ಆನಂದ ಸ್ವಾಮಿ ಹಿರೇಮಠ ರಾಯಚೂರು
ಹಲವು ಶಾಲೆಯಲ್ಲಿ ದೈಹಿಕ, ವಿಷಯವಾರು, ಸಾಂಸ್ಕೃತಿಕ, ಸಂಗೀತ ಶಿಕ್ಷಕರ ಹುದ್ದೆಗಳು ಖಾಲಿ
ಜಿಲ್ಲೆಯಲ್ಲಿ ಶಿಕ್ಷಕರ ಕೊರತೆ ಇದ್ದರೂ ಕೂಡ ಕಲ್ಯಾಣ ಕರ್ನಾಟಕ ಭಾಗದ ರಾಜಕೀಯ ಜನಪ್ರತಿನಿಗಳು ಇದರ ಕುರಿತು ಕಿಂಚಿತ್ತೂ ಯೋಚಿಸದೆ ಇರುವುದು ದುರದೃಷ್ಟಕರ ವಿಷಯವಾಗಿ ನಮ್ಮ ರಾಯಚೂರು ಜಿಲ್ಲೆಯ
ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹೊಡೆತ ಬಿಳುತ್ತಿದೆ. ಜಿಲ್ಲೆಯಲ್ಲಿ ಒಟ್ಟು 664 ಪ್ರಾಥಮಿಕ ಶಾಲೆಗಳಿವೆ ಅದಕ್ಕೆ 8460 ಶಿಕ್ಷಕರ ಅವಶ್ಯಕತೆ ಇದ್ದು ಇದರಲ್ಲಿ 3788 ಶಿಕ್ಷಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ ಹಾಗೂ 3205 ಅತಿಥಿ ಶಿಕ್ಷಕರಿಂದಲೇ ಶಾಲೆಗಳ ಮುನ್ನಡೆಸುತ್ತಾರೆ.
ಪ್ರಾಥಮಿಕ ಶಾಲೆಗಳಿಗೆ 4629 ಶಿಕ್ಷಕರ ಅವಶ್ಯಕತೆ ಇದೆ. ಪ್ರೌಢ ಶಾಲಾ ವಿಭಾಗದಲ್ಲಿ ಜಿಲ್ಲೆಗೆ ಒಟ್ಟು 2275 ಶಿಕ್ಷಕರ ಹುದ್ದೆಗಳು ಮಂಜೂರಾತಿಯಾಗಿದ್ದು ಇಲ್ಲಿ ಕೇವಲ 1227 ಕಾರ್ಯನಿರ್ವಹಿಸುತ್ತಿದ್ದು 1048 ಪ್ರೌಢಶಾಲಾ ಶಿಕ್ಷಕರ ಅವಶ್ಯಕತೆ ಇದ್ದರೂ ಕೂಡ 2023 ರಲ್ಲಿ ಪ್ರಾಥಮಿಕ ಶಾಲೆ 2560ಕ್ಕು ಹೆಚ್ಚು ಶಿಕ್ಷಕರು ಮತ್ತು ಪ್ರೌಢ 270 ಕ್ಕೂ ಶಿಕ್ಷಕರನ್ನು ವರ್ಗಾವಣೆ ಮಾಡಿದ್ದು. ಮತ್ತೆ ಈ ಬಾರಿ 2024 ಸಾಲಿನಲ್ಲಿ ಜಿಲ್ಲೆಯಿಂದ 259 ಪ್ರೌಢ ಶಾಲಾ ಶಿಕ್ಷಕರನ್ನು ವರ್ಗಾವಣೆ ಮಾಡಿರುವ ಜಿಲ್ಲಾ ಶಿಕ್ಷಣ ಇಲಾಖೆಯ ನಿರ್ಲಕ್ಷ್ಯ ಹಾಗೂ ಬೇಜವ್ದಾರಿಯೂ ಕೂಡ ಎದ್ದು ಕಾಣಿಸುತ್ತಿದೆ. ಇದನ್ನು ರಾಯಚೂರು ಜಿಲ್ಲೆಯ ಉಸ್ತುವಾರಿ ಸಚಿವರಾಗಲಿ ನಮ್ಮ ಜಿಲ್ಲೆಯಿಂದ ಸಚಿವರಾಗಿರುವ ಎನ್ ಎಸ್ ಬೋಸರಾಜ ಇತ್ತಕಡೆ ಗಮನ ನೀಡಬೇಕಾಗಿದೆ.
ಜಿಲ್ಲೆಯಲ್ಲಿ ಖಾಯಂ ಶಿಕ್ಷಕರನ್ನು ನೇಮಕ ಮಾಡದೆ ಪ್ರಾಥಮಿಕ ಶಾಲಾ ವಿಭಾಗದಲ್ಲಿ 3250 ಹಾಗೂ -ಡಶಾಲಾ ವಿಭಾಗದಲ್ಲಿ 707 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡಿದ್ದು ಕಳೆದ ಅನೇಕ ಶೈಕ್ಷಣಿಕ ವರ್ಷಗಳಿಂದ ನೇಮಕ ಮಾಡಿಕೊಂಡು ಶಾಲೆಗಳನ್ನು ನಡೆಸುತ್ತಿರುವುದರಿಂದ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರ ಹುದ್ದೆಗಳು ಖಾಲಿ ಇದ್ದರು ಕೂಡ ಶಿಕ್ಷಕರ ತರಬೇತಿಯನ್ನು ಪಡೆದ ಶಿಕ್ಷಕರಿಗೆ ಕಾಯಂ ಉದ್ಯೋಗ ಇಲ್ಲದೆ ಇರುವುದರಿಂದ ಕಡಿಮೆ ಸಂಬಳಕ್ಕೆ ಅತಿಥಿ ಶಿಕ್ಷಕರು ವಯೋಮಿತಿ ಮೀರುತ್ತಿದ್ದಾರು ಕೂಡ ಉದ್ಯೋಗ ಭದ್ರತೆ ಇಲ್ಲದೆ ಇದ್ದರು ಕೂಡ ನೌಕರಿ ಮಾಡುವ ಅನಿವಾರ್ಯತೆಯನ್ನು ಸರಕಾರ ಶಿಕ್ಷಕರಿಗೆ ಸೃಷ್ಟಿಸಿದೆ.
ಕಲ್ಯಾಣ ಕರ್ನಾಟಕ ವಿಮೋಚನೆ ದಿನಾಚರಣೆಗೆ ನಿಜವಾದ ಅರ್ಥ ದೊರೆಯಬೇಕಾದರೆ ಹಾಗೂ ಪ್ರತ್ಯಕತೆಯ ಕೂಗು ನಿಲ್ಲಬೇಕಾದರೆ ಸರಕಾರ ಕೂಡಲೆ ಸರಕಾರಿ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ತುಂಬಿ ಗುಣಮಟ್ಟದ ಶಿಕ್ಷಣ ಹಾಗೂ ನಿರುದ್ಯೋಗಿ ಪದವಿದರರಿಗೆ ಉದ್ಯೋಗವನ್ನು ಕಲ್ಪಿಸುವುದಕ್ಕೆ ಮುಂದಾಗಬೇಕು ಹಾಗೂ ಮಲತಾಯಿ ದೊರಣೆಯನ್ನು ನಿಲ್ಲಿಸಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ.
ದೇವದುರ್ಗ : ತಾಲೂಕಿನಲ್ಲಿ ಸರಕಾರಿ ಪ್ರಾಥಮಿಕ ಶಾಲೆಗಳು 175 ಇದ್ದು ಖಾಸಗಿ ಶಾಲೆಗಳು ೧೯.ಪ.ಪಂಗಡ ವಸತಿ ಶಾಲೆಗಳು೩ ಒಟ್ಟು 197 ಶಾಲೆಗಳು ಇವೆ. ತಾಲೂಕಿನ ಶಾಲೆಗಳಿಗೆ ಅನುಗುಣವಾಗಿ ಮಂಜೂರಾದ ಹುದ್ದೆಗಳು
ದೇವದುರ್ಗ ತಾಲೂಕು 1625 ಕಾರ್ಯನಿರ್ವಹಿಸುತ್ತಿರುವವರು ೭೦೮, ಖಾಲಿ ೯೧೭ ಅತಿಥಿ ಶಿಕ್ಷಕರು ೭೭೨ ಕಾರ್ಯ ನಿರ್ವಹಿಸುತ್ತಿದ್ದಾರೆ. ತಾಲೂಕಿನಲ್ಲಿ ಸರಕಾರಿ ಪ್ರಾಥಮಿಕ ಶಾಲೆಗಳು ೧೫೪ ಇದ್ದು ಅನುದಾನಿತ ೧ ಖಾಸಗಿ ಶಾಲೆಗಳು ೩೩ .ಪ.ಪಂಗಡ ವಸತಿ ಶಾಲೆಗಳು೪ ಒಟ್ಟು ೧೯೨ ಶಾಲೆಗಳು ಇವೆ. ಮಂಜೂರಾದ ಹುದ್ದೆಗಳು ೧೮೬೦, ಕಾರ್ಯ ನಿರ್ವಹಿಸುತ್ತಿರುವವರು೧೧೧೬, ಖಾಲಿ ೭೪೪ ಅತಿಥಿ ಶಿಕ್ಷಕರು ೬೩೬ ಕಾರ್ಯನಿರ್ವಹಿಸುತ್ತಿದ್ದಾರೆ. ತಾಲೂಕಿ ನಲ್ಲಿ ಸರಕಾರಿ ಪ್ರಾಥಮಿಕ ಶಾಲೆಗಳು ೧೩೪ ಇದ್ದು ಅನುದಾನಿತ ೧ ಖಾಸಗಿ ಶಾಲೆಗಳು ೩೪ ಒಟ್ಟು ೧೬೮ ಶಾಲೆಗಳು ಇವೆ. ಮಂಜೂರಾದ ಹುದ್ದೆಗಳು ೧೫೬೯ ಕಾರ್ಯನಿರ್ವಹಿಸುತ್ತಿರುವವರು. ೭೬೦ ಖಾಲಿ ೮೦೯ ಅತಿಥಿ ಶಿಕ್ಷಕರು ೬೮೨ ಕಾರ್ಯನಿರ್ವಹಿಸುತ್ತಿದ್ದಾರೆ.
*
ರಾಜ್ಯದಲ್ಲಿ ಖಾಲಿ ಇರುವ ೪೮ ಸಾವಿರ ಶಿಕ್ಷಕರ ಹುದ್ದೆಗಳಲ್ಲಿ ಶೇ ೫೦ ರಷ್ಟು ಹುದ್ದೆಗಳು ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಇರುವದು ಈ ಭಾಗದ ಶೈಕ್ಷಣಿಕ ಅಧೋಗತಿಗೆ ಕಾರಣವಾಗಿದೆ. ಕೂಡಲೇ ಸರಕಾರ ಶಿಕ್ಷಕರ ಖಾಲಿ ಹುದ್ದೆಗಳನ್ನು ೩೭೧ಜೆ ಅಡಿಯಲ್ಲಿ ವಿಶೇಷ ನೇಮಕಾತಿ ಪ್ರಕ್ರಿಯೆ ನಡೆಸಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. -ಡಾ. ರಝಾಕ್ ಉಸ್ತಾದ್ ಉಪಾಧ್ಯಕ್ಷರು
ಸರಕಾರಿ ಶಾಲೆಗಳು ಬಡವರ ಮಕ್ಕಳ,ಗ್ರಾಮೀಣ ಭಾಗದ ಮಕ್ಕಳ ಶಾಲೆಗಳಾಗಿ ಉಳಿದುಕೊಂಡಿವೆ. ನಮ್ಮ ಭಾಗದ ಸರಕಾರಿ ಶಾಲೆಗಳು ಕೇವಲ ಹಾಲು, ಬಿಸಿ ಊಟ, ಪಠ್ಯ ಪುಸ್ತಕ ವಿತರಣೆ, ಶೋ ವಿತರಣೆ ಮಾಡುವುದರಲ್ಲಿ ಕಾಲ ಹರಣ ಮಾಡುತ್ತಿದ್ದು. ಜಿಲ್ಲೆಯ ಜನ ಪ್ರತಿನಿಧಿಗಳು ತಮ್ಮ ಜವಾಬ್ದಾರಿಯನ್ನು ಅರಿತು ಕೂಡಲೇ ಜಿಲ್ಲೆಯ ಸರಕಾರಿ ಶಾಲೆಗಳನ್ನು ಉಳಿಸುವ, ಬೆಳೆಸುವ ನಿಟ್ಟಿನಲ್ಲಿ ಗಮನ ಹರಿಸಿ ಶಿಕ್ಷಕರ ನೇಮಕಾತಿಯನ್ನು ಮಾಡಬೇಕು.
ಜೀಶಾನ್ ಆಖಿಲ್ ಸಿದ್ದಿಖಿ ರಾಜ್ಯಾಧ್ಯಕ್ಷರು
ಇದನ್ನೂ ಓದಿ: Raichur News: ಶಾಲೆಯಲ್ಲಿ ಲೋ ಬಿಪಿಯಿಂದ ಕುಸಿದು ಬಿದ್ದು ವಿದ್ಯಾರ್ಥಿ ಸಾವು