ಕಾನ್ಪುರ: ಶಿಕ್ಷಕ ಮತ್ತು ವಿದ್ಯಾರ್ಥಿಗಳ ನಡುವೆ ಪವಿತ್ರವಾದ ಗುರು-ಶಿಷ್ಯರ ಸಂಬಂಧವಿರುತ್ತದೆ. ಹಾಗಾಗಿ ವಿದ್ಯಾರ್ಥಿಗಳನ್ನು ಸರಿದಾರಿಯಲ್ಲಿ ನಡೆಸುವ ಜವಾಬ್ದಾರಿ ಶಿಕ್ಷಕನಾಗಿರುತ್ತದೆ. ಆದರೆ ಇಂದಿನ ಕಾಲದಲ್ಲಿ ಶಿಕ್ಷಕರು ವಿದ್ಯಾರ್ಥಿನಿಯರ ಜೊತೆ ಅಶ್ಲೀಲ ಕೃತ್ಯ ಎಸಗುತ್ತಿದ್ದಾರೆ. ಅದೇರೀತಿ ಇತ್ತೀಚೆಗೆ ಉತ್ತರ ಪ್ರದೇಶದ ಕಾನ್ಪುರದ ಕೋಚಿಂಗ್ ಸೆಂಟರ್ನ ಜೀವಶಾಸ್ತ್ರ ಶಿಕ್ಷಕನನ್ನು ತನ್ನ ವಿದ್ಯಾರ್ಥಿನಿಯ ಜೊತೆ ಅಶ್ಲೀಲ ಕೃತ್ಯದಲ್ಲಿ ತೊಡಗಿದ ಆರೋಪದ ಮೇಲೆ ಬಂಧಿಸಲಾಗಿದೆ. ಕೋಚಿಂಗ್ ಸೆಂಟರ್ ನಿರ್ದೇಶಕ ಆಶಿಶ್ ಶ್ರೀವಾಸ್ತವ ಅವರಿಗೆ ಪೆನ್ಡ್ರೈವ್ ಇರುವ ಲಕೋಟೆ ಬಂದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಪೆನ್ಡ್ರೈವ್ ಅನ್ನು ಪರಿಶೀಲಿಸಿದಾಗ, ಅದರಲ್ಲಿರುವ ವಿಡಿಯೊದಲ್ಲಿ ಬಯೋಲಜಿ ಶಿಕ್ಷಕ ಸಾಹಿಲ್ ಸಿದ್ದಿಕಿ ಕೋಚಿಂಗ್ ಸೆಂಟರ್ ಒಳಗೆ ವಿದ್ಯಾರ್ಥಿಯೊಂದಿಗೆ ಅಶ್ಲೀಲ ಕೃತ್ಯಗಳನ್ನು ಮಾಡುತ್ತಿರುವುದು ಕಂಡುಬಂದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.
ಕಾನ್ಪುರದ ಕಾಕದೇವ್ ಪೊಲೀಸ್ ಠಾಣೆಯಲ್ಲಿ ಸಿದ್ದಿಕಿ ವಿರುದ್ಧ ನಿರ್ದೇಶಕರು ಪ್ರಕರಣ ದಾಖಲಿಸಿದ್ದಾರೆ. ಕೋಚಿಂಗ್ ಸೆಂಟರ್ ನಿರ್ದೇಶಕ ಶ್ರೀವಾಸ್ತವ ಅವರು ಎರಡು ದಿನಗಳ ಹಿಂದೆ ತಮ್ಮ ಐ&ಐ ಕೋಚಿಂಗ್ ಹೊರಗೆ ಲಕೋಟೆ ಬಿದ್ದಿರುವುದನ್ನು ಕಂಡಿದ್ದಾರೆ. ಅದನ್ನು ತೆರೆದ ನಂತರ, ಟೀಚರ್ ವಿದ್ಯಾರ್ಥಿನಿಯೊಂದಿಗೆ ಅಶ್ಲೀಲವಾಗಿ ತೊಡಗಿರುವ ಸಿಸಿಟಿವಿ ವಿಡಿಯೊ ಇರುವ ಪೆನ್ಡ್ರೈವ್ ಅವರಿಗೆ ಸಿಕ್ಕಿದೆ. ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾದ ಸಿಸಿಟಿವಿ ವಿಡಿಯೊದಲ್ಲಿ ಬಿಳಿ ಶರ್ಟ್ ಧರಿಸಿದ ಶಿಕ್ಷಕ ವಿದ್ಯಾರ್ಥಿನಿಯೊಂದಿಗೆ ಮಾತನಾಡುವಾಗ ಅವಳನ್ನು ತಬ್ಬಿಕೊಂಡು ಚುಂಬಿಸಿದ್ದು ಇತ್ಯಾದಿ ದೃಶ್ಯ ಕಂಡು ಬಂದಿದೆ.
कानपुर, यूपी में एक कोचिंग सेंटर है। इसके संचालक आशीष श्रीवास्तव को 2 दिन पहले एक लिफाफा मिला। उसके अंदर पेनड्राइव थी। पेनड्राइव देखी तो बायोलॉजी टीचर साहिल सिद्दीकी एक छात्रा से कोचिंग सेंटर के अंदर अश्लील हरकत करता दिखा। पुलिस ने साहिल को अरेस्ट किया। pic.twitter.com/4bgJmQ5O5f
— Sachin Gupta (@SachinGuptaUP) September 29, 2024
ಇದನ್ನೂ ಓದಿ:ಬರ್ತ್ಡೇ ಪಾರ್ಟಿಯಲ್ಲಿ ದುರಂತ; ಕಂಬದ ಮೇಲಿನ ಗ್ರಾನೈಟ್ ಬಿದ್ದು ಹುಡುಗಿ ಗಂಭೀರ
ಕೋಚಿಂಗ್ ಸೆಂಟರ್ ಮ್ಯಾನೇಜರ್ ನೀಡಿದ ಲಿಖಿತ ದೂರಿನ ಆಧಾರದ ಮೇಲೆ ಆರೋಪಿ ಶಿಕ್ಷಕನ ವಿರುದ್ಧ ಕಿರುಕುಳ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಕೇಂದ್ರದ ಹೆಚ್ಚುವರಿ ಉಪ ಪೊಲೀಸ್ ಆಯುಕ್ತ ಮಹೇಶ್ ಕುಮಾರ್ ತಿಳಿಸಿದ್ದಾರೆ. ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.