Saturday, 23rd November 2024

Human Sacrifice: ಶಾಕಿಂಗ್‌! ಶಾಲೆಗೆ ಯಶಸ್ಸು ಸಿಗ್ಬೇಕು ಅಂತಾ ಬಾಲಕನನ್ನೇ ಬಲಿ ಕೊಟ್ಟ ಪಾಪಿಗಳು

human sacrifice

ಹತ್ರಾಸ್‌: ನಾಗರಿಕತೆ ಎಷ್ಟು ಮುಂದುವರೆದರೂ ಬಹಳಷ್ಟು ಕಡೆಗಳಲ್ಲಿ ಮೂಢನಂಬಿಕೆ, ಅಂಧ ವಿಶ್ವಾಸ, ಮಾಟ-ಮಂತ್ರದಂತಹ ಆಚರಣೆಗಳಿಂದ ಜನ ಹೊರಬಂದಿಲ್ಲ. ಅದರಲ್ಲೂ ಈಗಿನ ಕಾಲದಲ್ಲೂ ನರಬಲಿ(Human sacrifice)ಯಂತಹ ಘಟನೆಗಳು ನಡೆಯುತ್ತವೆ ಎಂದರೆ ನಂಬಲೇಬೇಕು. ಅಂತಹದ್ದೇ ಒಂದು ಘಟನೆ ಉತ್ತರಪ್ರದೇಶ(Uttarpradesh)ದ ಹತ್ರಾಸ್‌(Hatras)ನಲ್ಲಿ ನಡೆದಿದೆ. ಅದೂ ನಡೆದಿರುವುದು ಶಾಲೆಯಲ್ಲಿ ಎಂಬ ಆಘಾತಕಾರಿ ಸಂಗತಿಯೊಂದು ಬಯಲಾಗಿದೆ.

ಏನಿದು ಘಟನೆ?

ಹತ್ರಾಸ್‌ನ ರಾಸ್‌ಗಾಂವ್‌ನಲ್ಲಿರುವ ಡಿಎಲ್‌ ಪಬ್ಲಿಕ್‌ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಶಾಲೆಯ ನಿರ್ದೇಶಕನ ಮೂಢನಂಬಿಕೆಗೆ ಬಾಲಕನೋರ್ವ ಬಲಿಯಾಗಿದ್ದಾನೆ. ಶಾಲೆಗೆ ಯಶಸ್ಸು, ಜನಪ್ರಿಯತೆ ತರಬೇಕೆಂಬ ಉದ್ದೇಶದಿಂದ ಶಾಲೆಯ ನಿರ್ದೇಶಕ ದಿನೇಶ್‌ ಬಘೇಲ್‌ ಎರಡನೇ ತರಗತಿಯ ಬಾಲಕನನ್ನು ಬಲಿ ಕೊಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಬಾಲಕನ ತಂದೆ ಪೊಲೀಸರೊಗೆ ದೂರು ನೀಡಿದ್ದು, ಅವರ ದೂರಿನಾಧಾರದಲ್ಲಿ ಈಗಾಗಲೇ ಐವರನ್ನು ಅರೆಸ್ಟ್‌ ಮಾಡಲಾಗಿದೆ.

ಪೊಲೀಸರ ಮಾಹಿತಿ ಪ್ರಕಾರ ಆರೋಪಿ ಶಾಲೆಯ ಕೊಳವೆ ಬಾವಿ ಸಮೀಪ ಬಾಲಕನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ. ಆರೋಪಿಗಳು ಬಾಲಕನನ್ನು ಹಾಸ್ಟೆಲ್‌ನಿಂದ ಕರೆತರುವಾಗ ಆತ ಜೋರಾಗಿ ಕಿರುಚಿದ್ದ. ಆದರೂ ಬಿಡದೇ ಆರೋಪಿಗಳು ಬಾಲಕನ ಕತ್ತು ಹಿಸುಕಿ ಕೊಲೆಗೈದಿದ್ದಾರೆ. ಆರೋಪಿಗಳು ಈ ಹಿಂದೆ ಸೆಪ್ಟೆಂಬರ್ 6 ರಂದು 9 ವರ್ಷದ ಇನ್ನೊಬ್ಬ ವಿದ್ಯಾರ್ಥಿಯ ನರಬಲಿಗೆ ಯತ್ನಿಸಿದ್ದರು. ಆದರೆ ಅವರು ವಿಫಲರಾಗಿದ್ದರು.

ವಿದ್ಯಾರ್ಥಿಯ ತಂದೆ ಕ್ರಿಶನ್ ಕುಶ್ವಾಹ ಅವರು ನೀಡಿದ ದೂರಿನ ಪ್ರಕಾರ, ಸೋಮವಾರ ಶಾಲಾ ಆಡಳಿತದಿಂದ ತನ್ನ ಮಗ ಅನಾರೋಗ್ಯಕ್ಕೆ ಒಳಗಾಗಿದ್ದಾನೆ ಎಂದು ಅವರಿಗೆ ಕರೆ ಮಾಡಲಾಗಿತ್ತು. ಕುಶ್ವಾಹಾ ಶಾಲೆಗೆ ತಲುಪಿದಾಗ, ಶಾಲಾ ನಿರ್ದೇಶಕರು ತಮ್ಮ ಮಗನನ್ನು ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು ಇದಾದ ಕೆಲವೇ ಕ್ಷಣದಲ್ಲಿ ಬಾಲಕ ಮೃತಪಟ್ಟಿದ್ಧಾನೆ ಎಂದು ಬಘೇಲ್‌ ತಿಳಿಸಿದ್ದಾನೆ.

ಈ ಸುದ್ದಿಯನ್ನೂ ಓದಿ: Hindu Temple Vandalized: ಕ್ಯಾಲಿಫೋರ್ನಿಯಾದಲ್ಲಿ ಹಿಂದೂ ದೇಗುಲ ವಿರೂಪ; ಭಾರತ ಖಂಡನೆ