ಕಾನ್ಪುರ: ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದು ಜೋಶ್‌ನಲ್ಲಿರುವ ಭಾರತ(IND vs BAN) ತಂಡ ಇದೀಗ ದ್ವಿತೀಯ ಟೆಸ್ಟ್ನಲ್ಲಿಯೂ ಬಾಂಗ್ಲಾಗೆ ಸೋಲುಣಿಸುವ ಮೂಲಕ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡು ಇರಾದೆಯಲ್ಲಿದೆ. ಆದರೆ, ಇದಕ್ಕೆ ಮಳೆ ಅನುವು ಮಾಡಕೊಡಬೇಕು. ಹೌದು, ಕಾನ್ಪುರದ(Kanpur Weather) ಗ್ರೀನ್ಪಾರ್ಕ್ ಮೈದಾನದಲ್ಲಿ ನಡೆಯಲಿರುವ ಅಂತಿಮ ಟೆಸ್ಟ್‌ಗೆ ಮಳೆ ಅಡಚಣೆಯ ಭೀತಿ ಎದುರಾಗಿದೆ.
ಈಗಾಗಲೇ ಹವಾಮಾನ ಇಲಾಖೆ ಪಂದ್ಯಕ್ಕೆ ಮಳೆ ಎಚ್ಚರಿಕೆ ನೀಡಿದ್ದು, ಪಂದ್ಯ ಒಟ್ಟು 5 ದಿನಗಳ ಪೈಕಿ ಮೊದಲ 4 ದಿನಗಳಲ್ಲಿ ಮಳೆ ಅಡಚಣೆ ತರುವ ಸಾಧ್ಯತೆ ಹೆಚ್ಚಿದೆ. ಇತ್ತೀಚೆಗೆ ಅಫಘಾನಿಸ್ತಾ ಮತ್ತು ನ್ಯೂಜಿಲ್ಯಾಂಡ್ ನಡುವೆ ನಿಗದಿಯಾಗಿದ್ದ ಏಕೈಕ ಟೆಸ್ಟ್ ಪಂದ್ಯ ಮಳೆಯಿಂದ ಒಂದೂ ಎಸೆತ ಕಾಣದೆ ರದ್ದುಗೊಂಡಿತ್ತು. ಇದೀಗ ಕಾನ್ಪುರ ಟೆಸ್ಟ್‌ಗೂ ಮಳೆ ಆತಂಕ ಎದುರಾಗಿದೆ. ಪಂದ್ಯ ರದ್ದಾದರೆ ಭಾರತಕ್ಕೆ ನಷ್ಟವಾಗದು ಏಕೆಂದರೆ ಭಾರತ ಈಗಾಗಲೇ ಮೊದಲ ಪಂದ್ಯ ಗೆದ್ದ ಕಾರಣ ಸರಣಿ ಭಾರತದ ಪಾಲಾಗಲಿದೆ. ಆದರೆ, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನಲ್ಲಿ ಫೈನಲ್ಗೇರುವ ಭಾರತದ ಹಾದಿಗೆ ಸ್ವಲ್ಪ ಹಿನ್ನಡೆ ಎದುರಾಗುವ ಸಾಧ್ಯತೆ ಇದೆ. ಸದ್ಯ ಭಾರತ ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಫೈನಲ್ ಟಿಕೆಟ್ ಅಧಿಕೃತವಾಗಿಲ್ಲ.
ಇದನ್ನೂ ಓದಿ IND vs BAN: ದ್ವಿತೀಯ ಟೆಸ್ಟ್‌ಗೆ ಭಾರತ ಆಡುವ ಬಳಗದಲ್ಲಿ ಮಹತ್ವದ ಬದಲಾವಣೆ
ಶೇ.92ರಷ್ಟು ಮಳೆ ಸಾಧ್ಯತೆ
ಹವಾಮಾನ ವರದಿಯ ಪ್ರಕಾರ, ಕಾನ್ಪುರ ಟೆಸ್ಟ್ ಪಂದ್ಯದ ಮೊದಲ ದಿನದಾಟಕ್ಕೆ ಭಾರೀ ಮಳೆ ಎಚ್ಚರಿಕೆ ಇದೆ. ಶೇ.92ರಷ್ಟಿದೆ. ಅದರಲ್ಲೂ ಮೊದಲ ದಿನದ ಮೊದಲ 2 ಅವಧಿಗಳಲ್ಲಿ ಮಳೆ ಅಡಚಣೆಯ ಸಾಧ್ಯತೆ ಅಧಿಕವಾಗಿದೆ. ಹೀಗಾಗಿ ಮೊದಲ ದಿನದ ಆಟ ನಡೆಯುವುದು ಬಹುತೇಕ ಅನುಮಾನ ಎಂಬಂತಿದೆ. 2, 3 ಮತ್ತು 4ನೇ ದಿನ ಮಳೆ ಕಾಡುವ ಸಾಧ್ಯತೆ ಶೇ. 49, 65, 56ರಷ್ಟಿದೆ. ಪಂದ್ಯದ ಕೊನೇ ದಿನದಾಟದಲ್ಲಿ ಮಾತ್ರ ಮಳೆ ಅಡಚಣೆ ಸಾಧ್ಯತೆ ಕೇವಲ ಶೇ.3ರಷ್ಟಿದೆ. ಅಂತಿಮ ದಿನ ಮಳೆ ಇಲ್ಲದಿದ್ದರೂ ಹಿಂದಿನ ದಿನ ಮಳೆಯ ಕಾರಣದಿಂದ ಮೈದಾನ ಒದ್ದೆಯಾಗಿದ್ದರೆ ಪಂದ್ಯ ನಡೆಯುವುದು ಅಸಾಧ್ಯ. ಒಟ್ಟಾರೆ ಕಾನ್ಪುರ ಟೆಸ್ಟ್ ಮಳೆಯ ಭವಿಷ್ಯದ ಮೇಲೆ ನಿಂತಿದೆ.
ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆದ ದೌರ್ಜನ್ಯ. ಭಾರತದಲ್ಲಿಯೂ ಕೆಲ ಸಂಘಟನೆಗಳು ಬಾಂಗ್ಲಾ ವಿರುದ್ಧ ಕ್ರಿಕೆಟ್ ಸರಣಿ ಆಡಬಾರದೆಂದು ವಿರೋಧ ವ್ಯಕ್ತಪಡಿಸಿತ್ತು. ಕಾನ್ಪುರದಲ್ಲೂ ಪ್ರತಿಭಟನೆ ನಡೆದಿದೆ. ಈಗಾಗಲೇ 20 ಮಂದಿ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ. ಪಂದ್ಯದ ವೇಲೆ ಅಹಿತರಕ ಘಟನೆ ನಡೆಯದಂತೆ ಪೊಲೀಸರು ಎಚ್ಚರಿಕೆ ವಹಿಸಿದ್ದು ಪಂದ್ಯಕ್ಕೆ ಭಾರೀ ಬಿಗಿ ಭದ್ರತೆ ಏರ್ಪಡಿಸಲಾಗಿದೆ.
ಭಾರತ ತಂಡ
ರೋಹಿತ್ ಶರ್ಮ (ನಾಯಕ), ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆ.ಎಲ್ ರಾಹುಲ್, ಸರ್ಫರಾಜ್ ಖಾನ್, ರಿಷಭ್ ಪಂತ್, ಧ್ರುವ್ ಜುರೆಲ್, ಆರ್. ಅಶ್ವಿನ್, ರವೀಂದ್ರ ಜಡೇಜ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಜಸ್‌ಪ್ರೀತ್ ಬುಮ್ರಾ, ಯಶ್ ದಯಾಳ್.
ಬಾಂಗ್ಲಾ ಟೆಸ್ಟ್ ತಂಡ
ನಜ್ಮುಲ್ ಹೊಸೈನ್ ಶಾಂಟೊ (ನಾಯಕ), ಮಹಮ್ಮದುಲ್ ಹಸನ್ ಜಾಯ್, ಝಾಕಿರ್ ಹಸನ್, ಶದ್ಮಾನ್ ಇಸ್ಲಾಂ, ಮೊಮಿನುಲ್ ಹಕ್, ಮುಶ್ಫಿಕರ್ ರಹೀಮ್, ಶಾಕಿಬ್ ಅಲ್ ಹಸನ್, ಲಿಟ್ಟನ್ ಕುಮಾರ್ ದಾಸ್, ಮೆಹಿದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ, ನಯೀಮ್ ಹಸನ್, ನಹಿದ್ ರಾಣಾ, ಹಸನ್ ಮಹಮ್ಮದ್, ತಾಸ್ ಮಹಮ್ಮದ್ ಸೈಯದ್ ಖಲೀದ್ ಅಹ್ಮದ್, ಜಾಕರ್ ಅಲಿ ಅನಿಕ್.