ರಾಮಾದಕ ಪದಾರ್ಥ ಸೇವನೆ ಆರೋಪದ ಮೇಲೆ ಚಿತ್ರರಂಗದ ಕೆಲವರ ಬಂಧನದಿಂದಾಗಿ ರಾಜ್ಯದಲ್ಲಿ ಮಾದಕ ಪದಾರ್ಥ
ಅಪರಾಧ ತಡೆ ಮತ್ತೆ ಮಹತ್ವ ಪಡೆದಿದೆ.
ಪ್ರಕರಣದ ಜಾಡು ಹಿಡಿದು ಹೊರಟಿರುವ ಪೊಲೀಸರ ಪಾಲಿಗೆ ಮಹತ್ವದ ಸುಳಿವುಗಳು ದೊರೆಯಲಾರಂಭಿಸಿವೆ. ಬಹಳಷ್ಟು ಆರೋಪಿಗಳ ಬಂಧನವಾಗಿದೆ. ಆದರೆ ಮಾದಕ ಪದಾರ್ಥ ಚಟ ನಿರ್ಮೂಲನೆ ಹಾಗೂ ಮಾರಾಟ ತಡೆಯುವ ನಿಟ್ಟಿನಲ್ಲಿ ಬಂಧನ ಗಳ ಜತೆಗೆ ಮತ್ತಷ್ಟು ಪ್ರಯತ್ನಗಳು ಆರಂಭವಾಗಬೇಕಿದೆ.
ಇತ್ತೀಚೆಗೆ ಬೆಂಗಳೂರು ನಗರದಲ್ಲಿ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ನೈಜೆರಿಯಾ ಪ್ರಜೆ ಸೇರಿದಂತೆ 10ಜನರನ್ನು ಪೊಲೀಸರು ಬಂಧಿ ಸಿದ್ದು, 90 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳು ತಾವು ಪೂರೈಕೆ ಮಾಡುತ್ತಿದ್ದ ಮಾದಕ ವಸ್ತುಗಳನ್ನು ವಿದೇಶದಿಂದ ಸಾಮಾಜಿಕ ಜಾಲತಾಣಗಳ ಮೂಲಕ ತರಿಸಿಕೊಂಡು ಪೂರೈಸುತ್ತಿದ್ದುದಾಗಿ ತಿಳಿಸಿದ್ದಾರೆ. ಇದರಿಂದ ಸಾಮಾಜಿಕ ಜಾಲತಾಣದ ದುರ್ಬಳಕೆ ಬೆಳಕಿಗೆ ಬಂದಂತಾಗಿದ್ದು ಡಾರ್ಕ್ನೆಟ್ ವ್ಯವಹಾರಗಳ ಪರಿಶೀಲನೆ ಹಾಗೂ ಅಪರಾಧಗಳಿಗೆ ಬಳಕೆಯಾಗದಂತೆ ತಡೆಯುವುದು ಮುಖ್ಯವಾಗಿದೆ.
ಆನ್ಲೈನ್ ಮೂಲಕ ಖರೀದಿಸಿದ ವಸ್ತುಗಳು ವಿಮಾನ ನಿಲ್ದಾಣಗಳಲ್ಲಿ ಆಟಿಕೆ, ಉಡುಗೊರೆ ರೂಪದ ಪಾರ್ಸೆಲ್ಗಳ ಮೂಲಕ ರಾಜ್ಯಕ್ಕೆ ರವಾನೆಯಾಗುತ್ತಿವೆ. ಇದನ್ನು ತಡೆಯಬೇಕಿರುವುದು ಪ್ರಮುಖ ಜವಾಬ್ದಾರಿ. ಬೆಂಗಳೂರಿನಲ್ಲಿ ಮಾದಕ ವಸ್ತುಗಳನ್ನು ಪೂರೈಸುತ್ತಿದ್ದ ಆರೋಪಿಗಳಲ್ಲಿ ಹೊರದೇಶ, ಹೊರರಾಜ್ಯದವರು ಸಹ ಪಾಲ್ಗೊಂಡಿದ್ದು, ಇವರೆಲ್ಲರೂ ವಿದೇಶದಿಂದ
ಮಾದಕ ಪದಾರ್ಥಗಳನ್ನು ತರಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಇದರಿಂದ ರಾಜ್ಯದಲ್ಲಿ ಬಳಕೆಯಾಗುತ್ತಿರುವ ಮಾದಕ ಪದಾರ್ಥಗಳು ವಿದೇಶದಿಂದಲೇ ಪೂರೈಕೆಯಾಗುತ್ತಿರುವುದು ಸ್ಪಷ್ಟವಾಗಿದೆ.
ಆದ್ದರಿಂದ ಇಂದು ಮಾದಕ ವಸ್ತುಗಳ ಸೇವನೆ ಆರೋಪಿಗಳ ಬಂಧನದ ಜತೆಗೆ ಮಾದಕ ವಸ್ತುಗಳ ಪೂರೈಕೆ ಹಾಗೂ ಮಾರಾಟ ಗಾರರ ಬಂಧನಗಳು ಮುಖ್ಯವಾಗಬೇಕಿದೆ.