರು ನೀಡುತ್ತಾರೆ
ಸರ್ಕಾರದ ಪರವಾಗಿ ಎಜಿ ಉತ್ತರವನ್ನು ನೀಡುತ್ತಾರೆ
ಸ್ಯಾಂಕ್ಷನ್ ನೀಡುವಾಗ ಅದಕ್ಕೆ ಮೆರಿಟ್ ಗಳನ್ನು ಗಮನಿಸೋದು ಮೂಕ್ಯ
ನೈಸರ್ಗಿಕ ಕಾನೂನಿನ ಬಗ್ಗೆ 3 ದಿನಾಂಕ ಗಮನಿಸಬೇಕು.
ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ, ಹೆಚ್.ಡಿ.ಕುಮಾರಸ್ವಾಮಿ ಪ್ರಕರಣ ಇನ್ನೂ ಬಾಕಿ
ತನಿಖೆ ನಡೆದಿದ್ದರೂ ಚಾರ್ಜ್ ಶೀಟ್‌ಗೆ ರಾಜ್ಯಪಾಲರು ಅನುಮತಿ ಕೊಟ್ಟಿಲ್ಲ
ರಾಜ್ಯಪಾಲರು ಸಚಿವ ಸಂಪುಟ ನೀಡಿದ ಸಲಹೆ ಕೂಡ ಪರಿಗಣಿಸಿಲ್ಲ