ಮುಂಬೈ: ಈ ವರ್ಷದ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ (Dadasaheb Phalke Award)ಯನ್ನು ಘೋಷಿಸಲಾಗಿದೆ. ಹಿರಿಯ ನಟ, ರಾಜಕಾರಣಿ ಮಿಥುನ್ ಚಕ್ರವರ್ತಿ (Mithun Chakraborty) ಅವರಿಗೆ ದೇಶದ ಈ ಅತ್ಯುನ್ನತ ಚಲನಚಿತ್ರ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಇದನ್ನು ಕೇಂದ್ರ ಸರ್ಕಾರ ಕೊಡಮಾಡುತ್ತದೆ. ಚಲನಚಿತ್ರರಂಗಕ್ಕೆ ನೀಡುವ ಗಣನೀಯ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿ ಘೋಷಿಸಲಾಗುತ್ತದೆ. ವರನಟ ಡಾ. ರಾಜ್‌ಕುಮಾರ್ (Dr. Rajkumar) ಅವರೂ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. 1995ರಲ್ಲಿ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು.
ಸಾಮಾನ್ಯವಾಗಿ ಪ್ರತಿವರ್ಷ ರಾಷ್ಟ್ರ ಚಲನಚಿತ್ರ ಪ್ರಶಸ್ತಿ ವಿತರಿಸುವಾಗ ದಾದಾಸಾಹೇಬ್ ಪ್ರಶಸ್ತಿಯನ್ನೂ ಪ್ರದಾನ ಮಾಡಲಾಗುತ್ತದೆ. ಈ ಪ್ರಶಸ್ತಿಯನ್ನು ಮೊದಲ ಬಾರಿಗೆ 1969ರಲ್ಲಿ ಘೋಷಿಸಲಾಯಿತು. ಈ ಪ್ರಶಸ್ತಿ ಸ್ವರ್ಣ ಕಮಲ ಪದಕ, ಶಾಲು ಮತ್ತು 10 ಲಕ್ಷ ರೂ. ನಗದು ಒಳಗೊಂಡಿರುತ್ತದೆ.
Man from literally nowhere, "a nobody" made it: Mithun Chakraborty on Dadasaheb Phalke honour
— ANI Digital (@ani_digital) September 30, 2024
Read @ANI Story | https://t.co/eKxRBqXHvI#MithunChakraborty #DadasahebPhalke #bollywood pic.twitter.com/NiY1m24Ge4
ಪ್ರಶಸ್ತಿಯ ಹಿನ್ನೆಲೆ
ಭಾರತೀಯ ಚಲನಚಿತ್ರ ಕ್ಷೇತ್ರಕ್ಕೆ ನಿರ್ದೇಶಕ, ನಿರ್ಮಾಪಕ ದಾದಾಸಾಹೇಬ್ ಫಾಲ್ಕೆ ಸಲ್ಲಿಸಿರುವ ಗಣನೀಯ ಕೊಡುಗೆಯನ್ನು ಪರಿಗಣಿಸಿ ಅವರ ಸ್ಮರಣಾರ್ಥ ಕೇಂದ್ರ ಸರ್ಕಾರ ಈ ಪ್ರಶಸ್ತಿಯನನು 1969ರಲ್ಲಿ ಆರಂಭಿಸಿತು. ದಾದಾಸಾಹೇಬ್ ಫಾಲ್ಕೆ ಭಾರತೀಯ ಸಿನಿಮಾದ ಪಿತ ಎಂದೇ ಗುರುತಿಸಲ್ಪಡುತ್ತಾರೆ. 1913ರಲ್ಲಿ ತೆರೆಕಂಡ, ದಾದಾಸಾಹೇಬ್ ಫಾಲ್ಕೆ ನಿರ್ದೇಶನದ ʼರಾಜಾ ಹರೀಶ್ಚಂದ್ರʼ ದೇಶದ ಮೊದಲ ಸಿನಿಮಾ ಎನಿಸಿಕೊಂಡಿದೆ. 1870ರಲ್ಲಿ ಈಗಿನ ನಾಸಿಕ್‌ನಲ್ಲಿ ಜನಿಸಿದ ದಾದಾಸಾಹೇಬ್ ಫಾಲ್ಕೆ ಒಟ್ಟು 95 ಚಿತ್ರಗಳನ್ನು ತಯಾರಿಸಿದ್ದಾರೆ. 1944ರಲ್ಲಿ ಅವರು ನಿಧನ ಹೊಂದಿದರು. ಇದುವರೆಗೆ ಈ ಪ್ರತಿಷ್ಠಿತ ಪ್ರಶಸ್ತಿ ಪಡೆದವರ ವಿವರ ಇಲ್ಲಿದೆ.
1969 – ದೇವಿಕಾ ರಾಣಿ (ಹಿಂದಿ)
1970 – ಬಿರೇಂದ್ರನಾಥ್ ಸಿರ್ಕಾರ್ (ಬೆಂಗಾಲಿ)
1971 – ಪೃಥ್ವಿರಾಜ್ ಕಪೂರ್ (ಹಿಂದಿ)
1972 – ಪಂಕಜ್ ಮುಲ್ಲಿಕ್ (ಬೆಂಗಾಲಿ, ಹಿಂದಿ)
1973 – ರುಬಿ ಮೈರ್ಸ್ (ಹಿಂದಿ)
1974 – ಬಿ.ಎನ್.ರೆಡ್ಡಿ (ತೆಲುಗು)
1975 – ಧಿರೇಂದ್ರ ನಾಥ್ ಗಂಗೂಲಿ (ಬೆಂಗಾಲಿ)
1976 – ಕನನ್ ದೇವಿ (ಬೆಂಗಾಲಿ)
1977 – ನಿತಿನ್ ಬೋಸ್ (ಬೆಂಗಾಲಿ, ಹಿಂದಿ)
1978 – ರೈಚಂದ್ ಬೊರಲ್ (ಬೆಂಗಾಲಿ, ಹಿಂದಿ)
1979 – ಸೊಹರ್ಬ್ ಮೋದಿ (ಹಿಂದಿ)
1980 – ಪೈದಿ ಜೈರಾಜ್ (ಹಿಂದಿ)
1981 – ನೌಷಾದ್ (ಹಿಂದಿ)
1982 – ಎಲ್.ವಿ.ಪ್ರಸಾದ್ (ತೆಲುಗು, ತಮಿಳು, ಹಿಂದಿ)
1983 – ದುರ್ಗಾ ಖೋಟೆ (ಹಿಂದಿ, ಮರಾಠಿ)
1984 – ಸತ್ಯಜಿತ್ ರಾಯ್ (ಬೆಂಗಾಲಿ)
1985 – ವಿ.ಶಾಂತಾರಾಮ್ (ಹಿಂದಿ, ಮರಾಠಿ)
1986 – ಬಿ.ನಾಗಿ ರೆಡ್ಡಿ (ತೆಲುಗು)
1987 – ರಾಜ್ ಕಪೂರ್ (ಹಿಂದಿ)
1988 – ಅಶೋಕ್ ಕುಮಾರ್ (ಹಿಂದಿ)
1989 – ಲತಾ ಮಂಗೇಶ್ಕರ್ (ಹಿಂದಿ, ಮರಾಠಿ)
1990 – ಅಕ್ಕಿನೇನಿ ನಾಗೇಶ್ವರ ರಾವ್ (ತೆಲುಗು)
1991 – ಬಾಲಾಜಿ ಪೆಂಡಾರ್ಕರ್ (ಮರಾಠಿ)
1992 – ಭುಪೇನ್ ಹಜಾರಿಕ (ಅಸ್ಸಾಮಿ)
1993 – ಮಜ್‌ರಾಹ್ ಸುಲ್ತಾನ್‌ಪುರಿ (ಹಿಂದಿ)
1994 – ದಿಲೀಪ್ ಕುಮಾರ್ (ಹಿಂದಿ)
1995 – ಡಾ.ರಾಜ್‌ಕುಮಾರ್ (ಕನ್ನಡ)
1996 – ಶಿವಾಜಿ ಗಣೇಶನ್ (ತಮಿಳು)
1997- ಕವಿ ಪ್ರದೀಪ್ (ಹಿಂದಿ)
1998 – ಬಿ.ಆರ್.ಚೋಪ್ರಾ (ಹಿಂದಿ)
1999 – ಹೃಷಿಕೇಷ್ ಮುಖರ್ಜಿ (ಹಿಂದಿ)
2000 – ಆಶಾ ಭೋಸ್ಲೆ (ಹಿಂದಿ, ಮರಾಟಿ)
2001 – ಯಸ್ ಚೋಪ್ರಾ (ಹಿಂದಿ)
2002 – ದೇವ್ ಆನಂದ್ (ಹಿಂದಿ)
2003 – ಮೃಣಾಲ್ ಸೇನ್ (ಬೆಂಗಾಲಿ, ಹಿಂದಿ)
2004 – ಅಡೂರು ಗೋಪಾಲಕೃಷ್ಣನ್ (ಮಲಯಾಳಂ)
2005 – ಶ್ಯಾಂ ಬೆನಗಲ್ (ಹಿಂದಿ)
2006 – ತಪನ್ ಸಿನ್ಹಾ (ಬೆಂಗಾಲಿ, ಹಿಂದಿ)
2007 – ಮನ್ನಾ ದೇ (ಬೆಂಗಾಲಿ, ಹಿಂದಿ)
2008 – ವಿ.ಕೆ.ಮೂರ್ತಿ (ಹಿಂದಿ)
2009 – ಡಿ.ರಾಮ ನಾಯ್ಡು (ತೆಲುಗು)
2010 – ಕೆ.ಬಾಲಚಂದ್ರ (ತಮಿಳು)
2011 – ಸೌಮಿತ್ರ ಚಟರ್ಜಿ (ಬೆಂಗಾಲಿ)
2012 – ಪ್ರಾಣ್ (ಹಿಂದಿ)
2013 – ಗುಲ್ಜರ್ (ಹಿಂದಿ)
2014 – ಶಶಿ ಕಪೂರ್ (ಹಿಂದಿ)
2015 – ಮನೋಜ್ ಕುಮಾರ್ (ಹಿಂದಿ)
2016 – ಕೆ.ವಿಶ್ವನಾಥ್ (ತೆಲುಗು)
2017 – ವಿನೋದ್ ಖನ್ನಾ (ಹಿಂದಿ)
2018 – ಅಮಿತಾಭ್ ಬಚ್ಚನ್ (ಹಿಂದಿ)
2019 – ರಜನಿಕಾಂತ್ (ತಮಿಳು)
2020 – ಆಶಾ ಪರೇಕ್ (ಹಿಂದಿ)
2021 – ವಹೀದಾ ರೆಹಮಾನ್ (ಹಿಂದಿ)
ಈ ಸುದ್ದಿಯನ್ನೂ ಓದಿ: Dadasaheb Phalke Award: ಮಿಥುನ್ ಚಕ್ರವರ್ತಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆ