ಮನೆಯಲ್ಲಿ ಕೆಲವೊಮ್ಮೆ ಹಾಸ್ಯಮಯ ಪ್ರಸಂಗಗಳು ನಡೆಯುತ್ತವೆ. ಕೆಲವರು ಇದಕ್ಕೆ ನಾಟಕೀಯ ರೂಪಕೊಟ್ಟು ಸಾಮಾಜಿಕ ಜಾಲತಾಣದಲ್ಲಿ (social media) ಹಂಚಿಕೊಳ್ಳುತ್ತಾರೆ. ಇಂತಹ ವಿಡಿಯೋಗಳು (Viral Video) ಎಲ್ಲರ ಗಮನ ಸೆಳೆಯುತ್ತದೆ ಮಾತ್ರವಲ್ಲ ಸಾಕಷ್ಟು ಚರ್ಚೆಗೂ ಕಾರಣವಾಗುತ್ತದೆ. ಈ ಮಾದರಿಯ ವಿಡಿಯೋವೊಂದು ವೈರಲ್ ಆಗಿದೆ.
ಗಂಡ ಹೆಂಡತಿ ಸಂಬಂಧದ ಬಗ್ಗೆ ಹೇಳುವ ವಿಡಿಯೋ ಇದಾಗಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಂದಿಯ ಗಮನ ಸೆಳೆದಿದೆ. ಕೆಲವರು ಈ ವಿಡಿಯೋ ನೋಡಿ ಭಿನ್ನ ಭಿನ್ನ ರೀತಿಯಲ್ಲಿ ತಮಾಷೆಯ ಕಾಮೆಂಟ್ ಗಳನ್ನೂ ಮಾಡಿದ್ದಾರೆ. ವೈರಲ್ ಆಗಿರುವ ಈ ವಿಡಿಯೋದಲ್ಲಿ ಮನೆಯೊಡತಿ ಕಸ ಗುಡಿಸುವ ಕೆಲಸದಲ್ಲಿ ನಿರತಳಾಗಿರುತ್ತಾಳೆ. ಅಷ್ಟರಲ್ಲಿ ಅಲ್ಲಿಗೆ ಮನೆ ಕೆಲಸದವನು ಕೆಲವು ತರಕಾರಿ ಹಿಡಿದುಕೊಂಡು ಬರುತ್ತಾನೆ. ನಿಮಗೆ ಇವತ್ತು ಅತ್ಯುತ್ತಮ ಪದಾರ್ಥ ಮಾಡಿ ತಿನ್ನಿಸುವುದಾಗಿ ಹೇಳುತ್ತಾನೆ. ಆಗ ಆಕೆ ಸರಿ ಇದನ್ನು ಒಳಗೆ ಇಡು ಎಂದು ಹೇಳುತ್ತಾನೆ. ಅದನ್ನು ಕೇಳಿಸಿ ಅವನು ಒಳಗೆ ಹೋಗಿದ್ದನ್ನು ಮನೆಯೊಡತಿ ಗಮನಿಸುವುದಿಲ್ಲ.
ಅಷ್ಟರಲ್ಲಿ ಅಲ್ಲಿಗೆ ಬಂದ ಆಕೆಯ ಪತಿ ಆಕೆಯನ್ನು ಹಿಂದಿನಿಂದ ಬಂದು ತಬ್ಬಿ ಹಿಡಿಯುತ್ತಾನೆ. ಆಗ ಆಕೆ ಯಾರು ಅಂತಾ ನೋಡದೆ ಕೆಲಸದವನ ಹೆಸರು ಕೂಗಿ ಮೊದಲು ಹೋಗಿ ಅಡುಗೆ ಮಾಡು, ಮನೆಯವರು ಇನ್ನೇನು ಬಂದು ಬಿಡುತ್ತಾರೆ ಎನ್ನುತ್ತಾಳೆ.
ಇದನ್ನು ಕೇಳಿ ದಂಗಾದ ಪತಿ ಕೆಲಸದವನ ಮುಖ ನೋಡುತ್ತಾನೆ. ಅವನು ಹೆದರಿಕೆಯಿಂದ ಅಲ್ಲಿಂದ ಜಾಗ ಖಾಲಿ ಮಾಡುತ್ತಾನೆ. ಪತಿ ಆತನನ್ನು ಹಿಂಬಾಲಿಸಿಕೊಂಡು ಹೋದರೆ ಪತ್ನಿ ಮನೆಯೊಳಗೆ ಓಡುತ್ತಾಳೆ.
IND vs BAN: ಲಂಗೂರ್ ಕಣ್ಗಾವಲಿನಲ್ಲಿ ಭಾರತ-ಬಾಂಗ್ಲಾ ಟೆಸ್ಟ್
ಇದೊಂದು ಹಾಸ್ಯ ವಿಡಿಯೋ. ಎಲ್ಲರನ್ನೂ ನಗೆಗಡಲಲ್ಲಿ ತೇಲುವಂತೆ ಮಾಡುತ್ತದೆ. ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ನಲ್ಲಿ ನಲ್ಲಿ ವೈರಲ್ ಆಗಿರುವ ಈ ವಿಡಿಯೋಗೆ ಸಾಕಷ್ಟು ಮೆಚ್ಚುಗೆ ಕೂಡ ಗಳಿಸಿದೆ. ಆಗಸ್ಟ್ 29ರಂದು ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, 45 ಸಾವಿರಕ್ಕೂ ಹೆಚ್ಚು ಲೈಕ್ಗಳು ಬಂದಿವೆ. ಪಡೆದಿದೆ.